ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2005ರ ಫೆಬ್ರವರಿ 28ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. 2005ರ ಜನವರಿ 3ರಿಂದ ಫೆಬ್ರವರಿ 28ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ಉಲ್ಲೇಖಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ನಾವು ನಮ್ಮ ಭಾಷಣವನ್ನು ಹೆಚ್ಚು ಅರ್ಥವತ್ತಾಗಿ ಹೇಗೆ ಮಾಡಸಾಧ್ಯವಿದೆ? [be-KA ಪು. 226 ಪ್ಯಾರ. 1-ಪು. 227 ಪ್ಯಾರ. 2]
2. ಯಾವ ರೀತಿಯ ಪದಗಳಿಗೆ ಹೆಚ್ಚಿನ ವಿವರಣೆಯು ಅಗತ್ಯವಿರಬಹುದು? [be-KA ಪು. 227 ಪ್ಯಾರ. 3-ಪು. 228 ಪ್ಯಾರ. 1]
3. ಯಾವ ವಿಧಾನವು ವಿಷಯಭಾಗವನ್ನು ನಮ್ಮ ಕೇಳುಗರಿಗೆ ನಿಜವಾಗಿಯೂ ಬೋಧಪ್ರದವಾಗಿರುವಂತಹ ರೀತಿಯಲ್ಲಿ ಪ್ರಸ್ತುತಪಡಿಸುವಂತೆ ನಮಗೆ ಸಹಾಯಮಾಡುವುದು? [be-KA ಪು. 231 ಪ್ಯಾರ. 1-3]
4. ಚಿರಪರಿಚಿತವಾಗಿರುವ ಒಂದು ಶಾಸ್ತ್ರವಚನವನ್ನು ಓದುವಾಗ ಅದು ನಮ್ಮ ಸಭಿಕರಿಗೆ ಬೋಧಪ್ರದವಾಗಿರುವಂತೆ ನಾವು ಹೇಗೆ ಮಾಡಬಲ್ಲೆವು? [be-KA ಪು. 231 ಪ್ಯಾರ. 4-5]
5. ನಮ್ಮ ಕೇಳುಗರನ್ನು ಒಂದು ಚಿರಪರಿಚಿತ ಬೈಬಲ್ ವೃತ್ತಾಂತದ ವಿವರಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಪ್ರೋತ್ಸಾಹಿಸುವಲ್ಲಿ ಪರಿಣಾಮವು ಏನಾಗಬಹುದು? [be-KA ಪು. 232 ಪ್ಯಾರ. 2-4]
ನೇಮಕ ನಂಬರ್ 1
6. ‘[ಸತ್ಯ] ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳುವಂತೆ’ ಜನರಿಗೆ ಕಲಿಸುವುದರಲ್ಲಿ ಏನು ಒಳಗೂಡಿದೆ? (ಪ್ರಸಂ. 12:13) [be-KA ಪು. 272 ಪ್ಯಾರ. 3-4]
7. ಯೆಹೋವನ ಹೆಸರಿನ ಕಡೆಗೆ ಮಾತ್ರವಲ್ಲ ಆತನು ಯಾವ ರೀತಿಯ ದೇವರಾಗಿದ್ದಾನೆಂಬುದರ ಕಡೆಗೂ ನಾವು ಹೇಗೆ ಗಮನವನ್ನು ಸೆಳೆಯಸಾಧ್ಯವಿದೆ? (ಯೋವೇ. 2:32) [be-KA ಪು. 274 ಪ್ಯಾರ. 2-4]
8. ಯೇಸುವಿನ ಕುರಿತಾದ ಜ್ಞಾನವನ್ನು ಪಡೆದುಕೊಳ್ಳುವುದು ಮತ್ತು ಅವನ ವಿಷಯವಾದ ಸಾಕ್ಷಿಯನ್ನು ನೀಡುವುದು ಎಷ್ಟು ಪ್ರಾಮುಖ್ಯವಾಗಿದೆ? (ಯೋಹಾ. 17:3) [be-KA ಪು. 276 ಪ್ಯಾರ. 1]
9. ದೇವರೊಂದಿಗೆ ಅಂಗೀಕೃತ ಸಂಬಂಧಕ್ಕೆ ಬರುವುದು ಮತ್ತು ಬೈಬಲನ್ನು ಅರ್ಥಮಾಡಿಕೊಳ್ಳುವುದು ಯೇಸುವಿನ ಪಾತ್ರವನ್ನು ಅರ್ಥಮಾಡಿಕೊಳ್ಳುವದಕ್ಕೆ ಹೇಗೆ ನೇರವಾಗಿ ಸಂಬಂಧಿಸಿದೆ? [be-KA ಪು. 276 ಪ್ಯಾರ. 2]
10. ಯೇಸು ಕ್ರಿಸ್ತನು ರಾಜನಾಗಿದ್ದಾನೆಂದು ನಿಜವಾಗಿಯೂ ನಂಬುತ್ತೇವೆ ಎಂಬುದನ್ನು ನಾವು ಹೇಗೆ ತೋರಿಸಬಲ್ಲೆವು? [be-KA ಪು. 277 ಪ್ಯಾರ. 4]
ಸಾಪ್ತಾಹಿಕ ಬೈಬಲ್ ವಾಚನ
11. ಅಬ್ರಹಾಮನ ತಂದೆಯಾದ ತೆರಹನು ಒಬ್ಬ ವಿಗ್ರಹಾರಾಧಕನಾಗಿದ್ದನೋ? (ಯೆಹೋ. 24:2)
12. ಯೆಹೋವನು ಕೊಟ್ಟ ನೇಮಕವನ್ನು ಪೂರೈಸಲು ಗಿದ್ಯೋನನಿಗೆ ಧೈರ್ಯದ ಕೊರತೆಯಿತ್ತೇ? ನಿಮ್ಮ ಉತ್ತರಕ್ಕೆ ಆಧಾರವೇನು? (ನ್ಯಾಯ. 6:25-27)
13. ಗಿದ್ಯೋನನು ಎಫ್ರಾಯೀಮ್ ಕುಲದವರನ್ನು ಸಂಬೋಧಿಸಿದ ರೀತಿಯಿಂದ ನಾವು ಏನು ಕಲಿಯಸಾಧ್ಯವಿದೆ? (ನ್ಯಾಯ. 8:1-3)
14. ಗಿಬೆಯದ ಜನರು ಅತಿಥಿಸತ್ಕಾರವನ್ನು ಮಾಡಲು ಮನಸ್ಸುಮಾಡದೆ ಇದ್ದದ್ದು ಏನನ್ನು ಸೂಚಿಸಿತು? (ನ್ಯಾಯ. 19:14, 15)
15. “ಪ್ರತಿಯೊಬ್ಬನೂ ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದ” ವಿಷಯವು ಅರಾಜಕತೆಯನ್ನು ಉತ್ತೇಜಿಸಿತೋ? (ನ್ಯಾಯ. 21:25)