ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/04 ಪು. 3
  • ಪ್ರಶ್ನಾ ಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಚೌಕ
  • 2004 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ವಿನಯಶೀಲತೆಗೆ ಈಗಲೂ ಬೆಲೆ ಇದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಯಾವುದೇ ಸನ್ನಿವೇಶದಲ್ಲಿ ವಿನಯಶೀಲತೆ ತೋರಿಸಸಾಧ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • “ವಿನಯಶೀಲರಲ್ಲಿ ವಿವೇಕವಿದೆ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಇನ್ನಷ್ಟು
2004 ನಮ್ಮ ರಾಜ್ಯದ ಸೇವೆ
km 11/04 ಪು. 3

ಪ್ರಶ್ನಾ ಚೌಕ

◼ ಸಭಾ ನೇಮಕಗಳನ್ನು ನಾವು ಹೇಗೆ ಪೂರೈಸಬೇಕು?

ಯೆಹೋವನ ಜನರ ಒಂದು ಸಭೆಯ ಸುವ್ಯವಸ್ಥಿತ ಕಾರ್ಯವೆಸಗುವಿಕೆಗೆ ಅದರ ಒಗ್ಗಟ್ಟಿನ ಪ್ರಯತ್ನವೇ ಕಾರಣ. (1 ಕೊರಿಂ. 14:33, 40) ಕೇವಲ ಒಂದೇ ಒಂದು ಸಭಾ ಕೂಟದ ವಿಷಯದಲ್ಲಿ ಏನೆಲ್ಲಾ ಒಳಗೂಡಿದೆ ಎಂಬುದರ ಕುರಿತು ತುಸು ಆಲೋಚಿಸಿರಿ. ಕಾರ್ಯಕ್ರಮದ ನಿರ್ವಹಣೆ ಅಲ್ಲದೆ, ಸಹೋದರ ಸಹೋದರಿಯರು ಹಲವಾರು ನೇಮಕಗಳನ್ನು ಪೂರೈಸುವಾಗ ಕೂಟದ ಮುಂಚೆ ಮತ್ತು ಅನಂತರವೂ ತುಂಬ ಚಟುವಟಿಕೆ ಇರುತ್ತದೆ. ಇತರರ ದೃಷ್ಟಿಗೆ ಬೀಳದಿದ್ದರೂ ಇಂತಹ ಇತರ ಕರ್ತವ್ಯಗಳು ಸಹ ಪ್ರಾಮುಖ್ಯವಾಗಿವೆ. ಈ ಏರ್ಪಾಡಿಗೆ ನಮ್ಮಲ್ಲಿ ಪ್ರತಿಯೊಬ್ಬರೂ ಹೇಗೆ ನೆರವು ನೀಡಬಲ್ಲೆವು?

ನಿಮ್ಮನ್ನೇ ಲಭ್ಯಗೊಳಿಸಿಕೊಳ್ಳಿ. ಸಿದ್ಧಮನಸ್ಸುಳ್ಳವರು ಮಾಡಲಿಕ್ಕಾಗಿ ಅನೇಕ ವಿಷಯಗಳನ್ನು ಕಂಡುಕೊಳ್ಳುವರು. (ಕೀರ್ತ. 110:3) ಅಸ್ವಸ್ಥರಿಗೆ ಮತ್ತು ವೃದ್ಧರಿಗೆ ಕಾಳಜಿಯನ್ನು ತೋರಿಸಿರಿ. ರಾಜ್ಯ ಸಭಾಗೃಹವನ್ನು ಶುಚಿಮಾಡುವುದರಲ್ಲಿ ಸಹಾಯ ನೀಡಿರಿ. ಒಂದು ವಿಶೇಷ ಆಮಂತ್ರಣವಿಲ್ಲದೆಯೇ ನಾವು ಅನೇಕ ಪ್ರಯೋಜನಕಾರಿ ಕಾರ್ಯಗಳನ್ನು ಮಾಡಬಲ್ಲೆವು. ನಮ್ಮಲ್ಲಿ ಸಹಾಯಮಾಡುವ ಅಪೇಕ್ಷೆ ಇರಬೇಕು ಅಷ್ಟೆ.

ವಿನಯತೆಯಿಂದ ಸೇವೆ ಸಲ್ಲಿಸಿರಿ. ವಿನಯತೆಯುಳ್ಳವರು ಇತರರಿಗೆ ಸೇವೆ ಸಲ್ಲಿಸುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ. (ಲೂಕ 9:48) ವಿನಯತೆಯು ನಮ್ಮಿಂದ ನೈಜವಾಗಿ ನಿರ್ವಹಿಸಲು ಸಾಧ್ಯವಿಲ್ಲದಿರುವಷ್ಟು ಜವಾಬ್ದಾರಿಗಳನ್ನು ವಹಿಸಿಕೊಳ್ಳುವುದರಿಂದ ನಮ್ಮನ್ನು ತಡೆಯುವುದು. ಮಾತ್ರವಲ್ಲದೆ, ವಿನಯತೆಯು ನಮ್ಮ ಅಧಿಕಾರದ ಎಲ್ಲೆಯನ್ನು ಮೀರಿಹೋಗದಂತೆ ನಮ್ಮನ್ನು ತಡೆದು ಹಿಡಿಯುವುದು.​—⁠ಜ್ಞಾನೋ. 11:⁠2, NW.

ಭರವಸಾರ್ಹರಾಗಿರಿ. ಪುರಾತನ ಇಸ್ರಾಯೇಲಿನಲ್ಲಿ ಮೋಶೆಯು, ಜವಾಬ್ದಾರಿಯ ಸ್ಥಾನಗಳನ್ನು ನಿರ್ವಹಿಸಲಿಕ್ಕಾಗಿ “ನಂಬಿಗಸ್ತ . . . ಪುರುಷರನ್ನು” ಅಥವಾ ಭರವಸಾರ್ಹ ವ್ಯಕ್ತಿಗಳನ್ನು ಆಯ್ಕೆಮಾಡುವಂತೆ ಪ್ರೋತ್ಸಾಹಿಸಲ್ಪಟ್ಟನು. (ವಿಮೋ. 18:21) ಇದೇ ಗುಣವು ಇಂದು ಸಹ ಅವಶ್ಯಕವಾಗಿದೆ. ನೀವು ಪಡೆದುಕೊಳ್ಳುವ ಪ್ರತಿಯೊಂದು ನೇಮಕವನ್ನು ಶುದ್ಧಾಂತಃಕರಣದಿಂದ ಪೂರೈಸಿರಿ. (ಲೂಕ 16:10) ನಿಮಗೆ ಒಂದು ನೇಮಕವನ್ನು ಪೂರೈಸಲು ಸಾಧ್ಯವಿಲ್ಲದಿರುವಲ್ಲಿ, ನಿಮ್ಮ ಗೈರುಹಾಜರಿಯಲ್ಲಿ ಯಾರಾದರೂ ಆ ನೇಮಕವನ್ನು ನಿರ್ವಹಿಸುವಂತೆ ಸೂಕ್ತವಾದ ಏರ್ಪಾಡುಗಳು ಮಾಡಲ್ಪಟ್ಟಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನಿಮ್ಮಿಂದಾದ ಅತ್ಯುತ್ತಮವಾದುದ್ದನ್ನು ಕೊಡಿರಿ. ಐಹಿಕ ವಿಚಾರಗಳಲ್ಲಿಯೂ ಕ್ರೈಸ್ತರು ಮನಃಪೂರ್ವಕವಾಗಿ ಕೆಲಸಮಾಡುವಂತೆ ಪ್ರೋತ್ಸಾಹಿಸಲ್ಪಟ್ಟಿದ್ದಾರೆ. (ಕೊಲೊ. 3:22-24) ಹೀಗಿರುವಾಗ ಸತ್ಯಾರಾಧನೆಯನ್ನು ಪ್ರವರ್ಧಿಸುವುದರಲ್ಲಿ ಇದೇ ಮನಃಪೂರ್ವಕತೆಯನ್ನು ತೋರಿಸಲು ಹೆಚ್ಚಿನ ಕಾರಣವಿದೆ. ಒಂದು ಕೆಲಸವು ಕೀಳಾದದ್ದಾಗಿ ಅಥವಾ ಅಪ್ರಾಮುಖ್ಯವಾದದ್ದಾಗಿ ತೋರುವಾಗಲೂ, ಅದು ಚೆನ್ನಾಗಿ ನಿರ್ವಹಿಸಲ್ಪಟ್ಟಾಗ ಸಭೆಗೆ ಒಂದು ಆಶೀರ್ವಾದವಾಗಿರುವುದು.

ಪ್ರತಿಯೊಂದು ನೇಮಕವು ಯೆಹೋವನಿಗಾಗಿರುವ ಮತ್ತು ನಮ್ಮ ಸಹೋದರರಿಗಾಗಿರುವ ಪ್ರೀತಿಯನ್ನು ವ್ಯಕ್ತಪಡಿಸಲು ಒಂದು ಅವಕಾಶವನ್ನು ಒದಗಿಸುತ್ತದೆ. (ಮತ್ತಾ. 22:37-39) ಆದುದರಿಂದ, ನಮಗೆ ಒಪ್ಪಿಸಲ್ಪಡುವ ಯಾವುದೇ ಕೆಲಸವನ್ನು ನಂಬಿಗಸ್ತಿಕೆಯಿಂದ ಮಾಡೋಣ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ