ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಜ್ಞಾಪಕಾಚರಣೆ ಮತ್ತು ಇತರ ದೇವಪ್ರಭುತ್ವಾತ್ಮಕ ಸಂದರ್ಭಗಳಿಗೆ ಹಾಜರಾಗುತ್ತಾರಾದರೂ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದವರು ಸೇರಿದಂತೆ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ನೀಡಲು ಪ್ರಯತ್ನಿಸಿ. ಆ ಪುಸ್ತಕವನ್ನು ಉಪಯೋಗಿಸಿ ಒಂದು ಮನೆ ಬೈಬಲ್ ಅಧ್ಯಯನವನ್ನು ಪ್ರಾರಂಭಿಸುವುದೇ ಇದರ ಉದ್ದೇಶವಾಗಿರಬೇಕು. ಜೂನ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮನೆಯವನ ಬಳಿ ಈ ಪುಸ್ತಕ ಈಗಾಗಲೇ ಇರುವುದಾದರೆ, ಬಣ್ಣ ಮಾಸಿದ ಕಾಗದವಿರುವ ಯಾವುದೇ 192 ಪುಟಗಳ ಪುಸ್ತಕ ಅಥವಾ 1992ಕ್ಕೆ ಮುಂಚೆ ಪ್ರಕಟವಾದ ಇತರ ಪುಸ್ತಕವನ್ನು ಪ್ರಚಾರಕರು ನೀಡಬಹುದು. ಜುಲೈ-ಆಗಸ್ಟ್: ಸ್ಟಾಕ್‌ನಲ್ಲಿರುವ ಈ ಕೆಳಗಿನ ಯಾವುದೇ 32 ಪುಟದ ಬ್ರೋಷರ್‌ಗಳು: ಸಕಲ ಜನರಿಗಾಗಿರುವ ಒಂದು ಗ್ರಂಥ, ಸಂತೃಪ್ತಿಕರವಾದ ಜೀವನ ಲಭ್ಯವಾಗುವ ವಿಧ, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಎಚ್ಚರಿಕೆಯಿಂದಿರಿ!, “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನಮ್ಮ ಸಮಸ್ಯೆಗಳು ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ನೀವು ತ್ರಯೈಕ್ಯವನ್ನು ನಂಬ ಬೇಕೋ? ಪರದೈಸನ್ನು ತರಲಿರುವ ಸರಕಾರ (ಇಂಗ್ಲಿಷ್), ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್), ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ.
◼ ಈ ತಿಂಗಳ ನಮ್ಮ ರಾಜ್ಯ ಸೇವೆಯಿಂದ ಆರಂಭಿಸಿ ಗ್ರೀಕ್ ಶಾಸ್ತ್ರಗ್ರಂಥದ ವಚನಗಳು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರ ಕನ್ನಡ ಬೈಬಲಿನ ಉಲ್ಲೇಖಗಳಾಗಿವೆ. ಹೀಬ್ರು ಶಾಸ್ತ್ರಗ್ರಂಥದ ವಚನಗಳು ಸತ್ಯವೇದವು ಬೈಬಲಿನ ಉಲ್ಲೇಖಗಳಾಗಿವೆ.