ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ ಬ್ರೋಷರನ್ನು ನೀಡುವುದು
◼ “ಸಂತೃಪ್ತಿಕರವಾದ ಜೀವನವನ್ನು ಪಡೆದುಕೊಳ್ಳಲು ಒಂದು ನಂಬಲರ್ಹವಾದ ಮಾರ್ಗದರ್ಶಕ ಪುಸ್ತಕದ ಅಗತ್ಯವಿದೆ ಎಂದು ಅನೇಕರಿಗೆ ಅನಿಸುತ್ತದೆ. ನಿಮಗೂ ಹಾಗೆ ಅನಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಸಂತೋಷದ ಸುದ್ದಿಯೇನೆಂದರೆ, ನಂಬಲರ್ಹವಾದ ಮತ್ತು ಕಾಲಪರೀಕ್ಷಿತ ಮಾರ್ಗದರ್ಶನವನ್ನು ಹೊಂದಿರುವ ಇಂತಹ ಒಂದು ಪುಸ್ತಕವು ಲಭ್ಯವಿದೆ. ಈ ಮಾರ್ಗದರ್ಶಕ ಪುಸ್ತಕದಿಂದಲೇ ನಾನು ಒಂದು ವಚನವನ್ನು ಓದಲು ಬಯಸುತ್ತೇನೆ. [ಕೀರ್ತನೆ 32:8ನ್ನು ಓದಿ.] ನೀವು ಯಾವುದೇ ಧರ್ಮಕ್ಕೆ ಸೇರಿರುವುದಾದರೂ, ಇಂತಹ ಒಂದು ಪುಸ್ತಕದ ಬಗ್ಗೆ ತಿಳಿದುಕೊಳ್ಳಲು ಆಸಕ್ತರಾಗಿರುವುದಿಲ್ಲವೋ?” ಅಧ್ಯಾಯ 3ರ ಶೀರ್ಷಿಕೆಯನ್ನು ಎತ್ತಿತೋರಿಸಿರಿ ಮತ್ತು ಬ್ರೋಷರನ್ನು ನೀಡಿರಿ.
◼ “ನಮ್ಮ ದಿನಗಳಲ್ಲಿ ಜನರು ಅನುಭವಿಸುವ ಹಲವಾರು ಆರೋಗ್ಯದ ಸಮಸ್ಯೆಗಳಿಗೆ ಪ್ರಧಾನ ಕಾರಣವು ಮಾನಸಿಕ ಒತ್ತಡವಾಗಿದೆ ಎಂಬುದನ್ನು ನೀವು ಒಪ್ಪುವುದಿಲ್ಲವೋ? [ಪ್ರತಿಕ್ರಿಯೆಗಾಗಿ ಕಾಯಿರಿ.] ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುವ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುವುದರ ಕುರಿತ ಈ ಬುದ್ಧಿವಾದವನ್ನು ಗಮನಿಸಿ. [ಜ್ಞಾನೋಕ್ತಿ 12:25ನ್ನು ಓದಿ.] ಸಂತೃಪ್ತಿಕರವಾದ ಜೀವನವನ್ನು ನಡೆಸಲಿಕ್ಕಾಗಿ ಈ ಬ್ರೋಷರ್ ಅತ್ಯುತ್ತಮವಾದ ಸಲಹೆಗಳನ್ನು ನೀಡುತ್ತದೆ.” ಅಧ್ಯಾಯ 2ರಲ್ಲಿರುವ ಚಿತ್ರಗಳು ಮತ್ತು ಅದರ ಕೆಳಗಿರುವ ವಾಕ್ಯಗಳನ್ನು ಎತ್ತಿತೋರಿಸಿ.
◼ “ಸಂತೃಪ್ತಿಕರವಾದ ಜೀವನವನ್ನು ಆನಂದಿಸಲಿಕ್ಕಾಗಿ ಸ್ವರ್ಗಕ್ಕೆ ಹೋಗಬೇಕು ಎಂದು ಜನರು ಅನೇಕವೇಳೆ ನೆನಸುತ್ತಾರೆ. ಆದರೆ ಇಂತಹ ಒಂದು ಜೀವನ ಭೂಮಿಯ ಮೇಲೆ ಸಾಧ್ಯವಿರುವಲ್ಲಿ ನಿಮಗೆ ಅದು ಇಷ್ಟವಾಗುವುದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಭೂಮಿಯ ಮೇಲೆ ಸಂತೃಪ್ತಿಕರ ಜೀವನವನ್ನು ಸದಾಕಾಲ ಅನುಭವಿಸಸಾಧ್ಯವಿದೆ ಎಂಬ ಆಶ್ವಾಸನೆಯನ್ನು ಬೈಬಲ್ ಕೊಡುತ್ತದೆ ಮತ್ತು ನಾವು ಅದನ್ನು ಹೇಗೆ ಪಡೆದುಕೊಳ್ಳಬಲ್ಲೆವು ಎಂಬುದನ್ನೂ ತೋರಿಸುತ್ತದೆ. [ಯೆಶಾಯ 65:17 ಮತ್ತು ಯೋಹಾನ 17:3ನ್ನು ಓದಿ.] ಅದರಲ್ಲಿ ಆನಂದಿಸಲು ನೀವೇನು ಮಾಡಬೇಕೆಂಬುದನ್ನು ಈ ಪ್ರಕಾಶನವು ವಿವರಿಸುತ್ತದೆ.” ಪುಟ 31ರಲ್ಲಿರುವ ಚಿತ್ರವನ್ನು ವಿವರಿಸಿರಿ.
◼ “ಈ ನಡುವೆ ಲೋನ್ಗಳನ್ನು ಪಡೆಯುವುದು ತೀರ ಸುಲಭವಾಗುತ್ತಿದೆ ಮತ್ತು ಇದರಿಂದಾಗಿ ಹಲವಾರು ಕುಟುಂಬಗಳು ಬಹಳಷ್ಟು ಸಾಲದಲ್ಲಿ ಮುಳುಗುತ್ತಿವೆ. ನೀವಿದನ್ನು ಒಪ್ಪುವುದಿಲ್ಲವೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ವಿವೇಕಯುತ ಬುದ್ಧಿವಾದಕ್ಕೆ ಕಿವಿಗೊಡಿರಿ. [1 ತಿಮೊಥೆಯ 6:7-9ನ್ನು ಓದಿ.] ಹಣವನ್ನು ವಿವೇಕದಿಂದ ನಿರ್ವಹಿಸುವ ಮತ್ತು ಹಣದ ಸಮಸ್ಯೆಗಳನ್ನು ಪರಿಹರಿಸುವ ವಿಷಯಗಳ ಕುರಿತ ಇಂತಹ ದೈವಿಕ ಬುದ್ಧಿವಾದವನ್ನು ಈ ಬ್ರೋಷರ್ ವಿವರಿಸುತ್ತದೆ.” ಪುಟ 6ರಲ್ಲಿರುವ ಪ್ಯಾರಗ್ರಾಫ್ 6ರಿಂದ ಕೆಲವು ಅಂಶಗಳನ್ನು ಎತ್ತಿತೋರಿಸಿರಿ.