ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/02 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2002 ನಮ್ಮ ರಾಜ್ಯದ ಸೇವೆ
2002 ನಮ್ಮ ರಾಜ್ಯದ ಸೇವೆ
km 11/02 ಪು. 7

ಪ್ರಕಟನೆಗಳು

◼ ನವೆಂಬರ್‌ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಅಥವಾ ನಿತ್ಯಜೀವಕ್ಕೆ ನಡೆಸುವ ಜ್ಞಾನ. ಜನರ ಬಳಿ ಈಗಾಗಲೇ ಇವು ಇರುವುದಾದರೆ, ಹಳೆಯ ಪುಸ್ತಕಗಳಲ್ಲೊಂದನ್ನು ನೀಡಬಹುದು. ಡಿಸೆಂಬರ್‌: ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ. ಒಂದು ಬದಲಿ ನೀಡುವಿಕೆಯಾಗಿ, ಬೈಬಲ್‌ ಕಥೆಗಳ ನನ್ನ ಪುಸ್ತಕ, ಬೈಬಲ್‌​—⁠ದೇವರ ವಾಕ್ಯವೊ ಮನುಷ್ಯನದ್ದೊ? ಯುವ ಜನರ ಪ್ರಶ್ನೆಗಳು​—⁠ಕಾರ್ಯಸಾಧಕ ಉತ್ತರಗಳು, ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕಗಳನ್ನು ಉಪಯೋಗಿಸಬಹುದು. ಈ ಬದಲಿ ನೀಡುವಿಕೆಗಳಲ್ಲಿ ಯಾವುದರ ಸರಬರಾಯಿಯೂ ನಿಮ್ಮ ಸಭೆಯಲ್ಲಿ ಇಲ್ಲದಿರುವಲ್ಲಿ, ನೀವು ಉಪಯೋಗಿಸಬಹುದಾದ ಹೆಚ್ಚಿನ ಸರಬರಾಯಿ ಸಮೀಪದಲ್ಲಿರುವ ಯಾವುದೇ ಸಭೆಗಳಲ್ಲಿ ಇವೆಯೋ ಎಂಬುದನ್ನು ದಯವಿಟ್ಟು ಕೇಳಿ ನೋಡಿ. ಜನವರಿ: ಸಭೆಯ ಸ್ಟಾಕ್‌ನಲ್ಲಿರಬಹುದಾದ ಯಾವುದೇ 192-ಪುಟದ ಪುಸ್ತಕ. ಈ ಪುಸ್ತಕಗಳಲ್ಲಿ ಯಾವುವೂ ನಿಮ್ಮ ಸ್ಟಾಕ್‌ನಲ್ಲಿ ಇಲ್ಲದಿರುವಲ್ಲಿ, ನೀವು ಉಪಯೋಗಿಸಬಹುದಾದ ಹೆಚ್ಚಿನ ಸರಬರಾಯಿ ಸಮೀಪದಲ್ಲಿರುವ ಯಾವುದೇ ಸಭೆಗಳಲ್ಲಿ ಇವೆಯೋ ಎಂಬುದನ್ನು ದಯವಿಟ್ಟು ಕೇಳಿ ನೋಡಿ. ಹಳೆಯ ಪುಸ್ತಕಗಳಿಲ್ಲದಿರುವ ಸಭೆಗಳು ದೇವರಿಗಾಗಿ ಮಾನವಕುಲದ ಅನ್ವೇಷಣೆ ಎಂಬ ಪುಸ್ತಕವನ್ನು ನೀಡಬಹುದು. ಫೆಬ್ರವರಿ: 32-ಪುಟಗಳ ಮುಂದಿನ ಯಾವುದಾದರೊಂದು ಬ್ರೋಷರನ್ನು ಉಪಯೋಗಿಸಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು​—⁠ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?, ನಿತ್ಯಕ್ಕೂ ಬಾಳುವ ದೈವಿಕ ನಾಮ, ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪರದೈಸನ್ನು ತರಲಿರುವ ಸರಕಾರ, ಮತ್ತು ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಸೂಕ್ತವಾಗಿರುವಲ್ಲೆಲ್ಲ, ನಮ್ಮ ಸಮಸ್ಯೆಗಳು​—⁠ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ?, ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ಸತ್ತವರ ಆತ್ಮಗಳು​—⁠ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? ಎಂಬ ಬ್ರೋಷರುಗಳನ್ನು ನೀಡಬಹುದು.

◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸನ್ನು ಡಿಸೆಂಬರ್‌ 1ರಂದು ಅಥವಾ ಆದಷ್ಟು ಬೇಗನೆ ಆಡಿಟ್‌ ಮಾಡಬೇಕು. ಇದನ್ನು ಮಾಡಿದ ಮೇಲೆ, ಮುಂದಿನ ಅಕೌಂಟ್ಸ್‌ ವರದಿ ಮಾಡಲ್ಪಡುವಾಗ ಸಭೆಗೆ ಪ್ರಕಟನೆಯೊಂದನ್ನು ಮಾಡಿರಿ.

◼ ಸಭೆಗಳು ತಮ್ಮ ಮುಖ್ಯ ಭಾಷೆಯಲ್ಲಿ ಸಾಹಿತ್ಯಕ್ಕಾಗಿ ವಿನಂತಿಯನ್ನು ಮಾಡುವಾಗ, ಅದರ ಪ್ರಮಾಣವನ್ನು ಲಿಟ್‌ರೇಚರ್‌ ರಿಕ್ವೆಸ್ಟ್‌ ಫಾರ್ಮ್‌ (S-14)ನ ಮೇಲೆ “Primary Lang.”(ಮುಖ್ಯ ಭಾಷೆ)ಗಾಗಿ ಒದಗಿಸಲಾಗಿರುವ ಅಂಕಣದಲ್ಲಿ ನಮೂದಿಸತಕ್ಕದ್ದು ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಬೇಕಾಗಿರುವ ಸಾಹಿತ್ಯದ ಪ್ರಮಾಣವನ್ನು ಇಂಗ್ಲಿಷ್‌ ಭಾಷೆಗಾಗಿರುವ ಅಂಕಣದಲ್ಲಿ ಭರ್ತಿಮಾಡತಕ್ಕದ್ದು. ಇನ್ನಿತರ ಎಲ್ಲ ಭಾಷೆಗಳಲ್ಲಿ ಪ್ರಕಾಶನಕ್ಕಾಗಿರುವ ವಿನಂತಿಗಳನ್ನು ಆ ಫಾರ್ಮ್‌ನ 3ನೆಯ ಪುಟದಲ್ಲಿ ಪಟ್ಟಿಮಾಡಬೇಕು. ಒಂದು ಸಭೆಯ ಮುಖ್ಯ ಭಾಷೆಯು, ಒಂದು ಸಭೆಯು ಅದರ ಬಹುತೇಕ ಎಲ್ಲಾ ಕೂಟಗಳನ್ನು ಯಾವ ಭಾಷೆಯಲ್ಲಿ ನಡೆಸುತ್ತದೋ ಆ ಭಾಷೆಯಾಗಿದ್ದು, ಇದೇ ಆ ಸಭೆಯ ಪ್ರಮುಖ ಭಾಷೆಯಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿರಿ. ಮಾಸಿಕ ಷಿಪಿಂಗ್‌ ಅ್ಯಕ್ನಾಲೆಡ್‌ಜ್‌ಮೆಂಟ್‌ಗಳಲ್ಲಿ ಸಭಾ ಸಂಖ್ಯೆಯ ಪಕ್ಕವೇ ಮುಖ್ಯ ಭಾಷೆಯನ್ನು ತೋರಿಸಲಾಗಿದೆ.

◼ ಸರ್ಕಿಟ್‌ ಸಮ್ಮೇಳನಗಳು, ವಿಶೇಷ ಸಮ್ಮೇಳನ ದಿನಗಳು, ಜಿಲ್ಲಾ ಅಧಿವೇಶನಗಳಲ್ಲಿ ಚೆಕ್‌ಗಳ ಮೂಲಕ ಮಾಡಲ್ಪಡುವ ಕಾಣಿಕೆಗಳು, ಬ್ರಾಂಚ್‌ ಆಫೀಸಿಗೆ ಕಳುಹಿಸಲ್ಪಡುವ ಚೆಕ್‌ಗಳು, ಮತ್ತು ಲೋಕವ್ಯಾಪಕ ಕೆಲಸಕ್ಕಾಗಿರುವ ಸ್ಥಳಿಕ ರಾಜ್ಯ ಸಭಾಗೃಹದ ಕಾಣಿಕೆ ಪೆಟ್ಟಿಗೆಗಳಲ್ಲಿ ಹಾಕಲ್ಪಡುವ ಹಾಗೂ ಕಿಂಗ್‌ಡಮ್‌ ಹಾಲ್‌ ಫಂಡ್‌ಗಾಗಿ ನೀಡಲ್ಪಡುವ ಚೆಕ್‌ಗಳು, “The Watch Tower Society”ಗೆ ಸಂದಾಯಮಾಡಲ್ಪಡುವಂತೆ ಏರ್ಪಾಡನ್ನು ಮಾಡಬೇಕಾಗಿದೆ. ರೆಜಿಸ್ಟರ್ಡ್‌ ಅಂಚೆಗಾಗಿರುವ ಬ್ರಾಂಚ್‌ ಆಫೀಸಿನ ಫೈನ್ಯಾನ್‌ಷಲ್‌ ವಿಳಾಸವು, The Watch Tower Bible and Tract Society of India, c/o Post Master, Yelahanka P. O., Bangalore 560 064 KAR ಎಂದಾಗಿದೆ.

◼ ಪರೀಕ್ಷೆಗಳ ಕೆಳಗೆ ನಂಬಿಗಸ್ತರು​—⁠ಸೋವಿಯಟ್‌ ಯೂನಿಯನ್‌ನಲ್ಲಿ ಯೆಹೋವನ ಸಾಕ್ಷಿಗಳು (ಇಂಗ್ಲಿಷ್‌) ಎಂಬ ವಿಡಿಯೋ, ಫೆಬ್ರವರಿ ತಿಂಗಳ ಸೇವಾ ಕೂಟದಲ್ಲಿ ಪರಿಗಣಿಸಲ್ಪಡುವುದು. ತಮ್ಮ ಲೈಬ್ರರಿಗಾಗಿ ಈ ವಿಡಿಯೋದ ಒಂದು ಪ್ರತಿಯನ್ನು ಪಡೆದುಕೊಳ್ಳಲು ಬಯಸುವ ಸಭೆಗಳು, ಸಾಧ್ಯವಾದಷ್ಟು ಬೇಗನೆ ಲಿಟ್‌ರೇಚರ್‌ ರಿಕ್ವೆಸ್ಟ್‌ ಫಾರ್ಮ್‌ (S-14) ಅನ್ನು ಉಪಯೋಗಿಸಿ ಇದಕ್ಕಾಗಿ ವಿನಂತಿಸಿಕೊಳ್ಳತಕ್ಕದ್ದು.

◼ ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ 2001ರ ಮಿತಪ್ರಮಾಣದ ಪ್ರತಿಗಳು ಇಂಗ್ಲಿಷ್‌ ಭಾಷೆಯಲ್ಲಿ ಲಭ್ಯವಿವೆ. ಪ್ರತಿಯೊಂದು ಸಭೆಯು ಅದರ ಸಭಾ ಲೈಬ್ರರಿಗಾಗಿ ಒಂದು ಪ್ರತಿಯನ್ನು ಮಾತ್ರ ವಿನಂತಿಸಿಕೊಳ್ಳಸಾಧ್ಯವಿದೆ ಮತ್ತು ಇದನ್ನು ಲಿಟ್‌ರೇಚರ್‌ ರಿಕ್ವೆಸ್ಟ್‌ ಫಾರ್ಮ್‌ನ ಮೇಲೆ “Cong. Use” ಎಂಬ ಅಂಕಣದ ಕೆಳಗೆ ಸ್ಪಷ್ಟವಾಗಿ ನಮೂದಿಸಬೇಕು.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ 2001 —ಇಂಗ್ಲಿಷ್‌

ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (ಚಿಕ್ಕ ಸೈಸ್‌) —ಇಂಗ್ಲಿಷ್‌

ಯೆಶಾಯನ ಪ್ರವಾದನೆ​—⁠ಸಕಲ ಮಾನವಕುಲಕ್ಕೆ ಬೆಳಕು II —ಪಂಜಾಬಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ