ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಡಿಸೆಂಬರ್: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ನೀಡಿರಿ. ಅಥವಾ ಬೇರೊಂದು ಪುಸ್ತಕವನ್ನು, ಅಂದರೆ ಸಭೆಯ ಸ್ಟಾಕ್‌ನಲ್ಲಿರುವುದಾದರೆ, ಬೈಬಲ್—ದೇವರ ವಾಕ್ಯವೊ ಮನುಷ್ಯನದ್ದೊ?,a ಬೈಬಲ್ ಕಥೆಗಳ ನನ್ನ ಪುಸ್ತಕ, ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕಗಳನ್ನು ನೀಡಬಹುದು. ಜನವರಿ: ಹಳದಿ ಬಣ್ಣಕ್ಕೆ ತಿರುಗುವ ಇಲ್ಲವೆ ಬಣ್ಣವನ್ನು ಕಳೆದುಕೊಳ್ಳುವಂಥ ಕಾಗದದ ಮೇಲೆ ಮುದ್ರಿಸಲ್ಪಟ್ಟಿರುವ 192 ಪುಟದ ಯಾವುದೇ ಪುಸ್ತಕವನ್ನು ಅಥವಾ 1991ಕ್ಕೆ ಮುಂಚೆ ಪ್ರಕಟಿಸಲ್ಪಟ್ಟ ಯಾವುದೇ ಪುಸ್ತಕವನ್ನು ನೀಡಬಹುದು. ಈ ನೀಡುವಿಕೆಯನ್ನು ಸ್ವೀಕರಿಸದ ಮನೆಯವರಿಗೆ ಎಚ್ಚರಿಕೆಯಿಂದಿರಿ! ಬ್ರೋಷರನ್ನು ನೀಡಿರಿ. ಫೆಬ್ರವರಿ: ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕವನ್ನು ನೀಡಲಾಗುವುದು. ಈ ಪ್ರಕಾಶನವನ್ನು ಹೊಂದಿರದ ಸಭೆಗಳು ಪ್ರಕಟನೆ ಪರಮಾವಧಿ ಪುಸ್ತಕ ಅಥವಾ ಸ್ಟಾಕ್‌ನಲ್ಲಿ ಹೆಚ್ಚು ಪ್ರಮಾಣದಲ್ಲಿರುವ ಇನ್ನಾವುದೇ ಹಳೇ ಪ್ರಕಾಶನವನ್ನು ನೀಡಬಹುದು. ಮಾರ್ಚ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ನೀಡಿರಿ. ಬೈಬಲ್ ಅಧ್ಯಯನಗಳನ್ನು ಆರಂಭಿಸಲು ವಿಶೇಷ ಪ್ರಯತ್ನವನ್ನು ಮಾಡಿರಿ.
◼ ಪ್ರತಿ ಸಭೆಯ ಮುಖ್ಯ ಭಾಷೆಯಲ್ಲಿ ಇಸವಿ 2006ಕ್ಕಾಗಿರುವ ಜ್ಞಾಪಕಾಚರಣೆಯ ಆಮಂತ್ರಣ ಪತ್ರಗಳನ್ನು ಶೀಘ್ರದಲ್ಲೇ ಸಭೆಗೆ ಕಳುಹಿಸಲಾಗುವುದು. ನಿಮ್ಮ ಟೆರಿಟೊರಿಯಲ್ಲಿ ಇತರ ಭಾಷೆಗಳನ್ನಾಡುವವರು ಇರುವಲ್ಲಿ ಮತ್ತು ನಿಮಗೆ ಆ ಭಾಷೆಗಳಲ್ಲಿ ಆಮಂತ್ರಣ ಪತ್ರಗಳು ಬೇಕಾಗಿರುವಲ್ಲಿ ಅವುಗಳಿಗಾಗಿ ಸಾಧ್ಯವಾದಷ್ಟು ಬೇಗನೆ ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್ (S-14)ನ ಮೂಲಕ ವಿನಂತಿಸಿಕೊಳ್ಳತಕ್ಕದ್ದು. ದಯವಿಟ್ಟು ನಿಮ್ಮ ಟೆರಿಟೊರಿಯಲ್ಲಿ ಅಗತ್ಯವಿರುವ ಭಾಷೆಗಳನ್ನು ಮಾತ್ರ ವಿನಂತಿಸಿಕೊಳ್ಳಿರಿ.
◼ ಇಸವಿ 2007ಕ್ಕಾಗಿರುವ ಜ್ಞಾಪಕಾಚರಣೆಯು ಸೋಮವಾರ, ಏಪ್ರಿಲ್ 2ರಂದು ಸೂರ್ಯಾಸ್ತಮಾನದ ನಂತರ ನಡೆಯಲಿರುವುದೆಂಬುದನ್ನು ದಯವಿಟ್ಟು ಗಮನಿಸಿರಿ. ಈ ಮುಂಗಡ ಸೂಚನೆಯು ಕೊಡಲ್ಪಟ್ಟಿರುವುದಕ್ಕೆ ಕಾರಣವೇನೆಂದರೆ, ಒಂದೇ ರಾಜ್ಯ ಸಭಾಗೃಹವನ್ನು ಅನೇಕ ಸಭೆಗಳು ಉಪಯೋಗಿಸುತ್ತಿದ್ದು, ಬೇರೆ ಸಭಾಂಗಣದ ವ್ಯವಸ್ಥೆ ಮಾಡಬೇಕಾಗಿರುವಲ್ಲಿ ಸಹೋದರರು ಲಭ್ಯವಿರುವ ಹಾಲ್‌ಗಳಿಗಾಗಿ ಮಾಡಬೇಕಾದ ಕಾಯ್ದಿರಿಸುವಿಕೆ ಇಲ್ಲವೆ ಕಾಂಟ್ರ್ಯಾಕ್ಟ್ ಅನ್ನು ಮುಂಚಿತವಾಗಿ ಮಾಡಬಹುದಾಗಿದೆ. ಜ್ಞಾಪಕಾಚರಣೆಯು ಶಾಂತಿಯಿಂದ ಮತ್ತು ಕ್ರಮಬದ್ಧವಾಗಿ ನಡೆಯಲು ಸಾಧ್ಯವಾಗುವಂತೆ, ಕಟ್ಟಡದಲ್ಲಿ ಬೇರೆ ಯಾವುದೇ ರೀತಿಯ ಚಟುವಟಿಕೆಗಳ ಗೊಂದಲವು ಇರದಂತೆ ನೋಡಿಕೊಳ್ಳಲು, ಸಭಾಂಗಣದ ನಿರ್ವಾಹಕ ಮಂಡಲಿಯಿಂದ ಹಿರಿಯರು ಒಪ್ಪಿಗೆಯನ್ನು ಪಡೆದುಕೊಳ್ಳಬೇಕು.
◼ ಜ್ಞಾಪಕಾಚರಣೆಯು ಪ್ರಾಮುಖ್ಯವಾದ ಸಂದರ್ಭವಾಗಿರುವುದರಿಂದ, ಜ್ಞಾಪಕಾಚರಣೆಯ ಭಾಷಣಕರ್ತನನ್ನು ಆರಿಸಿಕೊಳ್ಳುವಾಗ, ಹಿರಿಯರ ಮಂಡಲಿಯು ತಮ್ಮೊಳಗೆ ಸರದಿಗನುಸಾರ ಭಾಷಣವನ್ನು ಕೊಡುವ ಅಥವಾ ಕೇವಲ ಒಬ್ಬ ಸಹೋದರನನ್ನೇ ಪ್ರತಿ ವರ್ಷ ಆಯ್ಕೆಮಾಡುವ ಬದಲು, ಹೆಚ್ಚು ಅರ್ಹನಾದ ಒಬ್ಬ ಹಿರಿಯನನ್ನು ಆಯ್ಕೆಮಾಡಬೇಕು. ಹಿರಿಯರಲ್ಲಿ ಭಾಷಣ ನೀಡಲು ಉತ್ತಮ ಅರ್ಹತೆಯಿರುವ ಅಭಿಷಿಕ್ತ ಸಹೋದರನೊಬ್ಬನು ಇರುವುದಾದರೆ ಅವನನ್ನು ಆಯ್ಕೆಮಾಡತಕ್ಕದ್ದು.
◼ ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ನಮ್ಮ ರಾಜ್ಯದ ಸೇವೆಯನ್ನು ಪಡೆಯುತ್ತಿರುವ ಸಭೆಗಳಿಗೆ, ಆ ಭಾಷೆಗಳಲ್ಲಿ “ಪವಿತ್ರ ಗ್ರಂಥವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ ಎಂಬ ಶೀರ್ಷಿಕೆಯುಳ್ಳ ಬ್ರೋಷರ್‌ನ ಸರಬರಾಯಿಯು ಕಳುಹಿಸಲಾಗುತ್ತಿದೆ. ಈ ಬ್ರೋಷರ್‌ನಲ್ಲಿ, ಇಸವಿ 2006ರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿನ ನೇಮಕ ನಂ. 1ರ ಮೂಲ ವಿಷಯಭಾಗವು ಅಡಕವಾಗಿದೆ. ಕನ್ನಡ, ತೆಲುಗು, ಹಿಂದಿಯಲ್ಲಿ 2006ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶೆಡ್ಯೂಲ್‌ನ ಪರಿಷ್ಕೃತ ಪ್ರತಿಗಳನ್ನು ಶೀಘ್ರದಲ್ಲೇ ನಿಮಗೆ ಕಳುಹಿಸಲಾಗುವುದು. ಇನ್ನಿತರ ಭಾಷೆಯ ಸಭೆಗಳು ಇಲ್ಲಿ ತಿಳಿಸಲ್ಪಟ್ಟಿರುವ ಯಾವುದೇ ಭಾಷೆಗಳಲ್ಲಿನ ಬ್ರೋಷರ್‌ಗಳನ್ನು ಸದುಪಯೋಗಿಸಲು ಬಯಸುವುದಾದರೆ ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್ (S-14)ನ ಮೂಲಕ ವಿನಂತಿಗಳನ್ನು ಕಳುಹಿಸಬಹುದು.
◼ ಲಭ್ಯವಿರುವ ಹೊಸ ಕಾಂಪ್ಯಾಕ್ಟ್ ಡಿಸ್ಕ್‌ಗಳು:
ಮಹಾ ಬೋಧಕನಿಂದ ಕಲಿಯಿರಿ—ಕಾಂಪ್ಯಾಕ್ಟ್ ಡಿಸ್ಕ್‌ನಲ್ಲಿ (MP3 format)—ಇಂಗ್ಲಿಷ್
ಬೈಬಲ್ ಕಥೆಗಳ ನನ್ನ ಪುಸ್ತಕ—ಕಾಂಪ್ಯಾಕ್ಟ್ ಡಿಸ್ಕ್‌ನಲ್ಲಿ (MP3 format)—ಇಂಗ್ಲಿಷ್
ನಿತ್ಯಜೀವಕ್ಕೆ ನಡೆಸುವ ಜ್ಞಾನ—ಕಾಂಪ್ಯಾಕ್ಟ್ ಡಿಸ್ಕ್‌ನಲ್ಲಿ (MP3 format)—ಇಂಗ್ಲಿಷ್
ಕುಟುಂಬ ಸಂತೋಷದ ರಹಸ್ಯ—ಕಾಂಪ್ಯಾಕ್ಟ್ ಡಿಸ್ಕ್‌ನಲ್ಲಿ (MP3 format)—ಇಂಗ್ಲಿಷ್
ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ—ಕಾಂಪ್ಯಾಕ್ಟ್ ಡಿಸ್ಕ್‌ನಲ್ಲಿ (MP3 format)—ಇಂಗ್ಲಿಷ್
ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ—ಕಾಂಪ್ಯಾಕ್ಟ್ ಡಿಸ್ಕ್‌ನಲ್ಲಿ (MP3 format)—ಇಂಗ್ಲಿಷ್
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?—ಕಾಂಪ್ಯಾಕ್ಟ್ ಡಿಸ್ಕ್‌ನಲ್ಲಿ—ಇಂಗ್ಲಿಷ್, ಕನ್ನಡ, ಬಂಗಾಲಿ, ಮಲೆಯಾಳಂ
ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ—ಕಾಂಪ್ಯಾಕ್ಟ್ ಡಿಸ್ಕ್‌ನಲ್ಲಿ—ಇಂಗ್ಲಿಷ್, ಕನ್ನಡ, ಗುಜರಾಥಿ, ತಮಿಳು, ತೆಲುಗು, ಪಂಜಾಬಿ, ಮಲೆಯಾಳಂ, ಹಿಂದಿ
ನಮ್ಮ ಆತ್ಮಿಕ ಪರಂಪರೆಯನ್ನು ಗಣ್ಯಮಾಡುವುದು—ಕಾಂಪ್ಯಾಕ್ಟ್ ಡಿಸ್ಕ್‌ನಲ್ಲಿ (ಡ್ರಾಮ) —ಹಿಂದಿ
[ಪಾದಟಿಪ್ಪಣಿ]
a ಕನ್ನಡದಲ್ಲಿ ಲಭ್ಯವಿಲ್ಲ.