ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಫೆಬ್ರವರಿ: ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕವನ್ನು ನೀಡಲಾಗುವುದು. ಈ ಪ್ರಕಾಶನವನ್ನು ಹೊಂದಿರದ ಸಭೆಗಳು ಸೃಷ್ಟಿ (ಇಂಗ್ಲಿಷ್) ಪುಸ್ತಕ ಅಥವಾ ಪ್ರಕಟನೆ ಪರಮಾವಧಿ ಪುಸ್ತಕವನ್ನು ಬದಲಿ ನೀಡುವಿಕೆಯಾಗಿ ಉಪಯೋಗಿಸಬಹುದು. ಮಾರ್ಚ್: ಮನೆ ಬೈಬಲ್ ಅಧ್ಯಯನವನ್ನು ಆರಂಭಿಸುವ ಉದ್ದೇಶದೊಂದಿಗೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವನ್ನು ನೀಡಿರಿ. ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ. ಜ್ಞಾಪಕಾಚರಣೆಗೆ ಮತ್ತು/ಅಥವಾ ಇತರ ದೇವಪ್ರಭುತ್ವಾತ್ಮಕ ಕಾರ್ಯಕ್ರಮಗಳಿಗೆ ಹಾಜರಾದ, ಆದರೆ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿರುವವರನ್ನು ಸೇರಿಸಿ ಎಲ್ಲಾ ಆಸಕ್ತ ಜನರನ್ನು ಪುನರ್ಭೇಟಿಮಾಡುವಾಗ ದೇವರನ್ನು ಆರಾಧಿಸಿರಿ ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಒಂದು ಮನೆ ಬೈಬಲ್ ಅಧ್ಯಯನವನ್ನು ಪ್ರಾರಂಭಿಸುವುದೇ ಇದರ ಉದ್ದೇಶವಾಗಿರಬೇಕು, ವಿಶೇಷವಾಗಿ ಈಗಾಗಲೇ ಜ್ಞಾನ ಪುಸ್ತಕ ಮತ್ತು ಅಪೇಕ್ಷಿಸು ಬ್ರೋಷರನ್ನು ಅಧ್ಯಯನ ಮಾಡಿರುವವರಿಗೆ ಇದು ಅನ್ವಯಿಸುತ್ತದೆ.
◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸ್ ಅನ್ನು ಮಾರ್ಚ್ 1ರಂದು ಅಥವಾ ಅದರ ನಂತರ ಆದಷ್ಟು ಬೇಗನೆ ಆಡಿಟ್ ಮಾಡಬೇಕು. ಮೈಂಟೇನನ್ಸ್ ಅಥವಾ ನಿರ್ಮಾಣಕಾರ್ಯ ಮುಂತಾದ ವಿಷಯಗಳಿಗಾಗಿ ಒಂದು ಭಿನ್ನ ಅಕೌಂಟನ್ನು ಹೊಂದಿರುವುದಾದರೆ, ಆ ಅಕೌಂಟನ್ನು ಸಹ ಆಡಿಟ್ ಮಾಡಲು ಏರ್ಪಾಡುಗಳು ಮಾಡಲ್ಪಡಬೇಕು. ಆಡಿಟ್(ಗಳು) ಮುಗಿದ ಅನಂತರ, ಮುಂದಿನ ಅಕೌಂಟ್ಸ್ ವರದಿಯೊಂದಿಗೆ ಇದರ ಕುರಿತು ಸಭೆಗೆ ಪ್ರಕಟನೆಯೊಂದನ್ನು ಮಾಡಬೇಕು.
◼ ಕಾರ್ಯದರ್ಶಿ ಮತ್ತು ಸೇವಾ ಮೇಲ್ವಿಚಾರಕನು ಎಲ್ಲಾ ರೆಗ್ಯುಲರ್ ಪಯನೀಯರರ ಚಟುವಟಿಕೆಯನ್ನು ಪರಿಶೀಲಿಸಬೇಕು. ಅವರಲ್ಲಿ ಯಾರಿಗಾದರೂ ತಾಸಿನ ಆವಶ್ಯಕತೆಯನ್ನು ಪೂರೈಸುವುದು ಕಷ್ಟಕರವಾಗಿರುವುದಾದರೆ, ನೆರವನ್ನು ನೀಡಲಿಕ್ಕಾಗಿ ಹಿರಿಯರು ಏರ್ಪಾಡನ್ನು ಮಾಡಬೇಕು. ಸಲಹೆಗಳಿಗಾಗಿ, ವಾರ್ಷಿಕ S-201 ಪತ್ರಗಳನ್ನು ಮರುಪರಿಶೀಲಿಸಿರಿ.
◼ ಇಸವಿ 2005ರ ಜ್ಞಾಪಕಾಚರಣೆ ಸಮಯದ ವಿಶೇಷ ಬಹಿರಂಗ ಭಾಷಣದ ಶೀರ್ಷಿಕೆಯು “ಯೇಸು ಯಾತನೆಯನ್ನನುಭವಿಸಿ ಸತ್ತದ್ದೇಕೆ?” ಎಂದಾಗಿರುವುದು. ಇದಕ್ಕೆ ಸಂಬಂಧಿಸಿದ ಪ್ರಕಟನೆಯನ್ನು ಸೆಪ್ಟೆಂಬರ್ 2004ರ ನಮ್ಮ ರಾಜ್ಯದ ಸೇವೆಯಲ್ಲಿ ನೋಡಿರಿ.
◼ ಪ್ರಚಾರಕರಿಗೆ ಲಭ್ಯಗೊಳಿಸಲ್ಪಡಲಿರುವ ಒಂದು ಏರ್ಪಾಡಿನ ಕುರಿತ ವಿಶೇಷ ಪ್ರಕಟನೆಯನ್ನು ಕೇಳಿಸಿಕೊಳ್ಳಲಿಕ್ಕಾಗಿ ಮಾರ್ಚ್ 20ರ ಭಾನುವಾರದ ಸಾರ್ವಜನಿಕ ಕೂಟಕ್ಕೆ ಎಲ್ಲರೂ ಹಾಜರಿರಬೇಕು.
◼ ಸಾಹಿತ್ಯಕ್ಕಾಗಿರುವ ಪ್ರಚಾರಕರ ವೈಯಕ್ತಿಕ ವಿನಂತಿಗಳನ್ನು ಬ್ರಾಂಚ್ ಆಫೀಸು ಸ್ವೀಕರಿಸುವುದಿಲ್ಲ. ಸಾಹಿತ್ಯಕ್ಕಾಗಿ ಸಭೆಯ ಮಾಸಿಕ ವಿನಂತಿಯನ್ನು ಬ್ರಾಂಚ್ ಆಫೀಸ್‌ಗೆ ಕಳುಹಿಸುವ ಮುಂಚೆ, ಪ್ರತಿ ತಿಂಗಳು ಒಂದು ಪ್ರಕಟನೆಯನ್ನು ಮಾಡುವಂತೆ ಅಧ್ಯಕ್ಷ ಮೇಲ್ವಿಚಾರಕನು ಏರ್ಪಡಿಸಬೇಕು. ಇದು, ವೈಯಕ್ತಿಕ ಸಾಹಿತ್ಯ ಐಟಮ್‌ಗಳನ್ನು ಪಡೆದುಕೊಳ್ಳಲು ಆಸಕ್ತರಿರುವವರೆಲ್ಲರೂ ಸಾಹಿತ್ಯವನ್ನು ನಿರ್ವಹಿಸುವ ಸಹೋದರನಿಗೆ ತಮ್ಮ ವಿನಂತಿಯನ್ನು ತಿಳಿಸುವಂತೆ ಸಹಾಯಮಾಡುವುದು. ಯಾವ ಪ್ರಕಾಶನಗಳು ವಿಶೇಷ ವಿನಂತಿಯ ಐಟಮ್‌ಗಳಾಗಿವೆ ಎಂಬುದನ್ನು ದಯವಿಟ್ಟು ಮನಸ್ಸಿನಲ್ಲಿಡಿರಿ.
◼ ಇಸವಿ 2005, ಮೇ 23ರ ವಾರದಿಂದ ಆರಂಭಿಸುತ್ತಾ, ನಾವು ಸಭಾ ಪುಸ್ತಕ ಅಧ್ಯಯನದಲ್ಲಿ ಎಚ್ಚರಿಕೆಯಿಂದಿರಿ! ಬ್ರೋಷರನ್ನು ಅಧ್ಯಯನ ಮಾಡುವೆವು. ಇಸವಿ 2005, ಜೂನ್ 27ರ ವಾರದಿಂದ ಆರಂಭಿಸುತ್ತಾ, ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಪುಸ್ತಕದ ಅಧ್ಯಯನವನ್ನು ಮಾಡುವೆವು.
◼ ಮಾರ್ಚ್ 1, 2005ನೇ ಸಂಚಿಕೆಯಿಂದ ಆರಂಭಿಸುತ್ತಾ ಮರಾಠಿ ಭಾಷೆಯ ಕಾವಲಿನಬುರುಜು ಪತ್ರಿಕೆಯು ಪಾಕ್ಷಿಕ ಪತ್ರಿಕೆಯಾಗಿ ಪ್ರಕಟಿಸಲ್ಪಡುವ ಬದಲು ಮಾಸಿಕ ಪತ್ರಿಕೆಯಾಗಿ ಪ್ರಕಟಿಸಲ್ಪಡುವುದು.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ದೇವರಿಗಾಗಿ ಮಾನವಕುಲದ ಅನ್ವೇಷಣೆ —ತಮಿಳು
ಎಚ್ಚರಿಕೆಯಿಂದಿರಿ! —ಅಸ್ಸಾಮಿ, ಇಂಗ್ಲಿಷ್, ಉರ್ದು, ಕನ್ನಡ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಬಂಗಾಲಿ, ಮರಾಠಿ, ಮಲೆಯಾಳಂ, ಮೀಸೊ, ಹಿಂದಿ
ಸರ್ವ ದೇಶಗಳ ಜನರಿಗಾಗಿ ಸುವಾರ್ತೆ —ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ
◼ ಪುನಃ ಲಭ್ಯವಿರುವ ಪ್ರಕಾಶನಗಳು:
ಚರ್ಚೆಗಾಗಿ ಬೈಬಲ್ ವಿಷಯಗಳು —ಮರಾಠಿ (ಪರಿಷ್ಕೃತ)