ಮೇ 12ರ ವಾರಕ್ಕಾಗಿರುವ ಶೆಡ್ಯೂಲ್
ಮೇ 12ರ ವಾರ
ಗೀತೆ 111 ಮತ್ತು ಪ್ರಾರ್ಥನೆ
ಬೈಬಲ್—ಅದರಲ್ಲಿ ಏನಿದೆ? ಪಾಠ 21 (30 ನಿ.)
ಬೈಬಲ್ ವಾಚನ: ವಿಮೋಚನಕಾಂಡ 27-29 (10 ನಿ.)
ನಂ. 1: ವಿಮೋಚನಕಾಂಡ 29:19-30 (4 ನಿಮಿಷದೊಳಗೆ)
ನಂ. 2: ನಿಂದೆಯಾಗಿ ಯೇಸುವನ್ನು ವಧಾಕಂಬದ ಮೇಲೆ ತೂಗು ಹಾಕಲಾಯಿತು—ಬೈಬಲ್ ವಿಷಯಗಳು 39 ಎ (5 ನಿ.)
ನಂ. 3: ದೇವರು ಮೆಚ್ಚುವ ಗುಣಗಳಾದ ವಿಧೇಯತೆ, ನಿಸ್ವಾರ್ಥ, ಧೈರ್ಯವನ್ನು ಅಬ್ರಹಾಮ ತೋರಿಸಿದನು—ಆದಿ 11:32; 12:6–13:18; 14:1-20; ವಿಮೋ 12:40-43; ಗಲಾ 3:17 (5 ನಿ.)
15 ನಿ: ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು. (ಯೆಶಾ. 2:2) ಇಬ್ಬರು ಪ್ರಚಾರಕರನ್ನು ಸಂದರ್ಶಿಸಿ. ಅವರಲ್ಲೊಬ್ಬನು ಅನೇಕ ವರ್ಷಗಳಿಂದ ಸತ್ಯದಲ್ಲಿದ್ದವನೂ ಇನ್ನೊಬ್ಬನು ಹೊಸದಾಗಿ ಸತ್ಯಕ್ಕೆ ಬಂದವನೂ ಆಗಿರಬೇಕು. ಅವರಿಗೆ ಸತ್ಯದಲ್ಲಿ ಆಸಕ್ತಿಕರವಾಗಿದ್ದ ವಿಷಯ ಯಾವುದು? ಅವರು ಯಾವೆಲ್ಲಾ ಸವಾಲುಗಳನ್ನು ಎದುರಿಸಬೇಕಾಯಿತು? ಮೊಟ್ಟ ಮೊದಲ ಬಾರಿ ಕೂಟಗಳಿಗೆ ಹಾಜರಾದಾಗ ಅವರನ್ನು ಆಕರ್ಷಿಸಿದ ವಿಷಯ ಯಾವುದು? ಮೊದಲ ಬಾರಿ ಸೇವೆ ಮಾಡಿದಾಗ ಆದಂಥ ಯಾವೆಲ್ಲಾ ವಿಷಯಗಳು ಅವರಿಗೆ ನೆನಪಿವೆ? ಆಧ್ಯಾತ್ಮಿಕ ಪ್ರಗತಿ ಮಾಡಲು ಅವರಿಗೆ ಸಭೆಯಲ್ಲಿರುವವರು ಹೇಗೆ ನೆರವಾದರು?
15 ನಿ: “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಮೊದಲ ಮಾತುಗಳನ್ನು ಮುಂತಯಾರಿಸಿ.” ಚರ್ಚೆ. ಎರಡು ಭಾಗಗಳ ಈ ಪ್ರಾತ್ಯಕ್ಷಿಕೆ ಇರಲಿ. ಮೊದಲ ಭಾಗದಲ್ಲಿ, ಏನೂ ಯೋಚಿಸದೆ, ತೋಚಿದ್ದನ್ನು ಹೇಳುವ ಪೀಠಿಕೆ ಇರಲಿ. ಎರಡನೇ ಭಾಗದಲ್ಲಿ, ಚೆನ್ನಾಗಿ ತಯಾರಿಸಿದ ಪೀಠಿಕೆ ಇರಲಿ. ಶುಶ್ರೂಷಾ ಶಾಲೆ ಪುಸ್ತಕದ ಪುಟ 215-219ರಲ್ಲಿರುವ ಮುಖ್ಯಾಂಶಗಳನ್ನು ಒಳಗೂಡಿಸಿ.
ಗೀತೆ 117 ಮತ್ತು ಪ್ರಾರ್ಥನೆ