ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 4/02 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2002 ನಮ್ಮ ರಾಜ್ಯದ ಸೇವೆ
2002 ನಮ್ಮ ರಾಜ್ಯದ ಸೇವೆ
km 4/02 ಪು. 7

ಪ್ರಕಟನೆಗಳು

◼ ಏಪ್ರಿಲ್‌ ಮತ್ತು ಮೇ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಪುನರ್ಭೇಟಿಗಳನ್ನು ಮಾಡುವಾಗ ಆಸಕ್ತಿಯನ್ನು ತೋರಿಸುವಂಥ ಮನೆಯವನನ್ನು ಕಂಡುಕೊಳ್ಳುವಲ್ಲಿ, ಆ ವ್ಯಕ್ತಿಯನ್ನು ಪತ್ರಿಕಾ ಮಾರ್ಗದಲ್ಲಿ ಒಳಗೂಡಿಸಿರಿ. ಬೈಬಲ್‌ ಅಧ್ಯಯನಗಳನ್ನು ಆರಂಭಿಸುವ ಸಲುವಾಗಿ ಅಪೇಕ್ಷಿಸು ಬ್ರೋಷರನ್ನು ನೀಡಿರಿ. ಜೂನ್‌: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಇಲ್ಲವೆ ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆಯವರ ಬಳಿ ಈ ಪ್ರಕಾಶನಗಳು ಮೊದಲೇ ಇರುವುದಾದರೆ, ಸಭೆಯ ಸ್ಟಾಕ್‌ನಲ್ಲಿರುವ ಯಾವುದಾದರೊಂದು ಸೂಕ್ತ ಬ್ರೋಷರನ್ನು ನೀಡಿರಿ. ಜುಲೈ: 32-ಪುಟಗಳ ಮುಂದಿನ ಯಾವುದಾದರೊಂದು ಬ್ರೋಷರನ್ನು ಉಪಯೋಗಿಸಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು​—⁠ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?, ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪರದೈಸನ್ನು ತರಲಿರುವ ಸರಕಾರ, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಮತ್ತು ನಿತ್ಯಕ್ಕೂ ಬಾಳುವ ದೈವಿಕ ನಾಮ. ಸೂಕ್ತವಾಗಿರುವಲ್ಲೆಲ್ಲ, ನಮ್ಮ ಸಮಸ್ಯೆಗಳು​—⁠ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ?, ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ಸತ್ತವರ ಆತ್ಮಗಳು​—⁠ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? ಎಂಬ ಬ್ರೋಷರುಗಳನ್ನು ನೀಡಬಹುದು.

◼ ಜನವರಿ ತಿಂಗಳ ಸ್ಟೇಟ್‌ಮೆಂಟ್‌ನೊಂದಿಗೆ, ಸ್ಪೆಷಲ್‌ ರಿಕ್ವೆಸ್ಟ್‌ ಫಾರ್ಮ್‌ ಫಾರ್‌ ಆ್ಯನ್ಯುಅಲ್‌ ಐಟೆಮ್ಸ್‌ ಅನ್ನು ಪ್ರತಿಯೊಂದು ಸಭೆಗೆ ಕಳುಹಿಸಲಾಗಿತ್ತು. 2002ರ ಅಧಿವೇಶನ ಬ್ಯಾಡ್ಜ್‌ ಕಾರ್ಡ್‌ಗಳು ಮತ್ತು 2003ನೆಯ ಇಸವಿಯ ಇತರ ವಾರ್ಷಿಕ ಐಟಮ್‌ಗಳ ತಮ್ಮ ಸರಬರಾಯಿಯನ್ನು ಇಷ್ಟರ ತನಕ ವಿನಂತಿಸಿಕೊಂಡಿರದಂಥ ಸಭೆಗಳು, ತತ್‌ಕ್ಷಣವೇ ತಮ್ಮ ವಿನಂತಿಗಳನ್ನು ಕಳುಹಿಸತಕ್ಕದ್ದು. ಕಿಂಗ್‌ಡಮ್‌ ಹಾಲ್‌ ಲಿಟರಚರ್‌ ಇನ್ವೆಂಟರಿ ಅರೇಂಜ್‌ಮೆಂಟ್‌ನ ಕೆಳಗೆ ಬರುವ ಸಭೆಗಳು, ತಮ್ಮ “ಸಹಯೋಜಕ ಸಭೆ”ಯ ಮೂಲಕ ಮಾತ್ರ ತಮ್ಮ ವಿನಂತಿಗಳನ್ನು ಕಳುಹಿಸತಕ್ಕದ್ದು. ಸಹಯೋಜಕ ಸಭೆಯ ಸೆಕ್ರಿಟರಿಯು, ತಮ್ಮ ಸಾಹಿತ್ಯ ಗುಂಪಿನಲ್ಲಿರುವ ಪ್ರತಿಯೊಂದು ಸಭೆಗೆ ಅಗತ್ಯವಿರುವಷ್ಟು ಐಟಮ್‌ಗಳ ಸರಬರಾಯಿಯನ್ನು ವಿನಂತಿಸಿಕೊಳ್ಳಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

◼ ಎಲ್ಲ ಅಧ್ಯಕ್ಷ ಮೇಲ್ವಿಚಾರಕರು ಹಾಗೂ ಸೆಕ್ರಿಟರಿಗಳ ವಿಳಾಸಗಳು ಹಾಗೂ ಟೆಲಿಫೋನ್‌ ನಂಬರುಗಳ ಸದ್ಯೋಚಿತ ದಾಖಲೆಯನ್ನು ಕಾಪಾಡಿಕೊಳ್ಳುವುದು ಬ್ರಾಂಚ್‌ ಆಫೀಸಿಗೆ ಅತ್ಯಗತ್ಯವಾಗಿದೆ. ಯಾವುದೇ ಸಮಯದಲ್ಲಿ ಇದರಲ್ಲಿ ಬದಲಾವಣೆಯಿರುವಲ್ಲಿ, ಸಭಾ ಸೇವಾ ಕಮಿಟಿಯು ಅದನ್ನು ಪೂರ್ಣಗೊಳಿಸಿ, ಸಹಿಹಾಕಿ, ಪ್ರಿಸೈಡಿಂಗ್‌ ಓವರ್‌ಸೀಅರ್‌/ಸೆಕ್ರಿಟರಿ ಚೇಂಜ್‌ ಆಫ್‌ ಅಡ್ರೆಸ್‌ (S-29) ಫಾರ್ಮನ್ನು ಬ್ರಾಂಚ್‌ ಆಫೀಸಿಗೆ ತಡಮಾಡದೆ ಕಳುಹಿಸಬೇಕು. ಪಿನ್‌ ಕೋಡ್‌ಗಳಲ್ಲಿನ ಯಾವುದೇ ಬದಲಾವಣೆಗಳು ಸಹ ಇದರಲ್ಲಿ ಒಳಗೂಡಿವೆ.

◼ ಈ ಮುಂದಿನ ಪಯನೀಯರ್‌ ಫಾರ್ಮ್‌ಗಳ ಸಾಕಷ್ಟು ಸರಬರಾಯಿಯನ್ನು ಸಭಾ ಸೆಕ್ರಿಟರಿಗಳು ಇಟ್ಟುಕೊಳ್ಳಬೇಕು: ಆ್ಯಪ್ಲಿಕೇಷನ್‌ ಫಾರ್‌ ರೆಗ್ಯುಲರ್‌ ಪಯನೀಯರ್‌ ಸರ್ವಿಸ್‌ (S-205) ಮತ್ತು ಆ್ಯಪ್ಲಿಕೇಷನ್‌ ಫಾರ್‌ ಆಕ್ಸಿಲಿಯರಿ ಪಯನೀಯರ್‌ ಸರ್ವಿಸ್‌ (S-205b). ಇದನ್ನು ಲಿಟರಚರ್‌ ರಿಕ್ವೆಸ್ಟ್‌ ಫಾರ್ಮ್‌ನಲ್ಲಿ (S-14) ಆರ್ಡರ್‌ ಮಾಡಸಾಧ್ಯವಿದೆ. ಕಡಿಮೆಪಕ್ಷ ಒಂದು ವರ್ಷದ ಸರಬರಾಯಿಯನ್ನು ಇಟ್ಟುಕೊಳ್ಳಿರಿ. ಎಲ್ಲ ರೆಗ್ಯುಲರ್‌ ಪಯನೀಯರ್‌ ಸೇವೆಯ ಅರ್ಜಿಗಳು ಸಂಪೂರ್ಣವಾಗಿ ಭರ್ತಿಮಾಡಲ್ಪಟ್ಟಿವೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಅವುಗಳನ್ನು ಪುನಃ ನೋಡಿರಿ. ಅರ್ಜಿದಾರರು ತಮ್ಮ ದೀಕ್ಷಾಸ್ನಾನದ ನಿಖರವಾದ ತಾರೀಖನ್ನು ಜ್ಞಾಪಿಸಿಕೊಳ್ಳಲು ಅಸಮರ್ಥರಾಗಿರುವಲ್ಲಿ, ಅವರು ಅಂದಾಜುಮಾಡಿ ತಾರೀಖನ್ನು ಹೇಳಬೇಕು ಮತ್ತು ಅದರ ದಾಖಲೆಯನ್ನು ಇಟ್ಟುಕೊಳ್ಳಬೇಕು.

◼ ವೈಯಕ್ತಿಕ ಪ್ರಯಾಣ ಯೋಜನೆಗಳು, ಇನ್ನೊಂದು ದೇಶದಲ್ಲಿನ ಸಭಾ ಕೂಟಗಳಿಗೆ, ಸಮ್ಮೇಳನಕ್ಕೆ, ಅಥವಾ ಜಿಲ್ಲಾ ಅಧಿವೇಶನಕ್ಕೆ ಹಾಜರಾಗುವ ವಿಷಯಗಳನ್ನು ಒಳಗೂಡಿರುವಾಗೆಲ್ಲಾ, ತಾರೀಖುಗಳು, ಸಮಯಗಳು, ಮತ್ತು ಸ್ಥಳಗಳ ಕುರಿತಾದ ಮಾಹಿತಿಗಾಗಿರುವ ನಿಮ್ಮ ವಿನಂತಿಗಳು ಯಾವಾಗಲೂ, ಆ ದೇಶದಲ್ಲಿನ ಕೆಲಸದ ಮೇಲ್ವಿಚಾರಣೆಮಾಡುವ ಬ್ರಾಂಚ್‌ ಆಫೀಸಿಗೆ ನೇರವಾಗಿ ಕಳುಹಿಸಲ್ಪಡಬೇಕು. ಬ್ರಾಂಚ್‌ ಆಫೀಸುಗಳ ವಿಳಾಸಗಳನ್ನು, ಸದ್ಯದ ವರ್ಷಪುಸ್ತಕ (ಇಂಗ್ಲಿಷ್‌)ದ ಕೊನೆಯ ಪುಟದಲ್ಲಿ ಪಟ್ಟಿಮಾಡಲಾಗಿದೆ.

◼ ಪುನಃ ಲಭ್ಯವಿರುವ ಪ್ರಕಾಶನಗಳು:

“ಇಡೀ ಶಾಸ್ತ್ರವಚನವು ದೈವಪ್ರೇರಿತವಾಗಿದೆ ಮತ್ತು ಪ್ರಯೋಜನಾರ್ಹವಾಗಿದೆ” ​—⁠ತಮಿಳು

ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ​—⁠ತಮಿಳು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ