ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2014 ಡಿಸೆಂಬರ್ 29ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು.
1. ಸತ್ತವರಿಗೋಸ್ಕರ ಗೋಳಾಡುವಾಗ ಸ್ವಂತ ದೇಹವನ್ನು ಗಾಯಮಾಡಿಕೊಳ್ಳಬಾರದು ಎಂಬ ಧರ್ಮೋಪದೇಶಕಾಂಡ 14:1ರಲ್ಲಿನ ಆಜ್ಞೆಯನ್ನು ನಾವು ಹೇಗೆ ವೀಕ್ಷಿಸಬೇಕು? [ನವೆಂ. 3, ಕಾವಲಿನಬುರುಜು 04 9/15 ಪು. 27 ಪ್ಯಾ. 5]
2. ಇಸ್ರಾಯೇಲಿನ ಅರಸರು ಧರ್ಮಶಾಸ್ತ್ರದ ವೈಯಕ್ತಿಕ ಪ್ರತಿಯನ್ನು ಮಾಡಿಕೊಂಡು ಅದನ್ನು ‘ತಮ್ಮ ಜೀವಮಾನದ ದಿನಗಳೆಲ್ಲಾ ಓದಬೇಕೆಂದು’ ಕೊಟ್ಟ ಆಜ್ಞೆಯ ಉದ್ದೇಶವೇನಾಗಿತ್ತು? (ಧರ್ಮೋ. 17:18-20) [ನವೆಂ. 3, ಕಾವಲಿನಬರುಜು 02 6/15 ಪು. 12 ಪ್ಯಾ. 4]
3. “ಎತ್ತನ್ನೂ ಕತ್ತೆಯನ್ನೂ ಜೊತೆಮಾಡಿ ನೇಗಿಲಿಗೆ ಕಟ್ಟಬಾರದು” ಎಂದು ಯಾಕೆ ಹೇಳಲಾಗಿದೆ? ಸಮತೆಯಿಲ್ಲದ ಜೊತೆಯಾಗುವುದರ ಕುರಿತು ಕೊಡಲಾದ ಆಜ್ಞೆ ಕ್ರೈಸ್ತರಿಗೆ ಹೇಗೆ ಅನ್ವಯಿಸುತ್ತದೆ? (ಧರ್ಮೋ. 22:10) [ನವೆಂ. 10, ಕಾವಲಿನಬುರುಜು 03 10/15 ಪು. 32]
4. “ಬೀಸುವಕಲ್ಲನ್ನು ಪೂರ್ತಿಯಾಗಲಿ ಅರ್ಧವಾಗಲಿ ಒತ್ತೆತೆಗೆದುಕೊಳ್ಳಬಾರದು” ಎಂಬ ಆಜ್ಞೆಯನ್ನು ಯಾಕೆ ಕೊಡಲಾಯಿತು? (ಧರ್ಮೋ. 24:6) [ನವೆಂ. 17, ಕಾವಲಿನಬುರುಜು 04 9/15 ಪು. 26 ಪ್ಯಾ. 3]
5. ಇಸ್ರಾಯೇಲ್ಯರು ಯಾವ ಮನೋಭಾವದಿಂದ ವಿಧೇಯರಾಗಿರಬೇಕಿತ್ತು? ಯೆಹೋವನನ್ನು ಸೇವಿಸುವಂತೆ ನಮ್ಮನ್ನು ಯಾವುದು ಪ್ರಚೋದಿಸಬೇಕು? (ಧರ್ಮೋ. 28:47) [ನವೆಂ. 24, ಕಾವಲಿನಬುರುಜು 10 9/15 ಪು. 8 ಪ್ಯಾ. 4]
6. ಧರ್ಮೋಪದೇಶಕಾಂಡ 30:19, 20ರಲ್ಲಿ ಜೀವನದ ಯಾವ ಮೂರು ಮೂಲಭೂತ ಆವಶ್ಯಕತೆಗಳು ಕೊಡಲ್ಪಟ್ಟಿವೆ? [ನವೆಂ. 24, ಕಾವಲಿನಬುರುಜು 10 2/15 ಪು. 28 ಪ್ಯಾ. 17]
7. ನಾವು ಆದಿಕಾಂಡದಿಂದ ಪ್ರಕಟನೆಯ ವರೆಗೆ ಎಲ್ಲವನ್ನು ನಿಧಾನವಾಗಿ, ಪಿಸುಗುಟ್ಟುವ ಧ್ವನಿಯಲ್ಲಿ ಓದಬೇಕಾ? ವಿವರಿಸಿ. (ಯೆಹೋ. 1:8) [ಡಿಸೆಂ. 8, ಕಾವಲಿನಬುರುಜು 13 4/15 ಪು. 7 ಪ್ಯಾ. 4]
8. ಯೆಹೋಶುವ 5:14, 15ರಲ್ಲಿ ತಿಳಿಸಲಾದ “ಯೆಹೋವನ ಸೇನಾಪತಿಯು” ಯಾರು? ಈ ವೃತ್ತಾಂತದಿಂದ ನಮಗೆ ಯಾವ ಉತ್ತೇಜನ ಸಿಗುತ್ತದೆ? [ಡಿಸೆಂ. 8, ಕಾವಲಿನಬುರುಜು 04 12/1 ಪು. 9 ಪ್ಯಾ. 1]
9. ಆಕಾನನು ಪಾಪ ಮಾಡಲು ಕಾರಣವೇನು? ಅವನ ಕೆಟ್ಟ ಉದಾಹರಣೆಯಿಂದ ನಾವೇನನ್ನು ಕಲಿಯಬಹುದು? (ಯೆಹೋ. 7:20, 21) [ಡಿಸೆಂ. 15, ಕಾವಲಿನಬುರುಜು 10 4/15 ಪು. 20-21 ಪ್ಯಾ. 2, 5]
10. ಕಾಲೇಬನ ಉದಾಹರಣೆಯಿಂದ ಇಂದು ನಮಗೆ ಯಾವ ಉತ್ತೇಜನ ಸಿಗುತ್ತದೆ? (ಯೆಹೋ. 14:10-13) [ಡಿಸೆಂ. 29, ಕಾವಲಿನಬುರುಜು 04 12/1 ಪು. 12 ಪ್ಯಾ. 2]