ನಮ್ಮಲ್ಲಿರುವ “ಒಳ್ಳೆಯ ವಿಷಯಗಳನ್ನು” ಹಂಚಿಕೊಳ್ಳೋಣ (ಮತ್ತಾ. 12:35ಎ)
ಎಲ್ಲರನ್ನೂ ಮನೆಗೆ ಕರೆಯಬೇಕು, ನಮ್ಮ ಹತ್ತಿರ ಇರೋದನ್ನು ಅವರ ಜೊತೆ ಹಂಚಿಕೊಳ್ಳಬೇಕಂತ ನಮ್ಮೆಲ್ಲರಿಗೂ ಆಸೆ ಇದ್ದೇ ಇರುತ್ತೆ. (ರೋಮ. 12:13) ಬೇರೆ ಸಭೆಯಿಂದ ಯಾರಾದರೂ ನಮ್ಮ ಸಭೆಗೆ ಭಾಷಣ ಕೊಡಲು ಬಂದಾಗ ಅವರ ಪ್ರಯಾಣದ ಖರ್ಚನ್ನು ಕೊಟ್ಟು ಊಟದ ಏರ್ಪಾಡನ್ನು ಹಿರಿಯರು ನೋಡಿಕೊಳ್ಳುತ್ತಾರೆ. ಹಾಗಾದರೆ ನಾವೇನು ಮಾಡಬಹುದು? ಕೆಲವರು ನಮ್ಮ ಹತ್ತಿರ ಅಷ್ಟು ಹಣ ಇಲ್ಲ, ನಮ್ಮ ಮನೆ ನೋಡಿದರೆ ಅವರೇನು ಅಂದುಕೊಳ್ಳುತ್ತಾರೋ ಅಂತ ನೆನಸಿ ಬೇರೆಯವರನ್ನು ಮನೆಗೆ ಕರೆಯಲು ಹಿಂದೇಟು ಹಾಕುತ್ತಾರೆ. ನಿಮಗೂ ಹಾಗೇ ಅನಿಸುತ್ತಾ? ಹಾಗಾದರೆ ಈ ವಿಷಯದ ಬಗ್ಗೆ ಮಾರ್ಥಳಿಗೆ ಯೇಸು ಹೇಳಿದ ಸಲಹೆಯನ್ನು ನಾವು ಪಾಲಿಸಬೇಕು. (ಲೂಕ 10:39-42) ಮನೆಗೆ ಯಾರನ್ನಾದರೂ ಕರೆದರೆ ಅವರಿಗೆ ಬಗೆಬಗೆಯ ತಿಂಡಿ-ತಿನಿಸುಗಳನ್ನೇ ಕೊಡಬೇಕು, ಭರ್ಜರಿ ಅಡುಗೆ ಮಾಡಿಸಬೇಕು, ನಿಮ್ಮ ‘ಮನೆ ನೋಡಿದರೆ ಅವರು ಏನು ಅಂದುಕೊಳ್ಳುತ್ತಾರೋ ಏನೋ’ ಅಂತ ನೆನಸಬೇಡಿ. ಮನೆಗೆ ಬಂದವರ ಹತ್ತಿರ ಮಾತಾಡಿ, ಸಮಯ ಕಳೆಯುವುದು ತುಂಬ ಮುಖ್ಯ. ಆಗ ತುಂಬ ಉತ್ತೇಜನ ಸಿಗುತ್ತದೆ. ಹೀಗೆ ಮಾಡಿದರೆ ನಮ್ಮಲ್ಲಿರೋದನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂಬ ನಿಮ್ಮ ಆಸೆ ಕೂಡ ಈಡೇರುತ್ತದೆ.—3 ಯೋಹಾ. 5-8.