ಜ್ಞಾಪಕಾಚರಣೆಗೆ ಪೂರ್ಣವಾಗಿ ತಯಾರಾಗಿರ್ರಿ
ಯೇಸುಕ್ರಿಸ್ತನ ಮರಣದ ಜ್ಞಾಪಕಾಚರಣೆಯ ರಾತ್ರಿಗಾಗಿ ಪೂರ್ಣ ತಯಾರಿಮಾಡುವುದು ಕ್ರಿಸ್ತನ ಹಿಂಬಾಲಕರಿಗೆ ಅದೆಷ್ಟು ಮಹಾ ಸುಯೋಗ ಮತ್ತು ಸಂತೋಷ! (ಲೂಕ 22:19) ಜ್ಞಾಪಕಾಚರಣೆಗೆ ತಯಾರಿಸಲು ಯಾವ ವ್ಯಾವಹಾರಿಕ ಹೆಜ್ಜೆಗಳನ್ನು ತೆಗೆದುಕೊಳ್ಳತಕ್ಕದ್ದು?
◼ ಸಮಯ ಮತ್ತು ಸ್ಥಳ: ಜ್ಞಾಪಕಾಚರಣೆ ನಡೆಯುವ ಸ್ಥಳ ಮತ್ತು ಸಮಯವು ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿರಬೇಕು. ರಾಜ್ಯ ಸಭಾಗೃಹದಲ್ಲಿ ಒಂದಕ್ಕಿಂತ ಹೆಚ್ಚು ಸಭೆಗಳು ಕೂಡಿಬರುವಲ್ಲಿ ಸಮಯಕ್ಕೆ ಸರಿಯಾಗಿ ಬರುವುದು ಮತ್ತು ಕ್ರಮಬದ್ಧವಾಗಿ ನಿರ್ಗಮಿಸುವುದು ಅತ್ಯಾವಶ್ಯಕ. ಏಕೆಂದರೆ ಇನ್ನೊಂದು ಕೂಟ ಸ್ವಲ್ಪ ಸಮಯದಲ್ಲೇ ಆರಂಭವಾಗುವುದು. ಬಾಗಿಲ ಬಳಿಯಲ್ಲಿ, ಲಾಬಿಯಲ್ಲಿ, ಪಾದಚಾರಿ ರಸ್ತೆಗಳಲ್ಲಿ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಅನಾವಶ್ಯಕವಾಗಿ ಗುಂಪು ಕೂಡಬಾರದು.
◼ ಆಮಂತ್ರಣಗಳು: ಪ್ರತಿ ಪ್ರಚಾರಕರಿಗೆ ಲಭ್ಯವಾಗಬೇಕಾದ ಆಮಂತ್ರಣ ಪತ್ರಗಳು ಅವರ ಕೈಸೇರಿವೆಯೋ ಮತ್ತು ಅವರಿಗೆ ಅದರ ಒಳ್ಳೆಯ ಪರಿಚಯವಿದೆಯೋ? ಈ ಆಮಂತ್ರಣ ಪತ್ರವನ್ನು ಹೇಗೆ ನೀಡುವಿರೆಂದು ನೀವು ರಿಹರ್ಸ್ ಮಾಡಿದ್ದೀರೋ? ಯಾರಿಗೆಲ್ಲಾ ಆಮಂತ್ರಣ ನೀಡುವಿರಿ? ಎಲ್ಲ ಆಮಂತ್ರಣ ಪತ್ರಗಳನ್ನು ನೀಡಲು ಪ್ರಯತ್ನ ಮಾಡಬೇಕು.
◼ ವಾಹನ ವ್ಯವಸ್ಥೆ: ಕೆಲವು ಸಹೋದರ ಸಹೋದರಿಯರಿಗೆ ಮತ್ತು ಆಸಕ್ತ ಜನರಿಗೆ ವಾಹನ ವ್ಯವಸ್ಥೆ ಅಥವಾ ಇತರ ವೈಯಕ್ತಿಕ ಸಹಾಯ ಬೇಕಾದೀತು. ಅವರಿಗೆ ನೆರವು ನೀಡಲು ಯಾವ ಏರ್ಪಾಡುಗಳನ್ನು ಮಾಡಲಾಗಿದೆ?
◼ ಕುರುಹುಗಳು: ಸೂರ್ಯಾಸ್ತಮಾನದ ನಂತರವೇ ಕುರುಹುಗಳು ದಾಟಿಸಲಾಗುತ್ತವೆಂದು ಖಚಿತಪಡಿಸಿಕೊಳ್ಳಿ. ಅಶಕ್ತರಾಗಿದ್ದು ಹಾಜರಾಗಲು ಸಾಧ್ಯವಿಲ್ಲದ ಅಭಿಷಿಕ್ತರಿಗೆ ಕುರುಹುಗಳನ್ನು ನೀಡುವ ಏರ್ಪಾಡನ್ನು ಮಾಡಬೇಕು. ಸೂಕ್ತವಾದ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಸಿದ್ಧಪಡಿಸಿಡಬೇಕು.—2003, ಫೆಬ್ರವರಿ 15ರ ಕಾವಲಿನಬುರುಜು ಪುಟ 14-15, ಪ್ಯಾರ 14, 17 ನೋಡಿ.
◼ ರಾಜ್ಯ ಸಭಾಗೃಹ: ಹಾಲ್ ಅನ್ನು ಮುಂಚಿತವಾಗಿಯೇ ಚೆನ್ನಾಗಿ ಸ್ವಚ್ಛಗೊಳಿಸಬೇಕು. ಪ್ಲೇಟುಗಳು, ವೈನ್ ಗ್ಲಾಸುಗಳು, ಸೂಕ್ತವಾದ ಮೇಜು ಮತ್ತು ಮೇಜು-ಬಟ್ಟೆಯನ್ನು ಹಾಲ್ಗೆ ತಂದು ತಕ್ಕ ಸ್ಥಳದಲ್ಲಿಡಬೇಕು. ಕೂಟಕ್ಕಾಗಿ ಬೇರೆ ಸ್ಥಳವನ್ನು ಏರ್ಪಡಿಸುವಲ್ಲಿ, ಹಾಜರಿರುವ ಎಲ್ಲರಿಗೆ ಭಾಷಣವು ಕೇಳಿಸುವಂತೆ ತಕ್ಕದಾದ ಸೌಂಡ್ ಸಿಸ್ಟಮ್ ಇದೆಯೋ ಎಂದು ಖಚಿತಪಡಿಸಿಕೊಳ್ಳಿ. ಅಟೆಂಡೆಂಟ್ಗಳನ್ನು ಮತ್ತು ಕುರುಹು ದಾಟಿಸುವವರನ್ನು ಆರಿಸಿ, ಅವರಿಗೆ ತಮ್ಮ ಕರ್ತವ್ಯಗಳು, ಯೋಗ್ಯ ಕಾರ್ಯನಿರ್ವಹಣೆ, ಸಭ್ಯ ಉಡುಪು ಹಾಗೂ ನೀಟುಗಾರಿಕೆಯ ಅಗತ್ಯವನ್ನು ಮುಂಚಿತವಾಗಿ ತಿಳಿಸಬೇಕು.
ಯೇಸುಕ್ರಿಸ್ತನ ಮರಣದ ಜ್ಞಾಪಕಾಚರಣೆಯ ಈ ಮಹತ್ವಪೂರ್ಣ ಸಂದರ್ಭದಲ್ಲಿ ವೈಯಕ್ತಿಕವಾಗಿ ಮತ್ತು ಸಭೆಯಾಗಿ ನಾವು ಪೂರ್ಣವಾಗಿ ತಯಾರಿರಬೇಕು. ಯೆಹೋವನು ತನ್ನ ಪ್ರಿಯ ಮಗನಾದ ಯೇಸುಕ್ರಿಸ್ತನ ಯಜ್ಞದ ಮೂಲಕ ಮಾನವಕುಲಕ್ಕೆ ಒದಗಿಸಿರುವ ಸಕಲ ವಿಷಯಗಳಿಗಾಗಿ ಹೃತ್ಪೂರ್ವಕ ಗಣ್ಯತೆ ತೋರಿಸುವವರೆಲ್ಲರನ್ನು ಹೇರಳವಾಗಿ ಆಶೀರ್ವದಿಸುವನು.