ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2004ರ ಜೂನ್ 28ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. 2004ರ ಮೇ 3ರಿಂದ ಜೂನ್ 28ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ನಾವು ವೇದಿಕೆಯಿಂದ ಮಾತಾಡುತ್ತಿರುವಾಗ ಯಾವ ಅಂಶಗಳು ನಮ್ಮಲ್ಲಿ ಸಂಭಾಷಣಾ ಶೈಲಿಯ ಕೊರತೆಯನ್ನು ಉಂಟುಮಾಡಬಹುದು ಅಥವಾ ತುಂಬ ಔಪಚಾರಿಕವಾಗಿ ಕೇಳಿಬರುವಂತೆ ಮಾಡಬಹುದು? [be-KA ಪು. 179 ಪ್ಯಾರ. 4]
2. ನಮ್ಮ ಸ್ವರದ ಗುಣಮಟ್ಟವನ್ನು ಉತ್ತಮಗೊಳಿಸುವುದರಲ್ಲಿ ಕೇವಲ ಸರಿಯಾಗಿ ಉಸಿರಾಡುವುದು ಮತ್ತು ಬಿಗಿಯಾಗಿರುವ ಸ್ನಾಯುಗಳನ್ನು ಸಡಿಲಿಸುವುದು ಮಾತ್ರ ಒಳಗೂಡಿಲ್ಲ ಏಕೆ? [be-KA ಪು. 181 ಪ್ಯಾರ. 2]
3. ನಾವು ಇತರರೊಂದಿಗೆ ಬೈಬಲ್ ಸತ್ಯಗಳನ್ನು ಹಂಚಿಕೊಳ್ಳುವಾಗ, ‘ಯಾರಾರಿಗೆ ಎಂಥೆಂಥವರಾಗಬೇಕೋ ಅಂಥಂಥವರಾಗಲು’ ಯಾವ ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಬಲ್ಲೆವು? (1 ಕೊರಿಂ. 9:20-23) [be-KA ಪು. 186 ಪ್ಯಾರ. 2-4]
4. ಶುಶ್ರೂಷೆಯಲ್ಲಿ ತೊಡಗಿರುವಾಗ ಗಮನಕೊಟ್ಟು ಆಲಿಸುವುದರಲ್ಲಿ ಏನು ಒಳಗೂಡಿದೆ? [be-KA ಪು. 186]
5. ನಾವು ಶುಶ್ರೂಷೆಯಲ್ಲಿ ಸಂಧಿಸುವ ಪ್ರತಿಯೊಬ್ಬರಿಗೂ ಗೌರವವನ್ನು ತೋರಿಸುವುದು ಪ್ರಾಮುಖ್ಯವೇಕೆ? [be-KA ಪು. 190]
ನೇಮಕ ನಂಬರ್ 1
6. ದೇವಪ್ರಭುತ್ವಾತ್ಮಕ ಉಪದೇಶವನ್ನು ನೀಡುವವರ ಗುರಿ ಏನಾಗಿದೆ, ಮತ್ತು ಈ ಗುರಿಯನ್ನು ತಲಪುವಂತೆ ನಮಗೆ ಯಾವುದು ಸಹಾಯಮಾಡುವುದು? (ಮತ್ತಾ. 5:16; ಯೋಹಾ. 7:16-18) [be-KA ಪು. 56 ಪ್ಯಾರ. 3-ಪು. 57 ಪ್ಯಾರ. 2]
7. ಬೋಧಿಸುತ್ತಿರುವಾಗ ಪರಸ್ಪರ ವ್ಯತ್ಯಾಸಗಳನ್ನು ಗುರುತಿಸುವುದು ಏಕೆ ಪ್ರಯೋಜನಕಾರಿಯಾಗಿರುವುದು, ಮತ್ತು ಈ ಕಲಿಸುವ ವಿಧಾನವನ್ನು ಯೇಸು ಹೇಗೆ ಉಪಯೋಗಿಸಿದನು? [be-KA ಪು. 57 ಪ್ಯಾರ. 3; ಪು. 58 ಪ್ಯಾರ. 2]
8. ಫರಿಸಾಯರಿಗೆ ವ್ಯತಿರಿಕ್ತವಾಗಿ, ಯೇಸುವಿನ ಬೋಧನೆಯು ಜನರ ಹೃದಯಗಳನ್ನು ತಲಪಿದ್ದು ಹೇಗೆ? [be-KA ಪು. 59 ಪ್ಯಾರ. 2-3]
9. ನಾವು ಯಾರಿಗೆ ಬೋಧಿಸುತ್ತೇವೋ, ಅವರಿಗಾಗಿ ನಾವು ನಿರ್ಣಯಗಳನ್ನು ಮಾಡದೆ, ಅವರು ತಾವು ಕಲಿಯುತ್ತಿರುವ ವಿಷಯವನ್ನು ಅನ್ವಯಿಸುವಂತೆ ಹೇಗೆ ಸಹಾಯಮಾಡಬಲ್ಲೆವು? [be-KA ಪು. 60 ಪ್ಯಾರ. 1-3]
10. ವೈಯಕ್ತಿಕವಾಗಿ ನಿರ್ಣಯ ಮಾಡಬೇಕಾಗಿರುವ ಒಂದು ವಿಷಯದ ಬಗ್ಗೆ ಇತರರು ನಮಗೆ ಪ್ರಶ್ನೆಗಳನ್ನು ಕೇಳುವಲ್ಲಿ ನಾವು ಹೇಗೆ ಪ್ರತಿಕ್ರಿಯಿಸಬೇಕು? [be-KA ಪು. 69 ಪ್ಯಾರ. 4-5]
ಸಾಪ್ತಾಹಿಕ ಬೈಬಲ್ ವಾಚನ
11. ಮೋಶೆಯು ‘ಗುಡಾರ ಮತ್ತು ಅದರಲ್ಲಿರುವ ಎಲ್ಲಾ ಸಾಮಾನುಗಳ’ ಬಗ್ಗೆ ಕೊಡಲ್ಪಟ್ಟ ‘ಮಾದರಿಯನ್ನು’ ಏಕೆ ನಿಕಟವಾಗಿ ಪಾಲಿಸಬೇಕಾಗಿತ್ತು? (ವಿಮೋ. 25:9) [it-2 ಪು. 1058 ಪ್ಯಾರ. 7]
12. ಚಿನ್ನದ ಬಸವನ ಘಟನೆಯ ಕುರಿತು ಆರೋನನು ಮೋಶೆಗೆ ಕೊಟ್ಟ ಉತ್ತರದಿಂದ ನಾವೇನನ್ನು ಕಲಿಯಬಲ್ಲೆವು? (ವಿಮೋ. 32:24)
13. ವಿಮೋಚನಕಾಂಡ 34:23, 24ರಲ್ಲಿ ಯೆಹೋವನು ಕೊಟ್ಟ ಆಜ್ಞೆಗೆ ವಿಧೇಯತೆಯಲ್ಲಿ ಇಸ್ರಾಯೇಲ್ಯರು ತೋರಿಸಿದ ನಂಬಿಕೆಯ ಪ್ರದರ್ಶನದಿಂದ ನಾವೇನನ್ನು ಕಲಿಯಬಲ್ಲೆವು?
14. ಒಂದು ಸಮಾಧಾನಯಜ್ಞದ ಉದ್ದೇಶವೇನಾಗಿತ್ತು? (ಯಾಜ. 3:1)
15. ಯಾಜಕಕಾಂಡ 8:23ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಆರೋನನ ಸಂಬಂಧದಲ್ಲಿ ಮಾಡಲ್ಪಟ್ಟ ಅಭಿಷೇಕದ ಕಾರ್ಯಗತಿಯು ಸೂಚಿತರೂಪದಲ್ಲಿ ಯೇಸುವಿಗೆ ಹೇಗೆ ಅನ್ವಯಿಸುತ್ತದೆ? [it-2 ಪು. 1113 ಪ್ಯಾರ. 4; w68 ಪು. 399 ಪ್ಯಾರ. 24]