ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/03 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2003 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಸೆಪ್ಟೆಂಬರ್‌ 8ರಿಂದ ಆರಂಭವಾಗುವ ವಾರ
  • ಸೆಪ್ಟೆಂಬರ್‌ 15ರಿಂದ ಆರಂಭವಾಗುವ ವಾರ
  • ಸೆಪ್ಟೆಂಬರ್‌ 22ರಿಂದ ಆರಂಭವಾಗುವ ವಾರ
  • ಸೆಪ್ಟೆಂಬರ್‌ 29ರಿಂದ ಆರಂಭವಾಗುವ ವಾರ
  • ಅಕ್ಟೋಬರ್‌ 6ರಿಂದ ಆರಂಭವಾಗುವ ವಾರ
2003 ನಮ್ಮ ರಾಜ್ಯದ ಸೇವೆ
km 9/03 ಪು. 2

ಸೇವಾ ಕೂಟದ ಶೆಡ್ಯೂಲ್‌

ಸೆಪ್ಟೆಂಬರ್‌ 8ರಿಂದ ಆರಂಭವಾಗುವ ವಾರ

ಗೀತೆ 21 (191)

10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಕಳೆದ ಸೇವಾ ವರ್ಷದ ಸರ್ಕಿಟ್‌ ಸಮ್ಮೇಳನದ ಸಮಯದಲ್ಲಿ ತಾವು ಬರೆದುಕೊಂಡ ಟಿಪ್ಪಣಿಗಳನ್ನು ಮುಂದಿನ ವಾರದ ಸೇವಾ ಕೂಟಕ್ಕಾಗಿ ತಯಾರಿಸಿಕೊಂಡು ಬರುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ. ಪುಟ 8ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜುಲೈ-ಸೆಪ್ಟೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು), ಮತ್ತು ಸೆಪ್ಟೆಂಬರ್‌ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದರ ಕುರಿತು ಎರಡು ಪ್ರತ್ಯೇಕವಾದ ನೈಜ ಪ್ರತ್ಯಕ್ಷಾಭಿನಯಗಳಿರಲಿ. ಒಂದು ನಿರೂಪಣೆಯಲ್ಲಿ, ಒಬ್ಬ ವಿದ್ಯಾರ್ಥಿ ಅಥವಾ ಒಬ್ಬ ಹೆತ್ತವರು ಶಿಕ್ಷಕರೊಬ್ಬರಿಗೆ ಸಾಕ್ಷಿಕೊಡುತ್ತಿರುವುದನ್ನು ತೋರಿಸಿರಿ.

10 ನಿ: ಬ್ರಾಂಚ್‌ ಪತ್ರ. ಒಬ್ಬ ದೀರ್ಘಕಾಲಿಕ ಪ್ರಚಾರಕ (ಹಿರಿಯನಾಗಿದ್ದರೆ ಒಳ್ಳೇದು) ಮತ್ತು ಒಬ್ಬ ಯುವ ಪ್ರಚಾರಕನ ಮಧ್ಯೆಯ ಚರ್ಚೆ. ನಮ್ಮ ರಾಜ್ಯದ ಸೇವೆಯಲ್ಲಿ ಬ್ರಾಂಚ್‌ ಆಫೀಸ್‌ನಿಂದ ಕಳುಹಿಸಲ್ಪಟ್ಟ ಪತ್ರವನ್ನು ನೋಡಿದ್ದಾರೋ ಎಂದು ಯುವ ಪ್ರಚಾರಕನು ಅನುಭವಸ್ಥ ಪ್ರಚಾರಕನಿಗೆ ಕೇಳುತ್ತಾನೆ. 1960ಗಳು ಮತ್ತು 1970ಗಳಲ್ಲಿ ಬ್ರಾಂಚ್‌ ಪತ್ರವು ಸಾಮಾನ್ಯವಾಗಿ ನಮ್ಮ ರಾಜ್ಯದ ಸೇವೆಯಲ್ಲಿ ಬರುತ್ತಿತ್ತು ಎಂದು ಅನುಭವಸ್ಥ ಪ್ರಚಾರಕರು ಹೇಳುತ್ತಾರೆ. ನಂತರ ಅವರು ಮೊದಲನೆಯ ಪುಟದಲ್ಲಿರುವ ಪತ್ರವನ್ನು ಚರ್ಚಿಸುತ್ತಾ ಮುಖ್ಯಾಂಶಗಳನ್ನು ಎತ್ತಿತೋರಿಸುತ್ತಾರೆ.

25 ನಿ: “ಯುವ ಜನರೇ​—⁠ಭವಿಷ್ಯತ್ತಿಗಾಗಿ ಒಂದು ಒಳ್ಳೇ ಅಸ್ತಿವಾರವನ್ನು ಕಟ್ಟಿರಿ.”a ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ, ಒಬ್ಬ ಹಿರಿಯನಿಂದ ನಿರ್ವಹಿಸಲ್ಪಡತಕ್ಕದ್ದು. 5ನೇ ಪ್ಯಾರಗ್ರಾಫನ್ನು ಚರ್ಚಿಸುತ್ತಿರುವಾಗ, ಪೂರ್ಣ ಸಮಯದ ಸೇವೆಯ ಆನಂದಗಳು ಮತ್ತು ಆಶೀರ್ವಾದಗಳನ್ನು ಎತ್ತಿತೋರಿಸಿರಿ.

ಗೀತೆ 27 (221) ಮತ್ತು ಸಮಾಪ್ತಿಯ ಪ್ರಾರ್ಥನೆ.

ಸೆಪ್ಟೆಂಬರ್‌ 15ರಿಂದ ಆರಂಭವಾಗುವ ವಾರ

ಗೀತೆ 11 (85)

10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ.

10 ನಿ: “ದೇವರನ್ನು ಆರಾಧಿಸಿರಿ ಪುಸ್ತಕವನ್ನು ಅಧ್ಯಯನ ಮಾಡುವುದು.” ಒಬ್ಬ ಪುಸ್ತಕ ಅಧ್ಯಯನ ಮೇಲ್ವಿಚಾರಕನಿಂದ ಭಾಷಣ. ಅಧ್ಯಯನ ಶೆಡ್ಯೂಲ್‌ಗೆ ಗಮನವನ್ನು ಸೆಳೆಯಿರಿ. ನಾಲ್ಕನೇ ಪ್ಯಾರಗ್ರಾಫನ್ನು ಚರ್ಚಿಸುತ್ತಿರುವಾಗ, ಶುಶ್ರೂಷಾ ಶಾಲೆ ಪುಸ್ತಕದ ಪುಟ 28, ಪ್ಯಾರಗ್ರಾಫ್‌ 1, ಮತ್ತು ಪುಟ 70ರಲ್ಲಿರುವ ವಿಷಯದ ಕುರಿತ ಹೇಳಿಕೆಗಳನ್ನು ಸೇರಿಸಿಕೊಳ್ಳಿ.

25 ನಿ: “ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡಿರಿ.” (ಕೀರ್ತ. 37:3) ಕೆಳಗೆ ಕೊಡಲ್ಪಟ್ಟಿರುವ ಪ್ರಶ್ನೆಗಳ ಮೇಲಾಧಾರಿತವಾದ, ಸಭಿಕರೊಂದಿಗಿನ ಚರ್ಚೆ. ಅವು ಕಳೆದ ಸೇವಾ ವರ್ಷದ ಸರ್ಕಿಟ್‌ ಸಮ್ಮೇಳನ ಕಾರ್ಯಕ್ರಮದ ಮುಖ್ಯಾಂಶಗಳನ್ನು ಎತ್ತಿತೋರಿಸುತ್ತವೆ. ಸಮ್ಮೇಳನದ ಮುಖ್ಯಾಂಶಗಳನ್ನು ವ್ಯಕ್ತಿಪರವಾಗಿ ಅಥವಾ ಕುಟುಂಬಗಳಾಗಿ ಹೇಗೆ ಅನ್ವಯಿಸಿಕೊಳ್ಳಲು ಶಕ್ತರಾದರು ಎಂಬುದನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ. ಕಾರ್ಯಕ್ರಮದ ಈ ಭಾಗಗಳ ಕುರಿತು ಮಾತಾಡಿರಿ: (1) “ಯೆಹೋವನಲ್ಲಿ ಭರವಸೆಯನ್ನು ವ್ಯಕ್ತಪಡಿಸುವುದು.” ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯೆಹೋವನಲ್ಲಿ ಭರವಸೆಯನ್ನು ವ್ಯಕ್ತಪಡಿಸುವುದು ಏಕೆ ಪ್ರಾಮುಖ್ಯವಾಗಿದೆ? (it-2 ಪು. 521) ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ ಹೇಗೆ ಸಹಾಯಕಾರಿಯಾಗಿರಬಲ್ಲದು? (2) “ಜೀವನದ ವ್ಯರ್ಥತೆಗಳ ವಿರುದ್ಧ ಎಚ್ಚರವಾಗಿರ್ರಿ.” (ಪ್ರಸಂ. 2:4-8, 11) ನಾವು ಯಾವ ವ್ಯರ್ಥ ಕೆಲಸಗಳ ವಿರುದ್ಧ ಎಚ್ಚರವಾಗಿರಬೇಕು, ಮತ್ತು ನಾವಿದನ್ನು ಹೇಗೆ ಮಾಡಸಾಧ್ಯವಿದೆ? (3) “ಕೆಟ್ಟದ್ದರಿಂದ ದೂರವಿರಿ, ಒಳ್ಳೆಯದನ್ನು ಮಾಡುವವರಾಗಿರ್ರಿ.” ಯೆಹೋವನ ಮಟ್ಟಗಳಿಗೆ ಅಂಟಿಕೊಂಡಿರುವುದು ಏಕೆ ಪ್ರಾಮುಖ್ಯವಾಗಿದೆ? (ಯೆಶಾ. 5:20) ನಾವು ಯಾವ ಒಳ್ಳೆಯ ಕೆಲಸಗಳಲ್ಲಿ ನಿರತರಾಗಿರಬೇಕು? (4) “ಯೆಹೋವನಲ್ಲಿನ ನಮ್ಮ ಭರವಸವನ್ನು ಕಾಪಾಡಿಕೊಳ್ಳುವುದು.” ಪರೀಕ್ಷೆಗಳು ಮತ್ತು ಶೋಧನೆಗಳು ಎದುರಾಗುವಾಗ ನಾವು ದೃಢವಾಗಿ ನಿಲ್ಲುವಂತೆ ಯಾವುದು ಸಹಾಯಮಾಡುವುದು? ಕೆಲವು ವಿಷಯಗಳನ್ನು ಯೆಹೋವನ ಕೈಯಲ್ಲಿ ಒಪ್ಪಿಸಿಬಿಡುವುದು ಏಕೆ ಅಗತ್ಯವಿರಬಹುದು? (5) “ನೀವು ದೇವರ ರಾಜ್ಯಕ್ಕೆ ಯೋಗ್ಯರೆಂದು ಎಣಿಸಲ್ಪಡುವಿರೋ?” (ಕೊಲೊ. 1:10) ಯೆಹೋವನ ದೃಷ್ಟಿಯಲ್ಲಿ ಯೋಗ್ಯರಾಗಿ ನಡೆಯುತ್ತಾ ಮುಂದುವರಿಯಲು ಯಾವ ಬೈಬಲ್‌ ಮಾದರಿಗಳು ನಮ್ಮನ್ನು ಹುರಿದುಂಬಿಸುತ್ತವೆ? (6) “ಯೆಹೋವನ ವಾಗ್ದಾನಗಳಲ್ಲಿ ಭರವಸವಿಡಿರಿ.” ಹೀಗೆ ಮಾಡುವುದು ನಮ್ಮ ಜೀವನಗಳ ಮೇಲೆ ಹೇಗೆ ಪ್ರಭಾವಬೀರುವುದು?

ಗೀತೆ 26 (212) ಮತ್ತು ಸಮಾಪ್ತಿಯ ಪ್ರಾರ್ಥನೆ.

ಸೆಪ್ಟೆಂಬರ್‌ 22ರಿಂದ ಆರಂಭವಾಗುವ ವಾರ

ಗೀತೆ 17 (187)

10 ನಿ: ಸ್ಥಳಿಕ ಪ್ರಕಟನೆಗಳು. ಪುಟ 8ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜುಲೈ-ಸೆಪ್ಟೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು), ಮತ್ತು ಅಕ್ಟೋಬರ್‌ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದರ ಕುರಿತು ಎರಡು ಪ್ರತ್ಯೇಕವಾದ ಪ್ರತ್ಯಕ್ಷಾಭಿನಯಗಳಿರಲಿ. ಒಬ್ಬ ಸಭಾ ಹಿರಿಯನು ಮತ್ತು ಒಬ್ಬ ನಿರ್ಬಲ ಪ್ರಚಾರಕನು ಟೆಲಿಫೋನ್‌ ಸಾಕ್ಷಿಕಾರ್ಯ ಮಾಡುತ್ತಿರುವುದನ್ನು ತೋರಿಸಿರಿ.

15 ನಿ: ಕಳೆದ ವರ್ಷ ನಾವು ಏನನ್ನು ಸಾಧಿಸಿದೆವು? ಸೇವಾ ಮೇಲ್ವಿಚಾರಕನು ಸಭೆಯ 2003ನೇ ಸೇವಾ ವರ್ಷದ ವರದಿಯ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸುವನು. ಸಾಧಿಸಲ್ಪಟ್ಟಿರುವ ಉತ್ತಮ ಕೆಲಸಗಳಿಗಾಗಿ ಸಭೆಯನ್ನು ಪ್ರಶಂಸಿಸಿರಿ. ಸರ್ಕಿಟ್‌ ಮೇಲ್ವಿಚಾರಕನ ಕಳೆದ ವರದಿಯಿಂದ ಸೂಕ್ತವಾದ ಅಂಶಗಳನ್ನು ಸೇರಿಸಿಕೊಳ್ಳಿ. ಮುಂದಿನ ವರ್ಷ ಎಟುಕಿಸಿಕೊಳ್ಳಲು ಸಾಧ್ಯವಿರುವ ಒಂದು ಅಥವಾ ಎರಡು ಗುರಿಗಳ ಕುರಿತು ತಿಳಿಸಿರಿ.

20 ನಿ: ಎಲ್ಲಾ ಧರ್ಮಗಳು ದೇವರಿಗೆ ಸ್ವೀಕಾರಯೋಗ್ಯವಾಗಿವೆಯೋ? ತರ್ಕಿಸು ಪುಸ್ತಕದ ಮೇಲಾಧಾರಿತವಾದ ಸಭಿಕರೊಂದಿಗಿನ ಚರ್ಚೆ. ಈ ವಿಚಾರದ ಮೇಲೆ ಒಬ್ಬರೊಂದಿಗೆ ಹೇಗೆ ತರ್ಕಿಸಬಹುದು ಎಂಬುದನ್ನು ಚರ್ಚಿಸಿರಿ. (rs ಪು. 322-3) ಸತ್ಯ ಧರ್ಮವನ್ನು ಗುರುತಿಸಿಕೊಳ್ಳಲು ಸಾಧ್ಯಗೊಳಿಸುವ ಕೆಲವು ವಿಧಾನಗಳನ್ನು ಎತ್ತಿತೋರಿಸಿರಿ. (rs ಪು. 328-30) ನಮ್ಮ ಶುಶ್ರೂಷೆಯು, ದೇವರಿಗೆ ಸ್ವೀಕಾರಯೋಗ್ಯವಾಗಿರುವ ರೀತಿಯ ಆರಾಧನೆಯನ್ನು ಆರಿಸಿಕೊಳ್ಳುವಂತೆ ಇತರರಿಗೆ ಸಹಾಯಮಾಡುತ್ತದೆ.​—⁠ಕೊಲೊ. 1:​9, 10.

ಗೀತೆ 4 (43) ಮತ್ತು ಸಮಾಪ್ತಿಯ ಪ್ರಾರ್ಥನೆ.

ಸೆಪ್ಟೆಂಬರ್‌ 29ರಿಂದ ಆರಂಭವಾಗುವ ವಾರ

ಗೀತೆ 20 (93)

10 ನಿ: ಸ್ಥಳಿಕ ಪ್ರಕಟನೆಗಳು. ಸೆಪ್ಟೆಂಬರ್‌ ತಿಂಗಳಿಗಾಗಿರುವ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ. ಅಕ್ಟೋಬರ್‌ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯ ಕುರಿತು ತಿಳಿಸಿರಿ. ಅಪೇಕ್ಷಿಸು ಬ್ರೋಷರನ್ನು ಉಪಯೋಗಿಸಿ ಹೇಗೆ ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸಬಹುದು ಎಂಬುದನ್ನು ತೋರಿಸುವ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವಿರಲಿ.

35 ನಿ: “ನೀವು ನಿಮ್ಮನ್ನೇ ನೀಡಿಕೊಳ್ಳಲು ಸಾಧ್ಯವಿದೆಯೋ?” ಪ್ರೋತ್ಸಾಹದಾಯಕ ಭಾಷಣ; ಮತ್ತು ಪ್ಯಾರಗ್ರಾಫ್‌ಗಳು 13 ಹಾಗೂ 18-24ಗಾಗಿ ನೀವು ತಯಾರಿಸಿರುವ ಪ್ರಶ್ನೆಗಳಿಗೆ ಸಭಿಕರಿಂದ ಹೇಳಿಕೆಗಳು ನೀಡಲ್ಪಡಬೇಕು. ಬೆತೆಲ್‌ ಸೇವೆಯನ್ನು ಒಂದು ಜೀವನವೃತ್ತಿಯಾಗಿ ಪರಿಗಣಿಸಲು ಮಕ್ಕಳಿಗೆ ಸಹಾಯಮಾಡುವಂತೆ ಹೆತ್ತವರಿಗೆ ಪ್ರೋತ್ಸಾಹಿಸಿರಿ. ಈ ಪುರವಣಿಯನ್ನು ಕುಟುಂಬಗಳು ತಮ್ಮ ಕುಟುಂಬ ಅಧ್ಯಯನದ ಸಮಯದಲ್ಲಿ ಅಧ್ಯಯನಮಾಡುವಂತೆ ಶಿಫಾರಸ್ಸು ಮಾಡಿರಿ.

ಗೀತೆ 6 (45) ಮತ್ತು ಸಮಾಪ್ತಿಯ ಪ್ರಾರ್ಥನೆ.

ಅಕ್ಟೋಬರ್‌ 6ರಿಂದ ಆರಂಭವಾಗುವ ವಾರ

ಗೀತೆ 21 (191)

10 ನಿ: ಸ್ಥಳಿಕ ಪ್ರಕಟನೆಗಳು. ಈ ತಿಂಗಳು ನಾವು ಬೈಬಲ್‌ ಅಧ್ಯಯನಗಳನ್ನು ಆರಂಭಿಸುವುದರ ಮೇಲೆ ಒಂದು ವಿಶೇಷ ಪ್ರಯತ್ನವನ್ನು ಮಾಡುತ್ತಿದ್ದೇವೆ. ಮೇ 2002 ನಮ್ಮ ರಾಜ್ಯದ ಸೇವೆಯ ಪುಟ 1, ಪ್ಯಾರಗ್ರಾಫ್‌ 1ನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿರಿ.

15 ನಿ: “ಪ್ರಮುಖ ವಿಷಯಗಳಿಗೆ ಪ್ರಥಮ ಸ್ಥಾನಕೊಡಲು ನಿಶ್ಚಯಿಸಿಕೊಳ್ಳಿರಿ!” 1998, ಸೆಪ್ಟೆಂಬರ್‌ 1ರ ಕಾವಲಿನಬುರುಜುವಿನ ಪುಟ 19-21ರಲ್ಲಿರುವ ಲೇಖನದ ಮೇಲಾಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಮುಂದಿನ ಕೆಲವು ತಿಂಗಳುಗಳಿಗಾಗಿ ಯೋಜಿಸಲ್ಪಟ್ಟಿರುವ ದೇವಪ್ರಭುತ್ವಾತ್ಮಕ ಘಟನೆಗಳ ತಾರೀಖುಗಳನ್ನು ತಿಳಿಸಿರಿ, ಮತ್ತು ಈ ತಾರೀಖುಗಳನ್ನು ತಮ್ಮ ಕ್ಯಾಲೆಂಡರ್‌ಗಳಲ್ಲಿ ಗುರುತಿಸಿಡುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ. ಆತ್ಮಿಕ ಒದಗಿಸುವಿಕೆಗಳನ್ನು ತಪ್ಪಿಸಿಕೊಳ್ಳದೆ ಇರಲಿಕ್ಕಾಗಿ ಅವರೇನು ಮಾಡುತ್ತಾರೆ ಎಂಬುದನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.

20 ನಿ: “ನಮ್ರತೆಯನ್ನು ಧರಿಸಿಕೊಳ್ಳಿರಿ.”b ಶಾಸ್ತ್ರವಚನಗಳು ಹೇಗೆ ಅನ್ವಯಿಸುತ್ತವೆ ಎಂಬುದರ ಕುರಿತು ಸಭಿಕರಿಂದ ಹೇಳಿಕೆಗಳನ್ನು ಬರಮಾಡಿರಿ.

ಗೀತೆ 28 (224) ಮತ್ತು ಸಮಾಪ್ತಿಯ ಪ್ರಾರ್ಥನೆ.

[ಅಧ್ಯಯನ ಪ್ರಶ್ನೆಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ