ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 5/05 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2005 ನಮ್ಮ ರಾಜ್ಯದ ಸೇವೆ
2005 ನಮ್ಮ ರಾಜ್ಯದ ಸೇವೆ
km 5/05 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆ​—⁠ಏಪ್ರಿಲ್‌ 18 - ಮೇ 15: ಎಚ್ಚರಿಕೆಯಿಂದಿರಿ! ಬ್ರೋಷರ್‌ ವಿತರಣೆಯ ವಿಶೇಷ ಕಾರ್ಯಾಚರಣೆ. ಮೇ 16-31: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ. ಜ್ಞಾಪಕಾಚರಣೆಗೆ ಮತ್ತು/ಅಥವಾ ಇತರ ದೇವಪ್ರಭುತ್ವಾತ್ಮಕ ಕಾರ್ಯಕ್ರಮಗಳಿಗೆ ಹಾಜರಾದ, ಆದರೆ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿರುವವರನ್ನು ಸೇರಿಸಿ ಎಲ್ಲಾ ಆಸಕ್ತ ಜನರನ್ನು ಪುನರ್ಭೇಟಿಮಾಡುವಾಗ ದೇವರನ್ನು ಆರಾಧಿಸಿರಿ ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಒಂದು ಮನೆ ಬೈಬಲ್‌ ಅಧ್ಯಯನವನ್ನು ಪ್ರಾರಂಭಿಸುವುದೇ ಇದರ ಉದ್ದೇಶವಾಗಿರಬೇಕು; ವಿಶೇಷವಾಗಿ ಈಗಾಗಲೇ ಜ್ಞಾನ ಪುಸ್ತಕ ಮತ್ತು ಅಪೇಕ್ಷಿಸು ಬ್ರೋಷರನ್ನು ಅಧ್ಯಯನ ಮಾಡಿರುವವರಿಗೆ ಇದು ಅನ್ವಯಿಸುತ್ತದೆ. ಜೂನ್‌: ಮಹಾ ಬೋಧಕನಿಂದ ಕಲಿಯಿರಿ* ಪುಸ್ತಕವನ್ನು ನೀಡಿರಿ, ಮತ್ತು ಮನೆಯವರು ತಮಗೆ ಮಕ್ಕಳಿಲ್ಲ ಎಂದು ಹೇಳುವುದಾದರೆ ಅಪೇಕ್ಷಿಸು ಬ್ರೋಷರನ್ನು ನೀಡಿರಿ. ಒಂದು ಮನೆ ಬೈಬಲ್‌ ಅಧ್ಯಯನವನ್ನು ಆರಂಭಿಸಲು ಪ್ರಯತ್ನಿಸಿರಿ. ಜುಲೈ ಮತ್ತು ಆಗಸ್ಟ್‌: ಈ ಮುಂದೆ ತಿಳಿಸಲ್ಪಟ್ಟಿರುವ ಯಾವುದೇ 32 ಪುಟಗಳ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನೀವು ತ್ರಯೈಕ್ಯವನ್ನು ನಂಬ ಬೇಕೋ?, ಪರದೈಸನ್ನು ತರಲಿರುವ ಸರಕಾರ,a ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?,b ಜೀವಿತದ ಉದ್ದೇಶವೇನು?​—⁠ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ.

◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವರಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸ್‌ ಅನ್ನು ಜೂನ್‌ 1ರಂದು ಅಥವಾ ಆದಷ್ಟು ಬೇಗನೆ ಆಡಿಟ್‌ ಮಾಡಬೇಕು. ದುರಸ್ತು ಅಥವಾ ನಿರ್ಮಾಣ ಕೆಲಸಕ್ಕಾಗಿ ಪ್ರತ್ಯೇಕವಾದ ಒಂದು ಅಕೌಂಟನ್ನು ಇಟ್ಟಿರುವುದಾದರೆ, ಅದನ್ನು ಸಹ ಆಡಿಟ್‌ ಮಾಡಲು ಏರ್ಪಾಡು ಮಾಡಿರಿ. ಆಡಿಟ್‌ ಮುಗಿದ ನಂತರ, ಮುಂದಿನ ಅಕೌಂಟ್ಸ್‌ ವರದಿಯೊಂದಿಗೆ ಇದರ ಕುರಿತು ಸಭೆಗೆ ಒಂದು ಪ್ರಕಟನೆಯನ್ನು ಮಾಡಬೇಕು.

◼ ಅಸ್ಸಾಮಿ ಮತ್ತು ಮರಾಠಿ ಭಾಷೆಯ ಸಭೆಗಳು, ಜೂನ್‌ 27ರ ವಾರದಲ್ಲಿ ಆರಂಭವಾಗಲಿರುವ ತಮ್ಮ ಸಭಾ ಪುಸ್ತಕ ಅಧ್ಯಯನಗಳಲ್ಲಿ ಹಿಂದಿ ಭಾಷೆಯ ದಾನಿಯೇಲನ ಪ್ರವಾದನೆ ಪುಸ್ತಕವನ್ನು ಉಪಯೋಗಿಸಲಿವೆ. ತೆಲುಗು, ಬಂಗಾಲಿ ಮತ್ತು ಮೀಸೊ/ಲೂಷಾಯ್‌ ಸಭೆಗಳು ದೇವರನ್ನು ಆರಾಧಿಸಿರಿ ಪುಸ್ತಕವನ್ನು ಅಧ್ಯಯನಕ್ಕಾಗಿ ಉಪಯೋಗಿಸಲಿವೆ.

◼ ಗ್ಯಾಂಗ್‌ಟಾಕ್‌ನಲ್ಲಿ (ನೇಪಾಲಿ) ನಡೆಯಲಿರುವ “ದೈವಿಕ ವಿಧೇಯತೆ” ಜಿಲ್ಲಾ ಅಧಿವೇಶನದ ತಾರೀಖುಗಳು ಬದಲಾಗಿವೆ. ಪರಿಷ್ಕೃತ ತಾರೀಖುಗಳು, 2005ರ ಆಗಸ್ಟ್‌ 12-14.

◼ ಪುನಃ ಲಭ್ಯವಿರುವ ಪ್ರಕಾಶನಗಳು:

ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ ​—⁠ಇಂಗ್ಲಿಷ್‌ ಭಾಷೆಯಲ್ಲಿ ದೊಡ್ಡ ಮುದ್ರಣ

ದಯಮಾಡಿ ಗಮನಿಸಿರಿ. ಇದು ಒಂದು ವಿಶೇಷ ವಿನಂತಿ ಐಟಮ್‌ ಆಗಿದೆ. ಕೇವಲ ಯಾರಿಗೆ ಸರಿಯಾಗಿ ಕಣ್ಣು ಕಾಣುವುದಿಲ್ಲವೊ ಮತ್ತು ಸಣ್ಣ ಮುದ್ರಣವನ್ನು ಓದಲು ಅಶಕ್ತರಾಗಿದ್ದಾರೊ ಅವರಿಗೆ ಮಾತ್ರ ಇದು ದೊರಕುತ್ತದೆ. ಆದುದರಿಂದ, ಸರಿಯಾಗಿ ಕಣ್ಣು ಕಾಣದಂಥ ಪ್ರಚಾರಕರು ಇದನ್ನು ನಿರ್ದಿಷ್ಟವಾಗಿ ವಿನಂತಿಸಿದಾಗ ಮಾತ್ರ ಆರ್ಡರ್‌ ಮಾಡಬೇಕು. ಇದು ನಿಜವಾಗಿಯೂ ಅಗತ್ಯವಿದೆಯೊ ಎಂಬುದನ್ನು ಸರ್ವಿಸ್‌ ಕಮಿಟಿ ಪರೀಕ್ಷಿಸಬೇಕು. ನಂತರ, ಸೊಸೈಟಿಗೆ ಈ ಆರ್ಡರನ್ನು ಕಳುಹಿಸುವ ಮುನ್ನ ಇದರ ಅಗತ್ಯವನ್ನು ಲಿಟ್‌ರೇಚರ್‌ ರಿಕ್ವೆಸ್ಟ್‌ ಫಾರ್ಮ್‌ನ ಮೇಲೆ ಬರೆದು ಕಳುಹಿಸಬೇಕು.

◼ ಹೊಸ ಆಡಿಯೋ ಕಾಂಪ್ಯಾಕ್ಟ್‌ ಡಿಸ್ಕ್‌ಗಳು ಲಭ್ಯವಿವೆ:

ನಿಮ್ಮ ಕಣ್ಣನ್ನು ಸರಳವಾಗಿಟ್ಟುಕೊಳ್ಳಿರಿ ​—⁠ಕನ್ನಡ, ಗುಜರಾಥಿ, ತಮಿಳು, ತೆಲುಗು, ಮಲೆಯಾಳಂ, ಹಿಂದಿ

ಕುಟುಂಬಗಳೇ​—⁠ದೈನಂದಿನ ಬೈಬಲ್‌ ವಾಚನವನ್ನು ನಿಮ್ಮ ಜೀವನಮಾರ್ಗವಾಗಿ ಮಾಡಿರಿ! ​—⁠ಕನ್ನಡ, ತಮಿಳು, ಮಲೆಯಾಳಂ, ಹಿಂದಿ

ಯೆಹೋವನ ಸಮೀಪಕ್ಕೆ ಬನ್ನಿರಿ (MP3 format) ​—⁠ಇಂಗ್ಲಿಷ್‌

ಹದಿನಾಲ್ಕು ಬೈಬಲ್‌ ಡ್ರಾಮಗಳು (ಒಟ್ಟು ಮೂರು CDಗಳು, MP3 formatನಲ್ಲಿ) ​—⁠ಇಂಗ್ಲಿಷ್‌

[ಪಾದಟಿಪ್ಪಣಿಗಳು]

a ಕನ್ನಡದಲ್ಲಿ ಲಭ್ಯವಿಲ್ಲ.

b ಕನ್ನಡದಲ್ಲಿ ಲಭ್ಯವಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ