2003ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಶೆಡ್ಯೂಲ್
ಸೂಚನೆಗಳು
2003ರಲ್ಲಿ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯನ್ನು ನಡಿಸುವಾಗ ಈ ಕೆಳಗಿನ ಏರ್ಪಾಡುಗಳನ್ನು ಅನುಸರಿಸಲಾಗುವುದು.
ಮಾಹಿತಿಯ ಮೂಲಗಳು: ಸತ್ಯವೇದವು [BSI], ಕಾವಲಿನಬುರುಜು [w-KA], ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ [be-KA], “ಎಲ್ಲ ಶಾಸ್ತ್ರವಚನವು ದೇವರಿಂದ ಪ್ರೇರಿತವಾಗಿದೆ ಮತ್ತು ಪ್ರಯೋಜನದಾಯಕವಾಗಿದೆ” (ಇಂಗ್ಲಿಷ್, 1990ರ ಮುದ್ರಣ) [si], ಶಾಸ್ತ್ರವಚನಗಳಿಂದ ತರ್ಕಿಸುವುದು (ಇಂಗ್ಲಿಷ್, 1989ರ ಮುದ್ರಣ) [rs], ನಿತ್ಯಜೀವಕ್ಕೆ ನಡೆಸುವ ಜ್ಞಾನ [kl-KA], ಕುಟುಂಬ ಸಂತೋಷದ ರಹಸ್ಯ [fy-KA].
ಎಲ್ಲಿ ಶಾಸ್ತ್ರವಚನಗಳಿಂದ ತರ್ಕಿಸುವುದು ಪುಸ್ತಕವು ಲಭ್ಯವಿಲ್ಲವೋ ಅಲ್ಲಿ ಬೇರೆ ರೆಫರೆನ್ಸ್ಗಳನ್ನು ಒದಗಿಸಲಾಗಿದೆ.
ಶಾಲೆಯನ್ನು ಗೀತೆ, ಪ್ರಾರ್ಥನೆ, ಮತ್ತು ಚುಟುಕಾದ ಸ್ವಾಗತದ ಹೇಳಿಕೆಯೊಂದಿಗೆ ಸರಿಯಾದ ಸಮಯಕ್ಕೆ ಆರಂಭಿಸಿದ ನಂತರ ಈ ಮುಂದಿನಂತೆ ಮುಂದುವರಿಯಿರಿ:
ಭಾಷಣ ಗುಣ: 5 ನಿಮಿಷಗಳು. ಶಾಲಾ ಮೇಲ್ವಿಚಾರಕನು, ಸಹಾಯಕ ಸಲಹೆಗಾರನು, ಅಥವಾ ಇನ್ನೊಬ್ಬ ಅರ್ಹ ಹಿರಿಯನು, ಶುಶ್ರೂಷಾ ಶಾಲೆ ಪಠ್ಯಪುಸ್ತಕದ ಮೇಲಾಧಾರಿತವಾದ ಒಂದು ಭಾಷಣ ಗುಣದ ಕುರಿತು ಚರ್ಚಿಸುವನು. (ಮಿತವಾದ ಸಂಖ್ಯೆಯ ಹಿರಿಯರಿರುವ ಸಭೆಗಳಲ್ಲಿ, ಒಬ್ಬ ಅರ್ಹ ಶುಶ್ರೂಷಾ ಸೇವಕನನ್ನು ಉಪಯೋಗಿಸಬಹುದು.) ಬೇರಾವುದೇ ಸೂಚನೆಯಿಲ್ಲದಿರುವಲ್ಲಿ, ನೇಮಿತ ಪುಟಗಳಲ್ಲಿ ಕಂಡುಬರುವ ಚೌಕಗಳು ಸಹ ಚರ್ಚೆಯಲ್ಲಿ ಒಳಗೂಡಿಸಲ್ಪಡಬೇಕು. ಅಭ್ಯಾಸಪಾಠಗಳನ್ನು ಬಿಟ್ಟುಬಿಡಬೇಕು. ಏಕೆಂದರೆ ಮೂಲತಃ ಇವು ವೈಯಕ್ತಿಕ ಉಪಯೋಗಕ್ಕಾಗಿವೆ ಮತ್ತು ಖಾಸಗಿ ಸಲಹೆಗಾಗಿವೆ.
ನೇಮಕ ನಂಬರ್ 1: 10 ನಿಮಿಷಗಳು. ಇದನ್ನು ಒಬ್ಬ ಹಿರಿಯನು ಅಥವಾ ಒಬ್ಬ ಶುಶ್ರೂಷಾ ಸೇವಕನು ನಿರ್ವಹಿಸಬೇಕು. ಮತ್ತು ಇದು ಕಾವಲಿನಬುರುಜು ಪತ್ರಿಕೆ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕ, ಅಥವಾ “ಎಲ್ಲ ಶಾಸ್ತ್ರವಚನವು ದೇವರಿಂದ ಪ್ರೇರಿತವಾಗಿದೆ ಮತ್ತು ಪ್ರಯೋಜನದಾಯಕವಾಗಿದೆ” ಎಂಬ ಪುಸ್ತಕದ ಮೇಲೆ ಆಧಾರಿಸಿರುವುದು. ಇದನ್ನು ಹತ್ತು ನಿಮಿಷದ ಉಪದೇಶ ಭಾಷಣವಾಗಿ ನೀಡಬೇಕಾಗಿದ್ದು, ಯಾವುದೇ ಮೌಖಿಕ ಪುನರ್ವಿಮರ್ಶೆಯಿರುವುದಿಲ್ಲ. ಇದರ ಉದ್ದೇಶವು ಕೇವಲ ವಿಷಯವನ್ನು ಆವರಿಸುವುದಲ್ಲ, ಬದಲಾಗಿ ಚರ್ಚಿಸಲ್ಪಡುತ್ತಿರುವ ಮಾಹಿತಿಯ ಪ್ರಾಯೋಗಿಕ ಮೌಲ್ಯದ ಮೇಲೆ ಗಮನವನ್ನು ಕೇಂದ್ರೀಕರಿಸಿ, ಸಭೆಗೆ ಅತ್ಯಂತ ಸಹಾಯಕಾರಿಯಾಗಿರುವ ವಿಷಯವನ್ನು ಎತ್ತಿಹೇಳುವುದೇ ಆಗಿರಬೇಕು. ಕೊಡಲ್ಪಟ್ಟಿರುವ ಮುಖ್ಯ ವಿಷಯವನ್ನೇ ಉಪಯೋಗಿಸತಕ್ಕದ್ದು. ಈ ಭಾಷಣಕ್ಕೆ ನೇಮಿತರಾದ ಸಹೋದರರು, ಕೊಡಲ್ಪಟ್ಟಿರುವ ಸಮಯದ ಪರಿಮಿತಿಯೊಳಗೆ ಅದನ್ನು ಮುಗಿಸಲು ಜಾಗ್ರತೆ ವಹಿಸುವಂತೆ ನಿರೀಕ್ಷಿಸಲಾಗುತ್ತದೆ. ಖಾಸಗಿ ಸಲಹೆಯು ಅಗತ್ಯಕ್ಕನುಸಾರ ನೀಡಲ್ಪಡಬಹುದು.
ಬೈಬಲ್ ವಾಚನದಿಂದ ಮುಖ್ಯಾಂಶಗಳು: 10 ನಿಮಿಷಗಳು. ಮೊದಲ ಆರು ನಿಮಿಷಗಳ ವರೆಗೆ, ಒಬ್ಬ ಅರ್ಹ ಹಿರಿಯನು ಅಥವಾ ಶುಶ್ರೂಷಾ ಸೇವಕನು ವಿಷಯಭಾಗವನ್ನು ಸ್ಥಳಿಕ ಆವಶ್ಯಕತೆಗಳಿಗೆ ಪರಿಣಾಮಕಾರಿಯಾಗಿ ಅನ್ವಯಿಸತಕ್ಕದ್ದು. ನೇಮಕ ನಂಬರ್ 2ನ್ನು ನಿರ್ವಹಿಸುವ ಸಹೋದರನು ತಾನು ಓದುವಂಥ ವಚನಗಳ ಕುರಿತು ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲವಾದ್ದರಿಂದ, ಆ ವಾರಕ್ಕಾಗಿರುವ ನೇಮಿತ ಬೈಬಲ್ ವಾಚನದ ಯಾವುದೇ ಭಾಗದ ಕುರಿತು ಅವನು ಹೇಳಿಕೆ ನೀಡಬಹುದು. ಇದು ನೇಮಿತ ವಾಚನದ ಬರೀ ಸಾರಾಂಶವಾಗಿರಬಾರದು. ಈ ಮಾಹಿತಿಯು ಏಕೆ ಮತ್ತು ಹೇಗೆ ಅಮೂಲ್ಯವಾದದ್ದಾಗಿದೆ ಎಂಬುದನ್ನು ಸಭಿಕರು ಗಣ್ಯಮಾಡುವಂತೆ ಸಹಾಯಮಾಡುವುದೇ ಇದರ ಮುಖ್ಯ ಉದ್ದೇಶವಾಗಿದೆ. ತದನಂತರ, ನಾಲ್ಕು ನಿಮಿಷಗಳ ವರೆಗೆ, ಈ ಮುಂದಿನ ಎರಡು ಪ್ರಶ್ನೆಗಳ ಕುರಿತು ಚುಟುಕಾದ ಹೇಳಿಕೆಗಳನ್ನು (30 ಸೆಕೆಂಡುಗಳು ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ) ನೀಡುವ ಮೂಲಕ ಪಾಲ್ಗೊಳ್ಳುವಂತೆ ಭಾಷಣಕಾರನು ಸಭಿಕರನ್ನು ಆಮಂತ್ರಿಸುತ್ತಾನೆ: “ನಿಮ್ಮ ಶುಶ್ರೂಷೆಯಲ್ಲಿ ಅಥವಾ ಜೀವನ ಮಾರ್ಗದಲ್ಲಿ ನಿಮಗೆ ಪ್ರಯೋಜನದಾಯಕವಾಗಲಿರುವ ಯಾವ ವಿಷಯವನ್ನು ನೀವು ಈ ವಾರದ ಬೈಬಲ್ ವಾಚನದಲ್ಲಿ ಕಂಡುಕೊಂಡಿರಿ?” ಮತ್ತು “ಯಾವ ವಿಷಯವು ನಿಮ್ಮ ನಂಬಿಕೆಯನ್ನು ಬಲಗೊಳಿಸಿತು ಮತ್ತು ಯೆಹೋವನಿಗಾಗಿರುವ ನಿಮ್ಮ ಗಣ್ಯತೆಯನ್ನು ಹೆಚ್ಚಿಸಿತು?” ಅನಂತರ ಶಾಲಾ ಮೇಲ್ವಿಚಾರಕನು ಇತರ ಕ್ಲಾಸ್ರೂಮ್ಗಳಿಗೆ ನೇಮಿಸಲ್ಪಟ್ಟಿರುವ ವಿದ್ಯಾರ್ಥಿಗಳನ್ನು ಕಳುಹಿಸುವನು.
ನೇಮಕ ನಂಬರ್ 2: 4 ನಿಮಿಷಗಳು. ಇದು ವಾಚನ ನೇಮಕವಾಗಿದ್ದು, ಒಬ್ಬ ಸಹೋದರನಿಂದ ಕೊಡಲ್ಪಡಬೇಕು. ಸಾಮಾನ್ಯವಾಗಿ ಈ ವಾಚನವನ್ನು ಬೈಬಲಿನಿಂದ ಮಾಡಲಾಗುತ್ತದೆ. ತಿಂಗಳಿಗೊಮ್ಮೆ ಈ ನೇಮಕವು ಕಾವಲಿನಬುರುಜು ಪತ್ರಿಕೆಯಿಂದ ತೆಗೆಯಲ್ಪಟ್ಟಿರುವ ವಿಷಯಭಾಗವನ್ನು ಆವರಿಸುವುದು. ವಿದ್ಯಾರ್ಥಿಯು ನೇಮಿತ ವಿಷಯಭಾಗವನ್ನು ಒಂದು ಪೀಠಿಕೆ ಅಥವಾ ಸಮಾಪ್ತಿಯನ್ನು ಕೊಡದೆ ಓದಬೇಕು. ಪ್ರತಿ ವಾರ, ಓದಲಿಕ್ಕಾಗಿ ಕೊಡಲ್ಪಡುವ ವಿಷಯಭಾಗದ ಪ್ರಮಾಣವು ಸ್ವಲ್ಪಮಟ್ಟಿಗೆ ಭಿನ್ನವಾಗಿರುತ್ತದೆ, ಆದರೆ ಇದಕ್ಕಾಗಿ ನಾಲ್ಕು ನಿಮಿಷಗಳು ಅಥವಾ ಅದಕ್ಕಿಂತಲೂ ಕಡಿಮೆ ಸಮಯ ಹಿಡಿಯಬಹುದು. ನೇಮಕಗಳನ್ನು ಮಾಡುವ ಮೊದಲು ಶಾಲಾ ಮೇಲ್ವಿಚಾರಕನು ವಿಷಯಭಾಗವನ್ನು ಪರೀಕ್ಷಿಸಿನೋಡಬೇಕು ಮತ್ತು ಅವುಗಳನ್ನು ವಿದ್ಯಾರ್ಥಿಗಳ ವಯಸ್ಸು ಹಾಗೂ ಸಾಮರ್ಥ್ಯಕ್ಕನುಸಾರ ನೇಮಿಸತಕ್ಕದ್ದು. ಅರ್ಥಮಾಡಿಕೊಳ್ಳುವಂಥ ರೀತಿಯಲ್ಲಿ, ನಿರರ್ಗಳವಾಗಿ, ಸರಿಯಾದ ಅರ್ಥಒತ್ತಿನಿಂದ, ಧ್ವನಿಯ ಏರಿಳಿತದೊಂದಿಗೆ, ಸೂಕ್ತವಾದಲ್ಲಿ ನಿಲ್ಲಿಸಿ ಮಾತಾಡುವ ಮೂಲಕ, ಮತ್ತು ಸ್ವಾಭಾವಿಕತೆಯಿಂದ ಓದುವಂತೆ ವಿದ್ಯಾರ್ಥಿಗಳಿಗೆ ಸಹಾಯಮಾಡುವುದರಲ್ಲಿ ಶಾಲಾ ಮೇಲ್ವಿಚಾರಕನು ವಿಶೇಷವಾಗಿ ಆಸಕ್ತನಾಗಿರುತ್ತಾನೆ.
ನೇಮಕ ನಂಬರ್ 3: 5 ನಿಮಿಷಗಳು. ಇದು ಸಹೋದರಿಯೊಬ್ಬಳಿಗೆ ನೇಮಿಸಲ್ಪಡುವುದು. ಈ ನೇಮಕವನ್ನು ಪಡೆದುಕೊಳ್ಳುವ ವಿದ್ಯಾರ್ಥಿಗಳು ಸ್ವತಃ ಒಂದು ಸನ್ನಿವೇಶವನ್ನು ಆಯ್ಕೆಮಾಡುವರು ಅಥವಾ ಶುಶ್ರೂಷಾ ಶಾಲೆ ಪಠ್ಯಪುಸ್ತಕದ 82ನೆಯ ಪುಟದಲ್ಲಿ ಕಂಡುಬರುವ ಪಟ್ಟಿಯಿಂದ ಒಂದು ಸನ್ನಿವೇಶವು ಅವರಿಗೆ ನೇಮಿಸಲ್ಪಡುವುದು. ವಿದ್ಯಾರ್ಥಿಯು ನೇಮಿತ ಮುಖ್ಯ ವಿಷಯವನ್ನೇ ಉಪಯೋಗಿಸಬೇಕು ಮತ್ತು ಅದನ್ನು ಸ್ಥಳಿಕ ಸಭೆಯ ಟೆರಿಟೊರಿಗಾಗಿ ವಾಸ್ತವಿಕವೂ ಪ್ರಾಯೋಗಿಕವೂ ಆಗಿರುವ ಒಂದು ಕ್ಷೇತ್ರ ಸೇವಾ ಅಂಶಕ್ಕೆ ಅನ್ವಯಿಸಬೇಕು. ಮಾಹಿತಿಯ ಮೂಲಕ್ಕಾಗಿ ಯಾವುದೇ ರೆಫರೆನ್ಸ್ಗಳು ಕೊಡಲ್ಪಡದಿರುವಾಗ, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದಿಂದ ಒದಗಿಸಲ್ಪಟ್ಟ ಪ್ರಕಾಶನಗಳಲ್ಲಿ ಸಂಶೋಧನೆ ನಡೆಸುವ ಮೂಲಕ, ಈ ಭಾಗಕ್ಕಾಗಿರುವ ವಿಷಯಭಾಗವನ್ನು ವಿದ್ಯಾರ್ಥಿಯೇ ಸಂಗ್ರಹಿಸುವ ಅಗತ್ಯವಿರುವುದು. ಹೊಸ ವಿದ್ಯಾರ್ಥಿಗಳಿಗೆ, ರೆಫರೆನ್ಸ್ಗಳು ಕೊಡಲ್ಪಟ್ಟಿರುವಂಥ ಭಾಷಣಗಳನ್ನು ನೇಮಿಸತಕ್ಕದ್ದು. ವಿದ್ಯಾರ್ಥಿನಿಯು ವಿಷಯಭಾಗವನ್ನು ಹೇಗೆ ವಿಕಸಿಸುತ್ತಾಳೆ ಮತ್ತು ಮನೆಯವರು ಶಾಸ್ತ್ರವಚನಗಳ ಕುರಿತು ವಿವೇಚಿಸುವಂತೆ ಹಾಗೂ ಆ ಭಾಷಣದ ಪ್ರಮುಖ ಅಂಶಗಳನ್ನು ಅರ್ಥಮಾಡಿಕೊಳ್ಳುವಂತೆ ಹೇಗೆ ಸಹಾಯಮಾಡುತ್ತಾಳೆ ಎಂಬ ವಿಷಯದಲ್ಲಿ ಶಾಲಾ ಮೇಲ್ವಿಚಾರಕನು ವಿಶೇಷವಾಗಿ ಆಸಕ್ತಿಯುಳ್ಳವನಾಗಿರುವನು. ಈ ನೇಮಕವನ್ನು ಪಡೆದುಕೊಳ್ಳುವ ವಿದ್ಯಾರ್ಥಿನಿಗೆ ಓದಲು ಗೊತ್ತಿರಬೇಕು. ಶಾಲಾ ಮೇಲ್ವಿಚಾರಕನು ಒಬ್ಬ ಸಹಾಯಕಿಯನ್ನು ನೇಮಿಸುವನು.
ನೇಮಕ ನಂಬರ್ 4: 5 ನಿಮಿಷಗಳು. ವಿದ್ಯಾರ್ಥಿಯು ನೇಮಿತ ಮುಖ್ಯ ವಿಷಯವನ್ನು ವಿಕಸಿಸಬೇಕು. ಮಾಹಿತಿಯ ಮೂಲಕ್ಕಾಗಿ ಯಾವುದೇ ರೆಫರೆನ್ಸ್ಗಳು ಕೊಡಲ್ಪಡದಿರುವಾಗ, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದಿಂದ ಒದಗಿಸಲ್ಪಟ್ಟ ಪ್ರಕಾಶನಗಳಲ್ಲಿ ಸಂಶೋಧನೆ ನಡೆಸುವ ಮೂಲಕ, ಈ ಭಾಗಕ್ಕಾಗಿರುವ ವಿಷಯಭಾಗವನ್ನು ವಿದ್ಯಾರ್ಥಿಯೇ ಸಂಗ್ರಹಿಸುವ ಅಗತ್ಯವಿರುವುದು. ಇದು ಒಬ್ಬ ಸಹೋದರನಿಗೆ ನೇಮಿಸಲ್ಪಡುವಾಗ, ರಾಜ್ಯ ಸಭಾಗೃಹದ ಸಭಿಕರನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ಈ ನೇಮಕವನ್ನು ಒಂದು ಭಾಷಣದೋಪಾದಿ ಕೊಡಬಹುದು. ಒಬ್ಬ ಸಹೋದರಿಗೆ ಈ ಭಾಗವು ಕೊಡಲ್ಪಟ್ಟಾಗ, ಅದನ್ನು ಯಾವಾಗಲೂ ನೇಮಕ ನಂಬರ್ 3ಕ್ಕಾಗಿ ಕೊಡಲ್ಪಟ್ಟಿರುವ ಸೂಚನೆಗಳಿಗೆ ತಕ್ಕಂತೆ ನೀಡಬೇಕಾಗಿದೆ. ನಕ್ಷತ್ರ ಚಿಹ್ನೆ ಇರುವಂಥ ವಸ್ತುವಿಷಯಗಳನ್ನು ಭಾಷಣಗಳೋಪಾದಿ ನೀಡಲಿಕ್ಕಾಗಿ ಸಹೋದರರಿಗೆ ಮಾತ್ರ ನೇಮಿಸಬೇಕು ಎಂಬುದನ್ನು ದಯವಿಟ್ಟು ಗಮನಿಸಿರಿ.
ಸಮಯಪಾಲನೆ: ಯಾವುದೇ ಭಾಷಣವಾಗಲಿ ಸಲಹೆಗಾರನ ಹೇಳಿಕೆಗಳಾಗಲಿ ನಿಗದಿತ ಸಮಯವನ್ನು ಮೀರಿ ಹೋಗಬಾರದು. ನೇಮಕ ನಂಬರ್ 2ರಿಂದ ನೇಮಕ ನಂಬರ್ 4ರ ವರೆಗಿನ ಭಾಗಗಳಿಗೆ ನಿಗದಿತ ಸಮಯವು ಮುಗಿದಾಗ, ಆ ಭಾಷಣಗಳನ್ನು ಜಾಣ್ಮೆಯಿಂದ ನಿಲ್ಲಿಸತಕ್ಕದ್ದು. ಭಾಷಣ ಗುಣದ ಕುರಿತಾದ ಆರಂಭದ ಭಾಷಣವನ್ನು, ನೇಮಕ ನಂಬರ್ 1ನ್ನು, ಅಥವಾ ಬೈಬಲ್ ವಾಚನದಿಂದ ಮುಖ್ಯಾಂಶಗಳನ್ನು ನಿರ್ವಹಿಸುತ್ತಿರುವ ಸಹೋದರರು ಸಮಯವನ್ನು ಮೀರಿಹೋಗುವಲ್ಲಿ, ಅವರಿಗೆ ಖಾಸಗಿ ಸಲಹೆಯನ್ನು ಕೊಡಬೇಕು. ಎಲ್ಲರೂ ತಮ್ಮ ಸಮಯವನ್ನು ಜಾಗರೂಕತೆಯಿಂದ ಗಮನಿಸತಕ್ಕದ್ದು. ಇಡೀ ಕಾರ್ಯಕ್ರಮವು ಗೀತೆ ಮತ್ತು ಪ್ರಾರ್ಥನೆಯನ್ನು ಬಿಟ್ಟು 45 ನಿಮಿಷಗಳದ್ದಾಗಿರಬೇಕು.
ಸಲಹೆ: 1 ನಿಮಿಷ. ಪ್ರತಿಯೊಬ್ಬ ವಿದ್ಯಾರ್ಥಿ ಭಾಷಣದ ಬಳಿಕ, ಪ್ರಶಂಸಾರ್ಹವಾಗಿದ್ದ ಭಾಷಣದ ಒಂದು ಅಂಶದ ಕುರಿತು ಕೆಲವು ಸಕಾರಾತ್ಮಕ ಹೇಳಿಕೆಗಳನ್ನು ನೀಡಲಿಕ್ಕಾಗಿ ಶಾಲಾ ಮೇಲ್ವಿಚಾರಕನು ಒಂದು ನಿಮಿಷಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳದಿರುವನು. “ಚೆನ್ನಾಗಿ ಮಾಡಿದಿರಿ” ಎಂದಷ್ಟೇ ಹೇಳುವುದು ಅವನ ಗುರಿಯಾಗಿರುವುದಿಲ್ಲ, ಬದಲಾಗಿ ಭಾಷಣದ ಆ ಅಂಶವು ಏಕೆ ಪರಿಣಾಮಕಾರಿಯಾಗಿತ್ತು ಎಂಬುದಕ್ಕಿರುವ ನಿರ್ದಿಷ್ಟ ಕಾರಣಗಳ ಕಡೆಗೆ ಗಮನವನ್ನು ಸೆಳೆಯುವುದೇ ಆಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಆವಶ್ಯಕತೆಗನುಸಾರ, ಕೂಟದ ನಂತರ ಅಥವಾ ಬೇರೊಂದು ಸಮಯದಲ್ಲಿ ಹೆಚ್ಚಿನ ರಚನಾತ್ಮಕ ಸಲಹೆಯನ್ನು ಖಾಸಗಿಯಾಗಿ ನೀಡಬಹುದು.
ಸಹಾಯಕ ಸಲಹೆಗಾರ: ಶಾಲಾ ಮೇಲ್ವಿಚಾರಕನ ಜೊತೆಗೆ, ಒಬ್ಬ ಸಹಾಯಕ ಸಲಹೆಗಾರನೋಪಾದಿ ನೇಮಕವನ್ನು ನಿರ್ವಹಿಸಲಿಕ್ಕಾಗಿ, ಹಿರಿಯರ ಮಂಡಲಿಯು ಒಬ್ಬ ಸಮರ್ಥ ಹಿರಿಯನನ್ನು—ಒಂದುವೇಳೆ ಒಬ್ಬ ಹಿರಿಯನು ಲಭ್ಯವಿರುವಲ್ಲಿ—ಆಯ್ಕೆಮಾಡಬಹುದು. ನೇಮಕ ನಂಬರ್ 1 ಮತ್ತು ಬೈಬಲ್ ಮುಖ್ಯಾಂಶಗಳನ್ನು ನೀಡುವ ಸಹೋದರರಿಗೆ, ಅಗತ್ಯವಿರುವಲ್ಲಿ ಖಾಸಗಿ ಸಲಹೆಯನ್ನು ಕೊಡುವುದು ಅವನ ಜವಾಬ್ದಾರಿಯಾಗಿರುವುದು. ಜೊತೆ ಹಿರಿಯರು ಅಥವಾ ಶುಶ್ರೂಷಾ ಸೇವಕರು ಪ್ರತಿ ಬಾರಿ ಅಂಥ ಭಾಷಣಗಳನ್ನು ಕೊಟ್ಟ ಬಳಿಕ ಅವನು ಸಲಹೆಯನ್ನು ಕೊಡಬೇಕೆಂದೇನಿಲ್ಲ. ಈ ಏರ್ಪಾಡು 2003ರಲ್ಲಿ ಕಾರ್ಯರೂಪಕ್ಕೆ ತರಲ್ಪಡುವುದು ಮತ್ತು ತದನಂತರ ಸರಿಹೊಂದಿಸಿಕೊಳ್ಳಲ್ಪಡಬಹುದು.
ಸಲಹಾ ಪಟ್ಟಿ: ಪಠ್ಯಪುಸ್ತಕದಲ್ಲಿ.
ಮೌಖಿಕ ಪುನರ್ವಿಮರ್ಶೆ: 30 ನಿಮಿಷಗಳು. ಪ್ರತಿ ಎರಡು ತಿಂಗಳಿಗೊಮ್ಮೆ ಶಾಲಾ ಮೇಲ್ವಿಚಾರಕನು ಒಂದು ಮೌಖಿಕ ಪುನರ್ವಿಮರ್ಶೆಯನ್ನು ನಡೆಸುವನು. ಇದಕ್ಕೆ ಮುಂಚೆ, ಮೇಲೆ ವಿವರಿಸಲ್ಪಟ್ಟಿರುವಂಥ ರೀತಿಯಲ್ಲೇ ಭಾಷಣ ಗುಣ ಹಾಗೂ ಬೈಬಲ್ ವಾಚನದಿಂದ ಮುಖ್ಯಾಂಶಗಳ ಪರಿಗಣನೆ ಇರುವುದು. ಸದ್ಯದ ವಾರವನ್ನೂ ಸೇರಿಸಿ ಹಿಂದಿನ ಎರಡು ತಿಂಗಳುಗಳಲ್ಲಿ ಶಾಲೆಯಲ್ಲಿ ಪರಿಗಣಿಸಲ್ಪಟ್ಟ ವಿಷಯಭಾಗದ ಮೇಲೆ ಮೌಖಿಕ ಪುನರ್ವಿಮರ್ಶೆಯು ಆಧಾರಿತವಾಗಿರುವುದು.
ಶೆಡ್ಯೂಲ್
ಜನ. 6 ಬೈಬಲ್ ವಾಚನ: ಮತ್ತಾಯ 1-6 ಗೀತೆ 91
ಭಾಷಣ ಗುಣ: ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗೆ ಸುಸ್ವಾಗತ (be-KA ಪು. 5 ¶1-ಪು. 8 ¶1)
ನಂ. 1: ದೇವರ ವಾಕ್ಯದಲ್ಲಿ ಆನಂದವನ್ನು ಪಡೆದುಕೊಳ್ಳಿರಿ (be-KA ಪು. 9 ¶1-5)
ನಂ. 2: ಮತ್ತಾಯ 4:1-22
ನಂ. 3: ಕೊನೆಯ ದಿವಸಗಳ ಸೂಚನೆಯು ಸತ್ಯ ಕ್ರೈಸ್ತರ ಮೇಲೆ ಹೇಗೆ ಪ್ರಭಾವ ಬೀರುತ್ತದೆ? (rs ಪು. 238 ¶2-3; kl-KA ಅಧ್ಯಾಯ 11 ¶3, 4, 17)
ನಂ. 4: ಯೇಸು ಈಗ ಏನು ಮಾಡುತ್ತಿದ್ದಾನೆ?
ಜನ. 13 ಬೈಬಲ್ ವಾಚನ: ಮತ್ತಾಯ 7-11 ಗೀತೆ 40
ಭಾಷಣ ಗುಣ: ಬೈಬಲನ್ನು ದಿನಾಲೂ ಓದಿರಿ (be-KA ಪು. 10 ¶1-ಪು. 12 ¶4)
ನಂ. 1: “ಆ ರೀತಿಯಲ್ಲಿ ಓಡಿರಿ” (w-KA01 1/1 ಪು. 28-31)
ನಂ. 2: ಮತ್ತಾಯ 9:9-31
ನಂ. 3: ನಾವು ಇತರರಿಗೆ ಏಕೆ ಸಾರುತ್ತೇವೆ?
ನಂ. 4: ಕೊನೆಯ ದಿವಸಗಳು 1914ರಲ್ಲಿ ಆರಂಭಗೊಂಡವು ಎಂದು ಯೆಹೋವನ ಸಾಕ್ಷಿಗಳು ಏಕೆ ಹೇಳುತ್ತಾರೆ? (rs ಪು. 239 ¶2-ಪು. 240 ¶1; kl-KA ಅಧ್ಯಾಯ 11 ¶2, 5-14, 16)
ಜನ. 20 ಬೈಬಲ್ ವಾಚನ: ಮತ್ತಾಯ 12-15 ಗೀತೆ 133
ಭಾಷಣ ಗುಣ: ನಿಷ್ಕೃಷ್ಟ ವಾಚನ (be-KA ಪು. 83 ¶1-5)
ನಂ. 1: ನಿರುತ್ಸಾಹವನ್ನು ನಿಭಾಯಿಸಲು ಸಾಧ್ಯವಿದೆ! (w-KA01 2/1 ಪು. 20-3)
ನಂ.2: ಮತ್ತಾಯ 13:1-23
ನಂ.3: ಸದ್ಯದ ಲೋಕ ವ್ಯವಸ್ಥೆಯ ಅಂತ್ಯದ ಬಳಿಕ ಭೂಮಿಯ ಮೇಲೆ ಯಾರಾದರೂ ಜೀವಂತವಾಗಿರುವರೋ? (rs ಪು. 240 ¶2-5; kl-KA ಅಧ್ಯಾಯ 19 ¶6, 10)
ನಂ. 4: ದೇವರು ಬದಲಾಗುತ್ತಾನೋ?
ಜನ. 27 ಬೈಬಲ್ ವಾಚನ: ಮತ್ತಾಯ 16-21 ಗೀತೆ129
ಭಾಷಣ ಗುಣ: ನಿಷ್ಕೃಷ್ಟವಾಗಿ ಓದುವ ವಿಧ (be-KA ಪು. 84 ¶1-ಪು. 85 ¶3)
ನಂ. 1: ಸಮಯದ ಬೇಗನೆ ಗತಿಸಿಹೋಗುವಂಥ ಸ್ವರೂಪ (si ಪು. 278-9 ¶1-6)
ನಂ. 2: w-KA01 1/15 ಪು. 20 ¶20-ಪು. 21 ¶24
ನಂ. 3: ಲೋಕವನ್ನು ಯಾವುದು ಐಕ್ಯಗೊಳಿಸುವುದು?
ನಂ. 4: ದುಷ್ಟರನ್ನು ನಾಶಮಾಡುವ ಮುಂಚೆ ಇಷ್ಟೊಂದು ಸಮಯವನ್ನು ದೇವರು ಅನುಮತಿಸುವುದೇಕೆ? (rs ಪು. 241 ¶1-3; kl-KA ಅಧ್ಯಾಯ 8 ¶8-11, 14, 15)
ಫೆಬ್ರ. 3 ಬೈಬಲ್ ವಾಚನ: ಮತ್ತಾಯ 22-25 ಗೀತೆ 139
ಭಾಷಣ ಗುಣ: ಪದಗಳನ್ನು ಸ್ಪಷ್ಟವಾಗಿ ಆಡುವುದು (be-KA ಪು. 86 ¶1-6)
ನಂ. 1: “ನೀವು ಕಿವಿಗೊಡುವ ವಿಧಕ್ಕೆ ಗಮನ ಕೊಡಿರಿ” (be-KA ಪು. 13 ¶1-ಪು. 14 ¶5)
ನಂ. 2: ಮತ್ತಾಯ 22:15-40
ನಂ. 3: ಆ ಸೂಚನೆಯು ನಾವು ಈಗ ಜೀವಿಸುತ್ತಿರುವ ಸಮಯಕ್ಕೆ ಸರಿಯಾಗಿ ಹೊಂದುತ್ತದೆ ಎಂಬುದು ನಮಗೆ ಹೇಗೆ ಗೊತ್ತು? (rs ಪು. 241 ¶5-ಪು. 242 ¶2; kl-KA ಅಧ್ಯಾಯ 11 ¶1, 2, 16 ಮತ್ತು ಪು. 102ರಲ್ಲಿರುವ ಚೌಕ)
ನಂ. 4: ವಾಸ್ತವದಲ್ಲಿ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಯಾರಾಗಿದ್ದಾನೆ?
ಫೆಬ್ರ. 10 ಬೈಬಲ್ ವಾಚನ: ಮತ್ತಾಯ 26-28 ಗೀತೆ 27
ಭಾಷಣ ಗುಣ: ಸ್ಪಷ್ಟವಾಗಿ ಮಾತನಾಡುವ ವಿಧ (be-KA ಪು. 87 ¶1-ಪು. 88 ¶3)
ನಂ. 1: ನಿಜವಾದ ಸಂತೋಷವನ್ನು ಹೇಗೆ ಕಂಡುಕೊಳ್ಳುವುದು? (w-KA01 3/1 ಪು. 4-7)
ನಂ. 2: ಮತ್ತಾಯ 26:6-30
ನಂ. 3: ನಾನೇಕೆ ಅಮಲೌಷಧವನ್ನು ಉಪಯೋಗಿಸುವುದಿಲ್ಲ?
ನಂ. 4: ಮಾನವ ಜೀವಿತದ ಉದ್ದೇಶವೇನು? (rs ಪು. 243 ¶3-ಪು. 244 ¶4; kl-KA ಅಧ್ಯಾಯ 1 ¶2, 8-10)
ಫೆಬ್ರ. 17 ಬೈಬಲ್ ವಾಚನ: ಮಾರ್ಕ 1-4 ಗೀತೆ 137
ಭಾಷಣ ಗುಣ: ಸರಿಯಾದ ಉಚ್ಚಾರಣೆ—ಪರಿಗಣಿಸತಕ್ಕ ವಿಷಯಗಳು (be-KA ಪು. 89 ¶1-ಪು. 90 ¶2)
ನಂ. 1: ಬೈಬಲಿನ ಸಮಯ ಸೂಚಕಗಳು (si ಪು. 279-80 ¶7-13)
ನಂ. 2: w-KA01 2/15 ಪು. 25 ¶10-ಪು. 26 ¶14
ನಂ. 3: ಸ್ವಲ್ಪ ಕಾಲ ಬದುಕಿದ್ದು ನಂತರ ಸಾಯಲಿಕ್ಕಾಗಿ ಮಾನವರು ಸೃಷ್ಟಿಸಲ್ಪಟ್ಟರೋ? (rs ಪು. 245 ¶1-3; kl-KA ಅಧ್ಯಾಯ 1 ¶6, 7, 9)
ನಂ. 4: ಜೂಜಾಡುವುದು ಏಕೆ ತಪ್ಪಾಗಿದೆ?
ಫೆಬ್ರ. 24 ಬೈಬಲ್ ವಾಚನ: ಮಾರ್ಕ 5-8 ಗೀತೆ 72
ಭಾಷಣ ಗುಣ: ಉಚ್ಚಾರಣೆಯನ್ನು ಉತ್ತಮಗೊಳಿಸುವ ವಿಧಗಳು (be-KA ಪು. 90 ¶3-ಪು. 92)
ಮೌಖಿಕ ಪುನರ್ವಿಮರ್ಶೆ
ಮಾರ್ಚ್ 3 ಬೈಬಲ್ ವಾಚನ: ಮಾರ್ಕ 9-12 ಗೀತೆ 195
ಭಾಷಣ ಗುಣ: ನಿರರ್ಗಳವಾಗಿ ಭಾಷಣ ನೀಡುವುದು (be-KA ಪು. 93 ¶1-ಪು. 94 ¶3)
ನಂ. 1: ಭಾಷಣಗಳಿಗೆ, ಚರ್ಚೆಗಳ ಸಮಯದಲ್ಲಿ, ಮತ್ತು ಸಮ್ಮೇಳನಗಳು ಹಾಗೂ ಅಧಿವೇಶನಗಳಲ್ಲಿ ಕಿವಿಗೊಡುವುದು (be-KA ಪು. 15 ¶1-ಪು. 16 ¶5)
ನಂ. 2: ಮಾರ್ಕ 10:1-22
ನಂ. 3: ನಾವು ದೇವರಿಂದ ಬಲವನ್ನು ಹೇಗೆ ಪಡೆಯಬಹುದು?
ನಂ. 4: ಯಾವ ಆಧಾರದ ಮೇಲೆ ನಾವು ಸದಾಕಾಲ ಜೀವಿಸಲು ನಿರೀಕ್ಷಿಸಸಾಧ್ಯವಿದೆ? (rs ಪು. 246 ¶5-7; kl-KA ಅಧ್ಯಾಯ 7 ¶17-20)
ಮಾರ್ಚ್ 10 ಬೈಬಲ್ ವಾಚನ: ಮಾರ್ಕ 13-16 ಗೀತೆ 187
ಭಾಷಣ ಗುಣ: ನಿರರ್ಗಳತೆಯನ್ನು ಉತ್ತಮಗೊಳಿಸುವ ವಿಧ (be-KA ಪು. 94 ¶4-ಪು. 96 ¶3, ಪು. 95ರಲ್ಲಿರುವ ಚೌಕವನ್ನು ಬಿಟ್ಟು)
ನಂ. 1: ಆತ್ಮಿಕ ಪರದೈಸ್—ಅದೇನು? (w-KA01 3/1 ಪು. 8-11)
ನಂ. 2: ಮಾರ್ಕ 13:1-23
ನಂ. 3: ಭಾವೀ ಜೀವಿತಕ್ಕಾಗಿರುವ ಪ್ರತೀಕ್ಷೆಗಳು ಹೇಗೆ ಪೂರೈಸಲ್ಪಡುವವು? (rs ಪು. 246 ¶8-ಪು. 247 ¶1; kl-KA ಅಧ್ಯಾಯ 9 ¶15-18)
ನಂ. 4: ಮನುಷ್ಯರ ಯುದ್ಧಗಳಲ್ಲಿ ದೇವರು ಪಕ್ಷವಹಿಸುತ್ತಾನೋ?
ಮಾರ್ಚ್ 17 ಬೈಬಲ್ ವಾಚನ: ಲೂಕ 1-3 ಗೀತೆ 13
ಭಾಷಣ ಗುಣ: ತೊದಲಿಕೆಯನ್ನು ನಿಭಾಯಿಸುವುದು (be-KA ಪು. 95, ಚೌಕ)
ನಂ. 1: ‘ವಿವೇಕವನ್ನು ಕಂಡುಕೊಂಡಿರುವವನು ಸಂತೋಷವುಳ್ಳವನು’ (w-KA01 3/15 ಪು. 25-8)
ನಂ. 2: ಲೂಕ 3:1-22
ನಂ. 3: ಯೇಸುವನ್ನು ಆರಾಧಿಸುವುದು ಸರಿಯೋ?
ನಂ. 4: a ಕಾನೂನುಬದ್ಧ ಆವಶ್ಯಕತೆಗಳಿಗನುಸಾರ ವಿವಾಹವಾಗುವುದು ಪ್ರಾಮುಖ್ಯವಾದದ್ದಾಗಿದೆಯೋ? (rs ಪು. 248 ¶2-ಪು. 249 ¶2; kl-KA ಅಧ್ಯಾಯ 13 ¶11)
ಮಾರ್ಚ್ 24 ಬೈಬಲ್ ವಾಚನ: ಲೂಕ 4-6 ಗೀತೆ 156
ಭಾಷಣ ಗುಣ: ವಿರಾಮಚಿಹ್ನೆಗಳಿರುವಲ್ಲಿ ನಿಲ್ಲಿಸುವುದು ಮತ್ತು ವಿಚಾರದಲ್ಲಿ ಬದಲಾವಣೆಗಾಗಿ ನಿಲ್ಲಿಸುವುದು (be-KA ಪು. 97 ¶1-ಪು. 98 ¶5)
ನಂ. 1: ನಿಮ್ಮನ್ನು ಅಪಾರ್ಥಮಾಡಿಕೊಳ್ಳಲಾಗಿದೆ ಎಂದು ನಿಮಗೆ ಅನಿಸುತ್ತದೋ? (w-KA01 4/1 ಪು. 20-3)
ನಂ. 2: ಲೂಕ 6:1-23
ನಂ. 3: ಜ್ಞಾಪಕಾಚರಣೆಯ ಸೂಚಿತಾರ್ಥವೇನು? (rs ಪು. 266 ¶1-ಪು. 267 ¶1; kl-KA ಅಧ್ಯಾಯ 13 ¶18)
ನಂ. 4: ಕ್ರೈಸ್ತರು ದೈವಿಕ ಸಂರಕ್ಷಣೆಯನ್ನು ನಿರೀಕ್ಷಿಸಸಾಧ್ಯವಿದೆಯೋ?
ಮಾರ್ಚ್ 31 ಬೈಬಲ್ ವಾಚನ: ಲೂಕ 7-9 ಗೀತೆ 47
ಭಾಷಣ ಗುಣ: ಒತ್ತಿ ಹೇಳಲಿಕ್ಕಾಗಿ ನಿಲ್ಲಿಸುವುದು, ಕಿವಿಗೊಡಲಿಕ್ಕಾಗಿ ನಿಲ್ಲಿಸುವುದು (be-KA ಪು. 99 ¶1-ಪು. 100 ¶4)
ನಂ. 1: “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು” (be-KA ಪು. 272 ¶1-ಪು. 275 ¶3)
ನಂ. 2: w-KA01 3/15 ಪು. 18 ¶17-ಪು. 19 ¶20
ನಂ. 3: ಬೈಬಲು ದೇವರಿಂದ ಬಂದದ್ದಾಗಿದೆ ಎಂಬುದು ನಮಗೆ ಹೇಗೆ ಗೊತ್ತು?
ನಂ. 4: ಜ್ಞಾಪಕಾಚರಣೆಯ ಕುರುಹುಗಳು ಏನನ್ನು ಪ್ರತಿನಿಧಿಸುತ್ತವೆ? (rs ಪು. 267 ¶2-3; kl-KA ಅಧ್ಯಾಯ 13 ¶18)
ಏಪ್ರಿ. 7 ಬೈಬಲ್ ವಾಚನ: ಲೂಕ 10-12 ಗೀತೆ 68
ಭಾಷಣ ಗುಣ: ಸರಿಯಾದ ಅರ್ಥಒತ್ತು (be-KA ಪು. 101 ¶1-ಪು. 102 ¶3)
ನಂ. 1: “ಯೇಸುವಿನ ವಿಷಯವಾದ ಸಾಕ್ಷಿಯನ್ನು” ಹೇಳುವುದು (be-KA ಪು. 275 ¶4-ಪು. 278 ¶4)
ನಂ. 2: ಲೂಕ 10:1-22
ನಂ. 3: ಕರ್ತನ ಸಂಧ್ಯಾ ಭೋಜನದಲ್ಲಿ ಯಾರು ಪಾಲ್ಗೊಳ್ಳಬೇಕು? (rs ಪು. 267 ¶5-ಪು. 268 ¶1)
ನಂ. 4: ಪ್ರಪ್ರಥಮ ವಿವಾಹದಲ್ಲಿ ಯಾವ ಶಾಸ್ತ್ರಕ್ರಮಗಳು ಇದ್ದವು? (rs ಪು. 249 ¶3-4; fy-KA ಅಧ್ಯಾಯ 16 ¶1)
ಏಪ್ರಿ. 14 ಬೈಬಲ್ ವಾಚನ: ಲೂಕ 13-17 ಗೀತೆ 208
ಭಾಷಣ ಗುಣ: ಅರ್ಥಒತ್ತನ್ನು ಅಭಿವೃದ್ಧಿಮಾಡುವುದು (be-KA ಪು. 102 ¶4-ಪು. 104 ¶4)
ನಂ. 1: “ರಾಜ್ಯದ ಈ ಸುವಾರ್ತೆ” (be-KA ಪು. 279 ¶1-ಪು. 281 ¶4)
ನಂ. 2: ಲೂಕ 15:11-32
ನಂ. 3: ದೆವ್ವಗಳ ಪ್ರಭಾವದಿಂದ ನಾವು ನಮ್ಮನ್ನು ಹೇಗೆ ಸಂರಕ್ಷಿಸಿಕೊಳ್ಳಬಲ್ಲೆವು?
ನಂ. 4: ಜ್ಞಾಪಕಾಚರಣೆಯನ್ನು ಎಷ್ಟು ಸಲ ಆಚರಿಸತಕ್ಕದ್ದು, ಮತ್ತು ಯಾವಾಗ? (rs ಪು. 269 ¶1-2; kl-KA ಅಧ್ಯಾಯ 13 ¶18)
ಏಪ್ರಿ. 21 ಬೈಬಲ್ ವಾಚನ: ಲೂಕ 18-21 ಗೀತೆ 23
ಭಾಷಣ ಗುಣ: ಪ್ರಧಾನ ವಿಚಾರಗಳನ್ನು ಒತ್ತಿಹೇಳುವುದು (be-KA ಪು. 105 ¶1-ಪು. 106 ¶2)
ನಂ. 1: ಋತುಗಳು—ಯೆಹೋವನ ವಿವೇಕಯುತವಾದ ಹಾಗೂ ಪ್ರೀತಿಪರ ಒದಗಿಸುವಿಕೆ (si ಪು. 280 ¶14-17)
ನಂ. 2: w-KA01 4/15 ಪು. 6 ¶19-ಪು. 7 ¶22
ನಂ. 3: ಪುನರುತ್ಥಾನದ ನಿರೀಕ್ಷೆಯು ನಮ್ಮ ಜೀವಿತವನ್ನು ಹೇಗೆ ಪ್ರಭಾವಿಸುತ್ತದೆ?
ನಂ. 4: b ಬೈಬಲು ಬಹುಪತ್ನೀತ್ವವನ್ನು ಮನ್ನಿಸುತ್ತದೋ? (rs ಪು. 250 ¶1-ಪು. 251 ¶2; fy-KA ಪು. 17 ¶2; kl-KA ಅಧ್ಯಾಯ 13 ¶13)
ಏಪ್ರಿ. 28 ಬೈಬಲ್ ವಾಚನ: ಲೂಕ 22-24 ಗೀತೆ 218
ಭಾಷಣ ಗುಣ: ಸಭಿಕರಿಗೆ ಸೂಕ್ತವಾದ ಧ್ವನಿ (be-KA ಪು. 107 ¶1-ಪು. 108 ¶4)
ಮೌಖಿಕ ಪುನರ್ವಿಮರ್ಶೆ
ಮೇ 5 ಬೈಬಲ್ ವಾಚನ: ಯೋಹಾನ 1-4 ಗೀತೆ 31
ಭಾಷಣ ಗುಣ: ನಿಮ್ಮ ಧ್ವನಿಯನ್ನು ಉತ್ತಮಗೊಳಿಸುವ ವಿಧ (be-KA ಪು. 108 ¶5-ಪು. 110 ¶2)
ನಂ. 1: ನೀವು ನಿಮ್ಮ ಜ್ಞಾಪಕಶಕ್ತಿಯನ್ನು ಉತ್ತಮಗೊಳಿಸಿಕೊಳ್ಳಬಲ್ಲಿರಿ (be-KA ಪು. 17 ¶1-ಪು. 19 ¶1)
ನಂ. 2: ಯೋಹಾನ 2:1-25
ನಂ. 3: ಮದ್ಯಪಾನವನ್ನು ದೇವರು ಖಂಡಿಸುತ್ತಾನೋ?
ನಂ. 4: c ವೈವಾಹಿಕ ಪ್ರತ್ಯೇಕವಾಸದ ಕುರಿತು ದೇವರ ದೃಷ್ಟಿಕೋನವೇನು? (rs ಪು. 251 ¶3; fy-KA ಅಧ್ಯಾಯ 13 ¶17-20)
ಮೇ 12 ಬೈಬಲ್ ವಾಚನ: ಯೋಹಾನ 5-7 ಗೀತೆ 150
ಭಾಷಣ ಗುಣ: ಧ್ವನಿಯ ಏರಿಳಿತ—ನಿಮ್ಮ ಧ್ವನಿಯ ಮಟ್ಟವನ್ನು ಹೊಂದಿಸಿಕೊಳ್ಳಿರಿ (be-KA ಪು. 111 ¶1-ಪು. 112 ¶2)
ನಂ. 1: ಬಾಲ್ಯ ಹೇಗಿದ್ದರೂ ನೀವು ಯಶಸ್ವಿಯಾಗಬಹುದು (w-KA01 4/15 ಪು. 25-8)
ನಂ. 2: ಯೋಹಾನ 5:1-24
ನಂ. 3: ಪೂರ್ವಾದೃಷ್ಟದ ಸಿದ್ಧಾಂತವು ಅಸಮಂಜಸವಾದದ್ದಾಗಿದೆ ಏಕೆ?
ನಂ. 4: d ವಿವಾಹ ವಿಚ್ಛೇದ ಮತ್ತು ಪುನರ್ವಿವಾಹದ ಕುರಿತು ಬೈಬಲಿನ ದೃಷ್ಟಿಕೋನವೇನು? (rs ಪು. 252 ¶1-4; fy-KA ಅಧ್ಯಾಯ 2 ¶4 ಮತ್ತು ಅಧ್ಯಾಯ 13 ¶14-16)
ಮೇ 19 ಬೈಬಲ್ ವಾಚನ: ಯೋಹಾನ 8-11 ಗೀತೆ 102
ಭಾಷಣ ಗುಣ: ಧ್ವನಿಯ ಏರಿಳಿತ—ನಿಮ್ಮ ವೇಗವನ್ನು ಬದಲಾಯಿಸಿರಿ (be-KA ಪು. 112 ¶3-6)
ನಂ. 1: ‘ವಿವೇಕದಿಂದ ನಮ್ಮ ದಿನಗಳು ಹೆಚ್ಚುವವು’ (w-KA01 5/15 ಪು. 28-31)
ನಂ. 2: ಯೋಹಾನ 10:16-42
ನಂ. 3: ಗತಕಾಲದಲ್ಲಿ, ಸಹೋದರ ಸಹೋದರಿಯ ನಡುವಣ ವಿವಾಹವನ್ನು ದೇವರು ಏಕೆ ಅನುಮತಿಸಿದನು? (rs ಪು. 252 ¶5-ಪು. 253 ¶1)
ನಂ. 4: ಒತ್ತಡವನ್ನು ಹೇಗೆ ನಿಭಾಯಿಸುವುದು?
ಮೇ 26 ಬೈಬಲ್ ವಾಚನ: ಯೋಹಾನ 12-16 ಗೀತೆ 24
ಭಾಷಣ ಗುಣ: ಧ್ವನಿಯ ಏರಿಳಿತ—ನಿಮ್ಮ ಸ್ವರದ ತೀವ್ರತೆಯನ್ನು ಬದಲಾಯಿಸಿರಿ (be-KA ಪು. 113 ¶1-ಪು. 114 ¶3)
ನಂ. 1: ಆ ವರುಷ ಮತ್ತು ಪವಿತ್ರ ಶಾಸ್ತ್ರಗಳು (si ಪು. 280-2 ¶18-23)
ನಂ. 2: w-KA01 5/1 ಪು. 14 ¶4-ಪು. 15 ¶7
ನಂ. 3: ‘ಲೋಕದ ಭಾಗವಾಗಿಲ್ಲದಿರುವುದು’ ಏನನ್ನು ಅರ್ಥೈಸುತ್ತದೆ?
ನಂ. 4: ಒಂದು ವಿವಾಹವನ್ನು ಉತ್ತಮಗೊಳಿಸಲು ಯಾವುದು ಸಹಾಯಮಾಡಬಲ್ಲದು? (rs ಪು. 253 ¶2-5; fy-KA ಅಧ್ಯಾಯ 3)
ಜೂನ್ 2 ಬೈಬಲ್ ವಾಚನ: ಯೋಹಾನ 17-21 ಗೀತೆ 198
ಭಾಷಣ ಗುಣ: ಭಾವಪೂರ್ಣರಾಗಿ ಮಾತಾಡಿರಿ (be-KA ಪು. 115 ¶1-ಪು. 116 ¶4)
ನಂ. 1: ವಿಷಯಗಳನ್ನು ಜ್ಞಾಪಿಸಿಕೊಳ್ಳುವುದರಲ್ಲಿ ದೇವರಾತ್ಮದ ಪಾತ್ರ (be-KA ಪು. 19 ¶2-ಪು. 20 ¶3)
ನಂ. 2: ಯೋಹಾನ 20:1-23
ನಂ. 3: ಒಂದು ವಿವಾಹವನ್ನು ಸುಧಾರಿಸಲು ಯಾವುದು ಸಹಾಯಮಾಡಬಲ್ಲದು? (rs ಪು. 254 ¶1-4; fy-KA ಅಧ್ಯಾಯ 15)
ನಂ. 4: ವ್ಯವಸ್ಥಾಪಿತ ಧರ್ಮದ ಆವಶ್ಯಕತೆಯಿದೆಯೋ?
ಜೂನ್ 9 ಬೈಬಲ್ ವಾಚನ: ಅ.ಕೃತ್ಯಗಳು 1-4 ಗೀತೆ 92
ಭಾಷಣ ಗುಣ: ವಿಷಯಭಾಗಕ್ಕೆ ತಕ್ಕದ್ದಾಗಿರುವ ಉತ್ಸಾಹ (be-KA ಪು. 116 ¶5-ಪು. 117 ¶4)
ನಂ. 1: ಯೆಹೋವನ ಮೇಲಿನ ನಿಮ್ಮ ಭರವಸೆಯನ್ನು ಬಲಪಡಿಸಿರಿ (w-KA01 6/1 ಪು. 7-10)
ನಂ. 2: ಅ.ಕೃತ್ಯಗಳು 4:1-22
ನಂ. 3: ಮರಿಯಳ ಕುರಿತಾದ ಬೈಬಲ್ ದಾಖಲೆಯಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು? (rs ಪು. 254 ¶5-ಪು. 255 ¶2; kl-KA ಅಧ್ಯಾಯ 4 ¶15)
ನಂ. 4: ನಾವು ಹೇಗೆ ಆರಾಧಿಸುತ್ತೇವೆ ಎಂಬ ವಿಷಯದಲ್ಲಿ ದೇವರು ಆಸಕ್ತಿವಹಿಸುತ್ತಾನೋ?
ಜೂನ್ 16 ಬೈಬಲ್ ವಾಚನ: ಅ.ಕೃತ್ಯಗಳು 5-7 ಗೀತೆ 2
ಭಾಷಣ ಗುಣ: ಹಾರ್ದಿಕತೆಯನ್ನು ವ್ಯಕ್ತಪಡಿಸುವುದು (be-KA ಪು. 118 ¶1-ಪು. 119 ¶5)
ನಂ. 1: ಆತ್ಮಿಕ ವಾಸಿಯಾಗುವಿಕೆಗೆ ನಡೆಸುವಂಥ ಪಾಪ ಅರಿಕೆ (w-KA01 6/1 ಪು. 28-31)
ನಂ. 2: ಅ.ಕೃತ್ಯಗಳು 7:1-22
ನಂ. 3: ಯೆಹೋವನ ಸಾಕ್ಷಿಗಳು ಬೇರೆ ಧರ್ಮಗಳಿಗಿಂತ ಹೇಗೆ ಭಿನ್ನರಾಗಿದ್ದಾರೆ?
ನಂ. 4: ಮರಿಯಳು ಯೇಸುವಿಗೆ ಜನ್ಮನೀಡಿದಾಗ ನಿಜವಾಗಿಯೂ ಕನ್ಯೆಯಾಗಿದ್ದಳೋ? (rs ಪು. 255 ¶3-4; kl-KA ಪು. 37 ಮತ್ತು ಪು. 40 ¶15)
ಜೂನ್ 23 ಬೈಬಲ್ ವಾಚನ: ಅ.ಕೃತ್ಯಗಳು 8-10 ಗೀತೆ 116
ಭಾಷಣ ಗುಣ: ಭಾವನೆಗಳನ್ನು ವ್ಯಕ್ತಪಡಿಸುವುದು (be-KA ಪು. 119 ¶6-ಪು. 120 ¶5)
ನಂ. 1: ಸಂಕಟದಲ್ಲಿ ಬಿದ್ದಿರುವ ಅನಾಥರನ್ನೂ ವಿಧವೆಯರನ್ನೂ ಪರಾಮರಿಸಿರಿ (w-KA01 6/15 ಪು. 9-12)
ನಂ. 2: w-KA01 6/1 ಪು. 12 ¶1-ಪು. 13 ¶5
ನಂ. 3: ಮರಿಯಳು ಕನ್ಯೆಯಾಗಿಯೇ ಉಳಿದಳೋ? (rs ಪು. 255 ¶5-ಪು. 256 ¶2; kl-KA ಅಧ್ಯಾಯ 4 ¶15)
ನಂ. 4: e ಕೂಟಗಳಿಗೆ ಹಾಜರಾಗುವುದು ಆತ್ಮಿಕ ಬೆಳವಣಿಗೆಗೆ ಏಕೆ ಅತ್ಯಾವಶ್ಯಕವಾಗಿದೆ?
ಜೂನ್ 30 ಬೈಬಲ್ ವಾಚನ: ಅ.ಕೃತ್ಯಗಳು 11-14 ಗೀತೆ 167
ಭಾಷಣ ಗುಣ: ಭಾವಾಭಿನಯಗಳು ಮತ್ತು ಮುಖಭಾವಗಳ ಪ್ರಾಮುಖ್ಯತೆ (be-KA ಪು. 121 ¶1-4)
ಮೌಖಿಕ ಪುನರ್ವಿಮರ್ಶೆ
ಜುಲೈ 7 ಬೈಬಲ್ ವಾಚನ: ಅ.ಕೃತ್ಯಗಳು 15-17 ಗೀತೆ 38
ಭಾಷಣ ಗುಣ: ಭಾವಾಭಿನಯಗಳು ಮತ್ತು ಮುಖಭಾವಗಳನ್ನು ಉಪಯೋಗಿಸುವುದು (be-KA ಪು. 122 ¶1-ಪು. 123 ¶3)
ನಂ. 1: ವಾಚನದಲ್ಲಿ ಶ್ರದ್ಧೆಯಿಂದ ನಿಮ್ಮನ್ನೇ ಹೇಗೆ ನಿರತರಾಗಿಸಿಕೊಳ್ಳುವುದು? (be-KA ಪು. 21 ¶1-ಪು. 23 ¶3)
ನಂ. 2: ಅ.ಕೃತ್ಯಗಳು 15:1-21
ನಂ. 3: ನಾವು ಯೆಹೋವನ ಪರಮಾಧಿಕಾರವನ್ನು ಹೇಗೆ ಎತ್ತಿಹಿಡಿಯುತ್ತೇವೆ?
ನಂ. 4: ಮರಿಯಳು ದೇವಮಾತೆಯಾಗಿದ್ದಳೋ? (rs ಪು. 256 ¶3-ಪು. 257 ¶2; kl-KA ಅಧ್ಯಾಯ 4 ¶13, 15)
ಜುಲೈ 14 ಬೈಬಲ್ ವಾಚನ: ಅ.ಕೃತ್ಯಗಳು 18-21 ಗೀತೆ 32
ಭಾಷಣ ಗುಣ: ಶುಶ್ರೂಷೆಯಲ್ಲಿ ದೃಷ್ಟಿ ಸಂಪರ್ಕ (be-KA ಪು. 124 ¶1-ಪು. 125 ¶4)
ನಂ. 1: ಸಂದೇಹಗಳು ನಿಮ್ಮ ನಂಬಿಕೆಯನ್ನು ನುಂಗುವಂತೆ ಬಿಡಬೇಡಿ (w-KA01 7/1 ಪು. 18-21)
ನಂ. 2: ಅ.ಕೃತ್ಯಗಳು 19:1-22
ನಂ. 3: fಮರಿಯಳ ಗರ್ಭಧಾರಣೆಯು ಪಾಪದೋಷಗಳಿಲ್ಲದೆ ಆಯಿತೋ? (rs ಪು. 257 ¶3-ಪು. 258 ¶1; kl-KA ಅಧ್ಯಾಯ 6 ¶12, 13)
ನಂ. 4: ‘ಮೊದಲಾಗಿ ರಾಜ್ಯವನ್ನು ಹುಡುಕುತ್ತಿರು’ ಎಂಬುದರ ಅರ್ಥವೇನು?
ಜುಲೈ 21 ಬೈಬಲ್ ವಾಚನ: ಅ.ಕೃತ್ಯಗಳು 22-25 ಗೀತೆ 222
ಭಾಷಣ ಗುಣ: ಒಂದು ಭಾಷಣವನ್ನು ಕೊಡುವಾಗ ದೃಷ್ಟಿ ಸಂಪರ್ಕ (be-KA ಪು. 126 ¶1-ಪು. 127 ¶2)
ನಂ. 1: ನೀವು ನಿಜವಾಗಿಯೂ ಸಹಿಷ್ಣು ಸ್ವಭಾವದವರೊ? (w-KA01 7/15 ಪು. 21-3)
ನಂ. 2: ಅ. ಕೃತ್ಯಗಳು 24:1-23
ನಂ. 3: ಪಿಶಾಚನು ಒಬ್ಬ ನಿಜವಾದ ವ್ಯಕ್ತಿಯೋ?
ನಂ. 4: gಮರಿಯಳು ತನ್ನ ಮಾಂಸಿಕ ದೇಹದೊಂದಿಗೆ ಸ್ವರ್ಗಕ್ಕೆ ಏರಿಹೋದಳೋ? (rs ಪು. 258 ¶2-3; kl-KA ಅಧ್ಯಾಯ 9 ¶19)
ಜುಲೈ 28 ಬೈಬಲ್ ವಾಚನ: ಅ.ಕೃತ್ಯಗಳು 26-28 ಗೀತೆ 14
ಭಾಷಣ ಗುಣ: ಕ್ಷೇತ್ರ ಶುಶ್ರೂಷೆಯಲ್ಲಿ ಸ್ವಾಭಾವಿಕತೆ (be-KA ಪು. 128 ¶1-ಪು. 129 ¶1)
ನಂ. 1: ಸೊನ್ನೆ ವರ್ಷ ಇಲ್ಲ (si ಪು. 282 ¶24-6)
ನಂ. 2: w-KA01 7/1 ಪು. 14 ¶5-8
ನಂ. 3: ಮಧ್ಯಸ್ಥಳೋಪಾದಿ ಮರಿಯಳ ಮೂಲಕ ಪ್ರಾರ್ಥಿಸುವುದು ಸರಿಯೋ? (rs ಪು. 258 ¶4-ಪು. 259 ¶1; kl-KA ಅಧ್ಯಾಯ 16 ¶9)
ನಂ. 4: ಜೀವದ ವರದಾನಕ್ಕಾಗಿ ನಾವು ಹೇಗೆ ಗೌರವವನ್ನು ತೋರಿಸುತ್ತೇವೆ?
ಆಗ. 4 ಬೈಬಲ್ ವಾಚನ: ರೋಮಾಪುರ 1-4 ಗೀತೆ 106
ಭಾಷಣ ಗುಣ: ವೇದಿಕೆಯ ಮೇಲೆ ಸ್ವಾಭಾವಿಕತೆ (be-KA ಪು. 129 ¶2-ಪು. 130 ¶1)
ನಂ. 1: ವಾಚನದಲ್ಲಿ ಶ್ರದ್ಧೆಯಿಂದ ನಿಮ್ಮನ್ನೇ ಹೇಗೆ ನಿರತರಾಗಿಸಿಕೊಳ್ಳುವುದು? (be-KA ಪು. 23 ¶4-ಪು. 26 ¶5)
ನಂ. 2: ರೋಮಾಪುರ 2:1-24
ನಂ. 3: ನೀವು ಹಿಂದೆಂದಾದರೂ ಜೀವಿಸಿದ್ದಿರೋ?
ನಂ. 4: ಪ್ರಥಮ ಶತಮಾನದ ಕ್ರೈಸ್ತ ಸಭೆಯಲ್ಲಿ ಮರಿಯಳನ್ನು ವಿಶೇಷವಾಗಿ ಗೌರವಿಸಲಾಗುತ್ತಿತ್ತೋ? (rs ಪು. 259 ¶3-ಪು. 260 ¶3)
ಆಗ. 11 ಬೈಬಲ್ ವಾಚನ: ರೋಮಾಪುರ 5-8 ಗೀತೆ 179
ಭಾಷಣ ಗುಣ: ಸಾರ್ವಜನಿಕವಾಗಿ ಓದುವಾಗ ಸ್ವಾಭಾವಿಕತೆ (be-KA ಪು. 130 ¶2-4)
ನಂ. 1: ‘ನೀತಿವಂತನು ಆಶೀರ್ವಾದದ ನೆಲೆ’ (w-KA01 7/15 ಪು. 24-7)
ನಂ. 2: ರೋಮಾಪುರ 5:6-21
ನಂ. 3: hನೀವು ಕನ್ಯೆ ಮರಿಯಳಲ್ಲಿ ನಂಬಿಕೆಯಿಡುತ್ತೀರೋ? (rs ಪು. 260 ¶4-ಪು. 261 ¶2; kl-KA ಪು. 37 ¶1 ಮತ್ತು ಪು. 40 ¶15)
ನಂ. 4: ನೀವು ಪುನರ್ಜನ್ಮದಲ್ಲಿ ನಂಬಿಕೆಯಿಡಬೇಕೋ?
ಆಗ. 18 ಬೈಬಲ್ ವಾಚನ: ರೋಮಾಪುರ 9-12 ಗೀತೆ 206
ಭಾಷಣ ಗುಣ: ವೈಯಕ್ತಿಕ ಶುದ್ಧತೆಯು ನಮ್ಮ ಸಂದೇಶಕ್ಕೆ ಶೋಭೆನೀಡುತ್ತದೆ (be-KA ಪು. 131 ¶1-3)
ನಂ. 1: ಅಭ್ಯಾಸಬಲವು ನಿಮಗೆ ಪ್ರಯೋಜನವನ್ನು ತರಲಿ (w-KA01 8/1 ಪು. 19-22)
ನಂ. 2: w-KA01 8/15 ಪು. 22 ¶10-13
ನಂ. 3: ಜನರು ಬೈಬಲನ್ನು ಬದಲಾಯಿಸಿದ್ದಾರೋ?
ನಂ. 4: ಪ್ರಭುಭೋಜನ ಸಂಸ್ಕಾರದಲ್ಲಿನ ರಕ್ತ ಹಾಗೂ ರೊಟ್ಟಿಯು, ಕ್ರಿಸ್ತನ ದೇಹ ಹಾಗೂ ರಕ್ತವಾಗಿ ಪರಿವರ್ತನೆಯಾಗುತ್ತದೆಂಬುದು ವಾಸ್ತವಿಕವೋ? (rs ಪು. 262 ¶1-ಪು. 263 ¶2; kl-KA ಅಧ್ಯಾಯ 13 ¶18)
ಆಗ. 25 ಬೈಬಲ್ ವಾಚನ: ರೋಮಾಪುರ 13-16 ಗೀತೆ 43
ಭಾಷಣ ಗುಣ: ನಿರಾಡಂಬರತೆ ಮತ್ತು ಸ್ವಸ್ಥಮನಸ್ಸು ಒಬ್ಬನ ಉಡುಪು ಮತ್ತು ಕೇಶಾಲಂಕಾರದ ಮೇಲೆ ಹೇಗೆ ಪ್ರಭಾವ ಬೀರುತ್ತದೆ? (be-KA ಪು. 131 ¶4-ಪು. 132 ¶3)
ಮೌಖಿಕ ಪುನರ್ವಿಮರ್ಶೆ
ಸೆಪ್ಟೆಂ. 1 ಬೈಬಲ್ ವಾಚನ: 1 ಕೊರಿಂಥ 1-9 ಗೀತೆ 48
ಭಾಷಣ ಗುಣ: ಅಚ್ಚುಕಟ್ಟಾಗಿರುವ ಉಡುಪಿನ ಮೌಲ್ಯ (be-KA ಪು. 132 ¶4-ಪು. 133 ¶1)
ನಂ. 1: ಅಧ್ಯಯನ ಮಾಡುವ ವಿಧ (be-KA ಪು. 27 ¶1-ಪು. 31 ¶2)
ನಂ. 2: 1 ಕೊರಿಂಥ 3:1-23
ನಂ. 3: ಯೋಹಾನ 6:53-57ರ ಅರ್ಥವೇನು? (rs ಪು. 263 ¶3-4; kl-KA ಅಧ್ಯಾಯ 13 ¶22)
ನಂ. 4: ಬಡತನದ ಕಾರಣದಿಂದ ಕಳ್ಳತನ ಮಾಡಿದ ಮಾತ್ರಕ್ಕೆ ಅದು ಸರಿಯೆಂದು ಸಮರ್ಥಿಸಲ್ಪಡಬಹುದೋ?
ಸೆಪ್ಟೆಂ. 8 ಬೈಬಲ್ ವಾಚನ: 1 ಕೊರಿಂಥ 10-16 ಗೀತೆ 123
ಭಾಷಣ ಗುಣ: ಒಳ್ಳೇ ವೈಯಕ್ತಿಕ ತೋರಿಕೆಯು ಯಾವುದೇ ರೀತಿಯಲ್ಲಿ ಮುಗ್ಗರಿಸುವಿಕೆಗೆ ಕಾರಣ ಕೊಡುವುದಿಲ್ಲ (be-KA ಪು. 133 ¶2-4)
ನಂ. 1: ನಿಮ್ಮ ಪ್ರಗತಿಗೆ ಅಡ್ಡಬರುವ ತಡೆಗಳನ್ನು ಜಯಿಸಿರಿ! (w-KA01 8/1 ಪು. 28-30)
ನಂ. 2: 1 ಕೊರಿಂಥ 12:1-26
ನಂ. 3: ಕೆಟ್ಟ ಸಂಗತಿಗಳು ನಡೆಯುವಂತೆ ದೇವರು ಏಕೆ ಬಿಡುತ್ತಾನೆ?
ನಂ. 4: ಆರಾಧನಾ ವಿಧಿ (ಮಾಸ್)ಯ ಆಚರಣೆಯನ್ನು ಯೇಸು ಆರಂಭಿಸಿದನೋ? (rs ಪು. 264 ¶1-ಪು. 265 ¶5; kl-KA ಅಧ್ಯಾಯ 13 ¶18)
ಸೆಪ್ಟೆಂ. 15 ಬೈಬಲ್ ವಾಚನ: 2 ಕೊರಿಂಥ 1-7 ಗೀತೆ 16
ಭಾಷಣ ಗುಣ: ಒಳ್ಳೇ ದೇಹಭಂಗಿ ಮತ್ತು ಅಚ್ಚುಕಟ್ಟಾದ ಸಾಧನ (be-KA ಪು. 134 ¶1-5)
ನಂ. 1: ನಿಮ್ಮ ಯೌವನವನ್ನು ಯಶಸ್ವಿಗೊಳಿಸುವುದು (w-KA01 8/15 ಪು. 4-7)
ನಂ. 2: 2 ಕೊರಿಂಥ 6:1-7:1
ನಂ. 3: ಸರಕಾರೀ ಮೇಲಧಿಕಾರಿಗಳ ಕಡೆಗಿರುವ ಒಬ್ಬ ಕ್ರೈಸ್ತನ ಮನೋಭಾವ (rs ಪು. 270 ¶1-3; kl-KA ಅಧ್ಯಾಯ 14 ¶7-10)
ನಂ. 4: ಭೂಮಿಯ ಮಾಲಿನ್ಯದ ಕುರಿತು ದೇವರು ಚಿಂತಿಸುತ್ತಾನೋ?
ಸೆಪ್ಟೆಂ. 22 ಬೈಬಲ್ ವಾಚನ: 2 ಕೊರಿಂಥ 8-13 ಗೀತೆ 207
ಭಾಷಣ ಗುಣ: ಭಾಷಣ ನೀಡುವ ಕಳವಳವನ್ನು ಕುಗ್ಗಿಸುವ ವಿಧ (be-KA ಪು. 135 ¶1-ಪು. 137 ¶3)
ನಂ. 1: ಒಳ್ಳೇ ತೀರ್ಮಾನಗಳನ್ನು ನೀವು ಮಾಡಸಾಧ್ಯವಿರುವ ವಿಧ (w-KA01 9/1 ಪು. 27-30)
ನಂ. 2: 2 ಕೊರಿಂಥ 8:1-21
ನಂ. 3: ಮರಣಾನಂತರ ಏನಾದರೂ ಬದುಕಿ ಉಳಿಯುತ್ತದೋ?
ನಂ. 4: ಲೌಕಿಕ ಯುದ್ಧ ಕಾರ್ಯಾಚರಣೆಯ ಕಡೆಗಿನ ಒಬ್ಬ ಕ್ರೈಸ್ತನ ಮನೋಭಾವದ ಮೇಲೆ ಪ್ರಭಾವ ಬೀರುವ ಶಾಸ್ತ್ರವಚನಗಳು (rs ಪು. 271 ¶1-4)
ಸೆಪ್ಟೆಂ. 29 ಬೈಬಲ್ ವಾಚನ: ಗಲಾತ್ಯ 1-6 ಗೀತೆ 163
ಭಾಷಣ ಗುಣ: ಸಮಚಿತ್ತತೆಯನ್ನು ಪಡೆದುಕೊಳ್ಳುವ ವಿಧ (be-KA ಪು. 137 ¶4-ಪು. 138 ¶6)
ನಂ. 1: ಪ್ರಮುಖವಾದ ತಾರೀಖುಗಳ ಅತ್ಯಮೂಲ್ಯತೆ (si ಪು. 282-3 ¶27-30)
ನಂ. 2: w-KA01 9/1 ಪು. 15 ¶8-ಪು. 17 ¶11
ನಂ. 3: ಇಸ್ರಾಯೇಲ್ಯರು ಯಾವ ಸನ್ನಿವೇಶಗಳ ಕೆಳಗೆ ಯುದ್ಧದಲ್ಲಿ ಒಳಗೂಡುವಂತೆ ದೇವರು ಅನುಮತಿಸಿದನು? (rs ಪು. 271 ¶5-ಪು. 273 ¶1)
ನಂ. 4: ದೇವರ ರಾಜ್ಯವು ಆಳುತ್ತಿದೆ ಎಂಬುದು ನಮಗೆ ಹೇಗೆ ಗೊತ್ತು?
ಅಕ್ಟೋ. 6 ಬೈಬಲ್ ವಾಚನ: ಎಫೆಸ 1-6 ಗೀತೆ 99
ಭಾಷಣ ಗುಣ: ಸ್ವರವನ್ನು ವರ್ಧಿಸುವುದರ ಪ್ರಾಮುಖ್ಯತೆ (be-KA ಪು. 139 ¶1-ಪು. 140 ¶1)
ನಂ. 1: ಅಧ್ಯಯನವು ಪ್ರತಿಫಲದಾಯಕವಾಗಿದೆ (be-KA ಪು. 31 ¶3-ಪು. 32 ¶4)
ನಂ. 2: ಎಫೆಸ 2:1-22
ನಂ. 3: ದೇವರಲ್ಲಿನ ನಂಬಿಕೆಯು ವಾಸ್ತವಿಕವಾದದ್ದಾಗಿದೆ
ನಂ. 4: ರಾಜಕೀಯ ವಿವಾದಗಳಲ್ಲಿ ಒಳಗೂಡುವುದರ ಬಗ್ಗೆ ಒಬ್ಬ ಕ್ರೈಸ್ತನ ದೃಷ್ಟಿಕೋನವನ್ನು ಯಾವ ಶಾಸ್ತ್ರವಚನಗಳು ಪ್ರಭಾವಿಸುತ್ತವೆ? (rs ಪು. 273 ¶2-ಪು. 274 ¶1; kl-KA ಅಧ್ಯಾಯ 5 ¶16 ಮತ್ತು ಅಧ್ಯಾಯ 13 ¶14)
ಅಕ್ಟೋ. 13 ಬೈಬಲ್ ವಾಚನ: ಫಿಲಿಪ್ಪಿ 1-ಕೊಲೊಸ್ಸೆ 4 ಗೀತೆ 105
ಭಾಷಣ ಗುಣ: ಮೈಕ್ರೊಫೋನ್ಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರಿ (be-KA ಪು. 140 ¶2-ಪು. 142 ¶1)
ನಂ. 1: ‘ನೇರವಾದ ಮಾರ್ಗದಲ್ಲಿ ನಡೆಯಿರಿ’ (w-KA01 9/15 ಪು. 24-28)
ನಂ. 2: ಫಿಲಿಪ್ಪಿ 2:1-24
ನಂ. 3: ದೇಶಭಕ್ತಿಯ ಸಮಾರಂಭಗಳ ಕಡೆಗೆ ಒಬ್ಬ ಕ್ರೈಸ್ತನ ದೃಷ್ಟಿಕೋನವನ್ನು ಯಾವ ಶಾಸ್ತ್ರವಚನಗಳು ಪ್ರಭಾವಿಸುತ್ತವೆ? (rs ಪು. 274 ¶2-ಪು. 275 ¶3; kl-KA ಅಧ್ಯಾಯ 5 ¶16 ಮತ್ತು ಅಧ್ಯಾಯ 13 ¶14)
ನಂ. 4: ಇಂದು ಯೆಹೋವನು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತಾನೆ?
ಅಕ್ಟೋ. 20 ಬೈಬಲ್ ವಾಚನ: 1 ಥೆಸಲೊನೀಕ 1-2 ಥೆಸಲೊನೀಕ 3 ಗೀತೆ 145
ಭಾಷಣ ಗುಣ: ಉತ್ತರ ಕೊಡುವಾಗ ಬೈಬಲಿನ ಉಪಯೋಗ (be-KA ಪು. 143 ¶1-3)
ನಂ. 1: ಕಾಲದ ಕುರಿತಾದ ಯೆಹೋವನ ದೃಷ್ಟಿಕೋನ (si ಪು. 283-4 ¶31-3)
ನಂ. 2: w-KA01 10/15 ಪು. 23 ¶6-ಪು. 24 ¶9
ನಂ. 3: ಯಾರು ಸ್ವರ್ಗಕ್ಕೆ ಹೋಗುತ್ತಾರೆ?
ನಂ. 4: ಕ್ರೈಸ್ತರು ತೋರಿಸುವ ತಟಸ್ಥ ಮನೋಭಾವವು, ಅವರು ತಮ್ಮ ನೆರೆಹೊರೆಯವರ ಹಿತಾಸಕ್ತಿಯಲ್ಲಿ ಅನಾಸಕ್ತರಾಗಿದ್ದಾರೆಂಬುದನ್ನು ಅರ್ಥೈಸುತ್ತದೋ? (rs ಪು. 276 ¶1; kl-KA ಅಧ್ಯಾಯ 5 ¶19 ಮತ್ತು ಅಧ್ಯಾಯ 11 ¶14)
ಅಕ್ಟೋ. 27 ಬೈಬಲ್ ವಾಚನ: 1 ತಿಮೊಥೆಯ 1-2 ತಿಮೊಥೆಯ 4 ಗೀತೆ 46
ಭಾಷಣ ಗುಣ: ಬೈಬಲನ್ನು ಉಪಯೋಗಿಸುವುದರಲ್ಲಿ ಪ್ರಗತಿಯನ್ನು ಮಾಡುವ ವಿಧ (be-KA ಪು. 144 ¶1-4)
ಮೌಖಿಕ ಪುನರ್ವಿಮರ್ಶೆ
ನವೆಂ. 3 ಬೈಬಲ್ ವಾಚನ: ತೀತ 1-ಫಿಲೆಮೋನ ಗೀತೆ 30
ಭಾಷಣ ಗುಣ: ಬೈಬಲನ್ನು ಉಪಯೋಗಿಸಲು ಪ್ರೋತ್ಸಾಹಿಸುವುದು (be-KA ಪು. 145-6)
ನಂ. 1: ಬೈಬಲ್ನಲ್ಲಿ ಸಂಶೋಧನೆ ಮಾಡುವ ವಿಧ (be-KA ಪು. 33 ¶1-ಪು. 35 ¶2)
ನಂ. 2: ಫಿಲೆಮೋನ 1-25
ನಂ. 3: ಪರಿಪೂರ್ಣತೆಯಲ್ಲಿ ಜೀವಿಸುವುದು ಬೇಸರಕರವಾಗಿರುವುದೋ?
ನಂ. 4: ನೂತನ ಲೋಕ ಭಾಷಾಂತರ (ಇಂಗ್ಲಿಷ್) ಬೈಬಲಿನ ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ ಯೆಹೋವ ಎಂಬ ಹೆಸರು ಏಕೆ ಉಪಯೋಗಿಸಲ್ಪಟ್ಟಿದೆ? (rs ಪು. 278 ¶1-3; kl-KA ಅಧ್ಯಾಯ 3 ¶12, 13)
ನವೆಂ. 10 ಬೈಬಲ್ ವಾಚನ: ಇಬ್ರಿಯ 1-8 ಗೀತೆ 149
ಭಾಷಣ ಗುಣ: ಶಾಸ್ತ್ರವಚನಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸುವುದರ ಪ್ರಾಮುಖ್ಯತೆ (be-KA ಪು. 147 ¶1-ಪು. 148 ¶2)
ನಂ. 1: ಹನೋಕನು ಭಕ್ತಿಹೀನ ಲೋಕವೊಂದರಲ್ಲಿ ದೇವರೊಂದಿಗೆ ನಡೆದನು (w-KA01 9/15 ಪು. 29-31)
ನಂ. 2: ಇಬ್ರಿಯ 2:1-18
ನಂ. 3: i‘ನಿಮಗೆ ನಿಮ್ಮದೇ ಸ್ವಂತ ಬೈಬಲ್ ಇದೆ’ ಎಂದು ಹೇಳುವವರಿಗೆ ಪ್ರತ್ಯುತ್ತರಿಸುವುದು (rs ಪು. 279 ¶1-4; kl-KA ಅಧ್ಯಾಯ 2)
ನಂ. 4: ಪುನರುತ್ಥಿತರ ಕ್ರಿಯೆಗಳಿಗನುಸಾರ ಅವರಿಗೆ ಹೇಗೆ ನ್ಯಾಯತೀರ್ಪಾಗುವುದು?
ನವೆಂ. 17 ಬೈಬಲ್ ವಾಚನ: ಇಬ್ರಿಯ 9-13 ಗೀತೆ 144
ಭಾಷಣ ಗುಣ: ಶಾಸ್ತ್ರವಚನಗಳನ್ನು ಪರಿಚಯಿಸಲಿಕ್ಕಾಗಿ ಸೂಕ್ತವಾದ ಹೇಳಿಕೆಗಳನ್ನು ಆಯ್ಕೆಮಾಡುವುದು (be-KA ಪು. 148 ¶3-ಪು. 149 ¶3)
ನಂ. 1: ನಿಷ್ಠಾವಂತರಾಗಿರುವುದು ಎಂದರೇನು? (w-KA01 10/1 ಪು. 20-3)
ನಂ. 2: ಇಬ್ರಿಯ 9:11-28
ನಂ. 3: ದೇವರ ಸ್ವರ್ಗೀಯ ಸೃಷ್ಟಿಜೀವಿಗಳು ಸುಸಂಘಟಿತವಾಗಿವೆಯೋ? (rs ಪು. 280 ¶2-3; kl-KA ಅಧ್ಯಾಯ 3 ¶15)
ನಂ. 4: ದೈವಿಕ ನಡತೆಯನ್ನು ಅನುಸರಿಸುವುದು ಏಕೆ ಪ್ರಯೋಜನಕರವಾಗಿದೆ?
ನವೆಂ. 24 ಬೈಬಲ್ ವಾಚನ: ಯಾಕೋಬ 1-5 ಗೀತೆ 88
ಭಾಷಣ ಗುಣ: ಸರಿಯಾದ ಒತ್ತನ್ನು ನೀಡುವುದರಲ್ಲಿ ಭಾವಪೂರ್ಣತೆಯು ಸೇರಿದೆ (be-KA ಪು. 150 ¶1-2)
ನಂ. 1: ಘಟನೆಗಳನ್ನು ಕಾಲಪ್ರವಾಹದಲ್ಲಿ ಅಳೆಯುವುದು (si ಪು. 284-5 ¶1-4)
ನಂ. 2: w-KA01 11/1 ಪು. 12 ¶15-ಪು. 13 ¶19
ನಂ. 3: ವಿನಯಶೀಲತೆಯ ಮೌಲ್ಯ
ನಂ. 4: ಗತ ಸಮಯಗಳಲ್ಲಿ ದೇವರು ಭೂಮಿಯಲ್ಲಿದ್ದ ತನ್ನ ಸೇವಕರಿಗೆ ಹೇಗೆ ಸೂಚನೆಗಳನ್ನು ನೀಡಿದನು? (rs ಪು. 281 ¶1-2; kl-KA ಅಧ್ಯಾಯ 17 ¶6, 16, 17)
ಡಿಸೆಂ. 1 ಬೈಬಲ್ ವಾಚನ: 1 ಪೇತ್ರ 1-2 ಪೇತ್ರ 3 ಗೀತೆ 54
ಭಾಷಣ ಗುಣ: ಸರಿಯಾದ ಪದಗಳಿಗೆ ಒತ್ತುನೀಡಿರಿ (be-KA ಪು. 150 ¶3-ಪು. 151 ¶2)
ನಂ. 1: ಬೇರೆ ಸಂಶೋಧನಾ ಸಾಧನಗಳನ್ನು ಉಪಯೋಗಿಸಲು ಕಲಿಯುವುದು (be-KA ಪು. 35 ¶3-ಪು. 38 ¶4)
ನಂ. 2: 1 ಪೇತ್ರ 1:1-16
ನಂ. 3: ಸತ್ಯ ಕ್ರೈಸ್ತರು ಸಂಘಟಿತರಾಗಿರುವರು ಎಂದು ಬೈಬಲು ತೋರಿಸುತ್ತದೋ? (rs ಪು. 282 ¶1-4; kl-KA ಅಧ್ಯಾಯ 14 ¶19-23)
ನಂ. 4: ಕ್ರಿಸ್ತನ ಪ್ರಾಯಶ್ಚಿತ ಯಜ್ಞವು ನಮ್ಮ ಜೀವಿತದ ಮೇಲೆ ಹೇಗೆ ಪರಿಣಾಮಬೀರಬೇಕು?
ಡಿಸೆಂ. 8 ಬೈಬಲ್ ವಾಚನ: 1 ಯೋಹಾನ 1-ಯೂದ ಗೀತೆ 22
ಭಾಷಣ ಗುಣ: ಒತ್ತುನೀಡುವ ವಿಧಾನಗಳು (be-KA ಪು. 151 ¶3-ಪು. 152 ¶5)
ನಂ. 1: ನಿಮ್ಮ ಮನಸ್ಸಾಕ್ಷಿಯನ್ನು ಭದ್ರವಾಗಿ ಕಾಪಾಡಿಕೊಳ್ಳಿರಿ (w-KA01 11/1 ಪು. 4-7)
ನಂ. 2: 1 ಯೋಹಾನ 3:1-18
ನಂ. 3: ಸ್ತ್ರೀಯರ ಕಡೆಗಿನ ಅಗೌರವಯುತ ವರ್ತನೆಗೆ ಬೈಬಲಿನ ಮೇಲೆ ದೋಷಾರೋಪ ಹೊರಿಸಸಾಧ್ಯವಿಲ್ಲವೇಕೆ?
ನಂ. 4: ದೇವರ ನಂಬಿಗಸ್ತ ಸೇವಕರು ಕ್ರೈಸ್ತಪ್ರಪಂಚದ ಚರ್ಚುಗಳ ನಡುವೆ ಚದುರಿಹೋಗಿದ್ದಾರೋ? (rs ಪು. 283 ¶1-3; kl-KA ಅಧ್ಯಾಯ 17 ¶3, 4, 6-8, 15-20)
ಡಿಸೆಂ. 15 ಬೈಬಲ್ ವಾಚನ: ಪ್ರಕಟನೆ 1-6 ಗೀತೆ 219
ಭಾಷಣ ಗುಣ: ಶಾಸ್ತ್ರವಚನಗಳನ್ನು ಸರಿಯಾಗಿ ಅನ್ವಯಿಸುವುದು (be-KA ಪು. 153 ¶1-ಪು. 154 ¶3)
ನಂ. 1: ನೋಹನ ನಂಬಿಕೆಯು ಲೋಕವನ್ನು ದಂಡನಾರ್ಹವೆಂದು ತೀರ್ಪುಕೊಡುತ್ತದೆ (w-KA01 11/15 ಪು. 28-31)
ನಂ. 2: ಪ್ರಕಟನೆ 2:1-17
ನಂ. 3: ಯೆಹೋವನ ಸಂಸ್ಥೆಯ ದೃಶ್ಯ ಭಾಗವನ್ನು ಹೇಗೆ ಗುರುತಿಸಸಾಧ್ಯವಿದೆ? (rs ಪು. 283 ¶4-ಪು. 284 ¶2; kl-KA ಅಧ್ಯಾಯ 5 ¶16-22)
ನಂ. 4: ಕ್ರಿಸ್ಮಸ್ ಹಬ್ಬವು ಕ್ರೈಸ್ತರಿಗಲ್ಲವೇಕೆ?
ಡಿಸೆಂ. 22 ಬೈಬಲ್ ವಾಚನ: ಪ್ರಕಟನೆ 7-14 ಗೀತೆ 6
ಭಾಷಣ ಗುಣ: ಶಾಸ್ತ್ರವಚನಗಳ ಅನ್ವಯವನ್ನು ಸ್ಪಷ್ಟಪಡಿಸುವುದು (be-KA ಪು. 154 ¶4-ಪು. 155 ¶5)
ನಂ. 1: ಆತ್ಮಿಕ ಹೃದಯಾಘಾತವನ್ನು ನೀವು ತಪ್ಪಿಸಬಹುದು (w-KA01 12/1 ಪು. 9-13)
ನಂ. 2: w-KA01 12/15 ಪು. 17 ¶10-ಪು. 18 ¶13 (ಪಾದಟಿಪ್ಪಣಿಯನ್ನೂ ಸೇರಿಸಿ)
ನಂ. 3: ಸಮವಯಸ್ಕರ ಒತ್ತಡವನ್ನು ಹೇಗೆ ನಿಭಾಯಿಸುವುದು?
ನಂ. 4: ನಾವು ಯೆಹೋವನ ಸಂಸ್ಥೆಗೆ ಹೇಗೆ ಗೌರವವನ್ನು ತೋರಿಸಸಾಧ್ಯವಿದೆ? (rs ಪು. 284 ¶3-7; kl-KA ಅಧ್ಯಾಯ 14 ¶19-23)
ಡಿಸೆಂ. 29 ಬೈಬಲ್ ವಾಚನ: ಪ್ರಕಟನೆ 15-22 ಗೀತೆ 60
ಭಾಷಣ ಗುಣ: ಶಾಸ್ತ್ರವಚನಗಳಿಂದ ತರ್ಕಿಸಿರಿ (be-KA ಪು. 155 ¶5-ಪು. 156 ¶5)
ಮೌಖಿಕ ಪುನರ್ವಿಮರ್ಶೆ
[ಅಧ್ಯಯನ ಪ್ರಶ್ನೆಗಳು]
a ಈ ನೇಮಕವನ್ನು ಕೇವಲ ಸಹೋದರರಿಗೆ ನೀಡಿರಿ.
b ಈ ನೇಮಕವನ್ನು ಕೇವಲ ಸಹೋದರರಿಗೆ ನೀಡಿರಿ.
c ಈ ನೇಮಕವನ್ನು ಕೇವಲ ಸಹೋದರರಿಗೆ ನೀಡಿರಿ.
d ಈ ನೇಮಕವನ್ನು ಕೇವಲ ಸಹೋದರರಿಗೆ ನೀಡಿರಿ.
e ಈ ನೇಮಕವನ್ನು ಕೇವಲ ಸಹೋದರರಿಗೆ ನೀಡಿರಿ.
f ಸಮಯವು ಅನುಮತಿಸಿದಂತೆ, ಸ್ಥಳಿಕ ಟೆರಿಟೊರಿಯಲ್ಲಿರುವ ಆವಶ್ಯಕತೆಗಳನ್ನು ಅತ್ಯುತ್ತಮವಾದ ರೀತಿಯಲ್ಲಿ ಪೂರೈಸುವಂಥ ಪ್ರತಿಪಾದನೆಗಳು, ಆಕ್ಷೇಪಗಳು, ಇನ್ನು ಮುಂತಾದವುಗಳಿಗೆ ಕೊಡಬಹುದಾದಂಥ ಪ್ರತ್ಯುತ್ತರಗಳನ್ನು ಪರಿಗಣಿಸಿರಿ.
g ಸಮಯವು ಅನುಮತಿಸಿದಂತೆ, ಸ್ಥಳಿಕ ಟೆರಿಟೊರಿಯಲ್ಲಿರುವ ಆವಶ್ಯಕತೆಗಳನ್ನು ಅತ್ಯುತ್ತಮವಾದ ರೀತಿಯಲ್ಲಿ ಪೂರೈಸುವಂಥ ಪ್ರತಿಪಾದನೆಗಳು, ಆಕ್ಷೇಪಗಳು, ಇನ್ನು ಮುಂತಾದವುಗಳಿಗೆ ಕೊಡಬಹುದಾದಂಥ ಪ್ರತ್ಯುತ್ತರಗಳನ್ನು ಪರಿಗಣಿಸಿರಿ.
h ಸಮಯವು ಅನುಮತಿಸಿದಂತೆ, ಸ್ಥಳಿಕ ಟೆರಿಟೊರಿಯಲ್ಲಿರುವ ಆವಶ್ಯಕತೆಗಳನ್ನು ಅತ್ಯುತ್ತಮವಾದ ರೀತಿಯಲ್ಲಿ ಪೂರೈಸುವಂಥ ಪ್ರತಿಪಾದನೆಗಳು, ಆಕ್ಷೇಪಗಳು, ಇನ್ನು ಮುಂತಾದವುಗಳಿಗೆ ಕೊಡಬಹುದಾದಂಥ ಪ್ರತ್ಯುತ್ತರಗಳನ್ನು ಪರಿಗಣಿಸಿರಿ.
i ಸಮಯವು ಅನುಮತಿಸಿದಂತೆ, ಸ್ಥಳಿಕ ಟೆರಿಟೊರಿಯಲ್ಲಿರುವ ಆವಶ್ಯಕತೆಗಳನ್ನು ಅತ್ಯುತ್ತಮವಾದ ರೀತಿಯಲ್ಲಿ ಪೂರೈಸುವಂಥ ಪ್ರತಿಪಾದನೆಗಳು, ಆಕ್ಷೇಪಗಳು, ಇನ್ನು ಮುಂತಾದವುಗಳಿಗೆ ಕೊಡಬಹುದಾದಂಥ ಪ್ರತ್ಯುತ್ತರಗಳನ್ನು ಪರಿಗಣಿಸಿರಿ.