ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/04 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2004 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜನವರಿ 12ರಿಂದ ಆರಂಭವಾಗುವ ವಾರ
  • ಜನವರಿ 19ರಿಂದ ಆರಂಭವಾಗುವ ವಾರ
  • ಜನವರಿ 26ರಿಂದ ಆರಂಭವಾಗುವ ವಾರ
  • ಫೆಬ್ರವರಿ 2ರಿಂದ ಆರಂಭವಾಗುವ ವಾರ
2004 ನಮ್ಮ ರಾಜ್ಯದ ಸೇವೆ
km 1/04 ಪು. 2

ಸೇವಾ ಕೂಟದ ಶೆಡ್ಯೂಲ್‌

ಜನವರಿ 12ರಿಂದ ಆರಂಭವಾಗುವ ವಾರ

ಗೀತೆ 224

10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜನವರಿ-ಮಾರ್ಚ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು), ಮತ್ತು ಜನವರಿ 15ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲೂ ಒಂದು ಪತ್ರಿಕೆಯ ಕುರಿತು ಮಾತ್ರ ಮಾತಾಡಲ್ಪಡುವುದಾದರೂ ಎರಡೂ ಪತ್ರಿಕೆಗಳನ್ನು ಒಟ್ಟಾಗಿ ನೀಡಬೇಕು. ಪ್ರತಿಯೊಂದು ಪ್ರತ್ಯಕ್ಷಾಭಿನಯದ ನಂತರ, ಆ ಪ್ರಸ್ತುತಪಡಿಸುವಿಕೆಯ ಕೆಲವು ಪ್ರಾಯೋಗಿಕ ಅಂಶಗಳನ್ನು ಎತ್ತಿತೋರಿಸಿರಿ.

15 ನಿ: ಸ್ಥಳಿಕ ಅಗತ್ಯಗಳು.

20 ನಿ: ನಾವು ಅತ್ಯಾನಂದದಿಂದ ಪಡೆದುಕೊಂಡ ಹೊಸ ಪ್ರಕಾಶನಗಳು! ಸಭಿಕರೊಂದಿಗಿನ ಚರ್ಚೆ. “ದೇವರನ್ನು ಘನಪಡಿಸಿರಿ” ಜಿಲ್ಲಾ ಅಧಿವೇಶನದಲ್ಲಿ ಎರಡು ಹೊಸ ಪ್ರಕಾಶನಗಳನ್ನು ಪಡೆದುಕೊಳ್ಳುವುದರಲ್ಲಿ ನಾವು ಸಂತೋಷಿಸಿದೆವು. ‘ಒಳ್ಳೆಯ ದೇಶವನ್ನು ನೋಡಿ’ ಬ್ರೋಷರ್‌ ನಮ್ಮ ಲೈಬ್ರರಿಯಲ್ಲಿರುವ ಬೇರೆಲ್ಲಾ ಪ್ರಕಾಶನಗಳಿಗಿಂತ ಅದ್ವಿತೀಯವಾಗಿದೆ. ಎದುರು-ಬದುರಾಗಿರುವ ಪ್ರತಿ ಎರಡು ಪುಟಗಳ ನೋಟವು ವಾಗ್ದತ್ತ ದೇಶದ ಭಿನ್ನವಾದ ಒಂದು ವೈಶಿಷ್ಟ್ಯದ ಒಳನೋಟವನ್ನು ಕೊಡುತ್ತದೆ. ವಿಭಿನ್ನವಾದ ಭೂಪಟಗಳಲ್ಲಿ ತೋರಿಬರುವ ಕೆಲವು ಅಂಶಗಳನ್ನು ಸೂಚಿಸಿರಿ. ಈ ಪ್ರಕಾಶನವು ಉಪಯೋಗಿಸಲ್ಪಡಬಹುದಾದ ಪ್ರಾಯೋಗಿಕ ವಿಧಗಳನ್ನು ತಿಳಿಸಿರಿ. ಮಹಾ ಬೋಧಕನಿಂದ ಕಲಿಯಿರಿ (ಇಂಗ್ಲಿಷ್‌) ಪುಸ್ತಕವು ನಮ್ಮ ಮಕ್ಕಳ ಆತ್ಮಿಕ ಹಿತಕ್ಷೇಮವನ್ನು ಪ್ರವರ್ಧಿಸುವುದು. ಹೆತ್ತವರು ಮತ್ತು ಎಳೆಯರು ಹೇಗೆ ಪ್ರಯೋಜನವನ್ನು ಹೊಂದಬಲ್ಲರು ಎಂಬುದನ್ನು ತೋರಿಸುತ್ತಾ, ಪುಸ್ತಕದಲ್ಲಿ ಆವರಿಸಲ್ಪಟ್ಟಿರುವ ಕೆಲವು ಸಮಯೋಚಿತ ವಿಷಯವಸ್ತುಗಳಿಗೆ ಸೂಚಿಸಿರಿ. ಈ ಹೊಸ ಪ್ರಕಾಶನಗಳನ್ನು ಸಭಿಕರು ಹೇಗೆ ಸದುಪಯೋಗಿಸುತ್ತಿದ್ದಾರೆ ಎಂಬುದರ ಕುರಿತು ಹೇಳಿಕೆ ನೀಡುವಂತೆ ಅವರನ್ನು ಆಮಂತ್ರಿಸಿರಿ.

ಗೀತೆ 186 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 19ರಿಂದ ಆರಂಭವಾಗುವ ವಾರ

ಗೀತೆ 95

5 ನಿ: ಸ್ಥಳಿಕ ಪ್ರಕಟನೆಗಳು.

40 ನಿ: “ಜಿಲ್ಲಾ ಮತ್ತು ಅಂತಾರಾಷ್ಟ್ರೀಯ ಅಧಿವೇಶನಗಳು ದೇವರನ್ನು ಘನಪಡಿಸುವಂತೆ ನಮ್ಮನ್ನು ಪ್ರೇರಿಸುತ್ತವೆ!” ಒಬ್ಬ ಹಿರಿಯನಿಂದ ನಿರ್ವಹಿಸಲ್ಪಡತಕ್ಕದ್ದು. ಒಂದು ನಿಮಿಷ ಅಥವಾ ಅದಕ್ಕಿಂತಲೂ ಕಡಿಮೆ ಅವಧಿಯ ಪೀಠಿಕೆಯ ನಂತರ, ಲೇಖನದಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ ಸಭಿಕರೊಂದಿಗೆ ಅಧಿವೇಶನ ಕಾರ್ಯಕ್ರಮದ ಚರ್ಚೆಯನ್ನು ನಡೆಸಿರಿ. ಎಲ್ಲಾ ಪ್ರಶ್ನೆಗಳನ್ನೂ ಪರಿಗಣಿಸಲು ಸಾಧ್ಯವಾಗುವಂತೆ, ಪ್ರಾಯಶಃ ಕೆಲವು ಪ್ರಶ್ನೆಗಳಿಗೆ ಕೇವಲ ಒಂದೇ ಒಂದು ಉತ್ತರವನ್ನು ಮಾತ್ರ ಅನುಮೋದಿಸುವ ಮೂಲಕ ಸಮಯವನ್ನು ಸರಿಯಾಗಿ ಪಾಲುಮಾಡಿರಿ. ಬದಿಗಿರಿಸಲ್ಪಟ್ಟಿರುವ ಸಮಯದಲ್ಲಿ ಎಲ್ಲಾ ಉದ್ಧೃತ ವಚನಗಳನ್ನು ಓದಲು ಸಾಧ್ಯವಿಲ್ಲದಿರಬಹುದು; ಸುಲಭವಾಗಿ ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ಇವನ್ನು ಕೊಡಲಾಗಿದೆ. ಹೇಳಿಕೆಗಳು, ಕಲಿತ ವಿಷಯಗಳನ್ನು ಅನ್ವಯಿಸುವುದರ ಪ್ರಯೋಜನಗಳ ಮೇಲೆ ಕೇಂದ್ರೀಕರಿಸಿರಬೇಕು.

ಗೀತೆ 73 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 26ರಿಂದ ಆರಂಭವಾಗುವ ವಾರ

ಗೀತೆ 158

12 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ. ಜನವರಿ ತಿಂಗಳಿಗಾಗಿ ತಮ್ಮ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜನವರಿ-ಮಾರ್ಚ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು), ಮತ್ತು ಫೆಬ್ರವರಿ 1ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲೂ ಒಂದು ಪತ್ರಿಕೆಯ ಕುರಿತು ಮಾತ್ರ ಮಾತಾಡಲ್ಪಡುವುದಾದರೂ ಎರಡೂ ಪತ್ರಿಕೆಗಳನ್ನು ಒಟ್ಟಾಗಿ ನೀಡಬೇಕು. ಈ ಪ್ರತ್ಯಕ್ಷಾಭಿನಯಗಳೊಂದರಲ್ಲಿ, ಒಬ್ಬ ನೆರೆಯವನಿಗೆ ನೀವು ಹೇಗೆ ಪತ್ರಿಕೆಗಳನ್ನು ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ: ನಿಮ್ಮ ಜೀವಿತದ ಪ್ರತಿದಿನವೂ ದೇವರ ವಾಕ್ಯವನ್ನು ಅನ್ವಯಿಸಿರಿ. ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು​—⁠2004ರ ಒಳ್ಳೆಯ ಉಪಯೋಗವನ್ನು ಮಾಡುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ. ಪುಟ 3-4ರಲ್ಲಿರುವ ಮುನ್ನುಡಿಯ ಹೇಳಿಕೆಗಳನ್ನು ಚರ್ಚಿಸಿರಿ. ಸಭಿಕರು ದಿನದ ವಚನವನ್ನು ಪರಿಗಣಿಸಲಿಕ್ಕಾಗಿ ಯಾವುದು ಅತ್ಯುತ್ತಮ ಸಮಯವಾಗಿದೆಯೆಂಬುದಾಗಿ ವೈಯಕ್ತಿಕವಾಗಿ ಕಂಡುಕೊಂಡಿದ್ದಾರೆಂದು ಅವರನ್ನು ಕೇಳಿರಿ. ಆ ದಿನದ ವಚನ ಮತ್ತು ಹೇಳಿಕೆಗಳನ್ನು ಸಭೆಯೊಂದಿಗೆ ಚರ್ಚಿಸಿರಿ. ಮಾಹಿತಿಯ ಪ್ರಾಯೋಗಿಕ ಅನ್ವಯವನ್ನು ಹೇಗೆ ಮಾಡಬಹುದು ಎಂಬುದರ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ. ದಿನದ ವಚನವನ್ನು ಪ್ರತಿದಿನ ಚರ್ಚಿಸುವಾಗ ವಿಷಯಭಾಗವನ್ನು ಹೇಗೆ ಅನ್ವಯಿಸಬಹುದು ಎಂಬುದನ್ನು ಪರಿಗಣಿಸಲಿಕ್ಕಾಗಿ ಒಂದೆರಡು ನಿಮಿಷಗಳನ್ನು ತೆಗೆದುಕೊಳ್ಳುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.

18 ನಿ: ಪ್ರಶ್ನಾ ಚೌಕ. ಹಿರಿಯನಿಂದ ಭಾಷಣ.

ಗೀತೆ 177 ಮತ್ತು ಸಮಾಪ್ತಿಯ ಪ್ರಾರ್ಥನೆ.

ಫೆಬ್ರವರಿ 2ರಿಂದ ಆರಂಭವಾಗುವ ವಾರ

ಗೀತೆ 204

10 ನಿ: ಸ್ಥಳಿಕ ಪ್ರಕಟನೆಗಳು. ಫೆಬ್ರವರಿ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯ ಕುರಿತು ತಿಳಿಸಿರಿ. ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದ ನೀಡುವಿಕೆಯ ನಿರೂಪಣೆಗಳನ್ನು ಪರಿಗಣಿಸಿರಿ.

20 ನಿ: “ನೀವು ಸಮಯವನ್ನು ಉಪಯೋಗಿಸುವ ರೀತಿಯ ಮೇಲೆ ಕಟ್ಟುನಿಟ್ಟಾದ ನಿಗಾವನ್ನಿಡಿರಿ.”a ಅನಗತ್ಯವಾದ ಚಟುವಟಿಕೆಗಳು ಸಭಿಕರ ಆತ್ಮಿಕ ಬೆನ್ನಟ್ಟುವಿಕೆಗಳನ್ನು ಅತಿಕ್ರಮಿಸದಂತೆ ಮಾಡಲು ಅವರು ಏನು ಮಾಡುತ್ತಾರೆಂಬುದರ ಕರಿತು ಹೇಳಿಕೆ ನೀಡುವಂತೆ ಅವರನ್ನು ಆಮಂತ್ರಿಸಿರಿ.

15 ನಿ: ಪೌಲನು ಕ್ರಿಸ್ತನನ್ನು ಅನುಕರಿಸಿದಂತೆ, ನೀವು ಪೌಲನನ್ನು ಅನುಕರಿಸಿರಿ. (1 ಕೊರಿಂ. 11:1) ಸಭಿಕರೊಂದಿಗಿನ ಚರ್ಚೆ. ಕ್ರಿಸ್ತನಂತೆ, ಪೌಲನು ಸಹ ‘ಕಂಡುಬಂದವರಿಗೆ’ ಸಾಕ್ಷಿಕೊಡಲು ಸಿಕ್ಕಿದ ಅವಕಾಶಗಳನ್ನು ಸದುಪಯೋಗಿಸಿದನು. (ಅ. ಕೃ. 17:17) ಹೀಗೆ ಮಾಡಲು ನಮ್ಮ ಟೆರಿಟೊರಿಯಲ್ಲಿ ಯಾವ ಅವಕಾಶಗಳಿವೆ? ನಾವು ಶಾಪಿಂಗ್‌ಗೆ ಹೋಗುವಾಗ, ಕೆಲಸದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ಇರುವಾಗ, ಇಲ್ಲವೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸುವಾಗ ಯಾರು ‘ಕಂಡುಬರುತ್ತಾರೆ’? ನಾವು ಮನೆಯಲ್ಲಿರುವಾಗ ಯಾರು ನಮ್ಮನ್ನು ಭೇಟಿಯಾಗಬಹುದು? ಪ್ರತಿನಿತ್ಯದ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಸಭಿಕರು ತಾವು ಭೇಟಿಮಾಡಿದ ಜನರಿಗೆ ಸಾಕ್ಷಿಕೊಟ್ಟ ಅನುಭವಗಳನ್ನು ತಿಳಿಸುವಂತೆ ಅವರನ್ನು ಕೇಳಿಕೊಳ್ಳಿ.

ಗೀತೆ 151 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿ]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ