ಸೆಪ್ಟೆಂಬರ್ 1ರ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 1ರ ವಾರ
ಗೀತೆ 15 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 1, 2 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 17-21 (10 ನಿ.)
ನಂ. 1: ಅರಣ್ಯಕಾಂಡ 17:1-13 (4 ನಿಮಿಷದೊಳಗೆ)
ನಂ. 2: ಆಧುನಿಕ ದಿನದ ಶ್ರದ್ಧಾಚಿಕಿತ್ಸೆಯಲ್ಲಿ ದೈವಿಕ ಅನುಗ್ರಹವಿರುವುದಿಲ್ಲ—ಬೈಬಲ್ ವಿಷಯಗಳು 34 ಸಿ (5 ನಿ.)
ನಂ. 3: ಯೋಬನು ದೇವರಿಗೆ ನಂಬಿಗಸ್ತನಾಗಿರುತ್ತಾನೆ—ಬೈಬಲ್ ಕಥೆಗಳು, ಕಥೆ 26 (5 ನಿ.)
❑ ಸೇವಾ ಕೂಟ:
10 ನಿ: ಸೆಪ್ಟೆಂಬರ್ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಿ. ಚರ್ಚೆ. ಆರಂಭದಲ್ಲೇ ಜುಲೈ-ಸೆಪ್ಟೆಂಬರ್ ಎಚ್ಚರ! ಪತ್ರಿಕೆಯನ್ನು ಹೇಗೆ ನೀಡಬಹುದೆಂಬ ಪ್ರಾತ್ಯಕ್ಷಿಕೆ ಇರಲಿ. ಇದಕ್ಕಾಗಿ ಈ ಪುಟದಲ್ಲೇ ಇರುವ ಮಾದರಿ ನಿರೂಪಣೆಯನ್ನು ಬಳಸಿ. ನಂತರ ಇಡೀ ನಿರೂಪಣೆಯನ್ನು ವಿಶ್ಲೇಷಿಸಿ.
10 ನಿ: ನಾವು ಸಾಧಿಸಿದ್ದೇನು? ಚರ್ಚೆ. “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ದೇವರ ರಾಜ್ಯದ ಕುರಿತು ದೃಢವಿಶ್ವಾಸದಿಂದ ಮಾತಾಡಿ” ಎಂಬ ಲೇಖನದಿಂದಾದ ವೈಯಕ್ತಿಕ ಪ್ರಯೋಜನಗಳನ್ನು ಕೇಳಿ. ದೇವರ ರಾಜ್ಯದ ಬಗ್ಗೆ ಮಾತಾಡಲು ಯಾಕೆ ಕಷ್ಟ ಆಗುತ್ತಿತ್ತೆಂದು ಮತ್ತು ಅದನ್ನು ಅವರು ಹೇಗೆ ಜಯಿಸಿದರು ಎಂದು ಸಭಿಕರನ್ನು ಕೇಳಿ.
10 ನಿ: ವಿಶೇಷ ಅಭಿಯಾನದ ವರದಿ. ಸೇವಾ ಮೇಲ್ವಿಚಾರಕನಿಂದ ಭಾಷಣ. ದೇವರ ರಾಜ್ಯವನ್ನು ಪ್ರಕಟಿಸುತ್ತಾ ಮುಂದುವರಿಯುವುದರ ಅಗತ್ಯದ ಕುರಿತು ಈ ನಮ್ಮ ರಾಜ್ಯ ಸೇವೆಯಲ್ಲಿರುವ ಲೇಖನಗಳನ್ನು ಸಾರಾಂಶಿಸಿ. ಈ ಮಾರ್ಗದರ್ಶನೆಗೆ ಸಭೆ ಹೇಗೆ ಪ್ರತಿಕ್ರಿಯಿಸಿತು? ಅಭಿಯಾನದಲ್ಲಿ ಸಾಧಿಸಲಾದ ವಿಷಯಗಳು ಯಾವುವು?
ಗೀತೆ 45 ಮತ್ತು ಪ್ರಾರ್ಥನೆ