ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ—ಫೆಬ್ರವರಿ: ನಿಮ್ಮ ಕುರಿತು ಕಾಳಜಿ ವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ? (ಇಂಗ್ಲಿಷ್) ಅಥವಾ ಕುಟುಂಬ ಸಂತೋಷದ ರಹಸ್ಯ. ಮಾರ್ಚ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಬೈಬಲ್ ಅಧ್ಯಯನವನ್ನು ಆರಂಭಿಸಲು ಶ್ರದ್ಧೆಯಿಂದ ಪ್ರಯತ್ನಿಸಿ. ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಜ್ಞಾಪಕಾಚರಣೆಗೆ ಮತ್ತು ವಿಶೇಷ ಬಹಿರಂಗ ಭಾಷಣಕ್ಕೆ ಹಾಜರಾದರೂ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದ ಹೊಸ ಆಸಕ್ತ ಜನರನ್ನು ಭೇಟಿಮಾಡಲು ವಿಶೇಷ ಪ್ರಯತ್ನಮಾಡಲಾಗುವುದು. ಇಂಥ ಭೇಟಿಯ ಮುಖ್ಯ ಉದ್ದೇಶವು, ಇನ್ನೂ ಬೈಬಲ್ ಅಧ್ಯಯನವನ್ನು ಸ್ವೀಕರಿಸದವರೊಂದಿಗೆ ಅಧ್ಯಯನವನ್ನು ಆರಂಭಿಸುವುದೇ ಆಗಿರಬೇಕು.
◼ ಮಾರ್ಚ್ ತಿಂಗಳಿನಲ್ಲಿ ಐದು ವಾರಾಂತ್ಯಗಳಿರುವುದರಿಂದ ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಇದೊಂದು ಅತ್ಯುತ್ತಮ ಅವಕಾಶವಾಗಿರುವುದು.
◼ ಕಾರ್ಯದರ್ಶಿ ಮತ್ತು ಸೇವಾ ಮೇಲ್ವಿಚಾರಕನು ಎಲ್ಲಾ ರೆಗ್ಯುಲರ್ ಪಯನೀಯರರ ಚಟುವಟಿಕೆಯನ್ನು ಪರಿಶೀಲಿಸಬೇಕು. ಅವರಲ್ಲಿ ಯಾರಿಗಾದರೂ ತಾಸುಗಳನ್ನು ಪೂರ್ಣಗೊಳಿಸಲು ಕಷ್ಟಕರವಾಗಿರುವುದಾದರೆ, ನೆರವನ್ನು ನೀಡಲಿಕ್ಕಾಗಿ ಹಿರಿಯರು ಏರ್ಪಾಡು ಮಾಡಬೇಕು.
◼ ಇಸವಿ 2008ರ ಜ್ಞಾಪಕಾಚರಣೆಯ ಸಮಯದ ವಿಶೇಷ ಬಹಿರಂಗ ಭಾಷಣದ ಶೀರ್ಷಿಕೆಯು “ಮಾನವಕುಲವನ್ನು ಆಳಲು ಯಾರು ಅರ್ಹರು?” ಎಂದಾಗಿರುವುದು. ಇದಕ್ಕೆ ಸಂಬಂಧಿಸಿದ ಪ್ರಕಟನೆಗಾಗಿ ಸೆಪ್ಟೆಂಬರ್ 2007ರ ನಮ್ಮ ರಾಜ್ಯದ ಸೇವೆಯನ್ನು ನೋಡಿರಿ.
◼ ಸಭೆಯ ಕಾರ್ಯದರ್ಶಿಗಳು ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್‌ನ (S-14) ಪುಟ 2ರಲ್ಲಿ ಪಟ್ಟಿಮಾಡಲಾದ ಈ ಕೆಳಗಿನಂಥ ಎಲ್ಲ ಫಾರ್ಮ್‌ಗಳನ್ನು ಸಾಕಷ್ಟು ಹೊಂದಿರುವಂತೆ ನೋಡಿಕೊಳ್ಳಬೇಕು. ಕ್ಷೇತ್ರ ಸೇವಾ ವರದಿ (S-4), ಹೌಸ್-ಟು-ಹೌಸ್ ರೆಕಾರ್ಡ್ (S-8), ಕಾಂಗ್ರಿಗೇಷನ್ ಪಬ್ಲಿಷರ್ ರೆಕಾರ್ಡ್ (S-21), ರಿಸೀಟ್ (S-24), ಕಾಂಗ್ರಿಗೇಷನ್ ಮೀಟಿಂಗ್ ಅಟೆಂಡನ್ಸ್ ರೆಕಾರ್ಡ್ (S-88), ತಿಅಕ್ರ್ಯಾಟಿಕ್ ಮಿನಿಸ್ಟ್ರಿ ಸ್ಕೂಲ್ ಅಸೈನ್‌ಮನ್ಟ್ (S-89), ಆ್ಯಪ್ಲಿಕೇಷನ್ ಫಾರ್ ಆಕ್ಸಿಲಿಯರಿ ಪಯನೀಯರ್ ಸರ್ವಿಸ್ (S-205b), ಡ್ಯೂರಬ್ಲ್ ಪವರ್ ಆಫ್ ಅಟರ್ನಿ ಫಾರ್ ಹೆಲ್ತ್ ಕೇರ್ (dpa) ಮತ್ತು ಐಡೆಂಟಿಟಿ ಕಾರ್ಡ್ (ic). ಇವುಗಳನ್ನು ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್‌ನ (S-14) ಮೂಲಕ ವಿನಂತಿಸಿಕೊಳ್ಳಬಹುದು. ಕಡಿಮೆಪಕ್ಷ ಒಂದು ವರ್ಷಕ್ಕೆ ಬೇಕಾಗುವಷ್ಟನ್ನು ಇಟ್ಟುಕೊಳ್ಳಿರಿ.
◼ ಲಭ್ಯವಿರುವ ಹೊಸ ಆಡಿಯೋ ಕಾಂಪ್ಯಾಕ್ಟ್ ಡಿಸ್ಕ್:
ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ?—MP3 —ಇಂಗ್ಲಿಷ್
◼ ಲಭ್ಯವಿರುವ ಹೊಸ ಡಿವಿಡಿಗಳು:
ಅವರು ಸುವಾರ್ತೆಗೆ ಸಮಗ್ರ ಸಾಕ್ಷಿಯನ್ನು ನೀಡಿದರು —ಅಮೆರಿಕನ್ ಸನ್ನೆ ಭಾಷೆ
ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ —ಅಮೆರಿಕನ್ ಸನ್ನೆ ಭಾಷೆ
ದೇವರಿಗೆ ಘನತೆ ತರುವಂಥ ಗುರಿಗಳನ್ನು ಬೆನ್ನಟ್ಟಿರಿ —ಇಂಗ್ಲಿಷ್
2008ರ ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಮತ್ತು 2008ರ ಕ್ಯಾಲೆಂಡರ್‌ಗಳೊಂದಿಗೆ ಗುರಿಗಳನ್ನು ಬೆನ್ನಟ್ಟಿರಿ ಡಿವಿಡಿಯ ಒಂದು ಪ್ರತಿಯನ್ನು ಎಲ್ಲ ಸಭೆಗಳಿಗೆ ಕಳುಹಿಸಲಾಗಿದೆ. ಪ್ರಚಾರಕರು ಆ ವಿಡಿಯೋವನ್ನು ನೋಡಲಿಚ್ಛಿಸುವಾಗ ಸಭೆಯ ಲೈಬ್ರರಿಯಿಂದ ಕೇಳಿ ಪಡಕೊಳ್ಳಬಹುದು ಮತ್ತು ಬಳಿಕ ಅದನ್ನು ಹಿಂದಿರುಗಿಸತಕ್ಕದ್ದು. ಹೆಚ್ಚಿನ ಪ್ರತಿಗಳು ಲಭ್ಯವಿರುವಲ್ಲಿ ನಮ್ಮ ರಾಜ್ಯದ ಸೇವೆಯಲ್ಲಿ ಮುಂದೆ ಪ್ರಕಟಿಸಲಾಗುವುದು. ಆಗ ಪ್ರಚಾರಕರು ಹೆಚ್ಚಿನ ಪ್ರತಿಗಳಿಗೆ ವಿನಂತಿಸಿಕೊಳ್ಳಬಹುದು.