ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಫೆಬ್ರವರಿ: ನಿಮ್ಮ ಕುರಿತು ಕಾಳಜಿ ವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ? (ಇಂಗ್ಲಿಷ್), ಕುಟುಂಬ ಸಂತೋಷದ ರಹಸ್ಯ ಅಥವಾ ಬೈಬಲ್ ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್), ಇವುಗಳಲ್ಲಿ ಲಭ್ಯವಿರುವ ಪುಸ್ತಕವನ್ನು ನೀಡಿರಿ. ಮಾರ್ಚ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಶ್ರದ್ಧೆಯಿಂದ ಪ್ರಯತ್ನಿಸಿ. ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಜ್ಞಾಪಕಾಚರಣೆ ಮತ್ತು ಇತರ ದೇವಪ್ರಭುತ್ವಾತ್ಮಕ ಸಂದರ್ಭಗಳಿಗೆ ಹಾಜರಾಗುತ್ತಾರಾದರೂ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದವರು ಸೇರಿದಂತೆ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ನೀಡಲು ಪ್ರಯತ್ನಿಸಿ. ಆ ಪುಸ್ತಕವನ್ನು ಉಪಯೋಗಿಸಿ ಒಂದು ಮನೆ ಬೈಬಲ್ ಅಧ್ಯಯನವನ್ನು ಪ್ರಾರಂಭಿಸುವುದೇ ಇದರ ಉದ್ದೇಶವಾಗಿರಬೇಕು.
◼ ಇಸವಿ 2009ರ ಜ್ಞಾಪಕಾಚರಣೆ ಅವಧಿಯ ವಿಶೇಷ ಸಾರ್ವಜನಿಕ ಭಾಷಣದ ಮುಖ್ಯ ವಿಷಯವು “ದೇವರು ಎಲ್ಲಾ ರೀತಿಯ ಆರಾಧನೆಯನ್ನು ಮೆಚ್ಚುತ್ತಾನೋ?” ಎಂದಾಗಿದೆ. ಇದರ ಕುರಿತಾದ ಪ್ರಕಟಣೆಯನ್ನು ಸೆಪ್ಟೆಂಬರ್ 2008ರ ನಮ್ಮ ರಾಜ್ಯ ಸೇವೆಯಲ್ಲಿ ನೋಡಿ.
◼ ಜ್ಞಾಪಕಾಚರಣೆಯ ಆಮಂತ್ರಣ ಪತ್ರಗಳಿಗಾಗಿ ಸಭೆಯು ಬ್ರಾಂಚ್ ಆಫೀಸಿಗೆ ವಿನಂತಿಯನ್ನು ಕಳುಹಿಸದಿದ್ದಲ್ಲಿ, ಪ್ರತಿ ಪ್ರಚಾರಕರಿಗೆ 25ರಂತೆ ಹಾಗೂ ಪಯನೀಯರರಿಗೆ 75ರಂತೆ ಸಭೆಯ ಮುಖ್ಯ ಭಾಷೆಯಲ್ಲಿ ಆಮಂತ್ರಣ ಪತ್ರಗಳನ್ನು ಕಳುಹಿಸಲಾಗುವುದು.