ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಮಾರ್ಚ್ ಮತ್ತು ಏಪ್ರಿಲ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಮೇ ಮತ್ತು ಜೂನ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಅಥವಾ ಕೆಳಕಂಡ ಕರಪತ್ರಗಳನ್ನು ಕೊಡಿ: ಪರದೈಸಿಗೆ ಹೋಗುವ ಹಾದಿಯನ್ನು ಕಂಡುಕೊಳ್ಳುವ ವಿಧ, ಕಷ್ಟಾನುಭವವು ಎಂದಾದರೂ ಕೊನೆಗೊಳ್ಳುವುದೊ?, ಸರ್ವಶ್ರೇಷ್ಠ ಹೆಸರು, ಯೆಹೋವನ ಸಾಕ್ಷಿಗಳು ಯಾರು? ಮತ್ತು ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ?
◼ ಕ್ರಿಸ್ತನ ಮರಣದ ಸ್ಮರಣೆಯು ಶುಕ್ರವಾರ, ಏಪ್ರಿಲ್ 3, 2015ರಂದು ನಡೆಯಲಿದೆ. ನಿಮ್ಮ ಸಭೆಯಲ್ಲಿ ಶುಕ್ರವಾರದಂದು ಕೂಟಗಳು ನಡೆಯುತ್ತಿದ್ದಲ್ಲಿ ಆ ವಾರದ ಬೇರೆ ದಿನದಂದು ಅದನ್ನು ನಡೆಸಬೇಕಾಗುತ್ತದೆ. ಬೇರೆ ದಿನಗಳಂದು ಸಭಾಗೃಹ ಲಭ್ಯವಿಲ್ಲದೆ ಹೋದರೆ ಅಥವಾ ಬೇರೆ ಯಾವುದಾದರೂ ಕಾರಣದಿಂದ ಸೇವಾ ಕೂಟವನ್ನು ನಡೆಸಲು ಆಗದಿದ್ದರೆ, ನಿಮ್ಮ ಸಭೆಗೆ ಅನ್ವಯವಾಗುವ ಭಾಗಗಳನ್ನು ಮುಂದಿನ ವಾರಗಳಲ್ಲಿ ನಡೆಸಲು ಹಿರಿಯರ ಮಂಡಲಿಯ ಸಂಯೋಜಕನು ಏರ್ಪಾಡು ಮಾಡಬೇಕು.