ಡಿಸೆಂಬರ್ 22ರ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 22ರ ವಾರ
ಗೀತೆ 6 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 25 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೋಶುವ 9-11 (10 ನಿ.)
ನಂ. 1: ಯೆಹೋಶುವ 9:16-27 (4 ನಿಮಿಷದೊಳಗೆ)
ನಂ. 2: ಎಲ್ಲರೂ ಸತ್ಯದೇವರನ್ನೇ ಆರಾಧಿಸುತ್ತಿಲ್ಲ—ಬೈಬಲ್ ವಿಷಯಗಳು 27 ಡಿ (5 ನಿ.)
ನಂ. 3: ಯೆಹೋವನು ನಿಯಮಗಳನ್ನು ಕೊಡುತ್ತಾನೆ—ಬೈಬಲ್ ಕಥೆಗಳು, ಕಥೆ 35 (5 ನಿ.)
❑ ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ನಮಗೆ ಕೊಡಲಾಗಿರುವ ಒಳ್ಳೆಯ ಬೊಕ್ಕಸದಿಂದ “ಒಳ್ಳೆಯ ವಿಷಯಗಳನ್ನು” ಹೊರತರೋಣ.—ಮತ್ತಾ. 12:35ಎ.
30 ನಿ: “ಬೋಧಿಸುವ ಕಲೆಯನ್ನು ಬೆಳೆಸಿಕೊಳ್ಳಲು 2015ರ ಶುಶ್ರೂಷಾ ಶಾಲೆಯಿಂದ ಸಹಾಯ.” ಶಾಲಾ ಮೇಲ್ವಿಚಾರಕನಿಂದ ಚರ್ಚೆ. ಮೇಲ್ವಿಚಾರಕನು ಕೆಲವು ನಿರ್ದಿಷ್ಟ ಪ್ಯಾರಗಳನ್ನು ಓದಿ ಚರ್ಚಿಸಲು ನಿರ್ಣಯಿಸಬಹುದು. ನೇಮಕ ನಂ. 1ರಲ್ಲಿ, ಬೈಬಲ್ ವಾಚನದ ಮುಖ್ಯಾಂಶದ ಸಮಯದಲ್ಲಿ, ಮೇಲ್ವಿಚಾರಕನು ವಿದ್ಯಾರ್ಥಿಗಳಿಗೆ ನೀಡುವ ಸಲಹೆಯಲ್ಲಿ ಆಗಿರುವ ಬದಲಾವಣೆಯನ್ನು ಒತ್ತಿ ಹೇಳಿ. 7ನೇ ಪ್ಯಾರವನ್ನು ಓದಿಸಿ, ಅದನ್ನು ಚರ್ಚಿಸಿದ ನಂತರ ಬೈಬಲಿನ ಕಿರುಪರಿಚಯ ಪುಸ್ತಿಕೆಯ ಪುಟ 14ರಲ್ಲಿರುವ ಮಾಹಿತಿಯನ್ನು ಉಪಯೋಗಿಸಿ ಸಭಾ ಹಿರಿಯನು ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಕುಟುಂಬ ಆರಾಧನೆಯನ್ನು ನಡೆಸುವ ಮಾದರಿ ಪ್ರಾತ್ಯಕ್ಷಿಕೆ ಇರಲಿ. ಈ ಶಾಲೆಯಿಂದ ಸಿಗುವ ತರಬೇತಿಯ ಪೂರ್ಣ ಪ್ರಯೋಜನ ಪಡೆದುಕೊಳ್ಳಲು ಮತ್ತು ಶುಶ್ರೂಷಾ ಶಾಲೆಯ ಪಠ್ಯ ಪುಸ್ತಕವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಲು ಎಲ್ಲರನ್ನು ಉತ್ತೇಜಿಸಿ.
ಗೀತೆ 117 ಮತ್ತು ಪ್ರಾರ್ಥನೆ