ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/06 ಪು. 3
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2006 ನಮ್ಮ ರಾಜ್ಯದ ಸೇವೆ
2006 ನಮ್ಮ ರಾಜ್ಯದ ಸೇವೆ
km 7/06 ಪು. 3

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆ​—⁠ಜುಲೈ ಮತ್ತು ಆಗಸ್ಟ್‌: 32 ಪುಟಗಳ ಮುಂದಿನ ಯಾವುದೇ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, ಪರದೈಸನ್ನು ತರಲಿರುವ ಸರಕಾರ,* “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನೀವು ತ್ರಯೈಕ್ಯವನ್ನು ನಂಬ ಬೇಕೋ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಜೀವಿತದ ಉದ್ದೇಶವೇನು​—⁠ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಮತ್ತು ಎಚ್ಚರಿಕೆಯಿಂದಿರಿ! ಕೆಲವು ಸ್ಥಳಗಳಲ್ಲಿ, ಈ ಮುಂದಿನ ಬ್ರೋಷರ್‌ಗಳನ್ನು ನೀಡುವುದು ಸೂಕ್ತವಾಗಿರಬಹುದು: ಸಕಲ ಜನರಿಗಾಗಿರುವ ಒಂದು ಗ್ರಂಥ, ಯುದ್ಧರಹಿತವಾದ ಒಂದು ಲೋಕವು ಎಂದಾದರೂ ಇರುವುದೊ?, ನಮ್ಮ ಸಮಸ್ಯೆಗಳು​—⁠ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಸತ್ತವರ ಆತ್ಮಗಳು​—⁠ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ?* ಸಂತೃಪ್ತಿಕರವಾದ ಜೀವನ​—⁠ಲಭ್ಯವಾಗುವ ವಿಧ. ಸೆಪ್ಟೆಂಬರ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ನೀಡಿರಿ. ಮೊದಲ ಭೇಟಿಯಲ್ಲೇ ಬೈಬಲ್‌ ಅಧ್ಯಯನವನ್ನು ಆರಂಭಿಸಲು ವಿಶೇಷ ಪ್ರಯತ್ನವನ್ನು ಮಾಡತಕ್ಕದ್ದು. ಪುಸ್ತಕಗಳನ್ನು ನೀಡಿರುವಲ್ಲೆಲ್ಲ, ಮನೆ ಬೈಬಲ್‌ ಅಧ್ಯಯನವನ್ನು ಆರಂಭಿಸುವ ಗುರಿಯೊಂದಿಗೆ ಪುನರ್ಭೇಟಿಗಳನ್ನು ಮಾಡತಕ್ಕದ್ದು. ಬೋಧಿಸು ಪುಸ್ತಕದೊಂದಿಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಟ್ರ್ಯಾಕ್ಟ್‌ ಅನ್ನು ಸಹ ನೀಡಿರಿ. ಅಕ್ಟೋಬರ್‌: ಕಾವಲಿನಬುರುಜು ಮತ್ತು ಎಚ್ಚರ! ಪ್ರತಿಕೆಯ ಬಿಡಿ ಪತ್ರಿಕೆಗಳನ್ನು ನೀಡಿರಿ. ಆಸಕ್ತಿಯು ಕಂಡುಬಂದಲ್ಲಿ, ಬೈಬಲಿನಲ್ಲಿ ಇನ್ನೂ ಆಸಕ್ತಿಯನ್ನು ಹೆಚ್ಚಿಸಲಿಕ್ಕಾಗಿ ಎಚ್ಚರಿಕೆಯಿಂದಿರಿ! ಬ್ರೋಷರನ್ನು ಪರಿಚಯಪಡಿಸಿರಿ.

◼ ಸೆಪ್ಟೆಂಬರ್‌ನಿಂದ ಸಂಚರಣ ಮೇಲ್ವಚಾರಕರು, “ದೇವರೊಂದಿಗಿನ ನಿಮ್ಮ ನಿಲುವು ಹೇಗಿದೆ?” ಎಂಬ ಶೀರ್ಷಿಕೆಯುಳ್ಳ ಬಹಿರಂಗ ಭಾಷಣವನ್ನು ನೀಡುವರು.

◼ ರೆಗ್ಯುಲರ್‌ ಪಯನೀಯರ್‌ ಸೇವೆಯನ್ನು ಆರಂಭಿಸಲು ವಿನಂತಿಸಿಕೊಂಡಿರುವ ತಾರೀಖಿಗಿಂತ ಕಡಿಮೆಪಕ್ಷ 30 ದಿವಸಗಳ ಮುಂಚೆ ಅದರ ಅರ್ಜಿಗಳನ್ನು ಬ್ರಾಂಚ್‌ ಆಫೀಸಿಗೆ ಕಳುಹಿಸಬೇಕಾಗಿದೆ. ಈ ಅರ್ಜಿಗಳನ್ನು ಬ್ರಾಂಚ್‌ ಆಫೀಸಿಗೆ ಕಳುಹಿಸುವ ಮುನ್ನ, ಅವನ್ನು ಪೂರ್ಣವಾಗಿ ಭರ್ತಿಮಾಡಲಾಗಿದೆಯೊ ಎಂಬುದನ್ನು ಸಭಾ ಸೆಕ್ರಿಟರಿಯು ಪರಿಶೀಲಿಸಬೇಕು. ಅರ್ಜಿದಾರರಿಗೆ ತಮ್ಮ ದೀಕ್ಷಾಸ್ನಾನದ ಸರಿಯಾದ ತಾರೀಖು ಜ್ಞಾಪಕವಿಲ್ಲದಿರುವಲ್ಲಿ, ಅವರು ಅಂದಾಜಿಗನುಸಾರ ಹಾಕಿ, ಅದರ ಒಂದು ದಾಖಲೆಯನ್ನು ಇಡಬೇಕು. ಸೆಕ್ರಿಟರಿಯು ಈ ತಾರೀಖನ್ನು ಕಾಂಗ್ರಿಗೇಷನ್‌ ಪಬ್ಲಿಷರ್‌ ರೆಕಾರ್ಡ್‌ (S-21) ಕಾರ್ಡ್‌ನಲ್ಲಿ ದಾಖಲಿಸತಕ್ಕದ್ದು.

◼ ಸಭೆಯಲ್ಲಿರುವ ಪ್ರತಿಯೊಬ್ಬ ರೆಗ್ಯುಲರ್‌ ಪಯನೀಯರರಿಗೆ ಒಂದು ಪಯನೀಯರ್‌ ನೇಮಕ ಪತ್ರ (S-202) ಇದೆ ಎಂಬುದನ್ನು ಸಭೆಯ ಸೆಕ್ರಿಟರಿ ಖಾತ್ರಿಪಡಿಸಿಕೊಳ್ಳಬೇಕು. ಒಂದುವೇಳೆ ಇಲ್ಲದಿದ್ದರೆ, ಕೂಡಲೇ ಬ್ರಾಂಚ್‌ ಆಫೀಸಿಗೆ ಬರೆಯತಕ್ಕದು.

◼ ಸ್ಟಾಕ್‌ನಲ್ಲಿರುವ ಎಲ್ಲ ಸಾಹಿತ್ಯ ಹಾಗೂ ಪತ್ರಿಕೆಗಳ ವಾರ್ಷಿಕ ಇನ್ವೆಂಟರಿಯನ್ನು, 2006ರ ಆಗಸ್ಟ್‌ 31ರಂದು ಅಥವಾ ಅದಕ್ಕೆ ಸಾಧ್ಯವಿರುವಷ್ಟು ಹತ್ತಿರದ ತಾರೀಖಿನಂದು ತಯಾರಿಸತಕ್ಕದ್ದು. ಈ ಇನ್ವೆಂಟರಿಯು ಸಾಹಿತ್ಯ ಸಂಯೋಜಕನಿಂದ ಮಾಸಿಕವಾಗಿ ಮಾಡಲ್ಪಡುವ ಲೆಕ್ಕದಂತೆಯೇ ಇರುವುದು, ಮತ್ತು ಒಟ್ಟು ಮೊತ್ತಗಳನ್ನು ಲಿಟ್‌ರೇಚರ್‌ ಇನ್ವೆಂಟರಿ (S-18) ಫಾರ್ಮ್‌ನಲ್ಲಿ ಭರ್ತಿಮಾಡಬೇಕು. ಸದ್ಯಕ್ಕೆ ಸ್ಟಾಕ್‌ನಲ್ಲಿ ಎಷ್ಟು ಪತ್ರಿಕೆಗಳಿವೆ ಎಂಬುದನ್ನು ಪತ್ರಿಕಾ ಸೇವಕನಿಂದ(ರಿಂದ) ಕೇಳಿ ತಿಳಿದುಕೊಳ್ಳಬೇಕು. ಸಹಯೋಜಕ ಸಭೆಯ ಸೆಕ್ರಿಟರಿಯು ಇನ್ವೆಂಟರಿಯ ಕೆಲಸದ ಮೇಲ್ವಿಚಾರಣೆಯನ್ನು ಮಾಡಬೇಕು. ಅವನು ಮತ್ತು ಸಹಯೋಜಕ ಸಭೆಯ ಅಧ್ಯಕ್ಷ ಮೇಲ್ವಿಚಾರಕನು ಫಾರ್ಮ್‌ಗೆ ಸಹಿಹಾಕುವರು. ಪ್ರತಿಯೊಂದು ಸಹಯೋಜಕ ಸಭೆಯು ಮೂರು ಲಿಟ್‌ರೇಚರ್‌ ಇನ್ವೆಂಟರಿ ಫಾರ್ಮ್‌ಗಳನ್ನು ಪಡೆದುಕೊಳ್ಳುವುದು. ದಯವಿಟ್ಟು ಮೂಲಪ್ರತಿಯನ್ನು ಸೆಪ್ಟೆಂಬರ್‌ 6ನೆಯ ತಾರೀಖಿನೊಳಗೆ ಬ್ರಾಂಚ್‌ ಆಫೀಸಿಗೆ ಅಂಚೆಯ ಮೂಲಕ ಕಳುಹಿಸಿಕೊಡಿ. ಒಂದು ಪ್ರತಿಯನ್ನು ನಿಮ್ಮ ಫೈಲ್‌ಗಳಿಗಾಗಿ ಇಟ್ಟುಕೊಳ್ಳಿ. ಮೂರನೆಯ ಪ್ರತಿಯನ್ನು ಒಂದು ವರ್ಕ್‌ ಷೀಟ್‌ ಆಗಿ ಉಪಯೋಗಿಸಬಹುದು.

◼ ಕೋಳಿಕೋಡ್‌ನಲ್ಲಿ 2006ರ ಸೆಪ್ಟೆಂಬರ್‌ 15-17ರಂದು ನಡೆಯಲಿರುವ ಬಿಡುಗಡೆಯು ಸಮೀಪವಿದೆ! ಜಿಲ್ಲಾ ಅಧಿವೇಶನದ ಮುಖ್ಯಕಾರ್ಯಾಲಯದ ಪರಿಷ್ಕೃತ ವಿಳಾಸ: T. S. James, 34/761-A, Nithya Jeevan House, Malaparamba P. O., Kozhikode 673 009 KER.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ