ಏಪ್ರಿಲ್ 6ರ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 6ರ ವಾರ
ಗೀತೆ 33 ಮತ್ತು ಪ್ರಾರ್ಥನೆ
ಬೈಬಲ್ ಕಥೆಗಳು, ಕಥೆ 42 (30 ನಿ.)
ಬೈಬಲ್ ವಾಚನ: 1 ಸಮುವೇಲ 16-18 (8 ನಿ.)
ನಂ. 1: 1 ಸಮುವೇಲ 18:17-24 (3 ನಿಮಷದೊಳಗೆ)
ನಂ. 2: ನಮ್ಮ ಕಷ್ಟಗಳಿಗೆ ದೇವರು ಕಾರಣನೋ?—ಕಿರುಪರಿಚಯ ಪುಟ 4 ಪ್ಯಾರ 1-4 (5 ನಿ.)
ನಂ. 3: ಬಾರಾಕ್—ವಿಷಯ: ಧೈರ್ಯಶಾಲಿಯಾಗಿರಿ, ಮನುಷ್ಯರನ್ನು ಮೆಚ್ಚಿಸಲು ಪ್ರಯತ್ನಿಸಬೇಡಿ—ನ್ಯಾಯ 4:1-24; 5:9-31; ಇಬ್ರಿ 11:32-34 (5 ನಿ.)
ಈ ತಿಂಗಳ ಮುಖ್ಯ ವಿಷಯ: “ಸಕಲ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ.”—ತೀತ 3:1.
10 ನಿ: ಏಪ್ರಿಲ್ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಿ. ಚರ್ಚೆ. ಆರಂಭದಲ್ಲೇ ಏಪ್ರಿಲ್–ಜೂನ್ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಒಂದು ಪ್ರಾತ್ಯಕ್ಷಿಕೆ ಇರಲಿ. ಇದಕ್ಕಾಗಿ ಕೊಡಲಾಗಿರುವ ಮಾದರಿ ನಿರೂಪಣೆಯನ್ನು ಬಳಸಿ. ನಂತರ ಇಡೀ ನಿರೂಪಣೆಯನ್ನು ವಿಶ್ಲೇಷಿಸಿ.
10 ನಿ: ನಾವು ಸಾಧಿಸಿದ್ದೇನು? ಚರ್ಚೆ. “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪತ್ರಿಕಾ ಮಾರ್ಗವನ್ನು ಆರಂಭಿಸಿ” ಎಂಬ ಲೇಖನದ ಅಂಶಗಳನ್ನು ಅನ್ವಯಿಸಿ ಪ್ರಚಾರಕರು ಪಡೆದಂಥ ಪ್ರಯೋಜನಗಳನ್ನು ತಿಳಿಸುವಂತೆ ಹೇಳಿ. ಸಭಿಕರಿಗೆ ಸಿಕ್ಕಿದ ಒಳ್ಳೆಯ ಅನುಭವಗಳನ್ನು ಹಂಚಿಕೊಳ್ಳುವಂತೆ ಪ್ರೋತ್ಸಾಹಿಸಿ.
10 ನಿ: ಸ್ಥಳೀಯ ಅಗತ್ಯಗಳು.
ಗೀತೆ 106 ಮತ್ತು ಪ್ರಾರ್ಥನೆ