ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಜೂನ್: ಮಹಾ ಬೋಧಕನಿಂದ ಕಲಿತುಕೊಳ್ಳಿರಿ.a ವ್ಯಕ್ತಿಗಳು ತಮಗೆ ಮಕ್ಕಳಿಲ್ಲವೆಂದು ಹೇಳುವುದಾದರೆ, ಅವರಿಗೆ ಅಪೇಕ್ಷಿಸು ಬ್ರೋಷರನ್ನು ನೀಡಿರಿ. ಈ ಬ್ರೋಷರನ್ನು ಉಪಯೋಗಿಸುವಾಗ, ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿ. ಜುಲೈ ಮತ್ತು ಆಗಸ್ಟ್: ಈ ಮುಂದೆ ತಿಳಿಸಲ್ಪಟ್ಟಿರುವ ಯಾವುದೇ 32 ಪುಟಗಳ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನೀವು ತ್ರಯೈಕ್ಯವನ್ನು ನಂಬ ಬೇಕೋ?, ನಿತ್ಯಕ್ಕೂ ಬಾಳುವ ದೈವಿಕ ನಾಮ,b ಪರದೈಸನ್ನು ತರಲಿರುವ ಸರಕಾರ,c ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?,d ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ. ಸೆಪ್ಟೆಂಬರ್: ನಿಮ್ಮ ಕುರಿತು ಕಾಳಜಿ ವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ?e ಬದಲಿ ನೀಡುವಿಕೆಯೋಪಾದಿ ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ?f ಎಂಬ ಪುಸ್ತಕವನ್ನು ನೀವು ನೀಡಬಹುದು.
◼ ರಾಜ್ಯ ಸಭಾಗೃಹದ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲಿಕ್ಕಾಗಿ, ಕಟ್ಟಡವನ್ನು ಬಿಟ್ಟುಹೋಗುವ ಕೊನೆಯ ವ್ಯಕ್ತಿಯು ಬಾಗಿಲಿಗೆ ಬೀಗವನ್ನು ಹಾಕಬೇಕು ಮತ್ತು ಇತರ ಭದ್ರತಾ ಕ್ರಮಗಳನ್ನು ಉಪಯೋಗಿಸಬೇಕು. ಆ ವ್ಯಕ್ತಿಯು ಕಟ್ಟಡದ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಅಶಕ್ತನಾಗುವಲ್ಲಿ, ಅವನು ಹೀಗೆ ಮಾಡಸಾಧ್ಯವಿರುವಂಥ ಯಾರಾದರೊಬ್ಬರನ್ನು ಕರೆಸಿ, ಆ ವ್ಯಕ್ತಿಯು ಬರುವ ತನಕ ಕಾಯಬೇಕು. ರಾಜ್ಯ ಸಭಾಗೃಹದ ಕೀಲಿ ಕೈಗಳು ಯಾರಿಗೆ ನೀಡಲ್ಪಟ್ಟಿವೆಯೋ ಅಂಥ ಜವಾಬ್ದಾರಿಯುತ ಪ್ರಚಾರಕರ ಸದ್ಯೋಚಿತ ಪಟ್ಟಿಯನ್ನು ಹಿರಿಯರು ಇಟ್ಟುಕೊಂಡಿರಬೇಕು.
◼ ನಮ್ಮ ರಾಜ್ಯದ ಸೇವೆಯ ಸೆಪ್ಟೆಂಬರ್ ಸಂಚಿಕೆಯಲ್ಲಿ, ಯೆಹೋವನ ಅಧಿಕಾರವನ್ನು ಗೌರವಿಸಿರಿ (ಇಂಗ್ಲಿಷ್) ಎಂಬ ವಿಡಿಯೋದ ಪರಿಗಣನೆಯು ಕೊಡಲ್ಪಡುವುದು. ಇಷ್ಟರ ತನಕ ತಮ್ಮ ಲೈಬ್ರರಿಗಾಗಿ ಒಂದು ಪ್ರತಿಯನ್ನು ಪಡೆದುಕೊಂಡಿರದ ಸಭೆಗಳು, ತಮ್ಮ ಮುಂದಿನ ಸಾಹಿತ್ಯ ವಿನಂತಿಯೊಂದಿಗೆ ಈ ವಿಡಿಯೋದ ಒಂದು ಪ್ರತಿಗಾಗಿ ವಿನಂತಿಸಿಕೊಳ್ಳಸಾಧ್ಯವಿದೆ.
◼ MP3ಯಲ್ಲಿ ಲಭ್ಯವಿರುವ ಕಾಂಪ್ಯಾಕ್ಟ್ ಡಿಸ್ಕ್‌ಗಳು:
ಕಿಂಗ್ಡಮ್ ಮೆಲೊಡೀಸ್, 1-9 ವಾಲ್ಯೂಮ್‌ಗಳು—ಒಂದು CD
ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (225 ಗೀತೆಗಳಿಗೆ ಪಿಯಾನೊ ಸಂಗೀತ)—ಒಂದು CD
ಸಿಂಗಿಂಗ್ ಕಿಂಗ್ಡಮ್ ಸಾಂಗ್ಸ್—ಒಂದು CD
ಈ ಮೇಲಿನವು ವಿಶೇಷ ವಿನಂತಿಯ ಐಟಮ್‌ಗಳಾಗಿವೆ ಮತ್ತು ತಮ್ಮ ಸ್ವಂತ ಉಪಯೋಗಕ್ಕಾಗಿ ಪ್ರಚಾರಕರಿಗೆ ಅಗತ್ಯವಿರುವ ನಿರ್ದಿಷ್ಟ ಪ್ರಮಾಣದಲ್ಲೇ ಸಭೆಗಳು ಇವುಗಳನ್ನು ವಿನಂತಿಸಿಕೊಳ್ಳಬಹುದು. ಇವು ಸಾರ್ವಜನಿಕರಿಗಾಗಿ ಅಲ್ಲ. MP3 CD ಎಲ್ಲಾ CD ಪ್ಲೇಯರ್‌ಗಳಲ್ಲಿ ಕೆಲಸಮಾಡುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿರಿ. ಆದುದರಿಂದ, ಇವುಗಳನ್ನು ಆರ್ಡರ್ ಮಾಡುವವರ ಬಳಿ MP3 CD ಕೆಲಸಮಾಡುವಂಥ ಮ್ಯೂಸಿಕ್ ಸಿಸ್ಟಮ್ ಇದೆಯೆಂಬುದನ್ನು ಖಚಿತಪಡಿಸಿಕೊಳ್ಳುವಂತೆ ನಾವು ಸೆಕ್ರಿಟರಿಗಳನ್ನು ವಿನಂತಿಸಿಕೊಳ್ಳುತ್ತೇವೆ.
◼ VCDಯಲ್ಲಿ ಬೈಬಲ್ ವಿಡಿಯೋಗಳು (ಇಂಗ್ಲಿಷ್‌ನಲ್ಲಿ) ಲಭ್ಯವಿವೆ:
ದೈವಿಕ ಬೋಧನೆಯಿಂದ ಐಕ್ಯರು
ಯುವ ಜನರು ಪ್ರಶ್ನಿಸುವುದು—ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ?
ರಕ್ತರಹಿತ ಚಿಕಿತ್ಸೆ—ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ
ಈ ಮೇಲಿನ VCDಗಳು ಸದ್ಯಕ್ಕೆ ಕೇವಲ ಸಭೆಗಳಿಗೆ, ಅವುಗಳ ಲೈಬ್ರರಿ ಉಪಯೋಗಕ್ಕಾಗಿ ಮಾತ್ರ ಲಭ್ಯಗೊಳಿಸಲ್ಪಡುತ್ತವೆ. ಆದುದರಿಂದ, ನೀವು ಆರ್ಡರ್‌ಗಳನ್ನು ಮಾಡುವಾಗ, ದಯವಿಟ್ಟು ನಿಮ್ಮ ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್‌ನಲ್ಲಿ “Cong. Use” ಎಂಬ ಅಂಕಣದ ಕೆಳಗೆ ಪರಿಶೀಲಿಸಿರಿ.
[ಪಾದಟಿಪ್ಪಣಿಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.
c ಕನ್ನಡದಲ್ಲಿ ಲಭ್ಯವಿಲ್ಲ.
d ಕನ್ನಡದಲ್ಲಿ ಲಭ್ಯವಿಲ್ಲ.
e ಕನ್ನಡದಲ್ಲಿ ಲಭ್ಯವಿಲ್ಲ.
f ಕನ್ನಡದಲ್ಲಿ ಲಭ್ಯವಿಲ್ಲ.