ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಜುಲೈ ಮತ್ತು ಆಗಸ್ಟ್: ಸ್ಟಾಕ್‌ನಲ್ಲಿರುವ ಈ ಕೆಳಗಿನ ಯಾವುದೇ 32 ಪುಟದ ಬ್ರೋಷರ್‌ಗಳು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಎಚ್ಚರಿಕೆಯಿಂದಿರಿ!, ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಸಕಲ ಜನರಿಗಾಗಿರುವ ಒಂದು ಗ್ರಂಥ, ಸಂತೃಪ್ತಿಕರವಾದ ಜೀವನ ಲಭ್ಯವಾಗುವ ವಿಧ, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು? ಸೆಪ್ಟೆಂಬರ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಪ್ರಯತ್ನಿಸಿ. ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಆಸಕ್ತ ಜನರಿಗೆ ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಟ್ರ್ಯಾಕ್ಟ್ ಕೊಟ್ಟು ಬೈಬಲ್ ಅಧ್ಯಯನ ಆರಂಭಿಸಲು ಪ್ರಯತ್ನಿಸಿ.
◼ 2011ರಿಂದ ಮಲೆಯಾಳಂ ಮತ್ತು ತಮಿಳು ಭಾಷೆಗಳಲ್ಲಿ ವರ್ಷಪುಸ್ತಕ ಲಭ್ಯವಾಗುವುದಿಲ್ಲ.
◼ ನಾವು ಈ ಹಿಂದೆ ಕನ್ನಡ ಪ್ರಕಾಶನಗಳಲ್ಲಿ ಬಳಸುತ್ತಿದ್ದ “ಅಕ್ರಮ ಪ್ರಚಾರಕ” ಎಂಬ ಅಭಿವ್ಯಕ್ತಿಗೆ ಬದಲಾಗಿ ಇನ್ನು ಮುಂದೆ “ಅನಿಯತ ಪ್ರಚಾರಕ” ಎಂಬ ಅಭಿವ್ಯಕ್ತಿಯನ್ನು ಬಳಸುವೆವು. ಸರಿಯಾದ ಅರ್ಥವನ್ನು ಕೊಡುವ ಸಲುವಾಗಿ ಈ ಬದಲಾವಣೆ ಮಾಡಲಾಗಿದೆ.