ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/02 ಪು. 7
  • ಪ್ರಶ್ನಾ ಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಚೌಕ
  • 2002 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಪ್ರಶ್ನಾ ಪೆಟ್ಟಿಗೆ
    1991 ನಮ್ಮ ರಾಜ್ಯದ ಸೇವೆ
  • ನಮಗೆ ಸಭೆಯ ಅಗತ್ಯವಿದೆ
    1995 ನಮ್ಮ ರಾಜ್ಯದ ಸೇವೆ
  • ಸುವಾರ್ತೆಯನ್ನು ಸಾರುವ ವಿಧಾನಗಳು
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
  • ಸಭೆಯು ಭಕ್ತಿಯಲ್ಲಿ ಬೆಳೆಯಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
2002 ನಮ್ಮ ರಾಜ್ಯದ ಸೇವೆ
km 11/02 ಪು. 7

ಪ್ರಶ್ನಾ ಚೌಕ

◼ ನಾವು ಎಲ್ಲಿ ವಾಸಿಸುತ್ತಿದ್ದೇವೋ ಅದೇ ಟೆರಿಟೊರಿಯಲ್ಲಿರುವ ಸಭೆಗೆ ಹಾಜರಾಗುವುದರಿಂದ ಯಾವ ಪ್ರಯೋಜನಗಳಿವೆ?

ಸಭಾ ಏರ್ಪಾಡಿನ ಮೂಲಕ, ‘ಪ್ರೀತಿ ಹಾಗೂ ಸತ್ಕಾರ್ಯಕ್ಕಾಗಿ ನಮ್ಮನ್ನು ಪ್ರೇರಿಸುವಂಥ’ ಉತ್ತೇಜನವನ್ನು ಪಡೆದುಕೊಳ್ಳುತ್ತೇವೆ. (ಇಬ್ರಿ. 10:​24, 25) ಸಭೆಯ ಮೂಲಕ ನಾವು ಸತ್ಯವನ್ನು ಕಲಿಯುತ್ತೇವೆ ಮತ್ತು ಶಿಷ್ಯರನ್ನಾಗಿ ಮಾಡಲಿಕ್ಕಾಗಿರುವ ನಮ್ಮ ನೇಮಕವನ್ನು ಪೂರೈಸಲಿಕ್ಕಾಗಿ ಉತ್ತಮವಾಗಿ ಸನ್ನದ್ಧರಾಗುತ್ತೇವೆ. (ಮತ್ತಾ. 28:​19, 20) ಪರೀಕ್ಷೆಗಳನ್ನು ನಂಬಿಗಸ್ತಿಕೆಯಿಂದ ತಾಳಿಕೊಳ್ಳಲು ಸಹ ನಾವು ಬಲಪಡಿಸಲ್ಪಡುತ್ತೇವೆ ಮತ್ತು ದಿನೇ ದಿನೇ ಅಧಿಕಗೊಳ್ಳುತ್ತಿರುವ ಒತ್ತಡಗಳು ಹಾಗೂ ಚಿಂತೆಗಳನ್ನು ಯಶಸ್ವಿಕರವಾಗಿ ನಿಭಾಯಿಸುವಂತೆ ನಮಗೆ ಸಹಾಯಮಾಡಲಿಕ್ಕಾಗಿ ಪ್ರೀತಿಪರ ಮೇಲ್ವಿಚಾರಕರು ನಮಗಿದ್ದಾರೆ. ಹೀಗೆ, ನಾವು ಆತ್ಮಿಕವಾಗಿ ಬದುಕಿ ಉಳಿಯಲಿಕ್ಕಾಗಿ ಸಭೆಯು ಅತ್ಯಾವಶ್ಯಕವಾಗಿದೆ ಎಂಬುದು ಸುಸ್ಪಷ್ಟ. ಆದರೂ, ನಾವು ವಾಸಿಸುತ್ತಿರುವಂಥ ಟೆರಿಟೊರಿಯಲ್ಲೇ ಇರುವ ಸಭೆಗೆ ಹಾಜರಾಗುವುದರಿಂದ ಯಾವುದಾದರೂ ಪ್ರಯೋಜನಗಳಿವೆಯೋ?

ಪ್ರತಿಯೊಬ್ಬರ ಪರಿಸ್ಥಿತಿಯೂ ಭಿನ್ನವಾಗಿರುತ್ತದೆ, ಮತ್ತು ಒಬ್ಬನು ಯಾವ ಸಭೆಗೆ ಹಾಜರಾಗುವನು ಎಂಬ ವಿಷಯದಲ್ಲಿ ಐಹಿಕ ಉದ್ಯೋಗ, ಅವಿಶ್ವಾಸಿ ಸಂಗಾತಿ, ಮತ್ತು ಸಾರಿಗೆ ವ್ಯವಸ್ಥೆಯಂಥ ಅಂಶಗಳು ಪ್ರಭಾವ ಬೀರಬಹುದು. ಆದರೂ, ಒಬ್ಬ ವ್ಯಕ್ತಿಯು ತಾನು ವಾಸಿಸುತ್ತಿರುವ ಟೆರಿಟೊರಿಯಲ್ಲೇ ಇರುವ ಸಭೆಯೊಂದಿಗೆ ಸಹವಾಸಮಾಡುವಾಗ, ಇದರಿಂದ ನಿಶ್ಚಿತವಾದ ಆತ್ಮಿಕ ಹಾಗೂ ಶಾರೀರಿಕ ಪ್ರಯೋಜನಗಳು ಸಿಗುತ್ತವೆ. ತುರ್ತುಪರಿಸ್ಥಿತಿಯ ಸಮಯದಲ್ಲಿ ಹಿರಿಯರು ಎಲ್ಲ ಪ್ರಚಾರಕರನ್ನು ಆದಷ್ಟು ಬೇಗನೆ ಸಂಪರ್ಕಿಸಲು ಶಕ್ತರಾಗಬಹುದು. ಈ ಮುಂಚಿನ ಪ್ರಶ್ನಾ ರೇಖಾಚೌಕಗಳು ಇತರ ಅನೇಕ ಪ್ರಯೋಜನಗಳನ್ನು ಎತ್ತಿತೋರಿಸಿವೆ.​—⁠ಜೂನ್‌ 1991, ಏಪ್ರಿಲ್‌ 1976, (ಇಂಗ್ಲಿಷ್‌) ಮತ್ತು ಮಾರ್ಚ್‌ 1967 (ಇಂಗ್ಲಿಷ್‌).

ಸಾಮಾನ್ಯವಾಗಿ, ಸಮೀಪದಲ್ಲಿರುವ ಕೂಟಗಳಿಗೆ ಹಾಜರಾಗುವುದು ಹೆಚ್ಚು ಅನುಕೂಲಕರವಾಗಿದ್ದು, ಇತರರೊಂದಿಗೆ ಮಾತಾಡಲು ಸಾಕಷ್ಟು ಬೇಗನೆ ಆಗಮಿಸಲು, ಅಗತ್ಯವಿರುವ ವಿಷಯಗಳನ್ನು ನೋಡಿಕೊಳ್ಳಲು, ಮತ್ತು ಆರಂಭದ ಗೀತೆ ಹಾಗೂ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ನಮಗೆ ಕಾಲಾವಕಾಶವನ್ನು ನೀಡುತ್ತದೆ. ಹೊಸದಾಗಿ ಆಸಕ್ತರಾಗಿರುವ ಜನರು ನಮ್ಮ ನೆರೆಹೊರೆಯಲ್ಲಿ ವಾಸಿಸುತ್ತಿರುವಲ್ಲಿ, ಸಾಮಾನ್ಯವಾಗಿ ಅವರನ್ನು ಸಂಪರ್ಕಿಸುವುದು, ಅವರೊಂದಿಗೆ ಬೈಬಲ್‌ ಅಧ್ಯಯನಗಳನ್ನು ನಡೆಸುವುದು, ಮತ್ತು ಅವರಿಗೆ ಅತಿ ಹೆಚ್ಚು ಅನುಕೂಲಕರವಾಗಿರುವ ಕೂಟಗಳಿಗೆ ಅವರನ್ನು ಮಾರ್ಗದರ್ಶಿಸುವುದು ನಮಗೆ ಹೆಚ್ಚು ಸುಲಭವಾಗಿರುತ್ತದೆ.

ತಮ್ಮ ಕುಟುಂಬದ ಆತ್ಮಿಕ ಹಾಗೂ ಪ್ರಾಯೋಗಿಕ ಹಿತಕ್ಷೇಮಕ್ಕೆ ಯಾವುದು ಅತ್ಯುತ್ತಮವಾಗಿದೆ ಎಂಬುದನ್ನು ನಿರ್ಧರಿಸುವುದರಲ್ಲಿ ಒಳಗೂಡಿರುವ ಎಲ್ಲ ಅಂಶಗಳನ್ನು ಜಾಗರೂಕತೆಯಿಂದ ಪರಿಗಣಿಸುತ್ತಾ, ಕುಟುಂಬದ ತಲೆಗಳು ಈ ವಿಷಯವನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸುವರು ಎಂಬ ಭರವಸೆ ನಮಗಿದೆ.​—⁠1 ತಿಮೊ. 5:⁠8.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ