ನಿಮಗೆ ಮಾಹಿತಿ ಫಲಕವನ್ನು ನೋಡೋ ಅಭ್ಯಾಸ ಇದೆಯಾ?
ಹಿರಿಯರು, ಶುಶ್ರೂಷಾ ಸೇವಕರು ಮತ್ತು ಕೆಲವೊಂದು ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಸಹೋದರರು ತಮಗೆ ಯಾವಾಗ ನೇಮಕಗಳಿವೆ ಅಂತ ತಿಳಿದುಕೊಳ್ಳಲು ಆಗಾಗ್ಗೆ ಮಾಹಿತಿ ಫಲಕ ನೋಡುತ್ತಾರೆ. ಆದರೆ ಅವರಿಗೆ ಮಾತ್ರವಲ್ಲ ನಮ್ಮೆಲ್ಲರಿಗೂ ಉಪಯುಕ್ತವಾದ ವಿಷಯಗಳು ಮಾಹಿತಿ ಫಲಕದಲ್ಲಿರುತ್ತೆ. ಸರ್ಕಿಟ್ ಮೇಲ್ವಿಚಾರಕರಿಂದ ಅಥವಾ ಬ್ರಾಂಚ್ ಆಫೀಸ್ನಿಂದ ಬಂದ ಪತ್ರಗಳು, ಮುಂದಿನ ವಾರದ ಸಾರ್ವಜನಿಕ ಉಪನ್ಯಾಸದ ಶೀರ್ಷಿಕೆ, ಕೂಟದ ವೇಳಾಪಟ್ಟಿಯಲ್ಲಿ ಅಥವಾ ನಿಮ್ಮ ಕ್ಷೇತ್ರಸೇವಾ ಗುಂಪಿನಲ್ಲಿ ಮಾಡಲಾದ ಬದಲಾವಣೆಗಳು, ನೀವು ಯಾವಾಗ ಸಭೆ ಶುಚಿ ಮಾಡಬೇಕು ಇದನ್ನೆಲ್ಲ ಮಾಹಿತಿ ಫಲಕದಲ್ಲಿ ಹಾಕಲಾಗಿರುತ್ತೆ. ನಿಮಗೆ ಗೊತ್ತಿರೋ ಹಾಗೆ ಈಗ ಈ ಎಲ್ಲಾ ಮಾಹಿತಿಯನ್ನು ಕೂಟಗಳಲ್ಲಿ ಪ್ರಕಟಿಸುವುದಿಲ್ಲ. ಅಲ್ಲದೆ ಈ ಎಲ್ಲಾ ಮಾಹಿತಿಯನ್ನು ಹಿರಿಯರು ಪ್ರತಿಯೊಬ್ಬ ಪ್ರಚಾರಕರ ಹತ್ತಿರ ಹೋಗಿ ಹೇಳಲು ಕೂಡ ಆಗೋದಿಲ್ಲ. ಹಾಗಾಗಿ ನಾವು ಮಾಹಿತಿ ಫಲಕವನ್ನು ಆಗಾಗ್ಗೆ ನೋಡೋದನ್ನು ರೂಢಿಸಿಕೊಳ್ಳಬೇಕು. ಹೀಗೆ ಮಾಡೋದಾದರೆ ಸಭೆಯಲ್ಲಿ ಎಲ್ಲವೂ “ಸಭ್ಯವಾಗಿಯೂ ಕ್ರಮವಾಗಿಯೂ” ನಡೆಯಲು ನಾವು ನೆರವು ನೀಡುತ್ತೇವೆ.—1 ಕೊರಿಂಥ 14:40.