ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಜನವರಿ: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮನೆಯವನ ಬಳಿ ಈಗಾಗಲೇ ಈ ಪುಸ್ತಕ ಇರುವಲ್ಲಿ, ಬಣ್ಣ ಮಾಸಿದ ಹಾಳೆಯ ಯಾವುದೇ 192 ಪುಟಗಳ ಪುಸ್ತಕ ಅಥವಾ 1995ಕ್ಕೆ ಮುಂಚೆ ಪ್ರಕಟವಾದ ಬೇರಾವುದೇ ಪುಸ್ತಕವನ್ನು ಪ್ರಚಾರಕರು ನೀಡಬಹುದು. ಫೆಬ್ರವರಿ: ಕುಟುಂಬ ಸಂತೋಷದ ರಹಸ್ಯ. ಮಾರ್ಚ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಶ್ರದ್ಧೆಯಿಂದ ಪ್ರಯತ್ನಿಸಿ. ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಜ್ಞಾಪಕಾಚರಣೆ ಮತ್ತು ಇತರ ದೇವಪ್ರಭುತ್ವಾತ್ಮಕ ಸಂದರ್ಭಗಳಿಗೆ ಹಾಜರಾಗುತ್ತಾರಾದರೂ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದವರು ಸೇರಿದಂತೆ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಬಳಸಿ ಅಧ್ಯಯನಗಳನ್ನು ಆರಂಭಿಸಲು ಪ್ರಯತ್ನಿಸಿ.
◼ ಫೆಬ್ರವರಿ ತಿಂಗಳಿಂದ ಸರ್ಕಿಟ್ ಮೇಲ್ವಿಚಾರಕರು ಕೊಡಲಾರಂಭಿಸುವ ಹೊಸ ಸಾರ್ವಜನಿಕ ಭಾಷಣ: “ಸತ್ಯ ನಿಮ್ಮ ಜೀವನವನ್ನು ಹೇಗೆ ಪ್ರಭಾವಿಸುತ್ತದೆ?”