ಮೇ 20ರ ವಾರಕ್ಕಾಗಿರುವ ಶೆಡ್ಯೂಲ್
ಮೇ 20ರ ವಾರ
ಗೀತೆ 11 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 21 ಪ್ಯಾ. 1-8 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೋಹಾನ 8-11 (10 ನಿ.)
ನಂ. 1: ಯೋಹಾನ 8:12-30 (4 ನಿಮಿಷದೊಳಗೆ)
ನಂ. 2: ಸುಳ್ಳು ಬೋಧಕರಿಂದ ನಮ್ಮನ್ನೇ ರಕ್ಷಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಲ್ಲೆವು?—ರೋಮ. 16:17; 2 ಯೋಹಾ. 9-11 (5 ನಿ.)
ನಂ. 3: ಗಡೀಪಾರಾದ ಒಬ್ಬ ಪ್ರವಾದಿ ಹಾಗೂ ಅವನಿಗಾದ ಭವಿಷ್ಯದರ್ಶ—ಬೈಬಲ್ ಅದರಲ್ಲಿ ಏನಿದೆ? ಪು. 18 (5 ನಿ.)
❑ ಸೇವಾ ಕೂಟ:
10 ನಿ: ನಿಮ್ಮ ಸೇವೆಯನ್ನು ಹೆಚ್ಚಿಸುವ ವಿಧ— ಭಾಗ 3. ಚರ್ಚೆ. ಸಂಘಟಿತರು ಪುಸ್ತಕದ ಪುಟ 115 ಪ್ಯಾರ 4ರಿಂದ ಪುಟ 116 ಪ್ಯಾರ 3ರ ಆಧರಿತ. ರಾಜ್ಯ ಸಭಾಗೃಹ ನಿರ್ಮಾಣಕಾರ್ಯದಲ್ಲಿ ಕೆಲಸಮಾಡಿದ ಪ್ರಚಾರಕರೊಬ್ಬರನ್ನು ಚುಟುಕಾಗಿ ಸಂದರ್ಶನ ಮಾಡಿ.
10 ನಿ: ಕರಪತ್ರ ಬಳಸಿ ಮಾತು ಆರಂಭಿಸಿ. ಚರ್ಚೆ. ಸೆಪ್ಟೆಂಬರ್ 2000 ನಮ್ಮ ರಾಜ್ಯ ಸೇವೆ ಪುಟ 8ರ ಆಧರಿತ. ಬೇರೆ ಬೇರೆ ಕರಪತ್ರಗಳನ್ನು ಮನೆಯವರಿಗೆ ತೋರಿಸಿ ಅವರಿಗೆ ಇಷ್ಟವಾದ ಕರಪತ್ರವನ್ನು ನೀಡುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ. ಎಲ್ಲ ಸಮಯದಲ್ಲೂ ಸಾಕ್ಷಿನೀಡಲು ಸಹಾಯವಾಗುವಂತೆ ಒಂದಿಷ್ಟು ಕರಪತ್ರಗಳನ್ನು ಯಾವಾಗಲೂ ನಮ್ಮೊಂದಿಗೆ ಇಟ್ಟುಕೊಳ್ಳುವುದು ಒಳ್ಳೇದು. (ಆಗಸ್ಟ್ 2010ರ ನಮ್ಮ ರಾಜ್ಯ ಸೇವೆ ಪುಟ 5) ನಮ್ಮ ಬೈಬಲ್ ವಿದ್ಯಾರ್ಥಿಗಳಿಗೂ ಬೇರೆ ಬೇರೆ ಕರಪತ್ರಗಳನ್ನು ನೀಡಬಹುದು. ಒಂದೊಂದು ಪ್ರತಿಯನ್ನು ಅವರು ತಮ್ಮ ವೈಯಕ್ತಿಕ ಉಪಯೋಗಕ್ಕೆ ಇಟ್ಟುಕೊಂಡು ಉಳಿದದ್ದನ್ನು ಸಾಕ್ಷಿ ನೀಡುವಾಗ ಆಸಕ್ತ ವ್ಯಕ್ತಿಗಳಿಗೆ ಕೊಡಬಹುದು.
10 ನಿ: “ಇದು ಯಾರಿಗೆ ಇಷ್ಟವಾಗಬಹುದು. . . ?” ಪ್ರಶ್ನೋತ್ತರ. ನಮ್ಮ ಪತ್ರಿಕೆಗಳಲ್ಲಿ ಬರುವ ಕೆಲವೊಂದು ಲೇಖನಗಳು ನಿಮ್ಮ ಸಭಾ ಸೇವಾಕ್ಷೇತ್ರದಲ್ಲಿರುವ ಯಾವ್ಯಾವ ಉದ್ದಿಮೆ ಮತ್ತು ಸ್ಥಳೀಯ ಸರ್ಕಾರೀ ಸೇವಾಸಂಸ್ಥೆಗಳಿಗೆ ಆಸಕ್ತಿಕರವಾಗಿರಬಹುದು ಎಂದು ಸಭಿಕರನ್ನು ಕೇಳಿ.
ಗೀತೆ 92 ಮತ್ತು ಪ್ರಾರ್ಥನೆ