ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2014 ಜೂನ್ 30ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು.
ಮನೋರಂಜನೆ ಮತ್ತು ವಿನೋದವಿಹಾರವನ್ನು ಆಯ್ಕೆ ಮಾಡುವ ವಿಷಯದಲ್ಲಿ ವಿಮೋಚನಕಾಂಡ 23:2ರಲ್ಲಿ ದಾಖಲಿಸಲ್ಪಟ್ಟಿರುವ ಮೂಲತತ್ವವು ಪ್ರಾಮುಖ್ಯವೇಕೆ? [ಮೇ 5, ಕಾವಲಿನಬುರುಜು11 7/15 ಪು. 10-11 ಪ್ಯಾ. 3-7]
ಯಜ್ಞವೇದಿಯ ಮೇಲೆ ಯೆಹೋವನಿಗೆ ಬಲಿಗಳನ್ನು ಅರ್ಪಿಸುವ ಮುಂಚೆ ಯಾಜಕರು ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳಬೇಕೆಂಬ ಆಜ್ಞೆ ಎಷ್ಟು ಗಂಭೀರವಾಗಿತ್ತು ಮತ್ತು ಇಂದಿನ ದೇವರ ಸೇವಕರಿಗೆ ಇದು ಯಾವ ಬಲವಾದ ಮರುಜ್ಞಾಪನ ಕೊಡುತ್ತದೆ? (ವಿಮೋ. 30:18-21) [ಮೇ 19, ಕಾವಲಿನಬುರುಜು96 7/1 ಪು. 9 ಪ್ಯಾ. 9]
ಚಿನ್ನದ ಬಸವನನ್ನು ಮಾಡಿದ್ದಕ್ಕಾಗಿ ಆರೋನನಿಗೆ ಏಕೆ ಶಿಕ್ಷೆ ವಿಧಿಸಲ್ಪಡಲಿಲ್ಲ? (ವಿಮೋ. 32:1-8, 25-35) [ಮೇ 19, ಕಾವಲಿನಬುರುಜು04 3/15 ಪು. 27 ಪ್ಯಾ. 4]
ಪ್ರೇಮಯಾಚನೆ ಮತ್ತು ವಿವಾಹದ ಕುರಿತ ಕ್ರೈಸ್ತರ ನೋಟ ಅನ್ಯದೇವರುಗಳನ್ನು ಆರಾಧಿಸುತ್ತಿದ್ದ ಜನರನ್ನು ವಿವಾಹವಾಗಬಾರದೆಂದು ಇಸ್ರಾಯೇಲ್ಯರಿಗೆ ಯೆಹೋವನು ಕೊಟ್ಟ ಆಜ್ಞೆಗೆ ಹೇಗೆ ಸಂಬಂಧಿಸಿದೆ? (ವಿಮೋ. 34:12-16) [ಮೇ 26, ಕಾವಲಿನಬುರುಜು90 6/1 ಪು. 14-15 ಪ್ಯಾ. 11-13]
ಬೆಚಲೇಲ ಮತ್ತು ಒಹೊಲೀಯಾಬರ ಉದಾಹರಣೆಯು ನಮಗೇಕೆ ಉತ್ತೇಜನದಾಯಕವಾಗಿದೆ? (ವಿಮೋ. 35:30-35) [ಮೇ 26, ಕಾವಲಿನಬುರುಜು10 9/15 ಪು. 10 ಪ್ಯಾ. 13]
ಮಹಾಯಾಜಕನು ಧರಿಸುತ್ತಿದ್ದ ಮುಂಡಾಸದ ಮೇಲಿದ್ದ ‘ಸಮರ್ಪಣೆಯ ಪವಿತ್ರ ಸಂಕೇತವು’ (NW) ಏನನ್ನು ನೆನಪುಹುಟ್ಟಿಸುತ್ತಿತ್ತು? ಈ ಸಂಕೇತವು ಸಮರ್ಪಣೆಯ ಬಗ್ಗೆ ನಮಗೇನು ಕಲಿಸುತ್ತದೆ? (ವಿಮೋ. 39:30) [ಜೂನ್ 2, ಕಾವಲಿನಬುರುಜು01 2/1 ಪು. 14 ಪ್ಯಾ. 2-3]
ಒಬ್ಬ ಜೊತೆ ಕ್ರೈಸ್ತನು ಗಂಭೀರ ತಪ್ಪು ಮಾಡಿರುವಲ್ಲಿ ಅದನ್ನು ತಿಳಿಸುವ ವಿಷಯದಲ್ಲಿ ಕ್ರೈಸ್ತರೆಲ್ಲರಿಗೆ ಯಾವ ಜವಾಬ್ದಾರಿಯಿದೆ? (ಯಾಜ. 5:1) [ಜೂನ್ 9, ಕಾವಲಿನಬುರುಜು97 8/15 ಪು. 27]
ಇಸ್ರಾಯೇಲ್ಯರ ದಿನಗಳಲ್ಲಿ, ಸಮಾಧಾನಯಜ್ಞವು ಯಾವ ಪ್ರಾಮುಖ್ಯ ಪಾತ್ರ ವಹಿಸಿತ್ತು? ಮತ್ತು ಈ ಏರ್ಪಾಡು ಇಂದು ನಮಗೆ ಯಾವ ಅರ್ಥದಲ್ಲಿದೆ? (ಯಾಜ. 7:31-33) [ಜೂನ್ 16, ಕಾವಲಿನಬುರುಜು12 1/15 ಪು. 19 ಪ್ಯಾ. 11-12]
ಆರೋನನ ಪುತ್ರರಾದ ನಾದಾಬ್ ಮತ್ತು ಅಬೀಹುವಿನ ಪಾಪದಲ್ಲಿ ಏನು ಒಳಗೂಡಿದ್ದಿರಬಹುದು? ಮತ್ತು ಈ ವೃತ್ತಾಂತದಿಂದ ನಾವು ಯಾವ ಪಾಠಗಳನ್ನು ಕಲಿಯುತ್ತೇವೆ? (ಯಾಜ. 10:1, 2, 9) [ಜೂನ್ 23, ಕಾವಲಿನಬುರುಜು04 5/15 ಪು. 22 ಪ್ಯಾ. 6-8]
ಮಗುವನ್ನು ಹೆರುವುದು ಒಬ್ಬ ಸ್ತ್ರೀಯನ್ನು ಏಕೆ ‘ಅಶುದ್ಧಳನ್ನಾಗಿ’ ಮಾಡುತ್ತಿತ್ತು? (ಯಾಜ. 12:2, 5) [ಜೂನ್ 23, ಕಾವಲಿನಬುರುಜು04 5/15 ಪು. 23 ಪ್ಯಾ. 2]