ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕಕ್ಕಾಗಿ ಸೂಚಿತ ನಿರೂಪಣೆಗಳು
◼ ಬೈಬಲನ್ನು ಕೈಯಲ್ಲಿ ಹಿಡಿದುಕೊಂಡು, ಹೀಗೆ ಹೇಳಿರಿ: “ದೇವರಲ್ಲಿ ನಂಬಿಕೆಯಿಡುವ ಅನೇಕ ಜನರು ಆತನಿಗೆ ಸಮೀಪವಾಗಿರಲು ಬಯಸುತ್ತಾರೆ. ಆದರೆ ದೇವರು ನಮ್ಮನ್ನು ತನ್ನ ಸಮೀಪಕ್ಕೆ ಬರುವಂತೆ ಆಮಂತ್ರಿಸುತ್ತಾನೆಂಬುದು ನಿಮಗೆ ತಿಳಿದಿತ್ತೋ? [ಯಾಕೋಬ 4:8ನ್ನು ಓದಿರಿ.] ದೇವರ ಸಮೀಪಕ್ಕೆ ಬರಲಿಕ್ಕಾಗಿ ತಮ್ಮ ಸ್ವಂತ ಬೈಬಲನ್ನು ಉಪಯೋಗಿಸಲು ಜನರಿಗೆ ಸಹಾಯಮಾಡುವಂಥ ರೀತಿಯಲ್ಲಿ ಈ ಪ್ರಕಾಶನವು ವಿನ್ಯಾಸಿಸಲ್ಪಟ್ಟಿದೆ.” 16ನೇ ಪುಟದಲ್ಲಿರುವ 1ನೇ ಪ್ಯಾರಗ್ರಾಫನ್ನು ಓದಿರಿ.
◼ ಬೈಬಲನ್ನು ಕೈಯಲ್ಲಿ ಹಿಡಿದುಕೊಂಡು, ಹೀಗೆ ಹೇಳಿರಿ: “ಇಂದು ಅನ್ಯಾಯವು ತುಂಬಿತುಳುಕುತ್ತಿದೆ. ಅದು ಇಲ್ಲಿ ವಿವರಿಸಲ್ಪಟ್ಟಿರುವಂತೆಯೇ ಇದೆ. [ಪ್ರಸಂಗಿ 8:9ಎ ಭಾಗವನ್ನು ಓದಿರಿ.] ದೇವರು ನಮ್ಮ ಕುರಿತು ಕಾಳಜಿವಹಿಸುತ್ತಾನೋ ಎಂದು ಅನೇಕರು ಯೋಚಿಸುತ್ತಾರೆ. [119ನೇ ಪುಟದಲ್ಲಿರುವ 4ನೇ ಪ್ಯಾರಗ್ರಾಫಿನ ಮೊದಲ ಎರಡು ವಾಕ್ಯಗಳನ್ನು ಓದಿರಿ.] ದೇವರು ಸ್ವಲ್ಪ ಸಮಯದ ವರೆಗೆ ಅನೀತಿಯನ್ನು ಏಕೆ ಅನುಮತಿಸಿದ್ದಾನೆ ಎಂಬುದನ್ನು ಈ ಅಧ್ಯಾಯವು ವಿವರಿಸುತ್ತದೆ.”