ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2008ರ ಏಪ್ರಿಲ್ 28ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2008ರ ಮಾರ್ಚ್ 3ರಿಂದ ಏಪ್ರಿಲ್ 28ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು.
ಭಾಷಣ ಗುಣಗಳು
1. ನಮ್ಮ ಭಾಷಣವನ್ನು ನೇಮಿಸಲ್ಪಟ್ಟಿರುವ ವಿಷಯಭಾಗದ ಸುತ್ತಲೂ ರಚಿಸುವುದು ಪ್ರಾಮುಖ್ಯವೇಕೆ, ಮತ್ತು ನಾವಿದನ್ನು ಹೇಗೆ ಮಾಡಬಲ್ಲೆವು? [be-KA ಪು. 234 ಪ್ಯಾರ. 1-ಪು. 235 ಪ್ಯಾರ. 1]
2. ನಾವು ಬೋಧಿಸುವಾಗ ಪ್ರಶ್ನೆಗಳ ಉಪಯೋಗ ಬಹಳ ಪ್ರಯೋಜನಕಾರಿಯಾಗಿದೆ ಏಕೆ? [be-KA ಪು. 236 ಪ್ಯಾರ. 1-5]
3. ವಿಷಯವಸ್ತುವಿನ ಕುರಿತು ತರ್ಕಿಸಲಿಕ್ಕಾಗಿ ಪ್ರಶ್ನೆಗಳು ಕೇಳುಗರಿಗೆ ಹೇಗೆ ಸಹಾಯಮಾಡುತ್ತವೆ? [be-KA ಪು. 237 ಪ್ಯಾರ. 3-ಪು. 238 ಪ್ಯಾರ. 1]
4. ಬೋಧಿಸುತ್ತಿರುವಾಗ, ಕೇಳುಗರ ಆಂತರಿಕ ಅನಿಸಿಕೆಗಳನ್ನು ಹೊರತರಲಿಕ್ಕಾಗಿ ಪ್ರಶ್ನೆಗಳನ್ನು ಕುಶಲತೆಯಿಂದ ಕೇಳುವುದು ಪ್ರಾಮುಖ್ಯವೇಕೆ? (ಜ್ಞಾನೋ. 20:5; ಮತ್ತಾ. 16:13-16; ಯೋಹಾ. 11:26) [be-KA ಪು. 238 ಪ್ಯಾರ. 3-5]
5. ಬೋಧಿಸುವಾಗ ಉಪಮಾಲಂಕಾರಗಳನ್ನು ಬಳಸುವುದು ಪ್ರಯೋಜನಕರವೇಕೆ? (ಆದಿ. 22:17; ಯೆರೆ. 13:11) [be-KA ಪು. 240 ಪ್ಯಾರ. 1-3]
ನೇಮಕ ನಂ. 1
6. ದೇವರ ರಾಜ್ಯದ ಕೆಳಗೆ ನಾವು ಜೀವವನ್ನು ಪಡೆಯುವಂತೆ ಸಹಾಯಮಾಡುವ ಯಾವ ಮಾರ್ಗದರ್ಶಕ ಮೂಲತತ್ತ್ವಗಳನ್ನು ಮಾರ್ಕ ಪುಸ್ತಕದಲ್ಲಿ ಎತ್ತಿತೋರಿಸಲಾಗಿದೆ? [bsi08-1-KA ಪು. 8 ಪ್ಯಾರ. 32]
7. ಇಂದಿನ ದೇವರ ಸೇವಕರಿಗೆ ಪವಿತ್ರಾತ್ಮವು ಹೇಗೆ ಸಹಾಯ ಮಾಡುತ್ತದೆ? (ಯೋಹಾ. 14:25, 26) [be-KA ಪು. 19 ಪ್ಯಾರ. 3-4]
8. ವಾಚನದಿಂದ ಬರುವ ಅತ್ಯುತ್ತಮ ಪ್ರಯೋಜನ ಯಾವುದು? [be-KA ಪು. 21 ಪ್ಯಾರ. 3]
9. ಅಧ್ಯಯನ ಮಾಡುವುದರಲ್ಲಿ ಏನು ಒಳಗೂಡಿದೆ? [be-KA ಪು. 27 ಪ್ಯಾರ. 3-ಪು. 28 ಪ್ಯಾರ. 1]
10. ಹೀಬ್ರು ಶಾಸ್ತ್ರಗಳ ದೈವಪ್ರೇರಣೆಯ ಬಗ್ಗೆ ಲೂಕನ ಸುವಾರ್ತಾ ಪುಸ್ತಕವು ಹೇಗೆ ನಮ್ಮ ಭರವಸೆಯನ್ನು ಹೆಚ್ಚಿಸುತ್ತದೆ? [bsi08-1-KA ಪು. 11 ಪ್ಯಾರ. 30-1]
ವಾರದ ಬೈಬಲ್ ವಾಚನ
11. ತನ್ನನ್ನು “ಒಳ್ಳೇ ಬೋಧಕನೇ” ಎಂದು ಸಂಬೋಧಿಸಿದ ವ್ಯಕ್ತಿಯನ್ನು ಯೇಸು ಏಕೆ ತಿದ್ದಿದನು? (ಮಾರ್ಕ 10:17, 18) [w08-KA 2/15 “ಯೆಹೋವನ ವಾಕ್ಯವು ಸಜೀವವಾದದ್ದು—ಮಾರ್ಕ ಪುಸ್ತಕದ ಮುಖ್ಯಾಂಶಗಳು”]
12. ಇಸ್ರಾಯೇಲ್ ಜನಾಂಗದ ಸಂಬಂಧದಲ್ಲಿ ಏನನ್ನು ದೃಷ್ಟಾಂತಿಸಲು ಯೇಸು ಅಂಜೂರದ ಮರವನ್ನು ಉಪಯೋಗಿಸಿದನು? (ಮಾರ್ಕ 11:12-14, 20, 21) [w03-KA 5/15 ಪು. 26 ಪ್ಯಾರ. 2-3]
13. ಮರಿಯಳ ಮೇಲೆ ಪವಿತ್ರಾತ್ಮ ಬಂದು ದೇವರ ಶಕ್ತಿಯ ನೆರಳು ಆಕೆಯ ಮೇಲೆ ಬೀಳುವ ಫಲಿತಾಂಶವಾಗಿ ಆಕೆ ‘ಗರ್ಭಿಣಿಯಾಗುವಳು’ ಎಂದು ದೇವದೂತನಾದ ಗಬ್ರಿಯೇಲನು ಹೇಳಿದ ಮಾತುಗಳು ಏನನ್ನು ಸೂಚಿಸುತ್ತವೆ? (ಲೂಕ 1:30, 31, 34, 35) [w08-KA 3/15 “ಯೆಹೋವನ ವಾಕ್ಯವು ಸಜೀವವಾದದ್ದು—ಲೂಕ ಪುಸ್ತಕದ ಮುಖ್ಯಾಂಶಗಳು”; it-2 ಪು. 56 ಪ್ಯಾರ. 2]
14. ಯೇಸುವಿನ ಶಿಷ್ಯರು ನಿಜವಾಗಿಯೂ ‘ಸಬ್ಬತ್ದಿನದಲ್ಲಿ ಮಾಡಬಾರದ ಕೆಲಸವನ್ನು ಮಾಡಿದ್ದರೋ’? (ಲೂಕ 6:1, 2) [gt-KA 31]
15. ಮಾರ್ಥಳಿಗೆ ಯೇಸು ಕೊಟ್ಟ ಸಲಹೆಯಿಂದ ಯಾವ ಪಾಠವನ್ನು ಕಲಿಯಬಹುದು? (ಲೂಕ 10:40-42) [w99-KA 9/1 ಪು. 31]