ಪ್ರಕಟನೆಗಳು
◼ ಅಕ್ಟೋಬರ್ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಎಲ್ಲಿ ಪುನರ್ಭೇಟಿಯು ಆರಂಭಿಸಲ್ಪಡುತ್ತದೋ ಅಲ್ಲಿ, ಯೆಹೋವನ ಸಾಕ್ಷಿಗಳು—ಲೋಕವ್ಯಾಪಕವಾಗಿ ದೇವರ ಚಿತ್ತವನ್ನು ಐಕ್ಯದಿಂದ ಮಾಡುತ್ತಿದ್ದಾರೆ ಎಂಬ ಬ್ರೋಷರನ್ನು ನೀಡಿರಿ. ಆರಂಭದಿಂದಲೇ ಮನೆಯವರನ್ನು ನಮ್ಮ ಸಭಾ ಕೂಟಗಳಿಗೆ ಹಾಜರಾಗುವಂತೆ ಆಮಂತ್ರಿಸುತ್ತಾ ಇರಿ. ನವೆಂಬರ್: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಅಥವಾ ನಿತ್ಯಜೀವಕ್ಕೆ ನಡೆಸುವ ಜ್ಞಾನ. ಜನರ ಬಳಿ ಈಗಾಗಲೇ ಇವು ಇರುವುದಾದರೆ, ಹಳೆಯ ಪುಸ್ತಕಗಳಲ್ಲೊಂದನ್ನು ನೀಡಬಹುದು. ಡಿಸೆಂಬರ್: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ. ಒಂದು ಬದಲಿ ನೀಡುವಿಕೆಯಾಗಿ, ಬೈಬಲ್ ಕಥೆಗಳ ನನ್ನ ಪುಸ್ತಕ, ಬೈಬಲ್—ದೇವರ ವಾಕ್ಯವೊ ಮನುಷ್ಯನದ್ದೊ? ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕಗಳನ್ನು ಉಪಯೋಗಿಸಬಹುದು. ಈ ಬದಲಿ ನೀಡುವಿಕೆಗಳಲ್ಲಿ ಯಾವುದರ ಸರಬರಾಯಿಯೂ ನಿಮ್ಮ ಸಭೆಯಲ್ಲಿ ಇಲ್ಲದಿರುವಲ್ಲಿ, ನೀವು ಉಪಯೋಗಿಸಬಹುದಾದ ಹೆಚ್ಚಿನ ಸರಬರಾಯಿ ಸಮೀಪದಲ್ಲಿರುವ ಯಾವುದೇ ಸಭೆಗಳಲ್ಲಿ ಇವೆಯೋ ಎಂಬುದನ್ನು ದಯವಿಟ್ಟು ಕೇಳಿ ನೋಡಿ. ಜನವರಿ: ಸಭೆಯ ಸ್ಟಾಕ್‌ನಲ್ಲಿರಬಹುದಾದ ಯಾವುದೇ 192-ಪುಟದ ಪುಸ್ತಕ. ಈ ಪುಸ್ತಕಗಳಲ್ಲಿ ಯಾವುವೂ ನಿಮ್ಮ ಸ್ಟಾಕ್‌ನಲ್ಲಿ ಇಲ್ಲದಿರುವಲ್ಲಿ, ನೀವು ಉಪಯೋಗಿಸಬಹುದಾದ ಹೆಚ್ಚಿನ ಸರಬರಾಯಿ ಸಮೀಪದಲ್ಲಿರುವ ಯಾವುದೇ ಸಭೆಗಳಲ್ಲಿ ಇವೆಯೋ ಎಂಬುದನ್ನು ದಯವಿಟ್ಟು ಕೇಳಿ ನೋಡಿ. ಹಳೆಯ ಪುಸ್ತಕಗಳಿಲ್ಲದಿರುವ ಸಭೆಗಳು ದೇವರಿಗಾಗಿ ಮಾನವಕುಲದ ಅನ್ವೇಷಣೆ ಎಂಬ ಪುಸ್ತಕವನ್ನು ನೀಡಬಹುದು.
◼ ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯ ಪುರವಣಿಯಲ್ಲಿ “2003ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಶೆಡ್ಯೂಲ್” ಇದೆ ಮತ್ತು 2003ನೇ ಇಸವಿಯಾದ್ಯಂತ ರೆಫರೆನ್ಸ್‌ಗಾಗಿ ಇದನ್ನು ಜೋಪಾನವಾಗಿ ಇಟ್ಟುಕೊಳ್ಳತಕ್ಕದ್ದು.
◼ ನಿಮ್ಮ ಸಭೆಯ ಕೂಟದ ಸಮಯಗಳು ಜನವರಿ 1ರಿಂದ ಬದಲಾಗಲಿರುವಲ್ಲಿ, ಕಾಂಗ್ರಿಗೇಷನ್ ಮೀಟಿಂಗ್ ಇನ್‌ಫರ್ಮೇಶನ್ ಮತ್ತು ಹ್ಯಾಂಡ್‌ಬಿಲ್ ರಿಕ್ವೆಸ್ಟ್ ಫಾರ್ಮ್ (S-5) ಅನ್ನು ಕಳುಹಿಸುವ ಮೂಲಕ, ಮಾಡಲ್ಪಟ್ಟ ಬದಲಾವಣೆಗಳನ್ನು ಸಭೆಯ ಸೆಕ್ರಿಟರಿಯು ಬ್ರಾಂಚ್ ಆಫೀಸ್‌ಗೆ ತಿಳಿಯಪಡಿಸತಕ್ಕದ್ದು. ಒಂದುವೇಳೆ ಅಗತ್ಯವಿರುವಲ್ಲಿ, ಅದೇ ಫಾರ್ಮ್‌ನ ಮೇಲೆ ಹ್ಯಾಂಡ್‌ಬಿಲ್‌ನ ಹೊಸ ಸರಬರಾಯಿಗಾಗಿ ಆರ್ಡರ್ ಅನ್ನು ಕಳುಹಿಸಸಾಧ್ಯವಿದೆ. ನೀವು ಹ್ಯಾಂಡ್‌ಬಿಲ್‌ಗಳನ್ನು ಪಡೆದುಕೊಳ್ಳಲು ಇಷ್ಟಪಡುವ ಕಡಿಮೆಪಕ್ಷ ಎಂಟು ವಾರಗಳಿಗೆ ಮುಂಚೆ ಅವುಗಳಿಗಾಗಿ ಆರ್ಡರ್ ಮಾಡತಕ್ಕದ್ದು.
◼ ಲಿಟ್‌ರೇಚರ್ ಇನ್‌ವೆಂಟರಿ ಆ್ಯಸ್ ಆಫ್ ಸೆಪ್ಟೆಂಬರ್ 1, 2002 (S-18) ಫಾರ್ಮ್‌ನ ಮೂರು ಪ್ರತಿಗಳು, ಜುಲೈ ತಿಂಗಳ ಸ್ಟೇಟ್‌ಮೆಂಟ್‌ನೊಂದಿಗೆ ಎಲ್ಲ ಸಭೆಗಳಿಗೆ ಕಳುಹಿಸಲ್ಪಟ್ಟವು. ಇದುವರೆಗೂ ತಮ್ಮ ಇನ್‌ವೆಂಟರಿಗಳನ್ನು ಕಳುಹಿಸಿರದ ಸಭೆಗಳು ತತ್‌ಕ್ಷಣ ಮೇಲ್ಕಂಡ ಫಾರ್ಮ್ ಅನ್ನು ತುಂಬಿಸಿ ಕಳುಹಿಸತಕ್ಕದ್ದು. “ಕಿಂಗ್ಡಮ್ ಹಾಲ್ ಲಿಟ್‌ರೇಚರ್ ಗ್ರೂಪ್”ನಲ್ಲಿರುವ ಸಭೆಗಳಿಗಾಗಿ, ಸಂಯೋಜಿಸುವ ಸಭೆಯು ಈ ಫಾರ್ಮ್ ಅನ್ನು ತುಂಬಿಸಿ ಕಳುಹಿಸತಕ್ಕದ್ದು.
◼ ಜೆಹೋವಸ್ ವಿಟ್ನೆಸಸ್ ಆಫ್ ಇಂಡಿಯಾ ಲೆಟರ್ ಹೆಡ್‌ನಲ್ಲಿ ಕಂಡುಬರುವ ವಿಳಾಸವನ್ನು ಉಪಯೋಗಿಸಿ, ಸೆಕ್ರಿಟರಿಯು ಕಾಂಗ್ರಿಗೇಷನ್ ರಿಪೋರ್ಟ್ (S-1) ಅನ್ನು ಬ್ರಾಂಚ್ ಆಫೀಸಿಗೆ ರವಾನಿಸತಕ್ಕದ್ದು ಮತ್ತು ಫ್ಯಾಕ್ಸನ್ನು ಕಳುಹಿಸುವಾಗ, ಈ ಮುಂದಿನ ಫ್ಯಾಕ್ಸ್ ನಂಬರನ್ನು ಮಾತ್ರ ಉಪಯೋಗಿಸಿರಿ: 080-8468417.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ —ಕನ್ನಡ, ತೆಲುಗು
◼ ಲಭ್ಯವಿರುವ ಹೊಸ ವಿಡಿಯೋಕ್ಯಾಸೆಟ್:
ನಮ್ಮ ದಿನಕ್ಕಾಗಿ ಎಚ್ಚರಿಕೆಯ ಉದಾಹರಣೆಗಳು —ಇಂಗ್ಲಿಷ್
◼ ಪುನಃ ಲಭ್ಯವಿರುವ ಪ್ರಕಾಶನಗಳು:
“ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ” —ನೇಪಾಲಿ
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? —ಉರ್ದು
ಸಕಲ ಜನರಿಗಾಗಿರುವ ಒಂದು ಗ್ರಂಥ —ನೇಪಾಲಿ