ಯೇಸುವಿನ ಕುರಿತ ಸತ್ಯವನ್ನು ಹುರುಪಿನಿಂದ ಸಾರಿರಿ
ಯೇಸುವಿನ ಕುರಿತ ಸತ್ಯವನ್ನು ಇತರರಿಗೆ ಹೇಗೆ ತಿಳಿಸಬೇಕೆಂದು ಗೊತ್ತಿದ್ದರೆ ನಮ್ಮ ಹುರುಪು ಹೆಚ್ಚಾಗುತ್ತದೆ. ಯೇಸು ನಿಜ ನಂಬಿಕೆಯ ಅಸ್ತಿವಾರದ ಮೂಲೆಗಲ್ಲಾಗಿದ್ದಾನೆ. (ಎಫೆ. 2:20) ಆತನು ಇಲ್ಲದಿದ್ದರೆ ನಮ್ಮ ಜೀವನಕ್ಕೆ ಯಾವುದೇ ನಿರೀಕ್ಷೆ ಇರುತ್ತಿರಲಿಲ್ಲ. (ಅ. ಕಾ. 4:12) ಅಷ್ಟೇ ಅಲ್ಲದೇ, ‘ಯಾರು ಆತನಲ್ಲಿ ನಂಬಿಕೆಯಿಡುತ್ತಾರೋ ಅಂಥವರಿಗೆ ಅನೇಕ ಆಶೀರ್ವಾದಗಳನ್ನು ಕೊಡುತ್ತೇನೆ’ ಎಂದು ದೇವರು ಮಾತು ಕೊಟ್ಟಿದ್ದಾನೆ. ಆದರೆ ಇಂದು ಅನೇಕ ಜನರು ಬೈಬಲಿನಲ್ಲಿರದ ಬೋಧನೆಗಳಿಂದ ದಾರಿತಪ್ಪಿದ್ದಾರೆ. ಅವರು ಯೇಸುವಿನ ಕುರಿತ ಸತ್ಯವನ್ನು ತಿಳಿಯದೇ ಹೋದರೆ ಈ ಆಶೀರ್ವಾದಗಳು ಸಿಗುವುದೇ ಇಲ್ಲ. ಸತ್ಯಕ್ಕಾಗಿ ನಮ್ಮಲ್ಲಿ ಹುರುಪು ಇರುವುದಾದರೆ ಯೇಸುವಿನ ಕುರಿತ ಸತ್ಯವನ್ನು, ದೇವರೊಂದಿಗಿನ ಆತನ ಸಂಬಂಧವನ್ನು ಮತ್ತು ದೇವರ ಉದ್ದೇಶದಲ್ಲಿ ಆತನಿಗಿರುವ ಪಾತ್ರವನ್ನು ತಿಳಿದುಕೊಳ್ಳಲು ದೀನರಿಗೆ ಸಹಾಯ ಮಾಡುತ್ತೇವೆ. ಆದ್ದರಿಂದ, ಈ ಬಾರಿ ಯೇಸುವಿನ ಮರಣದ ಸ್ಮರಣೆಯ ಸಮಯದಲ್ಲಿ, ನಾವೆಲ್ಲರೂ ಆತನ ಬಗ್ಗೆ ಹುರುಪಿನಿಂದ ಸಾರೋಣವೇ?