ಸೇವಾ ಕೂಟದ ಶೆಡ್ಯೂಲ್
ನವೆಂಬರ್ 13ರಿಂದ ಆರಂಭವಾಗುವ ವಾರ
ಗೀತೆ 152
10 ನಿ: ಸ್ಥಳಿಕ ಪ್ರಕಟನೆಗಳು. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಬೇರೆ ಯಾವುದೇ ನಿರೂಪಣೆಗಳನ್ನು ಉಪಯೋಗಿಸುತ್ತಾ, ನವೆಂಬರ್ 1ರ ಕಾವಲಿನಬುರುಜು ಮತ್ತು 2006ರ ಅಕ್ಟೋಬರ್-ಡಿಸೆಂಬರ್ ಎಚ್ಚರ! ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದು ಪ್ರತ್ಯಕ್ಷಾಭಿನಯದಲ್ಲಿ, “ನನಗೆ ಈವಾಗಲೇ ನಿಮ್ಮ ಕೆಲಸದ ಒಳ್ಳೆಯ ಪರಿಚಯವಿದೆ” ಎಂಬ ಸಂಭಾಷಣಾ ತಡೆಗಟ್ಟನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ತೋರಿಸಿರಿ.—ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ ಪುಟ 12ನ್ನು ನೋಡಿರಿ.
20 ನಿ: ಸುವಾರ್ತೆಯ ಶುಶ್ರೂಷಕರು. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಪುಟ 77ರಿಂದ ಹಿಡಿದು 83ನೇ ಪುಟದಲ್ಲಿರುವ ಉಪಶೀರ್ಷಿಕೆಯ ವರೆಗಿನ ವಿಷಯದ ಮೇಲಾಧರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ.
15 ನಿ: “ಧೀರರಾದರೂ ಸಮಾಧಾನದಿಂದಿರುವವರು.” a ಶುಶ್ರೂಷಾ ಶಾಲೆ ಪುಸ್ತಕದ 252-3ನೇ ಪುಟಗಳಲ್ಲಿ, “ಮಣಿಯಬೇಕಾಗಿರುವ ಸಮಯ” ಎಂಬ ಉಪಶೀರ್ಷಿಕೆಯ ಕೆಳಗಿರುವ ವಿಷಯವನ್ನು ಒಳಗೂಡಿಸಿ.
ಗೀತೆ 39 ಮತ್ತು ಸಮಾಪ್ತಿಯ ಪ್ರಾರ್ಥನೆ.
ನವೆಂಬರ್ 20ರಿಂದ ಆರಂಭವಾಗುವ ವಾ
ಗೀತೆ 132
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
15 ನಿ: ಸ್ಥಳಿಕ ಅಗತ್ಯಗಳು.
20 ನಿ: ಡಿಸೆಂಬರ್ ತಿಂಗಳಿನಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ನೀಡುವುದು. ಸಭಿಕರೊಂದಿಗೆ ಚರ್ಚೆ. ಅತ್ಯಂತ ಮಹಾನ್ ಪುರುಷ ಪುಸ್ತಕದ ಯಾವ ಅಂಶವು ಸಭಿಕರಿಗೆ ಇಷ್ಟವಾಗಿದೆ ಮತ್ತು ಈ ಪುಸ್ತಕವನ್ನು ಅವರು ಈ ಹಿಂದೆ ನೀಡಿದಾಗ ದೊರೆತ ವಿಶೇಷ ಅನುಭವಗಳನ್ನು ಹೇಳುವಂತೆ ಕೇಳಿಕೊಳ್ಳಿರಿ. 2005, ಜನವರಿ ತಿಂಗಳ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿರುವ ಮಾದರಿ ನಿರೂಪಣೆಗಳನ್ನು ಪುನರ್ವಿಮರ್ಶಿಸಿರಿ. ಮಾದರಿ ನಿರೂಪಣೆಗಳಿಂದ ಒಂದನ್ನು ಅಥವಾ ನಿಮ್ಮ ಸ್ಥಳಿಕ ಟೆರಿಟೊರಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗುವ ಬೇರೊಂದು ನಿರೂಪಣೆಯನ್ನು ಬಳಸಿ ಈ ಪುಸ್ತಕವನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
ಗೀತೆ 203 ಮತ್ತು ಸಮಾಪ್ತಿ ಪ್ರಾರ್ಥನೆ.
ನವೆಂಬರ್ 27ರಿಂದ ಆರಂಭವಾಗುವ ವಾರ
ಗೀತೆ 111
5 ನಿ:ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ.
10 ನಿ: ದೇವರ ಹೃದಯವನ್ನು ಸಂತೋಷಪಡಿಸುವ ಕಾಣಿಕೆಗಳು. ಹಿರಿಯನಿಂದ 2005, ನವೆಂಬರ್ 1 ಕಾವಲಿನಬುರುಜು, 26-30ನೇ ಪುಟಗಳ ಮೇಲಾಧರಿತವಾದ ಭಾಷಣ.
15 ನಿ: “ಪತ್ರಿಕಾ ನಿರೂಪಣೆಯನ್ನು ತಯಾರಿಸುವುದು ಹೇಗೆ?” b 3 ನಿಮಿಷದ ಪ್ರತ್ಯಕ್ಷಾಭಿನಯ ಒಂದರಲ್ಲಿ ಇಬ್ಬರು ಪ್ರಚಾರಕರು, ಪ್ರಾಯಶಃ ಒಂದು ದಂಪತಿಯು 8ನೇ ಪುಟದಲ್ಲಿ (ಡಿಸೆಂಬರ್ 1ರ ಕಾವಲಿನಬುರುಜು ಅಥವಾ ಅಕ್ಟೋಬರ್-ಡಿಸೆಂಬರ್ ಎಚ್ಚರ!ದಲ್ಲಿ) ಕಂಡುಬರುವ ನಿರೂಪಣೆಯೊಂದನ್ನು ಆಯ್ದು ಅದನ್ನು ಹೇಗೆ ತಮ್ಮ ಸ್ವಂತ ಮಾತುಗಳಲ್ಲಿ ಉಪಯೋಗಿಸಬಹುದು ಎಂಬುದನ್ನು ನಿರ್ಣಯಿಸುತ್ತಾರೆ. ತದನಂತರ ಅವರು ಈಗ ತಾನೇ ಚರ್ಚಿಸಿದ ಲೇಖನದಲ್ಲಿನ ಸಲಹೆಗಳನ್ನು ಉಪಯೋಗಿಸುತ್ತಾ, ತಮ್ಮ ಟೆರಿಟೊರಿಗೆ ಸಮಯೋಚಿತವಾಗಿ ತೋರುವ ಮತ್ತೊಂದು ಲೇಖನವನ್ನು ಅವರು ಜನರಿಗೆ ಹೇಗೆ ನೀಡುವರು ಎಂಬುದನ್ನು ತಯಾರಿಸಿ ಅದನ್ನು ಪ್ರತ್ಯಕ್ಷಾಭಿನಯಿಸುತ್ತಾರೆ.
15 ನಿ: “ರಕ್ತದ ಅಂಶಗಳ ಬಗ್ಗೆ ಮತ್ತು ನನ್ನ ಸ್ವಂತ ರಕ್ತವನ್ನು ಬಳಸುವ ಚಿಕಿತ್ಸಾಕ್ರಮಗಳ ಬಗ್ಗೆ ನನ್ನ ನಿರ್ಣಯವೇನು?” c ಪ್ರಶ್ನೋತ್ತರ ಚರ್ಚೆ ಮತ್ತು ಪ್ರತ್ಯಕ್ಷಾಭಿನಯ. ಈ ಭಾಗವನ್ನು ನಿರ್ವಹಿಸುವ ಹಿರಿಯನು ಬ್ರಾಂಚ್ ಒದಗಿಸಿರುವ ಹೊರಮೇರೆಯನ್ನು ನಿಕಟವಾಗಿ ಪಾಲಿಸಬೇಕು.
ಗೀತೆ 120 ಮತ್ತು ಸಮಾಪ್ತಿ ಪ್ರಾರ್ಥನೆ.
ಡಿಸೆಂಬರ್ 4ರಿಂದ ಆರಂಭವಾಗುವ ವಾರ
ಗೀತೆ 155
10 ನಿ: ಸ್ಥಳಿಕ ಪ್ರಕಟನೆಗಳು. ನವೆಂಬರ್ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ.
15 ನಿ: “ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ!” d ಸಭೆಯು ಈ ಪುಸ್ತಕದ ವಿಶೇಷ ವೈಶಿಷ್ಟ್ಯಗಳ, ಉದಾಹರಣೆಗೆ ಚೌಕಗಳ ಮತ್ತು ಚಿತ್ರಗಳ ಸದುಪಯೋಗ ಮಾಡುವಂತೆ ಉತ್ತೇಜಿಸಿರಿ. ಪ್ರತಿ ಅಧ್ಯಯನದ ಕೊನೆಯಲ್ಲಿ ಪಾಠವನ್ನು ನೇರವಾಗಿ ಬೈಬಲಿನಿಂದ ಪುನರ್ವಿಮರ್ಶಿಸಿರಿ.
20 ನಿ: ಉತ್ತರ ಕೊಡುವಾಗ ಬೈಬಲನ್ನು ಉಪಯೋಗಿಸಿರಿ. 2002, ಆಗಸ್ಟ್ 15ರ ಕಾವಲಿನಬುರುಜು, ಪುಟ 17-18ರಲ್ಲಿ, “ನಾವು ಬೋಧಿಸುವಂಥ ಸತ್ಯಗಳಿಗಾಗಿ ಪ್ರೀತಿಯನ್ನು ತೋರಿಸುವುದು” ಎಂಬ ಉಪಶೀರ್ಷಿಕೆಯ ಕೆಳಗಿರುವ ವಿಷಯದ ಮೇಲಾಧರಿತವಾದ ಸಭಿಕರೊಂದಿಗಿನ ಚರ್ಚೆ. ಪ್ರತಿ ಪ್ರಶ್ನೆಗೆ ತಮ್ಮ ಹೇಳಿಕೆಗಳನ್ನು ಕೊಡುವಂತೆ ಸಭಿಕರನ್ನು ಉತ್ತೇಜಿಸಿರಿ. ಸಹೋದ್ಯೋಗಿಯೊಬ್ಬನು, “ನೀವು ಕ್ರಿಸ್‌ಮಸ್ ಏಕೆ ಆಚರಿಸುವುದಿಲ್ಲ?” ಎಂದು ಕೇಳುವಾಗ ಪ್ರಚಾರಕನು ತರ್ಕಿಸು (ಇಂಗ್ಲಿಷ್) ಪುಸ್ತಕವನ್ನು ಬಳಸಿ ಶಾಸ್ತ್ರಾಧಾರಿತವಾದ ಉತ್ತರಕೊಡುವುದನ್ನು ಪ್ರತ್ಯಕ್ಷಾಭಿನಯಿಸಿರಿ.
ಗೀತೆ 168 ಮತ್ತು ಸಮಾಪ್ತಿ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.