ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2008ರ ಫೆಬ್ರವರಿ 25ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2008ರ ಜನವರಿ 7ರಿಂದ ಫೆಬ್ರವರಿ 25ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲೆ ಆಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ಸಭಿಕರು ಶಾಸ್ತ್ರವಚನಗಳ ಅರ್ಥವನ್ನು ಗ್ರಹಿಸಲು ಸಾಧ್ಯವಾಗುವಂತೆ ನಾವೇನು ಮಾಡಬೇಕು, ಮತ್ತು ಏಕೆ? [be-KA ಪು. 228 ಪ್ಯಾರ 2-3]
2. ನಮ್ಮ ನಿರೂಪಣೆಗಳನ್ನು ಸಭಿಕರಿಗೆ ಬೋಧಪ್ರದವಾಗಿ ಮಾಡುವುದು ಪ್ರಾಮುಖ್ಯವೇಕೆ, ಮತ್ತು ನಾವಿದನ್ನು ಹೇಗೆ ಸಾಧಿಸಬಲ್ಲೆವು? [be-KA ಪು. 230 ಪ್ಯಾರ 3-5, ಚೌಕ]
3. ನಮ್ಮ ಭಾಷಣಗಳನ್ನು ಹೆಚ್ಚು ಬೋಧಪ್ರದವಾಗಿ ಮಾಡಲು ಸಂಶೋಧನೆಯು ಹೇಗೆ ಸಹಾಯಮಾಡುತ್ತದೆ? [be-KA ಪು. 231 ಪ್ಯಾರ 1-3]
4. ಚಿರಪರಿಚಿತ ಶಾಸ್ತ್ರವಚನಗಳನ್ನು ಉಪಯೋಗಿಸುವಾಗ ಅವು ಬೋಧಪ್ರದವಾಗಿರುವಂತೆ ನಾವೇನು ಮಾಡಬಲ್ಲೆವು? [be-KA ಪು. 231 ಪ್ಯಾರ 4-5]
5. ನಾವು ಓದುವ ವಚನಗಳನ್ನು ತಾರ್ಕಿಕವಾಗಿ ವಿವರಿಸುವುದು ಏಕೆ ಪ್ರಾಮುಖ್ಯ? [be-KA ಪು. 232 ಪ್ಯಾರ 3-4]
ನೇಮಕ ನಂ. 1
6. ಮತ್ತಾಯನ ಪುಸ್ತಕವನ್ನು ಮುಖ್ಯವಾಗಿ ಯೆಹೂದ್ಯರನ್ನು ಮನಸ್ಸಿನಲ್ಲಿಟ್ಟು ಬರೆಯಲಾಗಿತ್ತು ಎಂಬುದನ್ನು ಯಾವುದು ಸೂಚಿಸುತ್ತದೆ? [bsi08-1-KA ಪು. 4 ಪ್ಯಾರ 6-7]
7. ಭಾಷಣಕರ್ತನ ಮೂಲಕ ಯೆಹೋವನು ಒದಗಿಸುವ ಶಿಕ್ಷಣವನ್ನು ಪಡೆದುಕೊಳ್ಳಲಿಕ್ಕಾಗಿ ನಾವು ನಮ್ಮ ‘ಹೃದಯಗಳನ್ನು ಸಿದ್ಧಪಡಿಸಿಕೊಳ್ಳುವುದು’ ಹೇಗೆ? (2 ಪೂರ್ವ. 20:33, NW) [be-KA ಪು. 13 ಪ್ಯಾರ 4-ಪು. 14 ಪ್ಯಾರ 5]
8. ತಮ್ಮ ಮಕ್ಕಳು “ರಕ್ಷಣೆಹೊಂದಿಸುವ ಜ್ಞಾನವನ್ನು” ಪಡೆದುಕೊಳ್ಳುವಂತೆ ತರಬೇತುಗೊಳಿಸಲು ಹೆತ್ತವರು ಏನು ಮಾಡಬಲ್ಲರು? (2 ತಿಮೊ. 3:15) [be-KA ಪು. 16 ಪ್ಯಾರ 3-4]
9. ಮತ್ತಾಯನ ಸುವಾರ್ತೆಯು ಬೈಬಲ್ ಪ್ರವಾದನೆಯ ನೆರವೇರಿಕೆಯನ್ನು ಹೇಗೆ ಎತ್ತಿತೋರಿಸುತ್ತದೆ? [bsi08-1-KA ಪು. 5 ಪ್ಯಾರ 32]
10. ಮತ್ತಾಯನು ಯೇಸುವನ್ನು ವಾಗ್ದತ್ತ ಮೆಸ್ಸೀಯ ಮತ್ತು ರಾಜನೆಂದು ಚಿತ್ರಿಸುವಾಗ, ಮಾರ್ಕನು ಯೇಸುವನ್ನು ಹೇಗೆ ವರ್ಣಿಸುತ್ತಾನೆ? [bsi08-1-KA ಪು. 7 ಪ್ಯಾರ 7-8]
ವಾರದ ಬೈಬಲ್ ವಾಚನ
11. ಸಿಟ್ಟನ್ನು ವ್ಯಕ್ತಪಡಿಸುವುದು ಸಿಟ್ಟನ್ನಿಟ್ಟುಕೊಳ್ಳುವುದಕ್ಕಿಂತ ಹೆಚ್ಚು ಗಂಭೀರವಾಗಿದೆಯೇ? (ಮತ್ತಾ. 5:21, 22) [w08-KA 1/15 “ಯೆಹೋವನ ವಾಕ್ಯವು ಸಜೀವವಾದದ್ದು—ಮತ್ತಾಯ ಪುಸ್ತಕದ ಮುಖ್ಯಾಂಶಗಳು”]
12. ಕ್ರೈಸ್ತರು ತಮ್ಮ ‘ಕಣ್ಣನ್ನು ನೆಟ್ಟಗಿಡುವುದು’ ಅಂದರೆ ಸರಳವಾಗಿಡುವುದು ಹೇಗೆ? (ಮತ್ತಾ. 6:22, 23) [w06-KA 10/1 ಪು. 30]
13. “ಈ ಎಲ್ಲಾ ಮಾತುಗಳ ಅರ್ಥವು ನಿಮಗೆ ತಿಳಿಯಿತೋ” ಎಂದು ಕೇಳುವಾಗ ಯೇಸು ತನ್ನ ಶಿಷ್ಯರಿಗೆ ಏನನ್ನು ಹೇಳಬಯಸಿದನು? (ಮತ್ತಾ. 13:51, 52) [w08-KA 1/15 “ಯೆಹೋವನ ವಾಕ್ಯವು ಸಜೀವವಾದದ್ದು—ಮತ್ತಾಯ ಪುಸ್ತಕದ ಮುಖ್ಯಾಂಶಗಳು”]
14. ಯೇಸು ಯಾರನ್ನು ಸ್ವಸ್ಥಪಡಿಸಿದನೊ ಅವರಿಗೆ “ತಾನು ಇಂಥವನೆಂಬದಾಗಿ ಯಾರಿಗೂ ಪ್ರಕಟಿಸಬಾರದೆಂದು” ಸಾಮಾನ್ಯವಾಗಿ ಆಜ್ಞಾಪಿಸಿದ್ದೇಕೆ? (ಮತ್ತಾ. 12:16) [gt-KA ಅಧ್ಯಾ. 45; cl-KA ಪು. 93-4]
15. ಒಬ್ಬನು “ಅಳೆಯುವ ಅಳತೆಯಿಂದಲೇ” ‘ಅಳೆಯಲ್ಪಡುವನು’ ಎಂದು ಯೇಸು ಹೇಳಿದಾಗ ಏನನ್ನು ಸೂಚಿಸಿದನು? (ಮಾರ್ಕ 4:24, 25) [gt-KA ಅಧ್ಯಾ. 43]