ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/09 ಪು. 4
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2009 ನಮ್ಮ ರಾಜ್ಯದ ಸೇವೆ
2009 ನಮ್ಮ ರಾಜ್ಯದ ಸೇವೆ
km 6/09 ಪು. 4

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ ಜೂನ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮನೆಯವರ ಬಳಿ ಈ ಪುಸ್ತಕ ಇರುವುದಾದರೆ, ಬಣ್ಣ ಮಾಸಿದ ಹಾಳೆಯ ಯಾವುದೇ 192 ಪುಟಗಳ ಪುಸ್ತಕ ಅಥವಾ 1992ಕ್ಕೆ ಮುಂಚೆ ಪ್ರಕಟವಾದ ಇತರ ಪುಸ್ತಕಗಳನ್ನು ಪ್ರಚಾರಕರು ನೀಡಬಹುದು. ಜುಲೈ ಮತ್ತು ಆಗಸ್ಟ್‌: ಸ್ಟಾಕ್‌ನಲ್ಲಿರುವ ಈ ಕೆಳಗಿನ ಯಾವುದೇ 32 ಪುಟದ ಬ್ರೋಷರ್‌ಗಳು: ಸಕಲ ಜನರಿಗಾಗಿರುವ ಒಂದು ಗ್ರಂಥ, ಸಂತೃಪ್ತಿಕರವಾದ ಜೀವನ ಲಭ್ಯವಾಗುವ ವಿಧ, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಎಚ್ಚರಿಕೆಯಿಂದಿರಿ!, “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನಮ್ಮ ಸಮಸ್ಯೆಗಳು ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ನೀವು ತ್ರಯೈಕ್ಯವನ್ನು ನಂಬ ಬೇಕೋ? ಪರದೈಸನ್ನು ತರಲಿರುವ ಸರಕಾರ (ಇಂಗ್ಲಿಷ್‌), ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್‌), ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ. ಸೆಪ್ಟೆಂಬರ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಈ ಪುಸ್ತಕವನ್ನು ನೀಡುವಾಗ ಪ್ರಚಾರಕರು ಸಾಧ್ಯವಿರುವಲ್ಲೆಲ್ಲಾ ಪ್ರಥಮ ಭೇಟಿಯಲ್ಲೇ ಬೈಬಲ್‌ ಅಧ್ಯಯನವನ್ನು ಆರಂಭಿಸಲು ಪ್ರಯತ್ನಿಸಬೇಕು. ಬೈಬಲ್‌ ಅಧ್ಯಯನವನ್ನು ನಡೆಸುವ ವಿಧವನ್ನು ಮನೆಯವರಿಗೆ ಸಂಕ್ಷಿಪ್ತವಾಗಿ ತೋರಿಸುವ ಮೂಲಕ ಅವರು ಅದರಿಂದ ಹೇಗೆ ಪ್ರಯೋಜನ ಪಡೆಯಬಲ್ಲರೆಂದು ತಿಳಿಸಿರಿ.

◼ ಕೆಲವು ಸಮಯದಿಂದ ನಾವು ನಮ್ಮ ಪ್ರಕಾಶನಗಳಲ್ಲಿ ಉಪಯೋಗಿಸುತ್ತಿದ್ದ ಕೆಲವು ನಿರ್ದಿಷ್ಟ ಪದಪ್ರಯೋಗಗಳನ್ನು ಬದಲಾಯಿಸುವ ಅಗತ್ಯವಿದೆ. ಈ ಹೊಂದಾಣಿಕೆಗಳು ನಮ್ಮ ಭಾಷಾಂತರಗಳನ್ನು ಇನ್ನಷ್ಟು ನಿಷ್ಕೃಷ್ಟಗೊಳಿಸುವುವು. ಉದಾಹರಣೆಗೆ ಕೆಲವು ಭಾರತೀಯ ಭಾಷೆಗಳಲ್ಲಿ ಪವಿತ್ರಾತ್ಮವನ್ನು “ದೇವರ ಕಾರ್ಯಕಾರಿ ಶಕ್ತಿ” ಎಂದು ಭಾಷಾಂತರಿಸಲಾಗುವುದು. ಇದು ಮತ್ತು ಇತರ ಪದಪ್ರಯೋಗದಲ್ಲಾಗಿರುವ ಬದಲಾವಣೆಗಳನ್ನು ಆಡಳಿತ ಮಂಡಲಿಯ ಒಪ್ಪಿಗೆಯಿಂದ ಮಾಡಲಾಗಿದೆ ಎಂಬ ಖಾತ್ರಿ ನಿಮಗಿರಲಿ.

◼ 2009ರ ಜಿಲ್ಲಾ ಅಧಿವೇಶನದ ಹಾಲ್‌ಗಳ ಮತ್ತು ಅಧಿವೇಶನ ಮುಖ್ಯಕಾರ್ಯಾಲಯದ ವಿಳಾಸಗಳನ್ನು ಮುಂದಣ ನಮ್ಮ ರಾಜ್ಯ ಸೇವೆಯ ಸಂಚಿಕೆಯಲ್ಲಿ ಕೊಡಲಾಗುವುದು.

◼ ನೀವು ವೈಯಕ್ತಿಕವಾಗಿ ಪರದೇಶ ಪ್ರಯಾಣದ ಯೋಜನೆಯನ್ನು ಮಾಡುವಾಗಲೆಲ್ಲಾ ನೀವು ಸಂದರ್ಶಿಸ ಬಯಸುವ ದೇಶದ ಹೆಸರು ಸದ್ಯದ ಸೇವಾ ವರ್ಷದ ವರದಿಯಲ್ಲಿ ಇರದಿದ್ದಲ್ಲಿ ಅಥವಾ ಹೊಸ ಯಿಯರ್‌ ಬುಕ್‌ನ ಕೊನೆಯ ಪುಟದಲ್ಲಿರುವ ವಿಳಾಸಗಳಲ್ಲಿ ಕಂಡುಬರದಿದ್ದಲ್ಲಿ ದಯವಿಟ್ಟು ನಿಮ್ಮ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿ, ಯಾವ ಮುಂಜಾಗ್ರತೆಗಳನ್ನು ತಕ್ಕೊಳ್ಳಬೇಕು ಅಥವಾ ಯಾವ ವಿಶೇಷ ಸೂಚನೆಗಳನ್ನು ಪಾಲಿಸಬೇಕು ಎಂಬುದನ್ನು ತಿಳುಕೊಳ್ಳಿರಿ. ಯಾಕೆಂದರೆ ಆ ದೇಶದಲ್ಲಿ ನಡೆಯುವ ರಾಜ್ಯ ಚಟುವಟಿಕೆಯ ಮೇಲೆ ಕೆಲವು ನಿರ್ಬಂಧಗಳಿರಬಹುದು. (ಮತ್ತಾ. 10:16) ಕೆಲವು ದೇಶಗಳಲ್ಲಿ ಸ್ಥಳಿಕ ಸಾಕ್ಷಿಗಳನ್ನು ಅಥವಾ ಸಭೆಗಳನ್ನು ಪರದೇಶದ ಸಂದರ್ಶಕರು ಸಂಪರ್ಕಿಸುವುದು ಸೂಕ್ತವಾಗಿರುವುದಿಲ್ಲ. ಅನೌಪಚಾರಿಕ ಸಾಕ್ಷಿಯ ಬಗ್ಗೆ ಅಥವಾ ಸಾಹಿತ್ಯದ ಸಂಗ್ರಹವನ್ನು ಅಲ್ಲಿಗೆ ಒಯ್ಯುವ ಬಗ್ಗೆ ಇತರ ಸೂಚನೆಗಳೂ ನಿಮಗೆ ದೊರಕಬಹುದು. ಕೊಡಲಾಗುವ ಸೂಚನೆಗಳೊಂದಿಗೆ ನೀವು ಸಹಕರಿಸುವ ಮೂಲಕ ನಿಮಗೆ ಹಾಗೂ ರಾಜ್ಯ ಚಟುವಟಿಕೆಗೆ ಉಂಟಾಗಬಲ್ಲ ಅನಾವಶ್ಯಕ ಸಮಸ್ಯೆಗಳನ್ನು ತಡೆಯಬಲ್ಲಿರಿ.—1 ಕೊರಿಂ. 14:33, 40.

◼ ಲಭ್ಯವಿರುವ ಹೊಸ ಪ್ರಕಾಶನಗಳು

ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರ —ಕನ್ನಡ, ತಮಿಳು, ಮಲೆಯಾಳಂ, ಹಿಂದಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ