ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಜನವರಿ 7ರಿಂದ ಏಪ್ರಿಲ್ 22, 2002ರ ವರೆಗಿನ ವಾರಗಳ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ಕಾವಲಿನಬುರುಜು ಪತ್ರಿಕೆಯ ಎಲ್ಲ ನಿರ್ದೇಶನೆಗಳಲ್ಲಿ ಪುಟ ಮತ್ತು ಪ್ಯಾರಗ್ರಾಫ್ ನಂಬರ್ಗಳು ಇಲ್ಲದಿರಬಹುದು.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ಪ್ರಸಂಗಿ 2:2ರಲ್ಲಿ, ನಗು ಹಾಗೂ ಸಂತೋಷವನ್ನು ದೂರಮಾಡಬೇಕು ಎಂಬುದೇ ಸೊಲೊಮೋನನು ತಿಳಿಸುವ ಅಂಶವಾಗಿದೆ. [ವಾರದ ಬೈಬಲ್ ವಾಚನ; w87 9/15 ಪು. 24 ಪ್ಯಾರ. 5ನ್ನು ನೋಡಿ.]
2. ಇಡೀ ಬೈಬಲಿನಲ್ಲಿ ಹರಡಿಕೊಂಡಿರುವ ಮುಖ್ಯ ವಿಷಯವು, ಮಾನವ ಕುಲವನ್ನು ಆಳಲು ದೇವರಿಗಿರುವ ಹಕ್ಕಿನ ನಿರ್ದೋಷೀಕರಣ ಮತ್ತು ತನ್ನ ರಾಜ್ಯದ ಮೂಲಕ ಆತನ ಪ್ರೀತಿಯ ಉದ್ದೇಶದ ಕೈಗೂಡಿಸುವಿಕೆಯೇ ಆಗಿದೆ. [kl-KA ಪು. 14 ಪ್ಯಾರ. 7]
3. ಯೆಶಾಯ 1:7ರಲ್ಲಿ, ಪ್ರವಾದಿಯು ಆಹಾಜನ ಆಳ್ವಿಕೆಯ ಸಮಯದಲ್ಲಿ ನಡೆದ ಯೆಹೂದದ ವಿನಾಶಕ್ಕೆ ಸೂಚಿಸುತ್ತಾನೆ. [ವಾರದ ಬೈಬಲ್ ವಾಚನ; ip-1-KA ಪು. 17 ಪ್ಯಾರ. 16ನ್ನು ನೋಡಿ.]
4. ಹೇಬೆಲನ ಕಾಣಿಕೆಯು ಕಾಯಿನನ ಕಾಣಿಕೆಗಿಂತ ಉತ್ತಮವಾಗಿದ್ದ ಕಾರಣ ಯೆಹೋವನು ಅದನ್ನು ಮೆಚ್ಚಿದನು. (ಆದಿ. 4:4) [my-KA ಅಧ್ಯಾಯ 6]
5. ‘ಯೆಹೋವನನ್ನು ಸನ್ಮಾನಿಸಲಿಕ್ಕಾಗಿ’ ನಮ್ಮ ಸಾಧನಸಂಪತ್ತುಗಳನ್ನು ಅಂದರೆ ನಮ್ಮ ಸಮಯ, ಹುಟ್ಟುಸಾಮರ್ಥ್ಯಗಳು, ಬಲ, ಹಾಗೂ ಭೌತಿಕ ಸ್ವತ್ತುಗಳನ್ನು ಉದಾರವಾಗಿ ಬಳಸುವುದು, ನಮಗೆ ಯೆಹೋವನಿಂದ ಹೇರಳವಾದ ಆತ್ಮಿಕ ಆಶೀರ್ವಾದಗಳನ್ನು ತರುವುದು. (ಜ್ಞಾನೋ. 3:9, 10) [w-KA00 1/15 ಪು. 25 ಪ್ಯಾರ. 1]
6. ಯೆಶಾಯ 28:21ರಲ್ಲಿ ಮುಂತಿಳಿಸಲ್ಪಟ್ಟಿರುವ ಆಧುನಿಕ ದಿನದ ‘ಅಪರೂಪವಾದ ಕೆಲಸ ಹಾಗೂ ಅಪೂರ್ವವಾದ ಕಾರ್ಯವು,’ ಅರ್ಮಗೆದ್ದೋನಿನಲ್ಲಿ ಆಗುವ ಜನಾಂಗಗಳ ನಾಶನಕ್ಕೆ ಸೂಚಿಸುತ್ತದೆ. [ವಾರದ ಬೈಬಲ್ ವಾಚನ; ip-1-KA ಪು. 295 ಪ್ಯಾರ. 16; ಪು. 301 ಪ್ಯಾರ. 28ನ್ನು ನೋಡಿ.]
7. ಮತ್ತಾಯ 24:38, 39 ತೋರಿಸುವಂತೆ, ಇತರ ಮಾನವ ಚಟುವಟಿಕೆಗಳೊಂದಿಗೆ, ತಿನ್ನುವುದು ಹಾಗೂ ಕುಡಿಯುವುದರಲ್ಲಿ ಒಳಗೂಡುವುದು, ನೋಹನ ದಿನದಲ್ಲಿದ್ದ ಜನರು ಪ್ರಳಯದಿಂದ ಬಡುಕೊಂಡು ಹೋಗುವಂತೆ ಮಾಡಿತು. [w-KA00 2/15 ಪು. 6 ಪ್ಯಾರ. 6]
8. ಯಾರು ಯೆಹೋವನನ್ನು ನಿಸ್ವಾರ್ಥಭಾವದಿಂದ ಸೇವಿಸುತ್ತಾರೋ ಅಂತಹ ದೀನ ಸೇವಕರ ವಿನಂತಿಗಳನ್ನು ಆತನು ಯಾವಾಗಲೂ ದಯಪಾಲಿಸುತ್ತಾನೆ. [w-KA00 3/1 ಪು. 4 ಪ್ಯಾರ. 3]
9. ಯೆಶಾಯ 60:3ರಲ್ಲಿ ಸೂಚಿಸಲ್ಪಟ್ಟಿರುವ “ಜನಾಂಗಗಳು” ದೇವದತ್ತ ಬೆಳಕಿನ ಕಡೆಗೆ ಆಕರ್ಷಿತವಾಗಿರುವ ಒಂದೊಂದು ರಾಜಕೀಯ ರಾಷ್ಟ್ರಗಳನ್ನು ಸೂಚಿಸುತ್ತವೆ. [ವಾರದ ಬೈಬಲ್ ವಾಚನ; w-KA00 1/1 ಪು. 12 ಪ್ಯಾರ. 4ನ್ನು ನೋಡಿ.]
10. ಯೆರೆಮೀಯನು ಜನಿಸುವುದಕ್ಕೆ ಮೊದಲೇ ಅವನ ನಿತ್ಯ ವಿಧಿಯನ್ನು ಮುಂಚಿತವಾಗಿಯೇ ನಿರ್ಧರಿಸುವ ಮೂಲಕ ಯೆಹೋವನು ಅವನನ್ನು ‘ಪ್ರತಿಷ್ಠಿಸಿದನು.’ (ಯೆರೆ. 1:5) [ವಾರದ ಬೈಬಲ್ ವಾಚನ; w-KA88 5/1 ಪು. 19 ಪ್ಯಾರ. 2ನ್ನು ನೋಡಿ.]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ಪ್ರಸಂಗಿ 11:1ರಲ್ಲಿ (NW), ‘ರೊಟ್ಟಿಯನ್ನು ಕಳುಹಿಸು’ ಎಂಬುದು ಏನನ್ನು ಅರ್ಥೈಸುತ್ತದೆ? [ವಾರದ ಬೈಬಲ್ ವಾಚನ; w87 9/15 ಪು. 25 ಪ್ಯಾರ. 11ನ್ನು ನೋಡಿ.]
12. ಯೆಶಾಯ 6:8ರಲ್ಲಿ, ‘ನಮಗೆ’ ಎಂದು ಯೆಹೋವನು ಹೇಳುವಾಗ ಆತನು ಯಾರನ್ನು ಒಳಗೂಡಿಸುತ್ತಾನೆ? [ವಾರದ ಬೈಬಲ್ ವಾಚನ; ip-1-KA ಪು. 94-5 ಪ್ಯಾರ. 13ನ್ನು ನೋಡಿ.]
13. ಯೆಶಾಯ 9:2ರ ನೆರವೇರಿಕೆಯಲ್ಲಿ, ಗಲಿಲಾಯದಲ್ಲಿ “ದೊಡ್ಡ ಬೆಳಕು” ಹೇಗೆ ಕಾಣಿಸಿಕೊಂಡಿತು? [ವಾರದ ಬೈಬಲ್ ವಾಚನ; ip-1-KA ಪು. 126 ಪ್ಯಾರ. 17ನ್ನು ನೋಡಿ.]
14. ಸಾ.ಶ.ಪೂ. 539ರಲ್ಲಾದ ಬಾಬೆಲಿನ ಪತನ ಮತ್ತು ಕಾಲಕ್ರಮೇಣ ಅದರ ಸಂಪೂರ್ಣ ನಿರ್ಜನ ಸ್ಥಿತಿಯ ವಿಷಯದಲ್ಲಿ ಆಧುನಿಕ ದಿನದ ಯಾವ ಸಮನಾಂತರವನ್ನು ಮಾಡಸಾಧ್ಯವಿದೆ? (ಯೆಶಾ. 13:19, 20; 14:22, 23) [ವಾರದ ಬೈಬಲ್ ವಾಚನ; ip-1-KA ಪು. 188 ಪ್ಯಾರ. 30-1ನ್ನು ನೋಡಿ.]
15. “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು,” ಯೆಶಾಯ 21:6ರಲ್ಲಿ ವರ್ಣಿಸಲ್ಪಟ್ಟಿರುವ “ಕಾವಲುಗಾರ”ನಂತೆ ಹೇಗೆ ಕಾರ್ಯನಡಿಸಿದೆ? (ಮತ್ತಾ. 24:45) [ವಾರದ ಬೈಬಲ್ ವಾಚನ; ip-1-KA ಪು. 221-3 ಪ್ಯಾರ. 11ನ್ನು ನೋಡಿ.]
16. ಒಬ್ಬ ವಿವಾಹ ಸಂಗಾತಿಯನ್ನು ಹುಡುಕುತ್ತಿರುವ ಒಬ್ಬ ಯೌವನಸ್ಥನಿಗಾಗಿ ಯಾವ ವಿವೇಕಯುತ ಸಲಹೆಯು ಜ್ಞಾನೋಕ್ತಿ 31:10ರಲ್ಲಿ ಕಂಡುಬರುತ್ತದೆ? [w-KA00 2/1 ಪು. 31 ಪ್ಯಾರ. 1]
17. ಯೆಶಾಯ 43:9ರಲ್ಲಿ, ಜನಾಂಗದ ದೇವರುಗಳಿಗೆ ಯಾವ ಪಂಥಾಹ್ವಾನವು ನೀಡಲ್ಪಟ್ಟಿದೆ? [ವಾರದ ಬೈಬಲ್ ವಾಚನ; w-KA88 9/1 ಪು. 16 ಪ್ಯಾರ. 3ನ್ನು ನೋಡಿ.]
18. ದೇವರ ರಾಜ್ಯದ ಶುಭಸಮಾಚಾರವನ್ನು ಸಾರುವವರ ಪಾದಗಳು ಯಾವ ವಿಧದಲ್ಲಿ “ಅಂದವಾಗಿವೆ”? (ಯೆಶಾ. 52:7) [ವಾರದ ಬೈಬಲ್ ವಾಚನ; w-KA97 4/15 ಪು. 27 ಪ್ಯಾರ. 6ನ್ನು ನೋಡಿ.]
19. ನಮ್ಮ ಹೃದಯವು ನಮ್ಮನ್ನು ವಂಚಿಸುವುದನ್ನು ತಡೆಗಟ್ಟಲಿಕ್ಕಾಗಿ ನಾವೇನು ಮಾಡುವುದು ಅಗತ್ಯವಾಗಿದೆ? (ಯೆರೆ. 17:9) [w-KA00 3/1 ಪು. 30 ಪ್ಯಾರ. 4]
20. ‘ಯೆಹೋವನ ಮಾರ್ಗದಲ್ಲಿ ನಡೆಯುವವರು’ ಏನನ್ನು ಮಾಡತಕ್ಕದ್ದು? (ಯೆರೆ. 7:23) [ವಾರದ ಬೈಬಲ್ ವಾಚನ; w-KA99 8/15 ಪು. 29 ಪ್ಯಾರ. 6ನ್ನು ನೋಡಿ.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಪೂರ್ಣಮಾಡಲು ಬೇಕಾದ ಪದ(ಗಳು) ಅಥವಾ ಪದಗುಚ್ಛವನ್ನು ಒದಗಿಸಿರಿ:
21. “ಬಲ”ಗೈ ಹೆಚ್ಚಾಗಿ _________________________ ಸೂಚಿಸುವ ಅರ್ಥದಲ್ಲಿ “ಜ್ಞಾನಿಯ ಹೃದಯವು ಅವನ ಬಲಗಡೆ” ಇರುತ್ತದೆ; ಹೀಗೆ, ಅವನ _________________________ ಅವನನ್ನು ಒಂದು ಒಳ್ಳೆಯ ಅನುಗ್ರಹಭರಿತ ಮಾರ್ಗವನ್ನು ಬೆನ್ನಟ್ಟುವಂತೆ ಪ್ರಚೋದಿಸುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. (ಪ್ರಸಂ. 10:2; ಮತ್ತಾ. 25:33) [ವಾರದ ಬೈಬಲ್ ವಾಚನ; w87 9/15 ಪು. 25 ಪ್ಯಾರ. 8ನ್ನು ನೋಡಿ.]
22. ನಾವು ಶಾಸ್ತ್ರಗಳನ್ನು _________________________, ಅವುಗಳ ಬುದ್ಧಿವಾದವನ್ನು _________________________ಕೊಳ್ಳುವಾಗ, ಮನುಷ್ಯರಿಗೆ ಸ್ವತಃ ಸಾಧಿಸಲಾಗದ _________________________ವನ್ನು ನಾವು ಪ್ರಯೋಗಿಸುತ್ತಿರುತ್ತೇವೆ. [kl-KA ಪು. 21 ಪ್ಯಾರ. 20]
23. ಯೆಶಾಯ 33:1ರಲ್ಲಿ ವರ್ಣಿಸಲ್ಪಟ್ಟಿರುವ ಯೆಹೂದದ ಪಟ್ಟಣಗಳನ್ನು ಸೂರೆಮಾಡುವವನು, _________________________ವಾಗಿದ್ದು, ಸಾ.ಶ.ಪೂ. 632ರಲ್ಲಿ ಸ್ವತಃ ಅದೇ ಧ್ವಂಸಕ್ಕೆ ಗುರಿಯಾಗಲಿತ್ತು. ಮತ್ತು _________________________ದ ನಿವಾಸಿಗಳಿಗೆ ಭಾರೀ ಕೊಳ್ಳೆಯನ್ನು ಬಿಟ್ಟುಹೋಗಲಿದ್ದು, ಇವರು ಅದನ್ನು ‘ಮಿಡತೆಗಳಂತೆ ಕೊಳ್ಳೆಮಾಡಲಿದ್ದರು.’ (ಯೆಶಾ. 33:4) [ವಾರದ ಬೈಬಲ್ ವಾಚನ; ip-1-KA ಪು. 343 ಪ್ಯಾರ. 4; ಪು. 345 ಪ್ಯಾರ. 6ನ್ನು ನೋಡಿ.]
24. ಯೆಶಾಯ 54:1 ಹಾಗೂ ಗಲಾತ್ಯ 4:26, 27ರ ಹೋಲಿಕೆಯು, ‘ಬಂಜೆಯು’ _________________________ ಅನ್ನು ಮತ್ತು ‘ಗಂಡನುಳ್ಳವಳಾದ’ ಸ್ತ್ರೀಯು _________________________ವನ್ನು ಚಿತ್ರಿಸುತ್ತದೆ ಎಂಬುದು ಪ್ರಕಟವಾಗುತ್ತದೆ. [ವಾರದ ಬೈಬಲ್ ವಾಚನ; w-KA95 8/1 ಪು. 11 ಪ್ಯಾರ. 8ನ್ನು ನೋಡಿ.]
25. ನಮ್ಮ ಸಾರ್ವಜನಿಕ ಶುಶ್ರೂಷೆಯಲ್ಲಿ ನಾವು ಅಪಹಾಸ್ಯ ಮತ್ತು ತಿರಸ್ಕಾರವನ್ನು ಎದುರಿಸುವಾಗ, ಅಂತಹ ವಿರೋಧವು ನಿಜವಾಗಿಯೂ _________________________, ಬದಲಾಗಿ ನಮ್ಮ ಸಂದೇಶದ ಮೂಲನಾಗಿರುವ _________________________ ವಿರುದ್ಧ ತೋರಿಸಲ್ಪಡುತ್ತದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. (2 ಕೊರಿಂ. 4:1, 7) [w-KA00 1/15 ಪು. 21 ಪ್ಯಾರ. 2]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದರ ಸರಿಯಾದ ಉತ್ತರವನ್ನು ಆರಿಸಿರಿ:
26. ಯೇಸುವಿನ ಸ್ವರ್ಗೀಯ ಮಹಿಮೆಯ ಕುರಿತಾದ ತನ್ನ ದರ್ಶನದ ಬಗ್ಗೆ ಬರೆಯುವಾಗ, ‘ದಿನತುಂಬದೆ ಹುಟ್ಟಿದವನು’ ಎಂದು ಪೌಲನು ತನ್ನ ಕುರಿತು ಸಂಬೋಧಿಸಿಕೊಂಡದ್ದು, (ಅವನು ಹೊಸದಾಗಿ ಆತ್ಮಜನಿತನಾಗಿದ್ದನು; ಜನಾಂಗಗಳಿಗೆ ಅಪೊಸ್ತಲನೋಪಾದಿ ಬೇಗನೆ ನೇಮಕವನ್ನು ಹೊಂದಿದನು; ಸಮಯಕ್ಕೆ ಮುಂಚಿತವಾಗಿಯೇ ಆತ್ಮ ಜೀವಿತಕ್ಕೆ ಜನಿಸುವ ಅಥವಾ ಪುನರುತ್ಥಾನವಾಗುವ ಸನ್ಮಾನವು ಕೊಡಲ್ಪಟ್ಟಿದ್ದಂತಿತ್ತು) ಎಂಬುದನ್ನು ಅರ್ಥೈಸಿತು. (1 ಕೊರಿಂ. 9:1; 15:8) [w-KA00 1/15 ಪು. 29 ಪ್ಯಾರ. 6]
27. “ನಿತ್ಯನಾದ ತಂದೆ” ಎಂಬ ಬಿರುದು, ಮಾನವರಿಗೆ (ಆತ್ಮಿಕ ಚೈತನ್ಯ; ಸ್ವರ್ಗದಲ್ಲಿ ಅಮರ ಜೀವನ; ಭೂಮಿಯಲ್ಲಿ ಸದಾಕಾಲ ಜೀವಿಸುವ ಪ್ರತೀಕ್ಷೆಯನ್ನು) ನೀಡಲಿಕ್ಕಾಗಿರುವ ಮೆಸ್ಸೀಯ ರಾಜನ ಶಕ್ತಿ ಮತ್ತು ಅಧಿಕಾರವನ್ನು ಸೂಚಿಸುತ್ತದೆ. (ಯೆಶಾ. 9:6; ಯೋಹಾ. 11:25, 26) [ವಾರದ ಬೈಬಲ್ ವಾಚನ; ip-1-KA ಪು. 131 ಪ್ಯಾರ. 26ನ್ನು ನೋಡಿ.]
28. ಯೆಶಾಯ 66:7ರ ಆಧುನಿಕ ನೆರವೇರಿಕೆಯಲ್ಲಿ, ಹಡೆಯಲ್ಪಟ್ಟ “ಗಂಡು ಮಗು” (ಯೇಸು ಕ್ರಿಸ್ತನನ್ನು; ಮೆಸ್ಸೀಯ ರಾಜ್ಯವನ್ನು; 1919ರಲ್ಲಿ ಒಂದು ಹೊಸ ಆತ್ಮಿಕ ಜನಾಂಗವನ್ನು) ಪ್ರತಿನಿಧಿಸುತ್ತದೆ. [ವಾರದ ಬೈಬಲ್ ವಾಚನ; w-KA95 1/1 ಪು. 11 ಪ್ಯಾರ. 3ನ್ನು ನೋಡಿ.]
29. “ಪರಲೋಕ ರಾಜ್ಯದ ಬೀಗದ ಕೈಗಳನ್ನು ನಾನು ನಿನಗೆ ಕೊಡುವೆನು” ಎಂದು ಯೇಸು ಪೇತ್ರನಿಗೆ ಹೇಳುವ ಮೂಲಕ, ಪೇತ್ರನಿಗೆ (ತನ್ನ ಅಪೊಸ್ತಲರಲ್ಲಿ ಮೊದಲನೆಯ ಸ್ಥಾನವು ಕೊಡಲ್ಪಟ್ಟಿದೆ; ಅವನು ವಿಶೇಷ ಸುಯೋಗಗಳನ್ನು ಪಡೆಯಲಿದ್ದಾನೆ; ಸಭೆಯ ಅಸ್ತಿವಾರವಾಗಿ ಮಾಡಲ್ಪಟ್ಟಿದ್ದಾನೆ) ಎಂಬುದನ್ನು ಅವನು ಪ್ರಕಟಪಡಿಸುತ್ತಿದ್ದನು. (ಮತ್ತಾ. 16:19) [gt-KA ಅಧ್ಯಾಯ 59]
30. ಆಧುನಿಕ ದಿನದ ನೆರವೇರಿಕೆಯಲ್ಲಿ, ಯೆರೆಮೀಯ 7:28ರಲ್ಲಿ ತಿಳಿಸಲ್ಪಟ್ಟಿರುವ “ತಮ್ಮ ದೇವರಾದ ಯೆಹೋವನ ಧ್ವನಿಗೆ ಕಿವಿಗೊಡದೆ ಶಿಕ್ಷಿತರಾಗದೆ ಇರುವ ಜನವು,” (ಮಹಾ ಬಾಬೆಲಿಗೆ; ಕ್ರೈಸ್ತಪ್ರಪಂಚಕ್ಕೆ; ಏಳನೆಯ ಲೋಕ ಶಕ್ತಿಗೆ) ಸೂಚಿಸುತ್ತದೆ. [ವಾರದ ಬೈಬಲ್ ವಾಚನ; w-KA88 5/1 ಪು. 26 ಪ್ಯಾರ. 10ನ್ನು ನೋಡಿ.]
ಮುಂದಿನ ಶಾಸ್ತ್ರವಚನಗಳನ್ನು ಕೆಳಗೆ ಪಟ್ಟಿಮಾಡಲ್ಪಟ್ಟಿರುವ ಹೇಳಿಕೆಗಳಿಗೆ ಸರಿಜೋಡಿಸಿರಿ:
ಜ್ಞಾನೋ. 24:16; ಪ್ರಸಂ. 3:11; ಯೆಶಾ. 40:8; ಮತ್ತಾ. 3:16, 17; ಯೋಹಾ. 6:14, 15
31. ಕ್ಲುಪ್ತ ಸಮಯದಲ್ಲಿ, ದೇವರ ಪ್ರತಿಯೊಂದು ಕೆಲಸವು ಆತನ ಉದ್ದೇಶದೊಂದಿಗೆ ಹೊಂದಿಕೊಳ್ಳುವ ಯೋಗ್ಯವಾದ ಸ್ಥಾನವನ್ನು ಪ್ರಕಟಪಡಿಸಲಾಗುವುದು. [ವಾರದ ಬೈಬಲ್ ವಾಚನ; w87 9/15 ಪು. 24 ಪ್ಯಾರ. 8ನ್ನು ನೋಡಿ.]
32. ಯೇಸು ಅದ್ಭುತಕರವಾಗಿ ಸಾವಿರಾರು ಮಂದಿಗೆ ಊಟವನ್ನು ಒದಗಿಸಿದ್ದನ್ನು ನೋಡಿ, ಯೇಸು ಮೋಶೆಗಿಂತ ದೊಡ್ಡ ಪ್ರವಾದಿ ಮಾತ್ರವೇ ಅಲ್ಲ, ಅವನು ಅತ್ಯಪೇಕ್ಷಣೀಯ ಪ್ರಭುವೂ ಆಗಬಲ್ಲನೆಂದು ಜನರು ತೀರ್ಮಾನಿಸುತ್ತಾರೆ. [gt-KA ಅಧ್ಯಾಯ 53]
33. ಜೀವನದಲ್ಲಿ ಸೋಲುಗಳು ಅನಿವಾರ್ಯವಾಗಿರುವುದಾದರೂ, ದೇವಭಕ್ತಿಯುಳ್ಳ ಒಬ್ಬ ವ್ಯಕ್ತಿಯು ಯಾವುದು ಒಳ್ಳೇದಾಗಿದೆಯೋ ಅದನ್ನು ಮಾಡುವ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. [w-KA00 2/1 ಪು. 5 ಪ್ಯಾರ. 1]
34. ದೇವರ ಮಾತು ಅಥವಾ ತಿಳಿಸಲ್ಪಟ್ಟ ಉದ್ದೇಶವನ್ನು ಎಂದಿಗೂ ಅಳಿಸಸಾಧ್ಯವಿಲ್ಲ ಅಥವಾ ಅದು ನೆರವೇರುವುದನ್ನು ಯಾವುದೂ ತಡೆಯಲಾರದು. [ವಾರದ ಬೈಬಲ್ ವಾಚನ; ip-1-KA ಪು. 402 ಪ್ಯಾರ. 10ನ್ನು ನೋಡಿ.]
35. ಯೆಹೋವನು ತಾನೇ ಯೇಸುವಿಗೆ ಒಪ್ಪಿಗೆಯನ್ನು ವ್ಯಕ್ತಪಡಿಸುತ್ತಾ, ಸ್ವರ್ಗದಿಂದ ಮಾತಾಡಿದನು. [kl-KA ಪು. 38 ಪ್ಯಾರ. 10]