ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಏಪ್ರಿಲ್-ಜೂನ್
ಈ ಪತ್ರಿಕೆಯನ್ನು ಯೇಸುವಿನ ಬಗ್ಗೆ ಗೌರವವಿರುವವರಿಗೆ ನೀಡಿ. “ಯೇಸು ತನ್ನ ಶಿಷ್ಯರಿಗೆ ದೇವರ ರಾಜ್ಯದ ಕುರಿತು ಕಲಿಸಿದನೆಂದು ಎಲ್ಲ ಕ್ರೈಸ್ತರು ನಂಬುತ್ತಾರೆ. ಆ ರಾಜ್ಯ ಏನೇನು ಸಾಧಿಸಲಿದೆಯೆಂದು ನೀವೆಂದಾದರೂ ಯೋಚಿಸಿದ್ದೀರೋ? [ಪ್ರತಿಕ್ರಿಯೆಗೆ ಅವಕಾಶಕೊಡಿ, ನಂತರ ಪ್ರಕಟನೆ 21:3, 4 ಓದಿ.] ಈ ಲೇಖನವು, ದೇವರ ರಾಜ್ಯದ ಕುರಿತ ಅನೇಕ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಲು ನಮಗೆ ಸಹಾಯಮಾಡುವುದು.” ಪುಟ 8ರಲ್ಲಿರುವ ಲೇಖನ ತೋರಿಸಿ.
ಎಚ್ಚರ! ಏಪ್ರಿಲ್-ಜೂನ್
“ಇಂದು ಮೊಬೈಲ್, ಕಂಪ್ಯೂಟರ್ಗಳಂಥ ಸಾಧನಗಳು ಜೀವನದ ಅವಿಭಾಜ್ಯ ಅಂಗಗಳಾಗಿ ಬಿಟ್ಟಿವೆ. ತಂತ್ರಜ್ಞಾನದ ಬಳಕೆ ನಮ್ಮ ಸಮಯ ಉಳಿಸುತ್ತದೋ ಹಾಳುಮಾಡುತ್ತದೋ? ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ. ಮನೆಯವರಿಗೆ ಆಸಕ್ತಿಯಿರುವಲ್ಲಿ ನೀವು ಬೈಬಲಿನಿಂದ ಒಂದು ವಚನ ಓದಬಹುದೋ ಎಂದು ಕೇಳಿ. ಒಪ್ಪುವಲ್ಲಿ ಮಾತು ಮುಂದುವರಿಸಿ.] ಈ ವಚನವು ಸಮಯವನ್ನು ವಿವೇಕದಿಂದ ಬಳಸುವಂತೆ ಉತ್ತೇಜಿಸುತ್ತದೆ. ಇದನ್ನು ಹೆಚ್ಚಿನವರು ಒಪ್ಪುತ್ತಾರೆ. [ಎಫೆಸ 5:15, 16 ಓದಿ.] ಈ ಪತ್ರಿಕೆಯು ನಾವು ತಂತ್ರಜ್ಞಾನವನ್ನು ಸಮತೋಲನದಿಂದ ಹೇಗೆ ಬಳಸಬಹುದು ಎಂಬುದನ್ನು ಚರ್ಚಿಸುತ್ತದೆ.”