ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2015 ಫೆಬ್ರವರಿ 23ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು.
ಚಲ್ಪಹಾದನ ಪುತ್ರಿಯರು ಯಾವ ಮಾದರಿಯನ್ನಿಟ್ಟರು? (ಯೆಹೋ. 17:3, 4) [ಜನ. 5, ಕಾವಲಿನಬುರುಜು 08 2/15 ಪು. 4 ಪ್ಯಾ. 10]
ಯೆಹೋಶುವನು ದೃಢ ಭರವಸೆಯಿಂದ ಯೆಹೋಶುವ 23:14ರಲ್ಲಿರುವ ಮಾತುಗಳನ್ನು ಹೇಳಲು ಕಾರಣವೇನು? ಯೆಹೋವನ ವಾಗ್ದಾನಗಳಲ್ಲಿ ನಾವು ಏಕೆ ಸಂಪೂರ್ಣ ಭರವಸೆಯನ್ನಿಡಬಹುದು? [ಜನ. 12, ಕಾವಲಿನಬುರುಜು 07 11/1 ಪು. 27 ಪ್ಯಾ. 19]
ತಮಗೆ ಬಂದ ಸ್ವಾಸ್ತ್ಯವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಥಮ ಅವಕಾಶವನ್ನು ಯೆಹೂದ ಕುಲದವರಿಗೆ ಏಕೆ ಕೊಡಲಾಯಿತು? (ನ್ಯಾಯ. 1:2, 4) [ಜನ. 19, ಕಾವಲಿನಬುರುಜು 05 1/15 ಪು. 24 ಪ್ಯಾ. 5]
ಪ್ರವಾದಿನಿಯಾದ ದೆಬೋರಳನ್ನು ತನ್ನ ಸಂಗಡ ಕದನರಂಗಕ್ಕೆ ಬರಬೇಕು ಎಂದು ಬಾರಾಕನು ಒತ್ತಾಯಿಸಿದ್ದೇಕೆ? (ನ್ಯಾಯ. 4:8) [ಜನ. 19, ಕಾವಲಿನಬುರುಜು 05 1/15 ಪು. 25 ಪ್ಯಾ. 5]
ಗಿದ್ಯೋನನು ದೇವದೂತನೊಂದಿಗೆ ನಡೆದುಕೊಂಡ ರೀತಿಯಿಂದ ನಾವೇನನ್ನು ಕಲಿಯಬಹುದು? (ನ್ಯಾಯ. 6:17-22, 36-40) [ಜನ. 26, ಕಾವಲಿನಬುರುಜು 05 1/15 ಪು. 26 ಪ್ಯಾ. 6]
ಗಿದ್ಯೋನನ ವಿನಯಶೀಲತೆಯಿಂದ ನಾವೇನನ್ನು ಕಲಿಯಬಹುದು? (ನ್ಯಾಯ. 6:11-15; 8:1-3, 22, 23) [ಫೆಬ್ರ. 2, ಕಾವಲಿನಬುರುಜು 05 1/15 ಪು. 26 ಪ್ಯಾ. 5]
ಯೆಪ್ತಾಹನು ಹರಕೆಯನ್ನು ಮಾಡುತ್ತಿದ್ದಾಗ, ಮಾನವ ಯಜ್ಞದ ಕುರಿತಾದ ವಿಷಯವು ಅವನ ಮನಸ್ಸಿನಲ್ಲಿತ್ತೋ? (ನ್ಯಾಯ. 11:30,31) [ಫೆಬ್ರ. 9, ಕಾವಲಿನಬುರುಜು 05 1/15 ಪು. 26 ಪ್ಯಾ. 2]
ನ್ಯಾಯಸ್ಥಾಪಕರು 11:35-37ರಲ್ಲಿ ತಿಳಿಸಿದಂತೆ ತನ್ನ ತಂದೆಯ ಹರಕೆಯನ್ನು ನೆರವೇರಿಸಲು ಯೆಪ್ತಾಹನ ಮಗಳಿಗೆ ಯಾವುದು ಸಹಾಯಮಾಡಿತು? [ಫೆಬ್ರ. 9, ಕಾವಲಿನಬುರುಜು 11 12/15 ಪು. 20-21 ಪ್ಯಾ. 15-16]
ಇಸ್ರಾಯೇಲಿನಲ್ಲಿ ಅರಸರಿಲ್ಲದ ಸಮಯದಲ್ಲಿ ‘ಪ್ರತಿಯೊಬ್ಬನೂ ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದದರಿಂದ’ ಅಲ್ಲಿನ ಪರಿಸ್ಥಿತಿ ಅವ್ಯವಸ್ಥಿತವಾಗಿತ್ತೋ? ವಿವರಿಸಿ. (ನ್ಯಾಯ. 17:6) [ಫೆಬ್ರ. 16, ಕಾವಲಿನಬುರುಜು 05 1/15 ಪು. 27 ಪ್ಯಾ. 8]
ಮೊಂಡರಾಗಿದ್ದ ಬೆನ್ಯಾಮೀನ್ಕುಲದವರು ಇಸ್ರಾಯೇಲ್ಯರನ್ನು ಎರಡು ಸಾರಿ ಸೋಲಿಸಿದ ವೃತ್ತಾಂತದಿಂದ ಪಟ್ಟುಬಿಡದೆ ಪ್ರಾರ್ಥನೆ ಮಾಡುವ ವಿಷಯದಲ್ಲಿ ನಾವೇನನ್ನು ಕಲಿಯುತ್ತೇವೆ? (ನ್ಯಾಯ. 20:14-48) [ಫೆಬ್ರ. 23, ಕಾವಲಿನಬುರುಜು 05 1/15 ಪು. 27 ಪ್ಯಾ. 9]