ಪರಿಶುದ್ಧ, ಸ್ತುತ್ಯರ್ಹವಾದ ವೈಯಕ್ತಿಕ ತೋರಿಕೆ
1. ಜಿಲ್ಲಾ ಅಧಿವೇಶನಕ್ಕಾಗಿ ಸಿದ್ಧರಾಗುತ್ತಿರುವಾಗ, ನಾವು ನಮ್ಮ ತೋರಿಕೆಗೆ ಏಕೆ ಪರಿಗಣನೆಯನ್ನು ಕೊಡಬೇಕು?
1 “ಯೆಹೋವನ ಸಾಕ್ಷಿಗಳೇ ಅತ್ಯುತ್ತಮ ಜನರು! ನಿಮ್ಮ ಜನರು ದಯಾಭಾವದವರಾಗಿದ್ದಾರೆ ಮತ್ತು ಅಂದವಾಗಿ ಉಡುಪನ್ನು ಧರಿಸಿರುತ್ತಾರೆ, ಮತ್ತು ಗಾಢವಾದ ಮರ್ಯಾದೆಯನ್ನು ತೋರಿಸುತ್ತಾರೆ.” ಕಳೆದ ವರ್ಷದ ಒಂದು ಜಿಲ್ಲಾ ಅಧಿವೇಶನಕ್ಕೆ ಹಾಜರಾದ ಸಹೋದರ ಸಹೋದರಿಯರ ಬಗ್ಗೆ ಹೋಟೆಲ್ನ ಪ್ರತಿನಿಧಿಯೊಬ್ಬನು ಈ ರೀತಿ ಹೇಳಿದನು. ಮತ್ತೊಂದು ಅಧಿವೇಶನದಲ್ಲಿ, ಒಬ್ಬ ಹೋಟೆಲ್ ಕಾರ್ಮಿಕನು ಹೇಳಿಕೆ ನೀಡಿದ್ದು: “ನಿಮ್ಮ ಜನರು ದೇವರನ್ನು ಮೆಚ್ಚಿಸುವ ರೀತಿಯಲ್ಲಿ ಉಡುಪನ್ನು ಧರಿಸುತ್ತಾರೆಂಬುದು ವ್ಯಕ್ತ.” ಹೌದು, ಅಧಿವೇಶನದ ಪ್ರತಿನಿಧಿಗಳು ಇತರರಿಂದ ಗಮನಿಸಲ್ಪಡುತ್ತಾರೆ. ಆದುದರಿಂದ ನಾವು, “ಸುವಾರ್ತೆಗೆ ಯೋಗ್ಯ”ವಾದ ರೀತಿಯಲ್ಲಿ ಉಡುಪನ್ನು ಧರಿಸಲು ಬಯಸುತ್ತೇವೆ, ಮತ್ತು ಇದು ಅನೇಕವೇಳೆ ಹೊರಗಿನವರು ನಮ್ಮನ್ನು ಶ್ಲಾಘಿಸುವಂತೆ ನಡೆಸುತ್ತದೆ ಹಾಗೂ ನಾವು ದೇವರ ಶುಶ್ರೂಷಕರಾಗಿದ್ದೇವೆ ಎಂಬುದನ್ನು ತೋರಿಸಿಕೊಡುತ್ತದೆ. (ಫಿಲಿ. 1:27) ನಾವು ಜಿಲ್ಲಾ ಅಧಿವೇಶನಕ್ಕಾಗಿ ಸಿದ್ಧರಾಗುತ್ತಿರುವಾಗ, ನಮ್ಮ ತೋರಿಕೆಯ ಕುರಿತು ಮುಂಚಿತವಾಗಿಯೇ ಆಲೋಚಿಸುವುದು ಯೋಗ್ಯವಾಗಿರುವುದು.
2. ಒಬ್ಬನು ಪರಿಶುದ್ಧವಾದ ರೀತಿಯಲ್ಲಿ ಉಡುಪು ಮತ್ತು ಶೃಂಗಾರವನ್ನು ಹೊಂದಿರುವುದು ಏಕೆ ಒಂದು ಪಂಥಾಹ್ವಾನವಾಗಿದೆ?
2 “ಮೇಲಣಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು” ಎಂದು ಶಿಷ್ಯ ಯಾಕೋಬನು ಬರೆದನು. (ಯಾಕೋ. 3:17) ನಮ್ಮ ತೋರಿಕೆಯಲ್ಲಿ ಪರಿಶುದ್ಧತೆಯನ್ನು ತೋರಿಸುವುದು ಒಂದು ಪಂಥಾಹ್ವಾನವಾಗಿರಬಲ್ಲದು. ಸೈತಾನನ ಅನೈತಿಕ ಲೋಕವು ಮರ್ಯಾದೆಗೆಟ್ಟ, ಕಾಮಪ್ರಚೋದಕವಾದ, ಮತ್ತು ವಿಚಿತ್ರವಾದ ಸ್ಟೈಲ್ಗಳನ್ನು ತಮ್ಮದಾಗಿಸಿಕೊಳ್ಳುವಂತೆ ಜನರನ್ನು ಪ್ರಭಾವಿಸುತ್ತದೆ. (1 ಯೋಹಾ. 2:15-17) ಆದುದರಿಂದ, ಉಡುಪು ಮತ್ತು ಶೃಂಗಾರದ ವಿಷಯದಲ್ಲಿ ನಾವು ನಿರ್ಣಯಗಳನ್ನು ಮಾಡುವಾಗ, “ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ವಿಸರ್ಜಿಸಿ . . . ಇಹಲೋಕದಲ್ಲಿ ಸ್ವಸ್ಥಚಿತ್ತರಾಗಿ” ಬದುಕಬೇಕೆಂಬ ಬೈಬಲಿನ ಬುದ್ಧಿವಾದಕ್ಕೆ ಕಿವಿಗೊಡೋಣ. (ತೀತ 2:12) ನಾವು ನಮ್ಮ ತೋರಿಕೆಯ ಮೂಲಕ ಇತರರನ್ನು—ಅವರು ನಮ್ಮ ಸಹೋದರರಾಗಿರಲಿ, ಹೋಟೆಲ್ ಮತ್ತು ರೆಸ್ಟರಾಂಟ್ನ ಸಿಬ್ಬಂದಿಯಾಗಿರಲಿ, ಅಥವಾ ಇತರ ಪ್ರೇಕ್ಷಕರಾಗಿರಲಿ—ಎಂದಿಗೂ ಎಡವಿಸಬಾರದು.—1 ಕೊರಿಂ. 10:32, 33.
3. ನಮ್ಮ ವೈಯಕ್ತಿಕ ತೋರಿಕೆಯನ್ನು ಪರೀಕ್ಷಿಸುವಂತೆ ನಮಗೆ ಯಾವ ಪ್ರಶ್ನೆಗಳು ಸಹಾಯಮಾಡಬಲ್ಲವು?
3 ಮರ್ಯಾದೆಗೆ ತಕ್ಕ ಮಾನಸ್ಥ ಉಡುಪು: ಅಧಿವೇಶನಕ್ಕಾಗಿ ತಯಾರಿಯನ್ನು ಮಾಡುತ್ತಿರುವಾಗ, ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನನ್ನ ಉಡುಪು ಮಾನಸ್ಥರಿಗೆ ತಕ್ಕ ಉಡುಪಾಗಿದೆಯೋ, ಅಥವಾ ನನ್ನತ್ತ ಅನುಚಿತವಾದ ಗಮನವನ್ನು ಸೆಳೆಯುತ್ತದೋ? ಇತರರ ಭಾವನೆಗಳಿಗೆ ಅದು ಗೌರವವನ್ನು ತೋರಿಸುವಂಥದ್ದಾಗಿದೆಯೋ? ನನ್ನ ರವಿಕೆಗಳ ಕತ್ತು ತುಂಬ ಕೆಳಗಿದೆಯೋ ಅಥವಾ ತೀರ ಗಿಡ್ಡದಾಗಿದೆಯೋ? ನನ್ನ ಉಡುಪುಗಳು ಮೈಯನ್ನು ಪ್ರದರ್ಶಿಸುವಂಥದ್ದಾಗಿವೆಯೋ ಅಥವಾ ಟೈಟ್ ಆಗಿದೆಯೋ? ನನ್ನ ಉಡುಪು ಸ್ವಚ್ಛವಾಗಿದ್ದು ಚಿಗುಪ್ಸೆ ಹುಟ್ಟಿಸುವ ವಾಸನೆಗಳಿಲ್ಲದ್ದಾಗಿದೆಯೋ? ಹೋಟೆಲಿನಲ್ಲಿ ಉಚಿತವಾಗಿ ಸಿಗುವ ಬೆಳಗಿನ ಉಪಾಹಾರವನ್ನು ತಿನ್ನುತ್ತಿರುವಾಗ ಅಥವಾ ಕಾರ್ಯಕ್ರಮದ ನಂತರ ವಿಶ್ರಮಿಸುತ್ತಿರುವಾಗ, ನನ್ನ ತೋರಿಕೆಯು ಒಬ್ಬ ಶುಶ್ರೂಷಕನಿಗೆ ತಕ್ಕದ್ದಾಗಿರುವ ನೀಟಾದ, ಶುದ್ಧ ತೋರಿಕೆಯಾಗಿರುವುದೋ ಅಥವಾ ನನ್ನ ಬಟ್ಟೆಯು ಅಸ್ತವ್ಯಸ್ಥವೂ, ವಿಚಿತ್ರ ತೋರಿಕೆಯದ್ದೂ, ಅತಿ ಮಾಮೂಲಿಯದ್ದಾಗಿದ್ದು ಬ್ಯಾಡ್ಜ್ ಧರಿಸಿರುವ ಒಬ್ಬ ಅಧಿವೇಶನ ಪ್ರತಿನಿಧಿಗೆ ಅಯೋಗ್ಯವಾದದ್ದೂ ಆಗಿರುವುದೋ? ವಿಶ್ರಮಿಸುತ್ತಿರುವ ಸಮಯದಲ್ಲಿ ನಾನು ಧರಿಸಿರುವ ಉಡುಪಿನಿಂದಾಗಿ ಅನೌಪಚಾರಿಕವಾಗಿ ಸಾಕ್ಷಿಕೊಡಲು ನನಗೆ ಮುಜುಗರವಾಗುವುದೋ?’—ರೋಮಾ. 15:2, 3; 1 ತಿಮೊ. 2:9.
4. ಒಂದು ಪರಿಶುದ್ಧವಾದ ತೋರಿಕೆಯನ್ನು ಪ್ರಸ್ತುತಪಡಿಸುವಂತೆ ಇತರರು ನಮಗೆ ಹೇಗೆ ಸಹಾಯಮಾಡಬಲ್ಲರು?
4 ನಾವು ಪ್ರೌಢ ಕ್ರೈಸ್ತರ ಅವಲೋಕನಗಳಿಂದ ಪ್ರಯೋಜನವನ್ನು ಪಡೆದುಕೊಳ್ಳಬಲ್ಲೆವು. ತಮ್ಮ ಉಡುಪು ಬೇರೆಯವರಿಗೆ ಹೇಗೆ ಕಾಣಬಹುದು ಎಂಬುದನ್ನು ಹೆಂಡತಿಯರು ತಮ್ಮ ಗಂಡಂದಿರ ಬಳಿ ಕೇಳಬೇಕು. ಈ ವಿಷಯದಲ್ಲಿ ತಮ್ಮ ಹದಿವಯಸ್ಕ ಮಕ್ಕಳಿಗೆ ಕ್ರೈಸ್ತ ಹೆತ್ತವರು ಸಹಾಯವನ್ನು ನೀಡಬಲ್ಲರು. ಮಾತ್ರವಲ್ಲದೆ, ದೇವಭಕ್ತೆಯರಾದ ವೃದ್ಧಸ್ತ್ರೀಯರು “ಪ್ರಾಯದ ಸ್ತ್ರೀಯರಿಗೆ” ತಮ್ಮ ತೋರಿಕೆಯಲ್ಲಿ ‘ದಮೆಯುಳ್ಳವರೂ ಪತಿವ್ರತೆಯರೂ [ಅಥವಾ, ಪರಿಶುದ್ಧರೂ] ಆಗಿರುವಂತೆ ಬುದ್ಧಿಕಲಿಸಬಹುದು.’ ಈ “ಮೂಲಕ ದೇವರ ವಾಕ್ಯಕ್ಕೆ ದೂಷಣೆಯಾಗದಂತೆ” ನೋಡಿಕೊಳ್ಳಬಹುದು. (ತೀತ 2:2ಬಿ-5) ಮರ್ಯಾದೆಗೆ ತಕ್ಕ, ಮಾನಸ್ಥ ಉಡುಪನ್ನು ತೋರಿಸುವ ಸಹಾಯಕಾರಿ ಚಿತ್ರಗಳನ್ನು ನಮ್ಮ ಪ್ರಕಾಶನಗಳು ಒದಗಿಸುತ್ತವೆ.
5. ಅಧಿವೇಶನದ ಸಮಯದಲ್ಲಿ ನಾವೆಲ್ಲರೂ ಹೇಗೆ ಯೆಹೋವನಿಗೆ ಸ್ತುತಿಯನ್ನು ತರಬಲ್ಲೆವು?
5 ಯೆಹೋವನಿಗೆ ಸ್ತುತಿಯನ್ನು ತನ್ನಿರಿ: ಜಿಲ್ಲಾ ಅಧಿವೇಶನಗಳು, ಕೇವಲ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಮಾತ್ರವಲ್ಲ, ನಮ್ಮೆಲ್ಲರಿಗೂ ಯೆಹೋವನನ್ನು ಸ್ತುತಿಸಲು ಒಂದು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತವೆ. ನಮ್ಮ ಕ್ರೈಸ್ತ ನಡತೆ ಮತ್ತು ಮಾತು ಆತನನ್ನು ಘನಪಡಿಸುವುದೆಂಬುದು ನಿಜ. ಆದರೆ ನಮ್ಮ ಕುರಿತು ಪ್ರೇಕ್ಷಕರು ಗಮನಿಸುವ ಮೊದಲ ವಿಷಯವು ನಮ್ಮ ಉಡುಪು ಮತ್ತು ಶೃಂಗಾರವಾಗಿದೆ. ನಾವೆಲ್ಲರೂ ನಮ್ಮ ಪರಿಶುದ್ಧ, ಸ್ತುತ್ಯರ್ಹವಾದ ವೈಯಕ್ತಿಕ ತೋರಿಕೆಯ ಮೂಲಕ ಯೆಹೋವನಿಗೆ ಸ್ತುತಿಯನ್ನು ತರೋಣ.—ಕೀರ್ತ. 148:12, 13.
[ಪುಟ 6ರಲ್ಲಿರುವಚೌಕ]
ಸ್ತುತ್ಯರ್ಹವಾದ ತೋರಿಕೆಗಾಗಿರುವ ಸಹಾಯಕಗಳು
◼ ದೇವರ ವಾಕ್ಯ
◼ ಸ್ವ-ಪರಿಶೋಧನೆ
◼ ಇತರರ ಅವಲೋಕನಗಳು
◼ ಕ್ರೈಸ್ತ ಪ್ರಕಾಶನಗಳು