ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಮನೆಯವನು ಆಸಕ್ತಿ ತೋರಿಸಿದಲ್ಲಿ, ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಎಂಬ ಟ್ರ್ಯಾಕ್ಟನ್ನು ನೀಡಿ ಚರ್ಚಿಸಿರಿ. ಮನೆಯವನ ಬಳಿ ಈಗಾಗಲೇ ಆ ಟ್ರ್ಯಾಕ್ಟ್ ಇರುವುದಾದರೆ ಪ್ರಚಾರಕರು ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲು ಪ್ರಯತ್ನಿಸಬೇಕು. ನವೆಂಬರ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಈ ಪುಸ್ತಕ ಮನೆಯವರ ಬಳಿ ಈಗಾಗಲೇ ಇರುವುದಾದರೆ, ಬಣ್ಣ ಮಾಸಿದ ಹಾಳೆಯ ಯಾವುದೇ 192 ಪುಟಗಳ ಪುಸ್ತಕ ಅಥವಾ 1995ಕ್ಕೆ ಮುಂಚೆ ಪ್ರಕಟವಾದ ಇತರ ಪುಸ್ತಕಗಳನ್ನು ಪ್ರಚಾರಕರು ನೀಡಬಹುದು. ಡಿಸೆಂಬರ್: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ. ಮಕ್ಕಳಿರುವ ಮನೆಯವರಿಗೆ ಬೈಬಲ್ ಕಥೆಗಳ ನನ್ನ ಪುಸ್ತಕ ನೀಡಿರಿ. ಜನವರಿ: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಈ ಪುಸ್ತಕ ಮನೆಯವರ ಬಳಿ ಈಗಾಗಲೇ ಇರುವುದಾದರೆ, ಬಣ್ಣ ಮಾಸಿದ ಹಾಳೆಯ ಯಾವುದೇ 192 ಪುಟಗಳ ಪುಸ್ತಕ ಅಥವಾ 1995ಕ್ಕೆ ಮುಂಚೆ ಪ್ರಕಟವಾದ ಇತರ ಪುಸ್ತಕಗಳನ್ನು ಪ್ರಚಾರಕರು ನೀಡಬಹುದು.
◼ ಇಡೀ ವರ್ಷಕ್ಕಾಗಿರುವ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶೆಡ್ಯೂಲ್ ಪುರವಣಿಯನ್ನು ಇನ್ನು ಮುಂದೆ ನಮ್ಮ ರಾಜ್ಯ ಸೇವೆಯೊಂದಿಗೆ ಕೊಡಲಾಗುವುದಿಲ್ಲ. ಅದರ ಬದಲು ವಾರ್ಷಿಕ ಶೆಡ್ಯೂಲನ್ನು ಸಭೆಗೋಸ್ಕರವೆಂದು ಕಳುಹಿಸಲಾಗುವುದು. ಒಂದು ಪ್ರತಿಯನ್ನು ರಾಜ್ಯ ಸಭಾಗೃಹದ ಮಾಹಿತಿ ಫಲಕದ ಮೇಲೆ ಹಾಕಬೇಕು. ಇನ್ನೊಂದನ್ನು ಶಾಲಾ ಮೇಲ್ವಿಚಾರಕನು ನೇಮಕಗಳನ್ನು ಕೊಡಲಿಕ್ಕಾಗಿ ಇಟ್ಟುಕೊಳ್ಳುವನು. ಪ್ರಚಾರಕರಿಗೆ ಪ್ರತಿ ತಿಂಗಳು ನಮ್ಮ ರಾಜ್ಯ ಸೇವೆಯ ವೈಯಕ್ತಿಕ ಪ್ರತಿ ಸಿಗುವುದು ಮತ್ತು ಅದರಲ್ಲಿ ವಾರದ ಸಭಾ ಬೈಬಲ್ ಅಧ್ಯಯನ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಹಾಗೂ ಸೇವಾ ಕೂಟದ ಶೆಡ್ಯೂಲ್ ಇರುವುದು.
◼ 2010 ಜನವರಿ 4ರ ವಾರದಿಂದ ಸಭಾ ಬೈಬಲ್ ಅಧ್ಯಯನಕ್ಕಾಗಿ “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಎಂಬ ಪುಸ್ತಕವನ್ನು ಬಳಸಲಾಗುತ್ತದೆ. ಈ ಪುಸ್ತಕಗಳ ಸರಬರಾಯಿಗಾಗಿ ಸಭೆಗಳು ತಮ್ಮ ಮುಂದಿನ ಲಿಟರೇಚರ್ ಆರ್ಡರ್‌ನಲ್ಲಿ ವಿನಂತಿಸಬೇಕು.
◼ ಸಭೆಯಲ್ಲಿ ಒಳ್ಳೇ ನಿಲುವಿರುವವರು ಬೆತೆಲ್ ಸೇವೆಗಾಗಿ ಅರ್ಜಿಗಳನ್ನು ಹಾಕುವಂತೆ ಆಮಂತ್ರಿಸಲಾಗಿದೆ. ಅವರಿಗೆ ದೀಕ್ಷಾಸ್ನಾನವಾಗಿ ಕಡಿಮೆಪಕ್ಷ ಒಂದು ವರ್ಷವಾಗಿರಬೇಕು. ಸದ್ಯಕ್ಕೆ, ಭಾರತದ ಯಾವುದೇ ಭಾಷೆಯಲ್ಲಿ ಭಾಷಾಂತರಕಾರರಾಗಿ ತರಬೇತಿ ಹೊಂದುವ ಸಾಮರ್ಥ್ಯವುಳ್ಳ ಸ್ವಯಂಸೇವಕರ ವಿಶೇಷ ಅಗತ್ಯವಿದೆ. ಅರ್ಜಿಗಳನ್ನು ಬ್ರಾಂಚ್ ಆಫೀಸಿನಿಂದ ಅಥವಾ ಜಿಲ್ಲಾ ಅಧಿವೇಶನಗಳಲ್ಲಿ ಬೆತೆಲ್ ಅರ್ಜಿದಾರರಿಗೆಂದು ನಡೆಸಲಾಗುವ ಕೂಟದಲ್ಲಿ ಪಡೆಯಬಹುದು.