ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ!
1 “ಈ ಪ್ರವಾದನವಾಕ್ಯಗಳನ್ನು ಓದುವಂಥವನೂ ಕೇಳುವಂಥವರೂ ಈ ಪ್ರವಾದನೆಯಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವಂಥವರೂ ಧನ್ಯರು. ಅವು ನೆರವೇರುವ ಸಮಯವು ಸಮೀಪವಾಗಿದೆ.” (ಪ್ರಕ. 1:3) ಈ ಮಾತುಗಳು ಪ್ರಕಟನೆ ಪುಸ್ತಕದ ಮೌಲ್ಯವನ್ನು ಎತ್ತಿತೋರಿಸುತ್ತವೆ, ಏಕೆಂದರೆ ಅದರಲ್ಲಿನ ಅನೇಕ ಪ್ರವಾದನೆಗಳು ನೆರವೇರಲಿರುವ ನೇಮಿತ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. ಸೂಕ್ತವಾಗಿಯೇ ನಾವು, 2007ರ ಜನವರಿ 8ರಂದು ಆರಂಭವಾಗುವ ವಾರದ ಸಭಾ ಪುಸ್ತಕ ಅಧ್ಯಯನದಲ್ಲಿ, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತಕದ ಅಧ್ಯಯನವನ್ನು ಪ್ರಾರಂಭಿಸಲಿದ್ದೇವೆ.
2 ನಾವು ಕಳೆದ ಬಾರಿ ಸಭಾ ಪುಸ್ತಕ ಅಧ್ಯಯನದಲ್ಲಿ ಪ್ರಕಟನೆ ಪರಮಾವಧಿ ಪುಸ್ತಕವನ್ನು ಅಧ್ಯಯನಮಾಡಿದಂದಿನಿಂದ ಪ್ರಪಂಚದಲ್ಲಿ ಅನೇಕ ಬದಲಾವಣೆಗಳಾಗಿವೆ. (1 ಕೊರಿಂ. 7:31) ಅಲ್ಲದೆ, ರಾಜ್ಯದ ಸುವಾರ್ತೆಯನ್ನು ಸಾರುವವರೊಂದಿಗೆ ಜೊತೆಗೂಡಿರುವ ಹೊಸಬರು, ಪ್ರಕಟನೆ ಪುಸ್ತಕದ ಪ್ರತಿಯೊಂದು ವಚನದ ಚರ್ಚೆಯಿಂದ ಪ್ರಯೋಜನಪಡೆದುಕೊಂಡಿಲ್ಲ. ಪ್ರಕಟನೆ ಪರಮಾವಧಿ ಪುಸ್ತಕದ ಅಧ್ಯಯನವು, ಮುಂದೇನು ನಡೆಯಲಿದೆಯೊ ಅದರ ವಿಷಯದಲ್ಲಿ ನಾವೆಲ್ಲರೂ ಎಚ್ಚರವಾಗಿರುವಂತೆ ಸಹಾಯಮಾಡತಕ್ಕದ್ದು.—ಪ್ರಕ. 16:15.
3 ಪ್ರತಿ ವಾರ ಸಭಾ ಪುಸ್ತಕ ಅಧ್ಯಯನಕ್ಕೆ ಹಾಜರಿರಲು ದೃಢಮನಸ್ಸು ಮಾಡಿರಿ. ಈ ವಿಷಯಭಾಗವು, ನಾವು ಎಚ್ಚರದಿಂದಿರುವಂತೆ ನಮಗೆ ಸಹಾಯಮಾಡುವುದು. ಅಲ್ಲದೆ, ನಮ್ಮ ಆಧ್ಯಾತ್ಮಿಕತೆ ಮತ್ತು ಶುಶ್ರೂಷೆಯಲ್ಲಿನ ಪಾಲ್ಗೊಳ್ಳುವಿಕೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವಂಥ ಸನ್ನಿವೇಶಗಳು ಹಾಗೂ ಪರಿಸ್ಥಿತಿಗಳಿಂದ ದೂರವಿರುವಂತೆ, ಯೇಸು ಏಳು ಸಭೆಗಳಿಗೆ ಕೊಟ್ಟ ಸಂದೇಶಗಳು ನಮಗೆ ಸಹಾಯಮಾಡುವವು.—ಪ್ರಕ. 1:11, 19.
4 ಒಳ್ಳೇ ತಯಾರಿ ಮಾಡಿರಿ: ಪ್ರತಿಯೊಂದು ಪುಸ್ತಕ ಅಧ್ಯಯನದ ಮುಂಚೆ, ಅಧ್ಯಯನದಲ್ಲಿ ಪರಿಶೀಲಿಸಲಿಕ್ಕಿರುವ ವಚನಗಳನ್ನು ಬೈಬಲಿನಿಂದ ಓದಿರಿ. ಆ ವಚನಗಳನ್ನು ವಿವರಿಸುವ ಶಾಸ್ತ್ರಾಧಾರಿತ ತರ್ಕಕ್ಕೆ ಗಮನಕೊಡಿರಿ. ನಿಮ್ಮ ಹೃದಯವನ್ನು ಪ್ರಚೋದಿಸುವ ಸಲುವಾಗಿ ಮುಖ್ಯ ಅಂಶಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. (ನೆಹೆ. 8:8, 12) ಧ್ಯಾನಮಾಡಲು ಮತ್ತು ಹೀಗೆ ಕೇಳಿಕೊಳ್ಳಲು ಸಮಯತೆಗೆದುಕೊಳ್ಳಿ: ‘ಯೆಹೋವನ ಬಗ್ಗೆ ಮತ್ತು ಆತನ ಉದ್ದೇಶದ ನೆರವೇರಿಕೆಯ ಬಗ್ಗೆ ಇದು ನನಗೇನನ್ನು ಕಲಿಸುತ್ತಿದೆ? ನಾನು ಹೇಗೆ ಆತನ ಉದ್ದೇಶಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯಬಲ್ಲೆ ಮತ್ತು ಇತರರಿಗೆ ಸಹಾಯಮಾಡಬಲ್ಲೆ?’
5 “ಕರ್ತನ ದಿನ” 1914ರಲ್ಲಿ ಆರಂಭವಾಗಿ ತೊಂಬತ್ತೆರಡು ವರ್ಷಗಳು ಗತಿಸಿವೆ. (ಪ್ರಕ. 1:10) ಪ್ರಕಟನೆ ಪುಸ್ತಕದಲ್ಲಿ ಮುಂತಿಳಿಸಲ್ಪಟ್ಟಿರುವ ಭೂಮಿಯನ್ನು ನಡುಗಿಸುವಂಥ ಘಟನೆಗಳು ನಮ್ಮ ಮುಂದೆಯೇ ಇವೆ. ಪ್ರಕಟನೆ ಪರಮಾವಧಿ ಪುಸ್ತಕದ ಅಧ್ಯಯನವು, “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ” ಮತ್ತು ಹೊಸ ಲೋಕವು ಹತ್ತಿರವಿದೆ ಎಂಬುದನ್ನು ಸೂಚಿಸುತ್ತಾ ನಮ್ಮ ಹೃದಮನಗಳನ್ನು ಚೈತನ್ಯಗೊಳಿಸಿ, ನಮ್ಮ ನಂಬಿಕೆಯನ್ನು ಬಲಗೊಳಿಸುವುದು.—ಪ್ರಕ. 16:14; 21:4, 5.