ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಅಕ್ಟೋಬರ್-ಡಿಸೆಂಬರ್
“ಕೆಲವರಿಗೆ ದೇವರಲ್ಲಿ ನಂಬಿಕೆಯಿಡಲು ಕಷ್ಟವಾಗುತ್ತದೆ. ಕಾರಣ ಏನೆಂದು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ. ಮನೆಯವರಿಗೆ ಆಸಕ್ತಿಯಿದೆಯೆಂದು ನೀವು ಗ್ರಹಿಸುವಲ್ಲಿ ನಿರೂಪಣೆಯನ್ನು ಮುಂದುವರಿಸಿ.] ನಂಬಿಕೆ ಏಕೆ ತುಂಬ ಪ್ರಾಮುಖ್ಯ ಎಂಬುದನ್ನು ವಿವರಿಸುವ ಒಂದು ವಚನವನ್ನು ನಿಮಗೆ ತೋರಿಸಲೋ? [ಇಬ್ರಿಯ 11:6 ಓದಿ.] ನಮ್ಮ ನಂಬಿಕೆಯನ್ನು ದೃಢಪಡಿಸಲು ನಾವು ತೆಗೆದುಕೊಳ್ಳಬೇಕಾದ ನಾಲ್ಕು ಹೆಜ್ಜೆಗಳನ್ನು ಈ ಪತ್ರಿಕೆ ಚರ್ಚಿಸುತ್ತದೆ.”
ಎಚ್ಚರ! ಅಕ್ಟೋಬರ್-ಡಿಸೆಂಬರ್
“ಇಂದಿನ ಬಿಡುವಿಲ್ಲದ ಬದುಕಿನಲ್ಲಿ ಪ್ರಾಮುಖ್ಯ ಕೆಲಸಕ್ಕಾಗಿಯೂ ಸಮಯ ಸಿಗುವುದು ತುಂಬ ಕಷ್ಟ. ನಮ್ಮ ಸಮಯವನ್ನು ವಿವೇಚನೆಯಿಂದ ಬಳಸಲು ಏನು ಮಾಡಬೇಕೆಂದು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಸಹಾಯಕಾರಿಯಾದ ಒಂದು ಸೂತ್ರವನ್ನು ನಿಮಗೆ ತೋರಿಸಲೋ? [ಮನೆಯವನು ಒಪ್ಪುವುದಾದರೆ ಜ್ಞಾನೋಕ್ತಿ 21:5 ಓದಿ.] ನಮ್ಮ ಸಮಯವನ್ನು ನಾವು ಹೇಗೆ ಹೆಚ್ಚು ಉತ್ತಮ ರೀತಿಯಲ್ಲಿ ಬಳಸಬಹುದೆಂಬುದನ್ನು ಈ ಲೇಖನ ಚರ್ಚಿಸುತ್ತದೆ.” ಪುಟ 21ರಲ್ಲಿರುವ ಲೇಖನ ತೋರಿಸಿ.