ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2013 ಏಪ್ರಿಲ್ 29ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು. ಪ್ರತಿಯೊಂದು ಪ್ರಶ್ನೆಯೊಂದಿಗೆ ಅದನ್ನು ಚರ್ಚಿಸಲಾಗುವ ವಾರವನ್ನು ಕೊಡಲಾಗಿದೆ. ಹೀಗೆ ಆಯಾ ವಾರದಂದು ಶಾಲೆಗಾಗಿ ತಯಾರಿ ಮಾಡುವಾಗ ಸಂಶೋಧನೆ ಮಾಡಲು ಸಾಧ್ಯವಾಗುವುದು.
1. ಮಾರ್ಕ 10:6-9ರಲ್ಲಿ ವಿವಾಹದ ಬಗ್ಗೆ ಯೇಸು ಯಾವ ಗಂಭೀರ ಎಚ್ಚರಿಕೆ ಕೊಟ್ಟರು? [ಮಾರ್ಚ್ 4, ಕಾವಲಿನಬುರುಜು 08 2/15 ಪು. 30 ಪ್ಯಾ. 8]
2. ಯೆಹೋವ ದೇವರನ್ನು ಪೂರ್ಣ ಪ್ರಾಣದಿಂದ ಆರಾಧಿಸಬೇಕು ಎನ್ನುವುದರ ಅರ್ಥವೇನು? (ಮಾರ್ಕ 12:30) [ಮಾರ್ಚ್ 4, ಕಾವಲಿನಬುರುಜು 97 10/15 ಪು. 13 ಪ್ಯಾ. 4]
3. ಮಾರ್ಕ 13:8ರಲ್ಲಿ ಹೇಳಿರುವ “ಸಂಕಟದ ಶೂಲೆ” ಅಂದರೇನು? [ಮಾರ್ಚ್ 11, ಕಾವಲಿನಬುರುಜು 08 3/15 ಪು. 12 ಪ್ಯಾ. 2]
4. ಲೂಕ ಸುವಾರ್ತಾ ಪುಸ್ತಕವನ್ನು ಬರೆಯುವಾಗ ಎಲ್ಲಿಂದ ಮಾಹಿತಿ ಸಂಗ್ರಹಿಸಿದರು? (ಲೂಕ 1:3) [ಮಾರ್ಚ್ 18, ಕಾವಲಿನಬುರುಜು 09 3/15 ಪು. 32 ಪ್ಯಾ. 4]
5. ನಮ್ಮ ಸಮಗ್ರತೆಯನ್ನು ಮುರಿಯಲು ಸೈತಾನ “ಸಂದರ್ಭ” ಹುಡುಕುತ್ತಾ ಇರುವುದರಿಂದ ನಾವೇನು ಮಾಡಬೇಕು? (ಲೂಕ 4:13) [ಮಾರ್ಚ್ 25, ಕಾವಲಿನಬುರುಜು 11 1/15 ಪು. 24 ಪ್ಯಾ. 10]
6. ಲೂಕ 6:27, 28ನ್ನು ಹೇಗೆ ನಾವು ಅಳವಡಿಸಿಕೊಳ್ಳಬಹುದು? [ಮಾರ್ಚ್ 25, ಕಾವಲಿನಬುರುಜು 08 5/15 ಪು. 8 ಪ್ಯಾ. 4]
7. ವಿಮೋಚನಾ ಯಜ್ಞವನ್ನು ಅರ್ಪಿಸುವ ಮುಂಚೆಯೇ ಯೇಸು ಸ್ತ್ರೀಯೊಬ್ಬಳ ಪಾಪಗಳನ್ನು ಕ್ಷಮಿಸಲು ಹೇಗೆ ಸಾಧ್ಯ? (ಲೂಕ 7:37, 48) [ಏಪ್ರಿ. 1, ಕಾವಲಿನಬುರುಜು 10 8/15 ಪು. 6-7]
8. ಯೇಸು ಕ್ರಿಸ್ತರ ಅನುಯಾಯಿಗಳು ಯಾವ ಅರ್ಥದಲ್ಲಿ ತಮ್ಮ ಸಂಬಂಧಿಕರನ್ನು ‘ದ್ವೇಷಿಸುತ್ತಾರೆ’ ಅಥವಾ “ಹಗೆಮಾಡುತ್ತಾರೆ”? (ಲೂಕ 14:26) [ಏಪ್ರಿ. 15, ಕಾವಲಿನಬುರುಜು 08 3/15 ಪು. 32 ಪ್ಯಾ. 1; ಕಾವಲಿನಬುರುಜು 92 10/15 ಪು. 9 ಪ್ಯಾ. 3-5]
9. “ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಲ್ಲಿ ಸೂಚನೆಗಳು” ಮನುಷ್ಯರ ಮೇಲೆ ಯಾವ ಪ್ರಭಾವ ಬೀರುವವು? (ಲೂಕ 21:25) [ಏಪ್ರಿ. 22, ಕಾವಲಿನಬುರುಜು 97 4/1 ಪು. 15 ಪ್ಯಾ. 8-9]
10. ಕಡುಕಷ್ಟಗಳು ಬಂದಾಗ ಯೇಸುವಿನಂತೆ ನಾವೂ ಹೇಗೆ ಪ್ರಾರ್ಥಿಸಬೇಕು? (ಲೂಕ 22:44) [ಏಪ್ರಿ. 29, ಕಾವಲಿನಬುರುಜು 07 8/1 ಪು. 6 ಪ್ಯಾ. 2]