ಅಕ್ಟೋಬರ್ 3ರಿಂದ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 3ರಿಂದ ಆರಂಭವಾಗುವ ವಾರ
ಗೀತೆ 44 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 9 ಪ್ಯಾರ. 1-9 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಜ್ಞಾನೋಕ್ತಿ 1-6 (10 ನಿ.)
ನಂ. 1: ಜ್ಞಾನೋಕ್ತಿ 6:1-19 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ನಮ್ಮ ಬಗ್ಗೆ ದೇವರಿಗೆ ಪ್ರೀತಿಯಿದೆ ಎಂಬುದನ್ನು ರೋಮನ್ನರಿಗೆ 8:26, 27ರಲ್ಲಿ ಹೇಗೆ ಖಾತ್ರಿಪಡಿಸಲಾಗಿದೆ? (5 ನಿ.)
ನಂ. 3: ಪುನರುತ್ಥಾನದ ನಿರೀಕ್ಷೆಗಿರುವ ಶಕ್ತಿ—wt ಪು. 79 ಪ್ಯಾರ. 1-3 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಲೂಕ 5:12, 13 ಮತ್ತು ಲೂಕ 8:43-48 ಓದಿಸಿ. ಈ ವೃತ್ತಾಂತಗಳು ಶುಶ್ರೂಷೆಯಲ್ಲಿ ನಮಗೆ ಹೇಗೆ ನೆರವಾಗಬಲ್ಲವೆಂದು ಚರ್ಚಿಸಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ಶುಶ್ರೂಷೆಯಲ್ಲಿ ಸದ್ವರ್ತನೆ ತೋರಿಸಿರಿ. (2 ಕೊರಿಂ. 6:3) ಚರ್ಚೆ. ಮುಂದಿನ ಪ್ರಶ್ನೆಗಳನ್ನು ಆಧಾರವಾಗಿ ಬಳಸಿರಿ: (1) ಸಾರುವಾಗ ಸದ್ವರ್ತನೆ ತೋರಿಸುವುದು ಏಕೆ ಪ್ರಾಮುಖ್ಯ? (2) ಕೊಡಲಾದ ಈ ಸನ್ನಿವೇಶಗಳಲ್ಲಿ ಹೇಗೆ ಸದ್ವರ್ತನೆಯಿಂದ ನಡೆಯಬಲ್ಲೆವು: (ಎ) ನಮ್ಮ ಗುಂಪು ಟೆರಿಟೊರಿಗೆ ಆಗಮಿಸುವಾಗ? (ಬಿ) ನಾವು ಒಂದು ಮನೆಯಿಂದ ಇನ್ನೊಂದು ಮನೆಗೆ ನಡೆಯುತ್ತಿರುವಾಗ? (ಸಿ) ಮನೆಬಾಗಲಲ್ಲಿ ನಿಂತಿರುವಾಗ? (ಡಿ) ನಮ್ಮ ಸಂಗಡಿಗನು ಸಾಕ್ಷಿ ಕೊಡುತ್ತಿರುವಾಗ? (ಇ) ಮನೆಯವರು ಮಾತಾಡುತ್ತಿರುವಾಗ? (ಎಫ್) ಮನೆಯವರು ಬ್ಯುಸಿ ಆಗಿರುವಾಗ ಇಲ್ಲವೆ ಹವಾಮಾನ ಪ್ರತಿಕೂಲವಾಗಿರುವಾಗ? (ಜಿ) ಮನೆಯವರು ಒರಟಾಗಿ ವರ್ತಿಸುವಾಗ?
ಗೀತೆ 16 ಮತ್ತು ಪ್ರಾರ್ಥನೆ