ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ—ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಜ್ಞಾಪಕಾಚರಣೆಗೆ ಮತ್ತು ವಿಶೇಷ ಬಹಿರಂಗ ಭಾಷಣಕ್ಕೆ ಹಾಜರಾದರೂ ಸಭೆಯೊಂದಿಗೆ ಸಕ್ರಿಯವಾಗಿ ಸಹವಸಿಸದ ಹೊಸ ಆಸಕ್ತ ಜನರನ್ನು ಭೇಟಿಮಾಡಲು ವಿಶೇಷ ಪ್ರಯತ್ನಮಾಡಲಾಗುವುದು. ಇಂಥ ಭೇಟಿಯ ಮುಖ್ಯ ಉದ್ದೇಶವು ಇನ್ನೂ ಬೈಬಲ್ ಅಧ್ಯಯನವನ್ನು ಸ್ವೀಕರಿಸದವರಿಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಟ್ರ್ಯಾಕ್ಟನ್ನು ನೀಡಿ ಅಧ್ಯಯನವನ್ನು ಆರಂಭಿಸುವುದೇ ಆಗಿರಬೇಕು. ಜೂನ್: ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್) ಅಥವಾ ಬೈಬಲ್—ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್) ಈ ಸಾಹಿತ್ಯಗಳು ಇಲ್ಲದಿರುವ ಸಭೆಗಳು ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ ಪುಸ್ತಕವನ್ನು ನೀಡಬಹುದು.
◼ 2008ರ ಜಿಲ್ಲಾ ಅಧಿವೇಶನದ ಬ್ಯಾಡ್ಜ್ ಕಾರ್ಡ್‌ಗಳನ್ನು ಮೇ 2008ರೊಳಗಾಗಿ ಸಭೆಗಳಿಗೆ ಕಳುಹಿಸಿಕೊಡಲಾಗುವುದು. ಸಭೆಗಳು ತಮ್ಮ ತಮ್ಮ ಭಾಷೆಯಲ್ಲಿ ಬ್ಯಾಡ್ಜ್ ಕಾರ್ಡ್‌ಗಳನ್ನು ಪಡಕೊಳ್ಳುವವು ಮತ್ತು ಅವು ಪ್ರಚಾರಕರ ಸಂಖ್ಯೆಗಿಂತಲೂ ಅಧಿಕವಾಗಿರುವವು. ಆದುದರಿಂದ ಇವುಗಳಿಗಾಗಿ ಸಭೆಗಳು ವಿನಂತಿಯನ್ನು ಕಳುಹಿಸಬೇಕಾಗಿಲ್ಲ. ಆದರೆ ಬೇರೆ ಭಾಷೆಗಳಲ್ಲಿ ಅಥವಾ ಅಧಿಕ ಬ್ಯಾಡ್ಜ್ ಕಾರ್ಡ್‌ಗಳು ಬೇಕಾಗಿದ್ದಲ್ಲಿ ವಿನಂತಿಸಿಕೊಳ್ಳಬಹುದು. ಇಂಥ ವಿನಂತಿಗಳನ್ನು ಮಿತ ಪ್ರಮಾಣದಲ್ಲಿ ಬ್ರಾಂಚ್ ಆಫೀಸಿಗೆ ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್ (S-14) ಮೂಲಕ ಕಳುಹಿಸತಕ್ಕದ್ದು.
◼ ರೆಗ್ಯುಲರ್ ಪಯನೀಯರ್ ಸೇವೆಗಾಗಿರುವ ಅರ್ಜಿ (S-205) ಹಾಗೂ ಆಕ್ಸಿಲಿಯರಿ ಪಯನೀಯರ್ ಸೇವೆಗಾಗಿರುವ ಅರ್ಜಿಗಳ (S-205b) ಸಾಕಷ್ಟು ಸರಬರಾಯಿಯನ್ನು ಹೊಂದಿರುವಂತೆ ಸಭೆಯ ಕಾರ್ಯದರ್ಶಿಗಳು ನೋಡಿಕೊಳ್ಳಬೇಕು. ಅವುಗಳನ್ನು ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್ (S-14) ಮೂಲಕ ವಿನಂತಿಸಿಕೊಳ್ಳತಕ್ಕದ್ದು. ಕಡಿಮೆಪಕ್ಷ ಒಂದು ವರ್ಷಕ್ಕೆ ಬೇಕಾಗುವಷ್ಟು ಅರ್ಜಿಗಳನ್ನು ಇಟ್ಟುಕೊಳ್ಳಿರಿ. ರೆಗ್ಯುಲರ್ ಪಯನೀಯರ್ ಸೇವೆಯ ಅರ್ಜಿಗಳನ್ನು ಬ್ರಾಂಚ್ ಆಫೀಸಿಗೆ ಕಳುಹಿಸುವ ಮುಂಚೆ, ಅವು ಪೂರ್ತಿಯಾಗಿ ಭರ್ತಿಮಾಡಲ್ಪಟ್ಟಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
◼ ಎಲ್ಲ ಅಧ್ಯಕ್ಷ ಮೇಲ್ವಿಚಾರಕರು ಮತ್ತು ಕಾರ್ಯದರ್ಶಿಗಳ ಸದ್ಯದ ವಿಳಾಸಗಳು ಮತ್ತು ಟೆಲಿಫೋನ್ ನಂಬರುಗಳ ದಾಖಲೆಯನ್ನು ಬ್ರಾಂಚ್ ಆಫೀಸ್ ಹೊಂದಿರುವುದು ಬಹಳ ಅಗತ್ಯವಾಗಿದೆ. ಯಾವುದೇ ಸಮಯದಲ್ಲಿ ಇದರಲ್ಲಿ ಬದಲಾವಣೆಗಳಿರುವುದಾದರೆ, ಸಭೆಯ ಸೇವಾ ಕಮಿಟಿಯು ಅಧ್ಯಕ್ಷ ಮೇಲ್ವಿಚಾರಕ/ಸೆಕ್ರಿಟರಿಯ ವಿಳಾಸದ ಬದಲಾವಣೆ ಫಾರ್ಮ್ (S-29) ಭರ್ತಿಮಾಡಿ ಸಹಿಹಾಕಿ ತಡಮಾಡದೆ ಬ್ರಾಂಚ್ ಆಫೀಸಿಗೆ ಕಳುಹಿಸತಕ್ಕದ್ದು. ಇದರಲ್ಲಿ ಎಸ್‌ಟಿಡಿ ಕೋಡ್‌ಗಳಲ್ಲಾಗುವ ಯಾವುದೇ ಬದಲಾವಣೆಗಳು ಒಳಗೂಡಿರುತ್ತವೆ.
◼ ನಿಮ್ಮ ವೈಯಕ್ತಿಕ ಪ್ರಯಾಣದ ಯೋಜನೆಗಳಲ್ಲಿ ವಿದೇಶದಲ್ಲಿನ ಸಭಾ ಕೂಟಗಳಿಗೋ ಸಮ್ಮೇಳನಕ್ಕೋ ಜಿಲ್ಲಾ ಅಧಿವೇಶನಕ್ಕೋ ಹಾಜರಾಗುವ ಯೋಜನೆ ಸೇರಿರುವುದಾದರೆ, ಅಂಥ ಕಾರ್ಯಕ್ರಮಗಳು ನಡೆಯುವ ತಾರೀಖು, ಸಮಯ ಮತ್ತು ಸ್ಥಳಗಳ ಕುರಿತಾದ ಮಾಹಿತಿಗಾಗಿರುವ ನಿಮ್ಮ ವಿನಂತಿಯನ್ನು ಆ ದೇಶದಲ್ಲಿನ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತಿರುವ ಬ್ರಾಂಚ್ ಆಫೀಸಿಗೆ ಕಳುಹಿಸತಕ್ಕದ್ದು. ಬ್ರಾಂಚ್ ಆಫೀಸುಗಳ ವಿಳಾಸಗಳನ್ನು ಈ ವರ್ಷದ ಯಿಯರ್‌ಬುಕ್‌ನ ಕೊನೆಯ ಪುಟದಲ್ಲಿ ಕೊಡಲಾಗಿದೆ.
◼ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಟ್ರ್ಯಾಕ್ಟ್‌ಗಳನ್ನು ಸಭೆಗಳಿಗೆ ಕಳುಹಿಸಲಾಗುವುದು. ನಿಮ್ಮೊಂದಿಗೆ ಆ ಟ್ರ್ಯಾಕ್ಟ್‌ಗಳನ್ನು ತಪ್ಪದೆ ಕೊಂಡೊಯ್ದು ಹೊಸ ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಉಪಯೋಗಿಸಿರಿ. ವಿರೋಧಗಳಿರುವಂಥ ಸ್ಥಳಗಳಲ್ಲಿ ಮೊದಲು ಮನೆಯವನಿಗೆ ಆಸಕ್ತಿಯಿದೆಯೋ ಎಂದು ವಿವೇಚಿಸಿ ತಿಳಿದುಕೊಂಡು ಬಳಿಕ ಸೂಕ್ತವಾಗಿದ್ದಲ್ಲಿ ಆ ಟ್ರ್ಯಾಕ್ಟನ್ನು ನೀಡಿರಿ.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ —ಬಂಗಾಲಿ
“ಬೈಬಲ್ ಕಥೆಗಳ ನನ್ನ ಪುಸ್ತಕ” ಅಧ್ಯಯನ ಪ್ರಶ್ನೆಗಳು —ಗುಜರಾಥಿ, ಬಂಗಾಲಿ, ಮರಾಠಿ
ಈ ಮೇಲಿನ ಪ್ರಶ್ನಾ ಪುಸ್ತಿಕೆಗಳನ್ನು ಸಭಾ ಪುಸ್ತಕ ಅಧ್ಯಯನಕ್ಕಾಗಿ ಬೇಕಾಗುವಷ್ಟು ಪ್ರಮಾಣದಲ್ಲಿ ಸಭೆಗಳು ಆರ್ಡರ್ ಮಾಡಬಹುದು. ದಯವಿಟ್ಟು ಏಪ್ರಿಲ್ ತಿಂಗಳ ಸಾಹಿತ್ಯ ವಿನಂತಿಯೊಂದಿಗೆ ನಿಮ್ಮ ಆರ್ಡರ್ ಅನ್ನು ಸೇರಿಸಿರಿ.