ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 5/02 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2002 ನಮ್ಮ ರಾಜ್ಯದ ಸೇವೆ
2002 ನಮ್ಮ ರಾಜ್ಯದ ಸೇವೆ
km 5/02 ಪು. 7

ಪ್ರಕಟನೆಗಳು

◼ ಮೇ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಪುನರ್ಭೇಟಿಗಳನ್ನು ಮಾಡುವಾಗ ಆಸಕ್ತಿಯನ್ನು ತೋರಿಸುವಂಥ ಮನೆಯವನನ್ನು ಕಂಡುಕೊಳ್ಳುವಲ್ಲಿ, ಆ ವ್ಯಕ್ತಿಯನ್ನು ಪತ್ರಿಕಾ ಮಾರ್ಗದಲ್ಲಿ ಒಳಗೂಡಿಸಿರಿ. ಬೈಬಲ್‌ ಅಧ್ಯಯನಗಳನ್ನು ಆರಂಭಿಸುವ ಸಲುವಾಗಿ ಅಪೇಕ್ಷಿಸು ಬ್ರೋಷರನ್ನು ನೀಡಿರಿ. ಜೂನ್‌: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಇಲ್ಲವೆ ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆಯವರ ಬಳಿ ಈ ಪ್ರಕಾಶನಗಳು ಮೊದಲೇ ಇರುವುದಾದರೆ, ಸಭೆಯ ಸ್ಟಾಕ್‌ನಲ್ಲಿರುವ ಯಾವುದಾದರೊಂದು ಸೂಕ್ತ ಬ್ರೋಷರನ್ನು ನೀಡಿರಿ. ಜುಲೈ ಮತ್ತು ಆಗಸ್ಟ್‌: 32-ಪುಟಗಳ ಮುಂದಿನ ಯಾವುದಾದರೊಂದು ಬ್ರೋಷರನ್ನು ಉಪಯೋಗಿಸಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು​—⁠ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?, ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪರದೈಸನ್ನು ತರಲಿರುವ ಸರಕಾರ, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಮತ್ತು ನಿತ್ಯಕ್ಕೂ ಬಾಳುವ ದೈವಿಕ ನಾಮ. ಸೂಕ್ತವಾಗಿರುವಲ್ಲೆಲ್ಲ, ನಮ್ಮ ಸಮಸ್ಯೆಗಳು​—⁠ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ?, ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ಸತ್ತವರ ಆತ್ಮಗಳು​—⁠ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? ಎಂಬ ಬ್ರೋಷರುಗಳನ್ನು ನೀಡಬಹುದು.

◼ ಅಧ್ಯಕ್ಷ ಮೇಲ್ವಿಚಾರಕರು ಅಥವಾ ಅವರಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸನ್ನು ಜೂನ್‌ 1ರಂದು ಅಥವಾ ಆದಷ್ಟು ಬೇಗನೆ ಆಡಿಟ್‌ ಮಾಡಬೇಕು. ಇದನ್ನು ಮಾಡಿದ ಮೇಲೆ, ಮುಂದಿನ ಅಕೌಂಟ್ಸ್‌ ವರದಿಯ ನಂತರ ಸಭೆಗೆ ಪ್ರಕಟನೆಯೊಂದನ್ನು ಮಾಡಿರಿ.

◼ ಬ್ರಾಂಚ್‌ ಆಫೀಸು ಸ್ಥಳಾಂತರಿಸುವ ಸಮಯದಲ್ಲಿ ಸಾಹಿತ್ಯ ಹಾಗೂ ಪತ್ರಿಕೆಗಳ ವಿನಂತಿಗಳನ್ನು ಮಾಡುವುದರ ಕುರಿತಾಗಿ ಮಾರ್ಚ್‌ 2002ರ ನಮ್ಮ ರಾಜ್ಯದ ಸೇವೆಯಲ್ಲಿ ಮಾಡಲ್ಪಟ್ಟಿದ್ದ ಪ್ರಕಟನೆಯಲ್ಲಿ ಈ ಮುಂದಿನ ಬದಲಾವಣೆಯನ್ನು ದಯವಿಟ್ಟು ಗಮನಿಸಿರಿ. ಬ್ರಾಂಚ್‌ ಆಫೀಸು ಲೊನಾವ್ಲದಿಂದ ಬೆಂಗಳೂರಿಗೆ ಮೇ 2002ರಲ್ಲಿ ಸ್ಥಳಾಂತರಿಸಲ್ಪಡಲು ಶೆಡ್ಯೂಲ್‌ ಮಾಡಲ್ಪಟ್ಟಿರುವುದರಿಂದ, ಆ ತಿಂಗಳಲ್ಲಿ ಮತ್ತು ತದನಂತರ ಸ್ವಲ್ಪ ಸಮಯದ ವರೆಗೆ, ಸಾಹಿತ್ಯ ಮತ್ತು ಪತ್ರಿಕೆಗಳಿಗಾಗಿರುವ ವಿನಂತಿಗಳನ್ನು ಪೂರೈಸಲು ಸೊಸೈಟಿಗೆ ಸಾಧ್ಯವಾಗುವುದಿಲ್ಲ. ಅನೇಕ ಸಭೆಗಳಲ್ಲಿ, ಸಾಹಿತ್ಯ ಮತ್ತು ಪತ್ರಿಕೆಗಳ ಹಳೆಯ ಸಂಚಿಕೆಗಳ ದೊಡ್ಡ ಸ್ಟಾಕ್‌ ಇದೆಯೆಂದು ತೋರುತ್ತದೆ. ಹೀಗಿರುವುದರಿಂದ, ಈ ಅವಧಿಯಲ್ಲಿ ತಮ್ಮ ಸಭೆಯಲ್ಲಿ ಸಂಗ್ರಹಿಸಿಡಲ್ಪಟ್ಟಿರುವ ಪತ್ರಿಕೆಗಳು ಮತ್ತು ಸಾಹಿತ್ಯದ ಅಂಥ ಸ್ಟಾಕ್‌ ಅನ್ನು ವಿತರಿಸಲಿಕ್ಕಾಗಿ ಹಿರಿಯರು ವಿಶೇಷ ಕ್ಯಾಂಪೇನ್‌ಗಳನ್ನು ಸಂಘಟಿಸುವಂತೆ ವಿನಂತಿಸಲಾಗಿದೆ.

◼ ಈ ಹಿಂದೆ ಪ್ರಕಟಿಸಲ್ಪಟ್ಟಿರುವಂತೆ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಎಂಬ ಹೊಸ ಪುಸ್ತಕವು, ಇಸವಿ 2002ರ ಅಂತ್ಯದಲ್ಲಿ, ಇಂಗ್ಲಿಷ್‌, ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯಗೊಳಿಸಲ್ಪಡುವುದು. ಈ ಪುಸ್ತಕಕ್ಕಾಗಿ ತಮ್ಮ ಸಾಹಿತ್ಯ ವಿನಂತಿಗಳನ್ನು ಇನ್ನೂ ಕಳುಹಿಸಿರದ ಸಭೆಗಳು, ಸ್ಪೆಷಲ್‌ ರಿಕ್ವೆಸ್ಟ್‌ ಫಾರ್ಮ್‌ ಫಾರ್‌ ಆ್ಯನ್ಯುಅಲ್‌ ಐಟಮ್ಸ್‌ ಆ್ಯಂಡ್‌ ಮಿನಿಸ್ಟ್ರಿ ಸ್ಕೂಲ್‌ ಬುಕ್‌ ಅನ್ನು ಉಪಯೋಗಿಸುತ್ತಾ, ಅದನ್ನು ತತ್‌ಕ್ಷಣ ವಿನಂತಿಸಬೇಕು. ಆ ಪುಸ್ತಕಗಳನ್ನು ಕಳುಹಿಸುವ ವರೆಗೂ, ಅವು ಸಭೆಯ ಪ್ಯಾಕಿಂಗ್‌ ಲಿಸ್ಟ್‌ಗಳಲ್ಲಿ “ಪೆಂಡಿಂಗ್‌” ಐಟಮ್‌ಗಳಾಗಿ ತೋರಿಬರುವವು.

 ಕನ್ನಡದಲ್ಲಿ ಲಭ್ಯವಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ