ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/02 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2002 ನಮ್ಮ ರಾಜ್ಯದ ಸೇವೆ
2002 ನಮ್ಮ ರಾಜ್ಯದ ಸೇವೆ
km 9/02 ಪು. 7

ಪ್ರಕಟನೆಗಳು

◼ ಸೆಪ್ಟೆಂಬರ್‌ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಜೀವ​—⁠ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? ಎಂಬ ಪುಸ್ತಕ. ಪರ್ಯಾಯ ನೀಡುವಿಕೆಯಾಗಿ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಅಥವಾ ಯುವ ಜನರ ಪ್ರಶ್ನೆಗಳು​—⁠ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕವನ್ನು ಉಪಯೋಗಿಸಬಹುದು. ಅಕ್ಟೋಬರ್‌: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಎಲ್ಲಿ ಪುನರ್ಭೇಟಿಯು ಆರಂಭಿಸಲ್ಪಡುತ್ತದೋ ಅಲ್ಲಿ, ಯೆಹೋವನ ಸಾಕ್ಷಿಗಳು​—⁠ಲೋಕವ್ಯಾಪಕವಾಗಿ ದೇವರ ಚಿತ್ತವನ್ನು ಐಕ್ಯದಿಂದ ಮಾಡುತ್ತಿದ್ದಾರೆ ಎಂಬ ಬ್ರೋಷರನ್ನು ನೀಡಿರಿ. ಆರಂಭದಿಂದಲೇ ಮನೆಯವರನ್ನು ನಮ್ಮ ಸಭಾ ಕೂಟಗಳಿಗೆ ಹಾಜರಾಗುವಂತೆ ಆಮಂತ್ರಿಸುತ್ತಾ ಇರಿ. ನವೆಂಬರ್‌: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಅಥವಾ ನಿತ್ಯಜೀವಕ್ಕೆ ನಡೆಸುವ ಜ್ಞಾನ. ಜನರ ಬಳಿ ಈಗಾಗಲೇ ಇವು ಇರುವುದಾದರೆ, ಹಳೆಯ ಪುಸ್ತಕಗಳಲ್ಲೊಂದನ್ನು ನೀಡಬಹುದು. ಡಿಸೆಂಬರ್‌: ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ. ಒಂದು ಬದಲಿ ನೀಡುವಿಕೆಯಾಗಿ, ಬೈಬಲ್‌​—⁠ದೇವರ ವಾಕ್ಯವೊ ಮನುಷ್ಯನದ್ದೊ? ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕಗಳನ್ನು ಉಪಯೋಗಿಸಬಹುದು.

◼ ಸಭೆಯಲ್ಲಿ ಪುನಸ್ಥಾಪಿಸಲ್ಪಡಲು ಇಷ್ಟವಿರಬಹುದಾದ ಯಾವುದೇ ಬಹಿಷ್ಕೃತರು ಅಥವಾ ಬೇರ್ಪಡಿಸಿಕೊಂಡ ವ್ಯಕ್ತಿಗಳ ಕುರಿತಾಗಿ, 1992 ಫೆಬ್ರವರಿ 1ರ ಕಾವಲಿನಬುರುಜು ಪತ್ರಿಕೆಯ 19-21ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಸೂಚನೆಗಳನ್ನು ಅನುಸರಿಸುವಂತೆ ಹಿರಿಯರಿಗೆ ಜ್ಞಾಪಿಸಲಾಗುತ್ತದೆ.

◼ ಸಾಹಿತ್ಯಕ್ಕಾಗಿರುವ ಪ್ರಚಾರಕರ ವೈಯಕ್ತಿಕ ವಿನಂತಿಗಳನ್ನು ಬ್ರಾಂಚ್‌ ಆಫೀಸು ಸ್ವೀಕರಿಸುವುದಿಲ್ಲ. ಸಾಹಿತ್ಯಕ್ಕಾಗಿ ಸಭೆಯ ಮಾಸಿಕ ವಿನಂತಿಯನ್ನು ಬ್ರಾಂಚ್‌ಗೆ ಕಳುಹಿಸುವ ಮುಂಚೆ, ಪ್ರತಿ ತಿಂಗಳು ಒಂದು ಪ್ರಕಟನೆಯನ್ನು ಮಾಡುವಂತೆ ಅಧ್ಯಕ್ಷ ಮೇಲ್ವಿಚಾರಕನು ಏರ್ಪಡಿಸಬೇಕು. ಇದು, ವೈಯಕ್ತಿಕ ಸಾಹಿತ್ಯ ಐಟಮ್‌ಗಳನ್ನು ಪಡೆದುಕೊಳ್ಳಲು ಆಸಕ್ತರಿರುವವರೆಲ್ಲರೂ ಸಾಹಿತ್ಯವನ್ನು ನಿರ್ವಹಿಸುವ ಸಹೋದರನಿಗೆ ತಿಳಿಸುವಂತೆ ಸಾಧ್ಯಮಾಡುತ್ತದೆ. ಯಾವ ಪ್ರಕಾಶನಗಳು ವಿಶೇಷ ವಿನಂತಿಯ ಐಟಮ್‌ಗಳಾಗಿವೆ ಎಂಬುದನ್ನು ದಯವಿಟ್ಟು ಮನಸ್ಸಿನಲ್ಲಿಡಿರಿ.

◼ ಇಸವಿ 2003ಕ್ಕಾಗಿರುವ ಜ್ಞಾಪಕಾಚರಣೆಯ ಸಮಯಾವಧಿಯ ವಿಶೇಷ ಬಹಿರಂಗ ಭಾಷಣವು ಏಪ್ರಿಲ್‌ 27ರ ಭಾನುವಾರದಂದು ಕೊಡಲ್ಪಡುವುದು. ಭಾಷಣದ ವಿಷಯವಸ್ತು ಹಾಗೂ ಒಂದು ಹೊರಮೇರೆಯು ಸಮಯಾನಂತರ ಒದಗಿಸಲ್ಪಡುವುದು. ಆ ವಾರಾಂತ್ಯದಲ್ಲಿ ಸರ್ಕಿಟ್‌ ಮೇಲ್ವಿಚಾರಕರ ಸಂದರ್ಶನ ಅಥವಾ ಒಂದು ಸಮ್ಮೇಳನವನ್ನು ಹೊಂದಿರುವಂಥ ಸಭೆಗಳು, ಅದರ ಮುಂದಿನ ವಾರ ವಿಶೇಷ ಭಾಷಣವನ್ನು ನೀಡಲಿರುವವು. ಯಾವ ಸಭೆಯೂ 2003, ಏಪ್ರಿಲ್‌ 27ಕ್ಕೆ ಮುಂಚೆ ವಿಶೇಷ ಭಾಷಣವನ್ನು ನೀಡಬಾರದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ